Rishab Shetty: ಮಕ್ಕಳ ದಿನಾಚರಣೆಯಂದೇ ವಿನೂತನವಾಗಿ ಮಗನ ಹೆಸರನ್ನು ರಿವೀಲ್​ ಮಾಡಿದ ನಿರ್ದೇಶಕ ರಿಷಭ್​ ಶೆಟ್ಟಿ ..!

Rishab Shetty's Son Ranvit Shetty: ತಾರೆಯರು ತಮ್ಮ ಮಕ್ಕಳಿಗೆ ಹೆಸರಿಡುವಾಗ ನಾನಾ ರೀತಿಯ ಸರ್ಕಸ್​ ಮಾಡೋದು ಗೊತ್ತಿರುವ ವಿಷಯವೆ. ಈ ಹಿಂದೆ ಯಶ್​ ಹಾಗೂ ರಾಧಿಕಾ ತಮ್ಮ ಮೊದಲ ಮಗಳಿಗೆ ತಮ್ಮ ಹೆಸರುಗಳ ಅಕ್ಷರಗಳಿಂದ ಕೂಡಿದ ಹೆಸರನ್ನು ನಾಮಕರಣ ಮಾಡಿ ಸುದ್ದಿಯಾಗಿದ್ದು. ಅಂತೆಯೇ ಈಗ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಸಹ ತಮ್ಮ ಮಗನ ಹೆಸರನ್ನು ವಿನೂತನವಾಗಿ ಬಹಿರಂಗಪಡಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ. 

ಮಗ ರಣ್​ ವಿತ್ ಶೆಟ್ಟಿ ಜೊತೆ ರಿಷಭ್​ ಹಾಗೂ ಪ್ರಗತಿ

ಮಗ ರಣ್​ ವಿತ್ ಶೆಟ್ಟಿ ಜೊತೆ ರಿಷಭ್​ ಹಾಗೂ ಪ್ರಗತಿ

  • Share this:
ಸಾಮಾನ್ಯವಾಗಿ ಸ್ಟಾರ್​ಗಳ ಮಕ್ಕಳು ಹುಟ್ಟಿನಿಂದಲೇ ತಾರಾ ವರ್ಚಸ್ಸಿನೊಂದಿಗೆ ಬೆಳೆಯುತ್ತಾರೆ. ಇನ್ನು ತಾರೆಯರಿಗೆ ಮಕ್ಕಳಾಗಿದೆ ಎಂದರೆ ಅವರಿಗೆ ಯಾವ ಹೆಸರು ಇಡುತ್ತಾರೆ... ನಾಮಕರಣ ಎಲ್ಲಿ ಹಾಗೂ  ಹೇಗೆ ಮಾಡುತ್ತಾರೆ ಅನ್ನೋ ಕುತೂಹಲ ಸಿನಿ ಪ್ರಿಯರರಿಗೆ ಮತ್ತು ಅಭಿಮಾನಿಗಳಿಗೆ ಇರುತ್ತದೆ.

ತಾರೆಯರು ತಮ್ಮ ಮಕ್ಕಳಿಗೆ ಹೆಸರಿಡುವಾಗ ನಾನಾ ರೀತಿಯ ಸರ್ಕಸ್​ ಮಾಡೋದು ಗೊತ್ತಿರುವ ವಿಷಯವೆ. ಈ ಹಿಂದೆ ಯಶ್​ ಹಾಗೂ ರಾಧಿಕಾ ತಮ್ಮ ಮೊದಲ ಮಗಳಿಗೆ ತಮ್ಮ ಹೆಸರುಗಳ ಅಕ್ಷರಗಳಿಂದ ಕೂಡಿದ ಹೆಸರನ್ನು ನಾಮಕರಣ ಮಾಡಿ ಸುದ್ದಿಯಾಗಿದ್ದು. ಅಂತೆಯೇ ಈಗ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಸಹ ತಮ್ಮ ಮಗನ ಹೆಸರನ್ನು ವಿನೂತನವಾಗಿ ಬಹಿರಂಗಪಡಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ.ಹೌದು, ಮಕ್ಕಳ ದಿನಾಚರಣೆಯಂದೇ ರಿಷಭ್​ ಶೆಟ್ಟಿ ತಮ್ಮ ಮಗನ ಹೆಸರನ್ನು ರಿವೀಲ್​ ಮಾಡಿದ್ದಾರೆ. ಅದೂ ಸಹ ತಮ್ಮ ಸಿನಿಮಾಗಳ ಟೀಸರ್​ ಮಾಡುವ ರೀತಿಯಲ್ಲೇ ಮಗನ ಹೆಸರನ್ನು ಟೀಸರ್​ ಮೂಲಕ ವಿನೂತನವಾಗಿ ರಿವೀಲ್​ ಮಾಡಿದ್ದಾರೆ.ಮಗನಿಗೆ ರಣ್​ವಿತ್​ ಶೆಟ್ಟಿ ಎಂದು ನಾಮಕರಣ ಮಾಡಿದ್ದು, ಅದಕ್ಕಾಗಿ ಒಂದು ಪುಟ್ಟ ಟೀಸರ್ ಮಾಡಿದ್ದಾರೆ. ಮರಿ ಡಿಟೆಕ್ಟೀವ್​ ಕಡೆಯಿಂದ ಮಕ್ಕಳ ದಿನಾಚರಣೆಯ ಶುಭಾಷಯಗಳು ಎಂದು ಟೀಸರ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ.

Rishab Shetty's Son Ranvit Shetty
ರಣ್​ವಿತ್​ ಶೆಟ್ಟಿ


ಫುಲ್​ ಫಿಲ್ಮಿ ಸ್ಟೈಲ್​ನಲ್ಲಿ ಮಾಡಿರುವ ಈ ಟೀಸರ್​ನಲ್ಲಿ ಮಗುವಿನ ಮುದ್ದಾದ ಪೋಟೋ, ಮಗು ಡಾ.ರಾಜ್​ ಅವರ ಫೋಟೋ ಜತೆ ಆಟವಾಡುತ್ತಿರುವುದು ಹಾಗೂ ರಿಷಭ್​ ಡಿಟೆಕ್ಟೀವ್ ಪಾತ್ರದಲ್ಲಿ ಕಾಣಿಸಿಕೊಂಡ 'ಬೆಲ್​ ಬಾಟಮ್​' ಸಿನಿಮಾದ ಕೆಲ ದೃಶ್ಯಗಳಿವೆ.

ಇದನ್ನೂ ಓದಿ: Mardaani 2 Trailer: ನಡುಕ ಹುಟ್ಟಿಸುತ್ತೆ ರಾಣಿ ಮುಖರ್ಜಿ ಅಭಿನಯದ ಮರ್ದಾನಿ 2 ಚಿತ್ರದ ಎರಡನೇ ಟ್ರೈಲರ್​..!

ಕಳೆದ ಏಪ್ರಿಲ್​ನಲ್ಲಿ ರಿಷಭ್​ ಹಾಗೂ ಪ್ರಗತಿ ಶೆಟ್ಟಿಗೆ ಗಂಡು ಮಗುವಾಗಿತ್ತು. ಮಗುವಿಗೆ ಈಗಾಗಲೇ ಫೋಟೋಶೂಟ್​ ಮಾಡಿಸಿದ್ದು, ಅದರ ಚಿತ್ರಗಳನ್ನೂ ಟೀಸರ್​ನಲ್ಲಿ ಹಂಚಿಕೊಳ್ಳಲಾಗಿದೆ.

DeepVeer Anniversary: ಗೋಲ್ಡನ್​ ಟೆಂಪಲ್​ನಲ್ಲಿ ಹಾಟ್​ ಕಪಲ್​ ದೀಪಿಕಾ-ರಣವೀರ್​ ಸಿಂಗ್​: ಇಲ್ಲಿವೆ ಚಿತ್ರಗಳು..! 
First published: