BellBottom 2: ಚೆಂಡು ಹೂವಿನ ಕೇಸ್​ ಹಿಂದೆ ಬಿದ್ದ ಡಿಟೆಕ್ಟಿವ್​ ದಿವಾಕರ: ಹೊಸ ಟೈಟಲ್​ ಪೋಸ್ಟರ್​ ರಿಲೀಸ್ ಮಾಡಿದ ರಿಷಭ್​ ಶೆಟ್ಟಿ..!

ಬೆಲ್​ ಬಾಟಂ ಸಿನಿಮಾವನ್ನು ನಿರ್ದೇಶಿಸಿರುವ ಜಯತೀರ್ಥ ಅವರೇ ಬೆಲ್​ ಬಾಟಂ 2 ಚಿತ್ರಕ್ಕೂ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾ ಮುಹೂರ್ತ ಸಹ ನೆರವೇರಿದೆ. ಅದರಲ್ಲಿ ರಿಷಭ್ ಶೆಟ್ಟಿ, ಹರಿಪ್ರಿಯಾ, ತಾನ್ಯಾ ಹೋಪ್​ ಹಾಗೂ ಪುನೀತ್​ ರಾಜ್​ಕುಮಾರ್​ ಭಾಗಿಯಾಗಿದ್ದರು.

ಬೆಲ್ ಬಾಟಮ್​ 2 ಸಿನಿಮಾದ ಟೈಟಲ್​ ಪೋಸ್ಟರ್​

ಬೆಲ್ ಬಾಟಮ್​ 2 ಸಿನಿಮಾದ ಟೈಟಲ್​ ಪೋಸ್ಟರ್​

  • Share this:
ಸ್ಯಾಂಡಲ್​ವುಡ್​ನಲ್ಲಿ ನಟನೆಯ ಜೊತೆಗೆ ಸಿನಿಮಾಗಳನ್ನು ನಿರ್ದೇಶಿಸುತ್ತಾ ಯಶಸ್ಸು ಕಾಣಿತ್ತಿರುವ ಪ್ರತಿಭೆ ರಿಷಭ್​ ಶೆಟ್ಟಿ. ಅವರ ಕೈತುಂಬ ಸಿನಿಮಾಗಳಿದ್ದು, ನಿರ್ದೇಶನಕ್ಕಿಂತ ಹೆಚ್ಚಾಗಿ ಅಭಿನಯಸುತ್ತಿರುವ ರಿಷಭ್​ ಅವರ ಬಹು ನಿರೀಕ್ಷಿತ ಸಿನಿಮಾ ಬೆಲ್​ ಬಾಟಂ​ 2. ಇದು 80ರ ದಶಕದಲ್ಲಿ ನಡೆದ ನೈಜ ಘಟನೆ ಆಧರಿಸಿ ಮೂಡಿ ಬಂದಿದ್ದ ‘ಬೆಲ್​ ಬಾಟಂ’ ಚಿತ್ರದ ಸೀಕ್ವೆಲ್​ ಆಗಿದೆ. ಮೊದಲ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆಯ ಸುರಿ ಮಳೆಯಾಗಿತ್ತು. ಚಿತ್ರದ ರೆಟ್ರೋ ರಂಗು, ಅದಕ್ಕೆ ತಕ್ಕನಾದ ಧಿರಿಸು, ಹಿನ್ನೆಲೆ ಸಂಗೀತ, ಸಿನಿಮಾದಲ್ಲಿದ್ದ ರಸಭರಿತ ಹಾಸ್ಯ, ರಿಷಬ್​ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸಿನಿಮಾ ಗೆಲುವು ನಿರ್ಮಾಪಕ ಸಂತೋಷ್​ ಕುಮಾರ್​ ಅವರಿಗೆ ಹೊಸ ಹುರುಪು ನೀಡಿತ್ತು. ಹೀಗಾಗಿಯೇ ‘ಬೆಲ್​ ಬಾಟಂ 2’ ಚಿತ್ರಕ್ಕೆ ಸಿದ್ಧತೆ ಆರಂಭಗೊಂಡಿತ್ತು. ಈ ಹಿಂದೆಯೇ ಬೆಲ್​ ಬಾಟಂ 2 ಸಿನಿಮಾದ ಬಗ್ಗೆ ರಿಷಭ್​ ಶೆಟ್ಟಿ ಸಹ ಪ್ರಕಟಿಸಿದ್ದರು, ಆದರೆ ಯಾವ ಮಾಹಿತಿಯನ್ನೂ ಹಂಚಿಕೊಂಡಿರಲಿಲ್ಲ. ಈಗಷ್ಟೆ ತಮ್ಮ ಹೀರೋ ಸಿನಿಮಾದ ಕೆಲಸಗಳನ್ನು ಮುಗಿಸಿ, ಹರಿಕಥೆಯಲ್ಲ ಗಿರಿಕಥೆ ಚಿತ್ರದ ಚಿತ್ರೀಕರಣ ಮುಗಿಸಿರುವ ರಿಷಭ್​ ಶೆಟ್ಟಿ ಈಗ ಬೆಲ್​ ಬಾಟಂ 2 ಚಿತ್ರದತ್ತ ಗಮನ ಹರಿಸಿದ್ದಾರೆ.

2019ರಲ್ಲಿ ತೆರೆಕಂಡಿದ್ದ ಬೆಲ್​ ಬಾಟಂ ಸಿನಿಮಾದ ಮುಂದುವರೆದ ಭಾಗವೇ ಈ ಬೆಲ್​ ಬಾಟಂ 2 ಸಿನಿಮಾ. ನಿನ್ನೆಯಷ್ಟೆ ಬೆಲ್​ ಬಾಟಂ 2 ಸಿನಿಮಾದ ಹೊಸ ಟೈಟಲ್​ ರಿಲೀಸ್ ಮಾಡುತ್ತೇವೆ ಎಂದಿದ್ದರು. ಇದೇನಪ್ಪಾ ಈಗಾಗಲೇ ಬೆಲ್​ ಬಾಟಂ 2 ಎಂದು ಹೆಸರಿಡಲಾಗಿದ್ದು, ಮತ್ತೆ ಹೊಸ ಟೈಟಲ್​ ಅಂತಿದ್ದಾರಲ್ಲ ಬೇರೆ ಹೆಸರು ಇಡುವ ಆಲೋಚನೆ ಇರಬೇಕೆಂದುಕೊಂಡಿದ್ದರು ಸಿನಿ ಪ್ರಿಯರು.

ಡಿಷ್ಕಿಯಾಂವ್... 🔫



ಆದರೆ, ಇವತ್ತು ಸಿನಿಮಾದ ಟೈಟಲ್​ ಪೋಸ್ಟರ್​ ರಿಲೀಸ್ ಮಾಡಿದ್ದು, ಅದರಲ್ಲಿ ಅದೇ ಟೈಟಲ್​ ಆದರೆ, ಪೋಸ್ಟರ್ ಮಾತ್ರ ಹೊಸದಾಗಿದೆ. ಜೊತೆಗೆ ಡಿ ಟೆಕ್ಟಿವ್​ ದಿವಾಕರನಿಗೆ ಚೆಂಡು ಹೂವಿನ ಕ್ಯೂರಿಯಸ್​ ಕೇಸ್​ ಸಿಕ್ಕಿದೆ. ಮತ್ತೆ ರಂಜಿಸಲು ರಿಷಭ್​ ಶೆಟ್ಟಿ ಮತ್ತು ತಂಡ ಬರಲಿದ್ದಾರೆ.




ಬೆಲ್​ ಬಾಟಂ ಸಿನಿಮಾವನ್ನು ನಿರ್ದೇಶಿಸಿರುವ ಜಯತೀರ್ಥ ಅವರೇ ಬೆಲ್​ ಬಾಟಂ 2 ಚಿತ್ರಕ್ಕೂ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾ ಮುಹೂರ್ತ ಸಹ ನೆರವೇರಿದೆ. ಅದರಲ್ಲಿ ರಿಷಭ್ ಶೆಟ್ಟಿ, ಹರಿಪ್ರಿಯಾ, ತಾನ್ಯಾ ಹೋಪ್​ ಹಾಗೂ ಪುನೀತ್​ ರಾಜ್​ಕುಮಾರ್​ ಭಾಗಿಯಾಗಿದ್ದರು.

Bell Bottom 2 Title Poster, Bell Bottom 2 new Title, Sequel of Bell Bottom, Rishab Shetty's Bell Bottom, ಬೆಲ್ ಬಾಟಂ 2, ಬೆಲ್ ಬಾಟಂ ಸೀಕ್ವೆಲ್, hripriya, Tanya Hope, ರಿಷಭ್ ಶೆಟ್ಟಿ ಸಿನಿಮಾ, ಬೆಲ್ ಬಾಟಂ ಹೊಸ ಶೀರ್ಷಿಕೆ, rishab shetty, Rachana Inder, thapaswini poonacha, Harikathe alla Girikathe Movie, Sri Krishna Janmashtami, Sandalwood, Ranvit Shetty, Cute photos Of Ranvit Shetty, ರಿಷಭ್​ ಶೆಟ್ಟಿ, ಸ್ಯಾಂಡಲ್​ವುಡ್​, ರಣ್​ವಿತ್ ಶೆಟ್ಟಿ, ಶ್ರೀಕೃಷ್ಣ ಜನ್ಮಾಷ್ಠಮಿ, ರಣ್​ವಿತ್ ಶೆಟ್ಟಿಯ ಕ್ಯೂಟ್​ ಫೋಟೋಗಳು, ಹರಿಕಥೆ ಅಲ್ಲ ಗಿರಿಕಥೆ, ತಪಸ್ವಿನಿ ಪೂಣಚ್ಚ, ರಚನಾ ಇಂದರ್​, Rishab Shetty released his upcoming movie bell bottom 2 title poster ae
ಬೆಲ್​ ಬಾಟಂ 2 ಚಿತ್ರದ ಮುಹೂರ್ತ ಕಾರ್ಯಕ್ರಮದ ಚಿತ್ರ


ಬೆಲ್​ಬಾಟಂ ಸಿನಿಮಾದಲ್ಲಿ ದಿವಾಕರನಿಗೆ ನಾಯಕಿಯಾಗಿ ರೆಟ್ರೋ ಲುಕ್​ನಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದರು. ಈ ಸಲವೂ ಹರಿಪ್ರಿಯಾ ಈ ಸಿನಿಮಾದಲ್ಲಿ ಮುಂದುವರೆಯುತ್ತಿದ್ದು, ಅವರೊಂದಿಗೆ ಯಜಮಾನನ ಬಸಣ್ಣಿ ತಾನ್ಯಾ ಹೋಪ್ ಸಹ ಜೊತೆಯಾಗಿದ್ದಾರೆ. ಇದನ್ನು ಚಿತ್ರದ ಕ್ಯೂರಿಯಸ್​ ಕೇಸ್​ ಚೆಂಡು ಹೂವಿನದ್ದಾಗಿರುವ ಕಾರಣಕ್ಕೆ ಇಡೀ ಚಿತ್ರತಂಡ ಚೆಂಡು ಹೂವಿನ ಹಾರ ಧರಿಸಿ, ಕೇಸ್​ ಇನ್ವೆಸ್ಟಿಗೇಷನ್​ಗೆ ರೆಡಿಯಾಗಿದೆ. 

Bell Bottom 2 Title Poster, Bell Bottom 2 new Title, Sequel of Bell Bottom, Rishab Shetty's Bell Bottom, ಬೆಲ್ ಬಾಟಂ 2, ಬೆಲ್ ಬಾಟಂ ಸೀಕ್ವೆಲ್, hripriya, Tanya Hope, ರಿಷಭ್ ಶೆಟ್ಟಿ ಸಿನಿಮಾ, ಬೆಲ್ ಬಾಟಂ ಹೊಸ ಶೀರ್ಷಿಕೆ, rishab shetty, Rachana Inder, thapaswini poonacha, Harikathe alla Girikathe Movie, Sri Krishna Janmashtami, Sandalwood, Ranvit Shetty, Cute photos Of Ranvit Shetty, ರಿಷಭ್​ ಶೆಟ್ಟಿ, ಸ್ಯಾಂಡಲ್​ವುಡ್​, ರಣ್​ವಿತ್ ಶೆಟ್ಟಿ, ಶ್ರೀಕೃಷ್ಣ ಜನ್ಮಾಷ್ಠಮಿ, ರಣ್​ವಿತ್ ಶೆಟ್ಟಿಯ ಕ್ಯೂಟ್​ ಫೋಟೋಗಳು, ಹರಿಕಥೆ ಅಲ್ಲ ಗಿರಿಕಥೆ, ತಪಸ್ವಿನಿ ಪೂಣಚ್ಚ, ರಚನಾ ಇಂದರ್​, Rishab Shetty released his upcoming movie bell bottom 2 title poster ae
ಬೆಲ್​ ಬಾಟಂ 2 ಚಿತ್ರತಂಡ


ಟಿ.ಕೆ ದಯಾನಂದ್​ ‘ಬೆಲ್​ ಬಾಟಂ’ ಚಿತ್ರಕ್ಕೆ ಕಥೆ ಬರೆದಿದ್ದರು. ‘ಬೆಲ್​ ಬಾಟಂ 2’ಗೂ ಅವರೇ ಕಥೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಚಿತ್ರದ ಕಥೆಯೂ 80ರ ದಶಕದಲ್ಲೇ ಸಾಗಲಿದೆ ಎನ್ನುವುದು ವಿಶೇಷ. ಹಾಗಾಗಿ, ಮತ್ತೆ ಪ್ರೇಕ್ಷಕನಿಗೆ ರೆಟ್ರೋ ರಂಗಿನ ಸವಿಯನ್ನು ‘ಬೆಲ್​ ಬಾಟಂ 2’ ಉಣಬಡಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಚಿತ್ರದ ಕಥೆ ಹೇಗಿರಲಿದೆ? ಈ ಪ್ರಶ್ನೆಗೂ ಉತ್ತರವಿದೆ. ಮೊದಲ ಚಿತ್ರ ಸಂಪೂರ್ಣವಾಗಿ ಪತ್ತೆದಾರಿ ರೀತಿಯಲ್ಲಿ ಮೂಡಿ ಬಂದಿತ್ತು. ಈ ಚಿತ್ರವೂ ಅದೇ ಮಾದರಿಯಲ್ಲಿ ಇರಲಿದೆ ಎನ್ನಲಾಗುತ್ತಿದೆ.
Published by:Anitha E
First published: