Rishab Shetty: ತಮ್ಮ ಸಿನಿಮಾಗಾಗಿ ಹೊಸ ಹೀರೋಯಿನ್​ ಹುಡುಕಾಟದಲ್ಲಿ ರಿಷಭ್​ ಶೆಟ್ಟಿ..!

ರಿಷಭ್​ ಶೆಟ್ಟಿ ಆಗಾಗ ತಮ್ಮ ಸಿನಿಮಾಗೆ ಹೊಸ ಪ್ರತಿಭಾವಂತ ಕಲಾವಿದರು ಬೇಕೆಂದು ಪ್ರಕಟಣೆ ಕೊಡುತ್ತಲೇ ಇರುತ್ತಾರೆ. ಈಗಲೂ ಸಹ ರಿಷಭ್​ ತಮ್ಮ ಹೊಸ ಸಿನಿಮಾ ಹರಿಕಥೆ ಅಲ್ಲಾ ಗಿರಿಕಥೆಗಾಗಿ ಹೀರೋಯಿನ್​ ಹುಡುಕಾಟದಲ್ಲಿದ್ದಾರೆ.

Anitha E | news18-kannada
Updated:June 24, 2020, 8:21 AM IST
Rishab Shetty: ತಮ್ಮ ಸಿನಿಮಾಗಾಗಿ ಹೊಸ ಹೀರೋಯಿನ್​ ಹುಡುಕಾಟದಲ್ಲಿ ರಿಷಭ್​ ಶೆಟ್ಟಿ..!
ರಿಷಭ್​ ಶೆಟ್ಟಿ
  • Share this:
ಸುಶಾಂತ್​ ಸಿಂಗ್​ ಅಗಲಿಕೆಯಿಂದಾಗಿ ಬಾಲಿವುಡ್​ನಲ್ಲಿ ಈಗ ಸ್ವಜನಪಕ್ಷಪಾತದ ವಿರುದ್ಧ ಕೆಲ ಸೆಲೆಬ್ರಿಟಿಗಳು ದನಿ ಎತ್ತಿದ್ದಾರೆ. ಹೀಗಿರುವಾಗಲೇ ಸ್ಯಾಂಡಲ್​ವುಡ್​ನಲ್ಲಿ ಹೊಸ ಪ್ರತಿಭೆಗೆ ಅವಕಾಶ ನೀಡಲು ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಮುಂದಾಗಿದ್ದಾರೆ. 

ರಿಷಭ್​ ಶೆಟ್ಟಿ ಆಗಾಗ ತಮ್ಮ ಸಿನಿಮಾಗೆ ಹೊಸ ಪ್ರತಿಭಾವಂತ ಕಲಾವಿದರು ಬೇಕೆಂದು ಪ್ರಕಟಣೆ ಕೊಡುತ್ತಲೇ ಇರುತ್ತಾರೆ. ಈಗಲೂ ಸಹ ರಿಷಭ್​ ಶೆಟ್ಟಿ ತಮ್ಮ ಹೊಸ ಸಿನಿಮಾ 'ಹರಿಕಥೆ ಅಲ್ಲಾ ಗಿರಿಕಥೆ'ಗಾಗಿ ಹೀರೋಯಿನ್​ ಹುಡುಕಾಟದಲ್ಲಿದ್ದಾರೆ.

Rishab Shetty is in search of New Actress for Harikate alla Girikate
ರಿಷಭ್​ ಶೆಟ್ಟಿ


ಸಿನಿಮಾಗೆ ನಾಯಕಿಯಾಗಿ ಹುಡುಕುತ್ತುದ್ದು, ಹೊಸಬರೇ ಬೇಕೆಂದು ಹುಡುಕಾಡುತ್ತಿದ್ದಾರೆ. ಜೊತೆಗೆ ತಮ್ಮ ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟಿಯಾಗಲು ಬಯಸುವವರು 18 ರಿಂದ 28 ವರ್ಷದ ಒಳಗಿನವರಾಗಿರಬೇಕು.

ನಮ್ "ಹರಿಕಥೆ ಅಲ್ಲಾ ಗಿರಿಕಥೆ" ಸಿನ್ಮಾಗೆ ಹೀರೋಯಿನ್ ಬೇಕು. ಹೊಸ ಪ್ರತಿಭೆಗಳಿಗೆ ಒಂದೊಳ್ಳೆ ಛಾನ್ಸ್!!! @AJANEESHB #Sandesh_Production @rishabsfilms #Girikrishna #Ranganath pic.twitter.com/Gkx3TE2vNt

'ತನ್ನ ತಂದೆಯನ್ನು ಭೇಟಿ ಮಾಡಲು ತಡವಾಗಿ ಬಂದ ಪ್ರೇಮಿಗೆ ಸರಿಯಾಗಿ ಕ್ಲಾಸ್​ ತೆಗೆದುಕೊಳ್ಳುವ ಪ್ರೇಯಸಿಯಂತೆ ಒಂದು ನಿಮಿಷದ ವಿಡಿಯೋ ಮಾಡಿ hkgk.rsf@gmail.com ಇಮೇಲ್​ ಮಾಡಬೇಕು. ನೆನಪಿರಲಿ ಮೇಕಪ್​ ಹಾಗೂ ಫಿಲ್ಟರ್​ ಇಲ್ಲದೆ ವಿಡಿಯೋ ಮಾಡಬೇಕು. ಯಾವುದೇ ಟಿಕ್​ಟಾಕ್​ ವಿಡಿಯೋ ಕಳುಹಿಸಬಾರದು' ಎಂದು ರಿಷಭ್​ ಪೋಸ್ಟ್​ ಮಾಡಿದ್ದಾರೆ.

 



ಗಿರಿಕೃಷ್ಣ ಕತೆ ಬರೆದು ನಿರ್ದೇಶನ ಮಾಡುತ್ತಿರುವ 'ಹರಿಕಥೆ ಅಲ್ಲಾ ಗಿರಿಕಥೆ' ಸಿನಿಮಾವನ್ನು ರಿಷಭ್​ ಶೆಟ್ಟಿ ಫಿಲ್ಸ್ಮ್​ ಹಾಗೂ ಸಂದೇಶ್​ ನಾಗರಾಜ್​ ಪ್ರೊಡಕ್ಷನ್ಸ್​ ಜೊತೆಯಾಗಿ ನಿರ್ಮಿಸುತ್ತಿವೆ.

Kajol: ಅಪ್ಪನನ್ನು ನೆನೆದು ಭಾವುಕರಾದ ಕಾಜೋಲ್​: ಇಲ್ಲಿವೆ ಅಪರೂಪದ ಫೋಟೋಗಳು..!



ಇದನ್ನೂ ಓದಿ: Sushanth: ಕನಸಿನ ಮನೆಯಲ್ಲಿ ಹೇಗೆಲ್ಲ ಕಾಲ ಕಳೆಯುತ್ತಿದ್ರು ಗೊತ್ತಾ ಸುಶಾಂತ್​: ಇಲ್ಲಿದೆ ಅವರ ವೈರಲ್​ ವಿಡಿಯೋ..!
First published: June 24, 2020, 8:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading