Kantara: ಹೊಸ ಕಿಚ್ಚಿನೊಂದಿಗೆ ಬಂದ ಕಾಂತಾರ: ಹೊಂಬಾಳೆ ಫಿಲಂಸ್​ನ 11ನೇ ಚಿತ್ರದಲ್ಲಿ ನಿರ್ದೇಶಕ-ನಾಯಕನಾಗಿ ರಿಷಭ್ ಶೆಟ್ಟಿ

Rishab Shetty-Hombale Films: ಈ ಸಲ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಹೊಂಬಾಳೆ ಫಿಲಂಸ್​ ಜೊತೆ ಕೈ ಜೋಡಿಸಿದ್ದಾರೆ. ಕಾಂತಾರ ಸಿನಿಮಾದ ನಿರ್ದೇಶನದ ಜವಾಬ್ದಾರಿಯ ಜೊತೆಗೆ ರಿಷಭ್ ಶೆಟ್ಟಿ ಇದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಕಾಂತಾರ ಸಿನಿಮಾದಲ್ಲಿ ರಿಷಭ್ ಶೆಟ್ಟಿ

ಕಾಂತಾರ ಸಿನಿಮಾದಲ್ಲಿ ರಿಷಭ್ ಶೆಟ್ಟಿ

  • Share this:
ಒಂದರ ಹಿಂದೆ ಒಂದು ಹಿಡ್​ ಚಿತ್ರಗಳನ್ನು ನೀಡುವುದರ ಜತೆಗೆ ಸಾಲು ಸಾಲಾಗಿ ಹೊಸ ಪ್ಯಾನ್​ ಇಂಡಿಯಾ ಸೇರಿದಂತೆ ಕನ್ನಡ ಸಿನಿಮಾಗಳನ್ನು ಪ್ರಕಟಿಸುತ್ತಿರುವ ಕನ್ನಡ ಸಿನಿಮಾ ನಿರ್ಮಾಣ ಸಂಸ್ಥೆ ತನ್ನ 11ನೇ ಚಿತ್ರವನ್ನು ಅನೌನ್ಸ್​ ಮಾಡಿದೆ. ಕನ್ನಡ ಸಿನಿರಂಗದತ್ತ ಇತರೆ ಚಿತ್ರರಂಗಗಳು ತಿರುಗಿ ನೋಡುವಂತೆ ಮಾಡಿದ ಕೆಜಿಎಫ್​ ಚಿತ್ರವನ್ನು ನಿರ್ಮಿಸಿದ್ದು ಇದೇ ಹೊಂಬಾಳೆ ಫಿಲಂಸ್ (Hombale Films)​. ಸದ್ಯ ಸಲಾರ್​, ಕೆಜಿಎಫ್​ ಚಾಪ್ಟರ್​, ದ್ವಿತ್ವ, ರಿಚರ್ಡ್​ ಆಂಟೋನಿ ಸಿನಿಮಾಗಳ ನಿರ್ಮಾಣದಲ್ಲಿ ಬ್ಯುಸಿಯಾಗಿದೆ ಹೊಂಬಾಳೆ ಫಿಲಂಸ್​. ಹೀಗಿರುವಾಗಲೇ ಹೊಂಬಾಳೆ ಫಿಲಂಸ್​ ನಿನ್ನೆಯಷ್ಟೆ ತಮ್ಮ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ 11ನೇ ಸಿನಿಮಾವನ್ನು ಪ್ರಕಟಿಸಿದೆ. ಇಂದು ಹೇಳಿದಂತೆಯೇ 11ನೇ ಸಿನಿಮಾದ ಟೈಟಲ್ ಹಾಗೂ ಫಸ್ಟ್​ಲುಕ್​ ಪೋಸ್ಟರ್​ ಅನ್ನು ರಿಲೀಸ್ ಮಾಡಿದೆ.

ಕೆಜಿಎಫ್​ (KGF) ಸಿನಿಮಾದಂತಹ ಪ್ಯಾನ್​ ಇಂಡಿಯಾ ಚಿತ್ರವನ್ನು ನಿರ್ಮಿಸಿರುವ ಕನ್ನಡದ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್​ (Hombale Films) ಒಂದರ ಹಿಂದೆ ಒಂದರಂತೆ ಹೊಸ ಸಿನಿಮಾಗಳನ್ನು ಪ್ರಕಟಿಸುತ್ತಿದೆ. ಪುನೀತ್​ ರಾಜ್​ ಕುಮಾರ್​ ಅವರ ಅಭಿನಯದ ದ್ವಿತ್ವ ಸಿನಿಮಾ ಅನೌನ್ಸ್​ ಮಾಡಿದ ಕೆಲ ಸಮಯದಲ್ಲೇ ರಕ್ಷಿತ್ ಶೆಟ್ಟಿ ಜೊತೆಗೆ ರಿಚರ್ಡ್​ ಆಂಟೋನಿ ಸಿನಿಮಾ ಪ್ರಕಟಿಸಿದರು. ಈಗ ರಿಷಭ್​ ಶೆಟ್ಟಿ ಜೊತೆಗಿನ ಈ ಹೊಸ ಸಿನಿಮಾ ಕಾಂತಾರದ ಫಸ್ಟ್​ಲುಕ್ ಪೋಸ್ಟರ್​ ಈಗ ರಿಲೀಸ್ ಆಗಿದೆ.

ಹೊಂಬಾಳೆ ಫಿಲಂಸ್​ ನಿನ್ನೆ ಹೇಳಿದಂತೆಯೇ ಇಂದು  ಬೆಳಿಗ್ಗೆ 11.43ಕ್ಕೆ ಸರಿಯಾಗಿ ತಮ್ಮ 11ನೇ ಸಿನಿಮಾದ ಟೈಟಲ್​ ಹಾಗೂ ಫಸ್ಟ್​ಲುಕ್ ಪೋಸ್ಟರ್​ ರಿಲೀಸ್ ಮಾಡಿದೆ. ಈ ಸಲ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಹೊಂಬಾಳೆ ಫಿಲಂಸ್​ ಜೊತೆ ಕೈ ಜೋಡಿಸಿದ್ದಾರೆ. ಕಾಂತಾರ ಸಿನಿಮಾದ ನಿರ್ದೇಶನದ ಜವಾಬ್ದಾರಿಯ ಜೊತೆಗೆ ರಿಷಭ್ ಶೆಟ್ಟಿ ಇದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 8: ವೈಷ್ಣವಿಗೆ ಮರುನಾಮಕರಣ: ಹೆಸರು ಕೂಡ ನಿರ್ಧರಿಸಿದ್ದಾರೆ ರೇಷ್ಮಕ್ಕನ ತಾಯಿ..!

ಈ ಸಿನಿಮಾ ಕುರಿತಾಗಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಖುಷಿಯಿಂದ ಪೋಸ್ಟ್​ ಮಾಡಿದ್ದಾರೆ ರಿಷಭ್ ಶೆಟ್ಟಿ. ಬಹಳ ಸಮಯದ ನಂತರ ಹೊಸ ಕಿಚ್ಚಿನೊಂದಿಗೆ ಮತ್ತೆ ನಿರ್ದೇಶಕನಾಗಿ ಕಥೆ ಹೇಳಲು ಬರುತ್ತಿದ್ದೇನೆ‌. ಈ ಕಿಚ್ಚು ನಮ್ಮ ಸುತ್ತಲೂ ಸದ್ಯ ಕವಿದಿರುವ ಕರಾಳತೆಯನ್ನು ದಹಿಸುತ್ತದೆ ಎಂಬ ನಂಬಿಕೆಯೊಂದಿಗೆ ಎಂದು ಬರೆದುಕೊಂಡಿದ್ದಾರೆ ಶೆಟ್ರು.


ಸಿನಿಮಾದ ಪೋಸ್ಟರ್​ ನೋಡಿದರೆ ಇದು ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದ ಕುರಿತಾಗಿರುವ ಸಿನಿಮಾ ಆಗಿರಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕಾಂತಾರ ಎಂಬ ಟೈಟಲ್​ಗೆ ದಂತಕಥೆ ಎಂಬ ಟ್ಯಾಗ್​ ಲೈನ್​ ಸಹ ಇದೆ. ಕಾಂತಾರ ಸಿನಿಮಾದ ಶೂಟಿಂಗ್​ ಇದೇ ತಿಂಗಳ ಅಂದರೆ ಆಗಷ್ಟ್​ 27ರಿಂದ ಆರಂಭವಾಗಲಿದೆ.

ಇದನ್ನೂ ಓದಿ: Sanya Malhotra: ಸಸ್ಯಾಹಾರಿಯಾದ ದಂಗಲ್ ಸುಂದರಿ ಸಾನ್ಯಾ ಮಲ್ಹೋತ್ರಾ: ಈ ನಿರ್ಧಾರದ ಹಿಂದಿದೆ ಆ ಒಂದು ಕಾರಣ..!

ಹೊಂಬಾಳೆ ಫಿಲಂಸ್​ ನಿರ್ಮಾಣದ ದ್ವಿತ್ವ ಸಿನಿಮಾವನ್ನು ಲೂಸಿಯಾ ಪವನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ತ್ರಿಷಾ ಕೃಷ್ಣನ್ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೆ ತ್ರಿಷಾ ಅವರನ್ನು ದ್ವಿತ್ವ ಚಿತ್ರಕ್ಕೆ ಬರ ಮಾಡಿಕೊಳ್ಳಲಾಯಿತು. ಇನ್ನು ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆಗಿನ ರಿಚರ್ಡ್​ ಆಂಟೋನಿ ಚಿತ್ರವು ಉಳಿದವರು ಕಂಡಂತೆ ಸಿನಿಮಾ ಮುಂದುವರೆದ ಭಾಗವಾಗಿದ್ದು, ಹೊಂಬಾಳೆ ಫಿಲಂಸ್​ ಈ ಪ್ರಾಜೆಕ್ಟ್​ ಪ್ರಕಟಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 10ನೇ ಸಿನಿಮಾ ಅನೌನ್ಸ್​ ಮಾಡಿ ತಿಂಗಳು ಕಳೆಯುವ ಮುನ್ನವೇ ಈಗ ಮತ್ತೊಂದು ಪ್ರಾಜೆಕ್ಟ್​ ಪ್ರಕಟಿಸುವ ಮೂಲಕ ಕಿಚ್ಚು ಹೊತ್ತಿಸಿದ್ದಾರೆ.

ಹೊಂಬಾಳೆ ಫಿಲಂಸ್​ ನಿರ್ಮಾಣದ ಸಲಾರ್​ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಕೆಜಿಎಫ್​ ಚಾಪ್ಟರ್ 2 ರಿಲೀಸ್​ ಬಗ್ಗೆ ಚಿತ್ರತಂಡ ಇನ್ನೂ ಯಾವ ಅಪ್ಡೇಟ್​ ಸಹ ಕೊಟ್ಟಿಲ್ಲ. ಈ ಬಗ್ಗೆಯೂ ನೆಟ್ಟಿಗರು ಕಮೆಂಟ್​ ಮಾಡುವ ಮೂಲಕ ಸಿನಿಮಾದ ಬಗ್ಗೆ ಅಪ್ಡೇಟ್​ ಕೊಡುವಂತೆ ಆಗ್ರಹಿಸುತ್ತಿದ್ದಾರೆ.
Published by:Anitha E
First published: