ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ಅವರು ಕುಟುಂಬ ಸಮೇತ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ (Anegudde Vinayaka Temple) ಭೇಟಿಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಕೇರಳ ಕೋರ್ಟ್ನಲ್ಲಿ ವರಾಹ ರೂಪಂ ಕಾಪಿ ರೈಟ್ (Copy Right) ಕೇಸ್ ಗೆದ್ದ ರಿಷಬ್ ಶೆಟ್ಟಿ ಆ ಬಗ್ಗೆ ಟ್ವೀಟ್ (Tweet) ಮಾಡಿ ಎಲ್ಲರಿಗೂ ಧನ್ಯವಾದ ಹೇಳಿದ್ದರು. ಅದೇ ರೀತಿ ಒಟಿಟಿಯಲ್ಲಿ ಶೀಘ್ರ ಹಾಡನ್ನು ಬದಲಾಯಿಸುವುದಾಗಿ ಹೇಳಿದ್ದರು. ಇದೀಗ ನಟ ಪತ್ನಿ ಹಾಗೂ ಮಕ್ಕಳಾದ ರಣ್ವಿತ್ ಹಾಗೂ ರಾಧ್ಯ ಜೊತೆ ವಿನಾಯಕ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಮಾಡಿದ್ದಾರೆ.
ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದೇವರ ದರ್ಶನ ಮಾಡಿದ್ದು ದೇವಾಲಯದ ಸಿಬ್ಬಂದಿ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಇದೀಗ ನಟ ಕುಟುಂಬ ಸಮೇತ ದೇವಾಲಯ ಭೇಟಿ ಕೊಟ್ಟ ಫೋಟೋಗಳು ಎಲ್ಲೆಡೆ ಕಂಡುಬಂದಿದೆ.
ಕಾಂತಾರ ಮೂಲಕ ಹಿಟ್ ಆದ ರಿಷಬ್
ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾ ಮೂಲಕ ದೇಶಾದ್ಯಂತ ಹಿಟ್ ಆಗಿದ್ದಾರೆ. ಕಥೆ ಬರೆದು, ನಿರ್ದೇಶನ ಮಾಡಿ, ನಟಿಸಿದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಈಗ ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಗಳಿಗೆ ಡಬ್ ಆಗಿ ವ್ಯಾಪಕ ಮೆಚ್ಚುಗೆ ಗಳಿಸಿದೆ. ಸಿನಿಮಾ ಒಟಿಟಿಯಲ್ಲಿ ಕೂಡಾ ಬಿಡುಗಡೆಯಾಗಿದ್ದು ಪ್ರೇಕ್ಷಕರು ಮತ್ತೆ ಒಟಿಟಿಯಲ್ಲಿ ಸಿನಿಮಾ ನೋಡಿ ಆನಂದಿಸುತ್ತಿದ್ದಾರೆ.
ಭರ್ಜರಿ ಕಲೆಕ್ಷನ್
14ರಿಂದ 16 ಕೋಟಿ ಬಜೆಟ್ನಲ್ಲಿ ಸಿದ್ಧವಾದ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ 75 ಕೋಟಿಗೂ ಹೆಚ್ಚು ಬಾಚಿದ ಸಿನಿಮಾ ಟಾಲಿವುಡ್ನಲ್ಲಿ ಸುಮಾರು 60 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಮೂಲಕ ರಿಲೀಸ್ ಆದ ಬೇರೆ ಭಾಷೆಗಳಲ್ಲಿಯೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಅದೇ ರೀತಿ ಸಿನಿಮಾ ಈಗ ತುಳುವಿನಲ್ಲಿಯೂ ಬಿಡುಗಡೆಯಾಗಿದ್ದು ಇದು ಕರಾವಳಿಯಲ್ಲಿ ಮತ್ತೊಮ್ಮೆ ಕಾಂತಾರ ಕ್ರೇಜ್ ಹೆಚ್ಚಿಸಿದೆ.
ಇದನ್ನೂ ಓದಿ: Raj B Shetty: ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ನೀವೂ ನಟಿಸಬಹುದು! ಕಾಸ್ಟಿಂಗ್ ಕಾಲ್ ಕೊಟ್ಟ ನಟ
ಬಾಲಿವುಡ್ ಎಂಟ್ರಿ
ನಟ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಹೊಂಬಾಳೆ ಫಿಲ್ಮ್ಸ್ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದು ಶೀಘ್ರ ಪ್ರಾಜೆಕ್ಟ್ ಅನೌನ್ಸ್ ಮಾಡಲಿದೆ ಎನ್ನಲಾಗಿದೆ. ಶಾರೂಖ್ ಖಾನ್ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಲಿದೆ ಎನ್ನಲಾಗಿದ್ದು ಇದರಲ್ಲಿ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ನಟಿಸುತ್ತಾರಂತೆ. ಸಿನಿಮಾಗೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ.
ಅಭಿಮಾನಿಗಳಿಗೆ ಸಂತಸ
ಕಾಂತಾರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಎಲ್ಲರೂ ಇಷ್ಟಪಟ್ಟಿದ್ದ ವರಾಹ ರೂಪಂ ಹಾಡಿನ ಆಡಿಯೋ ಮತ್ತು ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ಮತ್ತೆ ಸೇರಿಸಲಾಗಿದೆ. ಕೇರಳ ನ್ಯಾಯಾಲಯದಲ್ಲಿ ಕಾನೂನು ಹೋರಾಟದಲ್ಲಿ ಕಾಂತಾರ ತಂಡ ಗೆಲುವು ಸಾಧಿಸಿದೆ. ನವೆಂಬರ್ 25 ರಂದು ಹಾಡಿನ ಮೇಲೆ ನಿಷೇಧವನ್ನು ತೆಗೆದುಹಾಕಲಾಗಿದೆ.
ಒಟಿಟಿಯಲ್ಲಿ ಲಭ್ಯವಾಗಿದೆ ಹಾಡು
ಹಾಡನ್ನು ಈಗ OTT ವರ್ಷನ್ ಮತ್ತು ಆಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಸೇರಿಸಲಾಗಿದೆ. ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಗಳಿಸಿದ ನಂತರ, ಕೇರಳ ಮೂಲದ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ ತಂಡ ಕಾಂತಾರ ಹಾಡು ಕಾಪಿ ಎಂದು ಮೊಕದ್ದಮೆ ಹೂಡಿತ್ತು. ವರಾಹ ರೂಪಂ ತಮ್ಮ ನವರಸಂ ಹಾಡಿನ ಕಾಪಿಯಾಗಿದೆ ಎಂದು ಅವರು ಆರೋಪಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ