ಸಿನಿಮಾ ಬಿಡುಗಡೆಯಾಗುವ ಮೊದಲೇ ಬಿಡುಗಡೆಯಾಯಿತು ಈ ಕನ್ನಡ ಸಿನಿಮಾದ ಮೇಕಿಂಗ್​ ತುಣುಕು!

news18
Updated:July 2, 2018, 7:21 PM IST
ಸಿನಿಮಾ ಬಿಡುಗಡೆಯಾಗುವ ಮೊದಲೇ ಬಿಡುಗಡೆಯಾಯಿತು ಈ ಕನ್ನಡ ಸಿನಿಮಾದ ಮೇಕಿಂಗ್​ ತುಣುಕು!
news18
Updated: July 2, 2018, 7:21 PM IST
ನ್ಯೂಸ್18 ಕನ್ನಡ

ನಿಮಗೆಲ್ಲ ನಿಮ್ಮ ಶಾಲಾ ದಿನಗಳು ಅಲ್ಪಸ್ವಲ್ಪ ನೆನಪಿರಬಹುದು. ಆದರೆ ನೀವು ಮರೆತಿರೊ ದಿನಗಳನ್ನೂ ನೆನಪು ಮಾಡುವಂತೆ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಮೂಡಿ ಬರುತ್ತಿದೆ. ಇದರಲ್ಲಿ ಮೊನ್ನೆ ಬಿಡುಗಡೆಯಾಗಿರೋ 'ಪ್ರವೀಣ ಅನ್ನೊ ಹಾಡು...' ಸಿಕ್ಕಾಪಟ್ಟೆ ಟ್ರೆಂಡ್ ಆಗಿಬಿಟ್ಟಿದೆ.

ಈ ಹಾಡಿನಿಂದ ಪ್ರವೀಣ ಅಂತ ಹೆಸರಿಟ್ಟುಕೊಂಡಿರೋರಿಗೆಲ್ಲ ವಿಪರೀತ ಕ್ವಾಟ್ಲೆ ಶುರುವಾಗಿದೆ. ಈ ಸಾಂಗು ಹೀಗೆ ಫೇಮಸ್ಸಾಗಿರೊ ಹೊತ್ತಲ್ಲೇ, ಮೇಕಿಂಗ್‍ನ ತುತ್ತನ್ನ ಸಿನಿಮಾಪ್ರೇಮಿಗಳಿಗೆ ಉಣಬಡಿಸೋಕೆ ಒಂದು ಸಣ್ಣ ಮೇಕಿಂಗ್ ತುಣುಕನ್ನು ಬಿಟ್ಟಿದ್ದಾರೆ ರಿಶಬ್ ಶೆಟ್ಟಿ.ಈ ಚಿತ್ರದ ಪಾತ್ರವರ್ಗದಲ್ಲಿ ಅನಂತ್‍ನಾಗ್ ಒಬ್ಬರನ್ನ ಬಿಟ್ಟರೆ ಬಹುತೇಕ ಹೊಸಬರೇ ಇದ್ದಾರೆ. ಹಾಗೆ ಪುಟಾಣಿ ಮಕ್ಕಳ, ಚೂಟಿ ಮಕ್ಕಳ ದೊಡ್ಡ ದಂಡೇ ಈ ಚಿತ್ರದಲ್ಲಿದ್ದಂತಿದೆ. ಸದ್ಯಕ್ಕೆ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್‍ನಲ್ಲಿರೊ ಈ ಸಿನಿಮಾ ತಾಜಾ ಚಿತ್ರವಾಗಿ  ನಿಮ್ಮ ಮುಂದೆ ಬರೋಕೆ ಇನ್ನು ಸಮಯವಿದೆ. ಅಲ್ಲಿಯವರೆಗೂ ಈ ಹಾಡನ್ನು ಗುನುಗುತ್ತಾ ಇರಿ. 
First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...