• Home
  • »
  • News
  • »
  • entertainment
  • »
  • ಕಾಡು ಪ್ರಾಣಿಗಳ ಕುರಿತು ವಿಭಿನ್ನ ಕಥೆ ಹೇಳಲು ಹೊರಟಿದ್ದಾರೆ ರಿಷಬ್​​ ಶೆಟ್ಟಿ!

ಕಾಡು ಪ್ರಾಣಿಗಳ ಕುರಿತು ವಿಭಿನ್ನ ಕಥೆ ಹೇಳಲು ಹೊರಟಿದ್ದಾರೆ ರಿಷಬ್​​ ಶೆಟ್ಟಿ!

ರಿಷಬ್​ ಶೆಟ್ಟಿ

ರಿಷಬ್​ ಶೆಟ್ಟಿ

Rishab shetty: ರಿಷಭ್​ ಶೆಟ್ಟಿ ಕರ್ನಾಟಕ ಅರಣ್ಯ ಇಲಾಖೆಯ ಅಡಿಯಲ್ಲಿ  ವನ್ಯ ಜೀವಿಗಳ ಕಥೆಯನ್ನು ಹೇಳಲಿದ್ದಾರೆ. ಈ ಕಾರ್ಯಕ್ರಮ ಡಿಸ್ಕವರಿ ಚಾನೆಲ್​ನಲ್ಲಿ ಮೂಡಿ ಬರಲಿದೆ. ಜೂನ್​ 5 ರಂದು ಸಂಜೆ 6ಕ್ಕೆ ರಿಷಭ್​ ಶೆಟ್ಟಿ ಅವರ ಹಿನ್ನಲೆ ಧ್ವನಿಯಲ್ಲಿ ಕರ್ನಾಟಕ ವನ್ಯಜೀವಿಗಳ ಕುರಿತಾದ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ.

ಮುಂದೆ ಓದಿ ...
  • Share this:

    ಸ್ಯಾಂಡಲ್​​​ವುಡ್​ ನಟ, ನಿರ್ದೇಶಕ ರಿಷಭ್​ ಶೆಟ್ಟಿ ಹೊಸ ಕಥೆಯನ್ನು ಹೇಳಲು ಹೊರಟ್ಟಿದ್ದಾರೆ. ಅಂದಹಾಗೆ ಈ ಬಾರಿ ರಿಷಭ್ ಕಥೆ ಹೇಳಲು ಹೊರಟಿರುವುದು ಟಿವಿ ಪರದೆಯ ಮೇಲೆ. ವಿಭಿನ್ನ ಕಥೆ, ನಿರ್ದೇಶನದ ಮೂಲಕ ಈಗಾಗಲೇ ಸಾಕಷ್ಟು ಸಿನಿಮಾವನ್ನು ತೆರೆಗೆ ತಂದಿರುವ ರಿಷಬ್ ಈಗ ‘ವೈಲ್ಡ್​​​​ ಕರ್ನಾಟಕ‘ದ ಕಾಡು ಪ್ರಾಣಿಗಳ ಕಥೆಯನ್ನು ಹೇಳಲು ಮುಂದಾಗಿದ್ದಾರೆ.


    ಹೌದು, ರಿಷಭ್​ ಶೆಟ್ಟಿ ಕರ್ನಾಟಕ ಅರಣ್ಯ ಇಲಾಖೆಯ ಅಡಿಯಲ್ಲಿ  ವನ್ಯ ಜೀವಿಗಳ ಕಥೆಯನ್ನು ಹೇಳಲಿದ್ದಾರೆ. ಈ ಕಾರ್ಯಕ್ರಮ ಡಿಸ್ಕವರಿ ಚಾನೆಲ್​ನಲ್ಲಿ ಮೂಡಿ ಬರಲಿದೆ. ಜೂನ್​ 5 ರಂದು ಸಂಜೆ 6 ಗಂಟೆಗೆ ರಿಷಬ್ ಶೆಟ್ಟಿ ಅವರ ಹಿನ್ನಲೆ ಧ್ಚನಿಯಲ್ಲಿ  ಕರ್ನಾಟಕ ವನ್ಯಜೀವಿಗಳ ಕುರಿತಾದ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ.


    ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಾಕಿಕೊಂಡಿರುವ ಶೆಟ್ರು​, ‘ಸರ್ಕಾರ ಮತ್ತು ಅರಣ್ಯ ಇಲಾಖೆ ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದೆ. ನಗರಾಭಿವೃದ್ಧಿ ಮತ್ತು ಜನಸಂಖ್ಯೆಯ ಹೊರತಾಗಿಯು ಅರಣ್ಯ ಇಲಾಖೆ  ವೈಲ್ಡ್​ ಲೈಫ್​​ನತ್ತ ಹೈಚ್ಚಿನ ಪ್ರಯತ್ನವನ್ನು ಕೈಗೊಳ್ಳುತ್ತಿದೆ. ‘ವೈಲ್ಡ್​​ ಕರ್ನಾಟಕ‘ ಕಾರ್ಯಕ್ರಮವನ್ನು ನನ್ನ ಮಾತೃ ಭಾಷೆಯಲ್ಲಿ ಹಿನ್ನಲೆ ಧ್ವನಿ ನೀಡಿದಕ್ಕೆ ನನಗೆ ಹೆಮ್ಮೆ ಆಗುತ್ತಿದೆ‘ ಎಂದು ಬರೆದುಕೊಂಡಿದ್ದಾರೆ.






    ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ, ಇಂಗ್ಲೀಷ್​, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ 'ವೈಲ್ಡ್​ ಕರ್ನಾಟಕ' ಕಾರ್ಯಕ್ರಮ ಮೂಡಿ ಬರಲಿದೆ. ವೈಲ್ಡ್​ ಕರ್ನಾಟಕ ಕಾರ್ಯಕ್ರಮವನ್ನು ಕನ್ನಡದಲ್ಲಿ ರಿಷಭ್​ ಶೆಟ್ಟಿ ಹಿನ್ನಲೆ ಧ್ವನಿ ನೀಡಿದರೆ, ಇಂಗ್ಲಿಷ್​​ನಲ್ಲಿ ಡೇವಿಡ್​​​​ ಅಟೆಂಡ್ಬರೋ ಅವರ ಹಿನ್ನಲೆ ಧ್ವನಿಯಲ್ಲಿ ಮೂಡಿಬಂದಿದೆ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಟ ಪ್ರಕಾಶ್​ ರೈ ಅವರ ನರೇಟ್​ ಮಾಡಿದ್ದಾರೆ. ಹಿಂದಿಯಲ್ಲಿ ರಾಜ್​ ಕುಮಾರ್​ ರಾವ್​  ಹಿನ್ನಲೆ ಧ್ಬನಿ ನೀಡಿದ್ದಾರೆ.


    ಮೊದಲು ಬಾರಿಗೆ ಸಿನಿಮಾ ನಟರನ್ನು ಬಳಸಿಕೊಂಡು ವೈಲ್ಡ್​​ ಕರ್ನಾಟಕ ಕಾರ್ಯಕ್ರಮವನ್ನು ನರೇಟ್​ ಮಾಡಲಾಗುತ್ತಿದೆ ಎಂದು ಡಿಸ್ಕವರಿ ಚಾನಲ್​ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದೆ.


    ಜೂನ್​​ 5 ರಂದು ‘ವಿಶ್ವ ಪರಿಸರ ದಿನ‘ದ ಅಂಗವಾಗಿ ‘ವೈಲ್ಡ್​ ಕರ್ನಾಟಕ‘ ಸಾಕ್ಷ್ಯ ಚಿತ್ರವನ್ನು ಚಿತ್ರೀಕರಸಲಾಗಿದೆ. ಚಲನಚಿತ್ರ ನಿರ್ಮಾಪಕರಾದ ಅಮೋಘವರ್ಷ ಜೆಎಸ್​ ಮತ್ತು ಕಲ್ಯಾಣ್​ ಕುಮಾರ್​​ ಅವರು ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಿಸಿದ್ದಾರೆ.


    Published by:Harshith AS
    First published: