ಕಾಂತಾರ (Kantara) ಸಿನಿಮಾ ಮೂಲಕ ಕಮಾಲ್ ಮಾಡಿದ ರಿಷಬ್ ಶೆಟ್ಟಿ (Rishab Shetty) ಇದೀಗ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಆಗಿ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಕಾಂತಾರ ಸಿನಿಮಾ ಸೂಪರ್ ಹಿಟ್ ಮೂವಿಯಾಗಿದ್ದು, ಬಾಕ್ಸ್ ಆಫೀಸ್ನನ್ನು (Box office) ಕೊಳ್ಳೆ ಹೊಡೆದು ಇತಿಹಾಸ ನಿರ್ಮಿಸಿದೆ. ಕಾಂತಾರ ಸಿನಿಮಾವನ್ನು ನಿರ್ದೇಶಿಸಿ ನಟಿಸಿರುವ ರಿಷಬ್ ಶೆಟ್ಟಿ, ಇಡೀ ದೇಶವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಕಾಂತಾರ ಸಿನಿಮಾ ಗುಂಗಿನಿಂದ ಜನರು ಇನ್ನು ಹೊರ ಬಂದಿಲ್ಲ. ಅನೇಕ ಕಡೆ ರಿಷಬ್ ಶೆಟ್ಟಿ ಸಂದರ್ಶನ ನೀಡಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ನಟ ಯಾರು ಅನ್ನೋದನ್ನು ಹೇಳಿದ್ದಾರೆ.
ರಿಷಬ್ ಶೆಟ್ಟಿ ನೆಚ್ಚಿನ ನಟ ಯಾರು!?
ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಅನೇಕ ಯುವ ನಿರ್ದೇಶಕರಿಗೆ ಸ್ಫೂರ್ತಿಯಾಗಿದ್ದಾರೆ. ಆದ್ರೆ ಅವರಿಗೂ ಸ್ಪೂರ್ತಿಯಾದ ನಟ ಯಾರು, ಅವರು ಯಾರ ಸ್ಟೈಲ್ ಫಾಲೋ ಮಾಡ್ತಿದ್ದರು ಎನ್ನುವ ಬಗ್ಗೆ ರಿಷಬ್ ಮಾತಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ರಿಷಬ್ ಶೆಟ್ಟಿ, ನನಗೆ ತಮಿಳು ನಟ ಸೂರ್ಯ ಅವರೇ ಸ್ಪೂರ್ತಿ ಎಂದಿದ್ದಾರೆ.
ಸೂರ್ಯ ಸ್ಟೈಲ್ ಕಾಪಿ ಮಾಡ್ತಿದ್ರು ಶೆಟ್ರು
ಕಾಲೇಜು ದಿನಗಳಲ್ಲೇ ಸಿನಿಮಾ ಬಗ್ಗೆ ಆಸಕ್ತಿ ಹೊಂದಿದ್ದ ರಿಷಬ್ ಶೆಟ್ಟಿ, ತಮಿಳು ನಟ ಸೂರ್ಯ ಅವರ ಅನೇಕ ಚಿತ್ರಗಳನ್ನು ನೋಡಿ ಅವ್ರ ಸ್ಟೈಲ್ ನನ್ನೇ ಫಾಲೋ ಮಾಡ್ತಿದ್ದರಂತೆ. ಸೂರ್ಯ ಕೂಡ ಒಂದೊಂದು ಸಿನಿಮಾಗಳಲ್ಲೂ ವಿಭಿನ್ನ ಪಾತ್ರ ಹಾಗೂ ಮ್ಯಾನರಿಸಂ ಮೂಲಕ ತೆರೆ ಮೇಲೆ ಬರ್ತಿದ್ರು. ಇವ್ರ ಸ್ಟೈನ್ನಲ್ಲೇ ನಾನು ಕೂಡ ಫಾಲೋ ಮಾಡ್ತಿದೆ. ಸೂರ್ಯ ಸರ್ ಅವ್ರ ಹೇರ್ ಸ್ಟೈಲ್ , ವಾಕಿಂಗ್ ಸ್ಟೈಲ್ನನ್ನು ನಾನು ಕಾಲೇಜು ದಿನಗಳಲ್ಲಿ ಕಾಪಿ ಮಾಡ್ತಿದ್ದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ನಟ ಸೂರ್ಯ ನನಗೆ ಸ್ಫೂರ್ತಿ
ತಮಿಳು ನಟ ಸೂರ್ಯ ಅನೇಕರಿಗೆ ಸ್ಪೂರ್ತಿ ಆಗಿದ್ದಾರೆ. ನಟನೆ ಅಷ್ಟೇ ಅಲ್ಲದೇ ಸಾಮಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಸೂರ್ಯಗೆ ಅಪಾರ ಅಭಿಮಾನಿ ಬಳಗವಿದೆ. ಕರ್ನಾಟಕದಲ್ಲೂ ಅನೇಕ ಫ್ಯಾನ್ಸ್ ಇದ್ದಾರೆ ಅದರಲ್ಲಿ ಶೆಟ್ಟು ಕೂಡ ಒಬ್ಬರಾಗಿದ್ದಾರೆ. ನಾನು ಕಾಲೇಜು ದಿನಗಳಲ್ಲಿ ಅವ್ರ ಸ್ಟೈಲ್ ಫಾಲೋ ಮಾಡ್ತಿದ್ದೆ ಎಂದ ನಟ ರಿಷಬ್, ಸೂರ್ಯ ಸರ್ ಅವರೇ ನನಗೆ ಸ್ಪೂರ್ತಿ ಎಂದಿದ್ದಾರೆ.
ಕಿರಿಕ್ ಪಾರ್ಟಿ ಮೂಲಕ ಗುರುತಿಸಿಕೊಂಡ ರಿಷಬ್
ರಿಷಬ್ ಶೆಟ್ಟಿ ಕೆಲವೊಂದು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ರೂ ಯಾವುದೂ ಗುರುತು ಸಿಗುವಂತದ್ದಾಗಿರಲಿಲ್ಲ. ಇದರ ನಡುವೆಯೇ 2014ರಲ್ಲಿ ರಕ್ಷಿತ್ ಶೆಟ್ಟಿ ನಟನೆ, ನಿರ್ದೇಶನದ ಉಳಿದವರು ಕಂಡಂತೆ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡ್ತಾರೆ. ಅಲ್ಲಿಂದ ರಿಷಬ್ ಕನ್ನಡ ಸಿನಿಮಾ ರಂಗದಲ್ಲಿ ಗುರುತಿಸಲ್ಪಡುತ್ತಾರೆ.
ಇದನ್ನೂ ಓದಿ: Rishab Shetty: ರಿಷಬ್ ಶೆಟ್ಟಿ ಹೊಸ ಪ್ರಾಜೆಕ್ಟ್ ಅನೌನ್ಸ್, ಶೀಘ್ರದಲ್ಲೇ ಬಿಡುಗಡೆಗೆ ರೆಡಿ!
ಕಿರಿಕ್ ಪಾರ್ಟಿ ಮೂಲಕ ಭರವಸೆ ಮೂಡಿಸಿದ ರಿಷಬ್
2016ರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಕಾಂಬಿನೇಷನ್ನಲ್ಲಿ ರಿಕ್ಕಿ ಎಂಬ ಸಿನಿಮಾಕ್ಕೆ ರಿಷಬ್ ಶೆಟ್ಟಿಯವರೇ ಆ್ಯಕ್ಷನ್ ಕಟ್ ಹೇಳ್ತಾರೆ. ಆದರೆ ವಿಮರ್ಷಕರಿಂದ ಉತ್ತಮ ಪ್ರಶಂಸೆ ಗಳಿಸಿದರೂ ರಿಕ್ಕಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಲೇ ಇಲ್ಲ. ಅದಾದ ಬಳಿಕ ರಿಷಬ್-ರಕ್ಷಿತ್ ಕಾಂಬಿನೇಷನ್ನಲ್ಲಿ ಬಂದಿದ್ದೇ ಕಿರಿಕ್ ಪಾರ್ಟಿ. ರಕ್ಷಿತ್ ಒಳಗಿನ ಪ್ರತಿಭೆಯನ್ನು ಓರೆಗೆ ಹಚ್ಚಿದ ಈ ಸಿನಿಮಾದಲ್ಲಿ ಇಂದಿನ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾನ್ವಿಯಾಗಿ ಪದಾರ್ಪಣೆ ಮಾಡಿದ್ದರು. ಚಿತ್ರ ಬಾಕ್ಸ್ ಆಫೀಸ್ ಧೂಳಿ ಪಟ ಮಾಡಿದ್ದು, ರಿಷಬ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ