• Home
  • »
  • News
  • »
  • entertainment
  • »
  • Rishab Shetty-Rashmika Mandanna: ರಶ್ಮಿಕಾಗೆ ಅವ್ರ ಸ್ಟೈಲ್​ನಲ್ಲೇ ತಿರುಗೇಟು ಕೊಟ್ಟ ರಿಷಬ್!

Rishab Shetty-Rashmika Mandanna: ರಶ್ಮಿಕಾಗೆ ಅವ್ರ ಸ್ಟೈಲ್​ನಲ್ಲೇ ತಿರುಗೇಟು ಕೊಟ್ಟ ರಿಷಬ್!

ರಿಷಬ್ ಶೆಟ್ಟಿ-ರಶ್ಮಿಕಾ ಮಂದಣ್ಣ

ರಿಷಬ್ ಶೆಟ್ಟಿ-ರಶ್ಮಿಕಾ ಮಂದಣ್ಣ

ಕಾಂತಾರ ಹೀರೋ ರಿಷಬ್ ಶೆಟ್ಟಿ ರಶ್ಮಿಕಾ ಮಂದಣ್ಣಗೆ ಟಾಂಗ್ ಕೊಟ್ಟಿದ್ದು ಇದೀಗ ಸುದ್ದಿಯಾಗಿದೆ. ನಟಿಯ ಸ್ಟೈಲ್​ನಲ್ಲಿಯೇ ರಿಷಬ್ ಪ್ರತಿಕ್ರಯಿಸಿದ್ದು ಮತ್ತಷ್ಟು ಹೈಲೈಟ್ ಆಗಿದೆ.

  • News18 Kannada
  • Last Updated :
  • Bangalore, India
  • Share this:

ಸಿನಿಮಾ ಕಲಾವಿದರಿಗೆ ಮೊದಲ ಸಿನಿಮಾ (Cinema), ಮೊದಲ ಪ್ರೊಡಕ್ಷನ್ ಹೌಸ್ (Production House) ಮೊದಲು ನಟಿಸಿದ ಸಹ ಕಲಾವಿದರ ಬಗ್ಗೆ ವಿಶೇಷ ಭಾವನೆ ಇರುತ್ತದೆ. ನಾನು ಮೊದಲು ನಟಿಸಿದ್ದು ಆ ನಟಿ (Actress) ಅಥವಾ ನಟನ ಜೊತೆ, ನಾನು ಮೊದಲು ನಟಿಸಿದ್ದು ಆ ಭಾಷೆಯ ಸಿನಿಮಾದಲ್ಲಿ, ಹೀಗೆ ಬಹಳಷ್ಟ ಆ್ಯಂಗಲ್​​ನಲ್ಲಿ ಮೊದಲ ಸಿನಿಮಾದೊಂದಿಗೆ ಕನೆಕ್ಟ್ ಆಗಿರುತ್ತಾರೆ ಕಲಾವಿದರು. ಆದರೆ ರಶ್ಮಿಕಾಗೆ ಇಂಥದ್ದೆಲ್ಲ ಇಲ್ಲ. ತಮ್ಮ ಮೊದಲ ಸಿನಿಮಾ ಬಗ್ಗೆ ಹೇಳುವಾಗ ಪ್ರೊಡಕ್ಷನ್ ಹೌಸ್ ಹೆಸರನ್ನೇ ಹೇಳಲು ಹಿಂಜರಿದ ರಶ್ಮಿಕಾ ಮಂದಣ್ಣಗೆ (Rashmika Mandanna) ಈಗ ಕಾಂತಾರ (Kantara) ನಿರ್ದೇಶಕ ರಿಷಬ್ ಶೆಟ್ಟಿ (Rishab shetty) ಅವರದ್ದೇ ಸ್ಟೈಲ್​ನಲ್ಲಿ ಟಾಂಗ್ ಕೊಟ್ಟಿದ್ದಾರೆ.


ಗುಲ್ಟಿ ಡಾಟ್ ಕಾಮ್ ಯೂಟ್ಯೂಬ್ ಚಾನೆಲ್​​ಗೆ ರಿಷಬ್ ಶೆಟ್ಟಿ ಕೊಟ್ಟ ಸಂದರ್ಶನ ಈಗ ವೈರಲ್ ಆಗಿದೆ. ಇದರಲ್ಲಿ ನಟ ಪರೋಕ್ಷವಾಗಿ ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣಗೆ ತಿರುಗೇಟು ನೀಡಿದ್ದಾರೆ. ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಈ 4 ಜನರಲ್ಲಿ ಯಾರ ನಟನೆ ಇಷ್ಟ? ಯಾರೊಟ್ಟಿಗೆ ನಟಿಸ್ತೀರಾ? ಎನ್ನುವ ಪ್ರಶ್ನೆಗೆ ರಿಷಬ್ ಕೊಟ್ಟ ಉತ್ತರ ಈಗ ವೈರಲ್ ಆಗಿದೆ.


ಸ್ಕ್ರಿಪ್ಟ್ ಮುಗಿದ ಮೇಲೆ ಕಲಾವಿದರ ಬಗ್ಗೆ ನಾನು ಯೋಚಿಸುತ್ತೇನೆ. ಯಾವಾಗಲೂ ನಾನು ಹೊಸ ಕಲಾವಿದರ ಜೊತೆ ನಟಿಸೋಕೆ ಇಷ್ಟಪಡುತ್ತೇನೆ. ನೀವು ಹೇಳಿದ ಹೆಸರುಗಳಲ್ಲಿ ಈ ತರಹದ (ರಶ್ಮಿಕಾ ಸನ್ನೆ ಮಾಡಿ ತೋರಿಸಿದಂತೆ ಸನ್ನೆ ಮಾಡಿದ ನಟ) ನಟಿಯರು ನನಗೆ ಇಷ್ಟ ಇಲ್ಲ ಎಂದಿದ್ದಾರೆ. ಇದನ್ನು ನೋಡಿದ ಜನರು ರಿಷಬ್ ಶೆಟ್ಟಿ ಸರಿಯಾಗಿ ರಶ್ಮಿಕಾಗೆ ಟಾಂಗ್ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.


ಇದನ್ನೂ ಓದಿ: Rashmika Mandanna: ತನ್ನನ್ನು ಲಾಂಚ್ ಮಾಡಿದ ಪ್ರೊಡಕ್ಷನ್ ಹೌಸ್ ಬಗ್ಗೆ ಹೇಳೋಕೆ ರಶ್ಮಿಕಾಗೆ ಹಿಂಜರಿಕೆ! ಕೃತಜ್ಞತೆ ಇಲ್ಲದ ಜನರೇಷನ್ ಎಂದು ಟ್ರೋಲ್


ರಶ್ಮಿಕಾ ಏನು ಹೇಳಿದ್ದರು?


ಕರ್ಲಿ ಟೇಲ್ಸ್ ಎನ್ನುವುದು ಫೀಮೇಲ್ ಆ್ಯಂಕರ್ ನಡೆಸಿಕೊಡುವ ಫೇಮಸ್ ಶೋ. ಸೋಷಿಯಲ್ ಮೀಡಿಯಾದಲ್ಲಿಯೇ ಹೆಚ್ಚು ವೀಕ್ಷಕರನ್ನು ಹೊಂದಿರುವ ಒಂದು ಸೆಲೆಬ್ರಿಟಿ ಶೋ ಇದಾಗಿದೆ. ಇದರಲ್ಲಿ ಕಿಚ್ಚ ಸುದೀಪ್ ಕೂಡಾ ಈ ಹಿಂದೆ ಭಾಗವಹಿಸಿದ್ದರು. ನಟಿ ರಶ್ಮಿಕಾ ಮಂದಣ್ಣ ಅವರೂ ಇದರಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಶನದ ತುಣುಕೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ನಿರೂಪಕಿ ರಶ್ಮಿಕಾ ಅವರಲ್ಲಿ ಅವರ ಸಿನಿಮಾ ಎಂಟ್ರಿ, ಆ ಜರ್ನಿ ಹೇಗೆ ಶುರುವಾಯಿತು ಎಂಬ ಪ್ರಶ್ನೆಯನ್ನು ಅವರಿಗೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ ಫ್ರೆಶ್ ಫೇಸ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಇದರಲ್ಲಿ ಭಾಗವಹಿಸಲು ನನಗೆ ಮನಸಿರಲಿಲ್ಲ. ಶಿಕ್ಷಕರು ಹೇಳಿದ ಕಾರಣ ಸ್ಪರ್ಧಿಸಿದ್ದೆ. ನಂತರ ಇದರಲ್ಲಿ ವಿಜೇತೆಯಾಗಿ ಹೊರಹೊಮ್ಮಿದೆ. ಅದರಲ್ಲಿ ಲೆವೆಲ್​ಗಳಿದ್ದವು. ನಂತರ ನನ್ನ ಫೋಟೊ ಹಾಗೂ ಟೈಟಲ್ ಪೇಪರ್​​ನಲ್ಲಿ ಪ್ರಕಟಿಸಲಾಗಿತ್ತು ಎಂದು ವಿವರಿಸಿದ್ದಾರೆ.


ಟೈಮ್ಸ್ ಆಫ್ ಇಂಡಿಯಾದ ಫ್ರಂಟ್ ಪೇಜ್​​ನಲ್ಲಿ ಇದನ್ನು ಪಬ್ಲಿಷ್ ಮಾಡಲಾಯಿತು. ನಾನು ನಂತರ ನನ್ನ ಕಾಲೇಜು ಜೀವನಕ್ಕೆ ಹಿಂದಿರುಗಿದೆ. ಎಲ್ಲವೂ ಹಾಗೆಯೇ ಹೋಗುತ್ತಿತ್ತು. ಆಗ ನನಗೆ ಈ ಪ್ರೊಡಕ್ಷನ್ ಹೌಸ್​ನಿಂದ ಕಾಲ್ ಬಂತು ಎಂದು ಹೇಳಿದ್ದಾರೆ. ಈ ಸಂದರ್ಭ ರಶ್ಮಿಕಾ ವ್ಯಂಗ್ಯವಾಗಿ ಎರಡು ಕೈಯನ್ನು ಎತ್ತಿ ವ್ಯಂಗ್ಯ ಸಿಂಬಲ್ ಕೊಟ್ಟಿದ್ದು ಈಗ ನೆಟ್ಟಿಗರು ನಟಿಯನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದರು.

Published by:Divya D
First published: