ಕಾಂತಾರ ಸಿನಿಮಾ ನಂತರ ರಿಷಬ್ ಶೆಟ್ಟಿ (Rishab Shetty) ಬ್ಯಾಕ್ ಟು ಬ್ಯಾಕ್ ಸಿಕ್ವೇಲ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ವುಡ್ (Sandalwood) ಹಿಟ್ ಸಿನಿಮಾ ಕಾಂತಾರದ (Kantara) ನಂತರ ನಟ ಕಾಂತಾರ 2 ನಂತರ ಬೆಲ್ ಬಾಟಮ್ 2 ಸಿನಿಮಾ ಮಾಡೊದು ಕನ್ಫರ್ಮ್ ಆಗಿದೆ. 2019 ರಲ್ಲಿ ಸೂಪರ್ ಹಿಟ್ ಆಗಿದ್ದ ಬೆಲ್ ಬಾಟಮ್ (Bell Bottom) ಸಿನಿಮಾದ ಎರಡನೇ ಭಾಗ ಶೀಘ್ರ ಸೆಟ್ಟೇರಲಿದೆ. ಜಯತೀರ್ಥ ನಿರ್ದೇಶನದ "ಬೆಲ್ ಬಾಟಮ್" ಚಿತ್ರದಲ್ಲಿ ಅಭಿನಯಿಸಿದ್ದ ರಿಷಬ್ ಶೆಟ್ಟಿ ಅದರಲ್ಲಿ ತಮ್ಮ ಅಭಿನಯದಿಂದ ಕನ್ನಡ ಸಿನಿ ಪ್ರೇಕ್ಷಕರ ಮನಸು ಗೆದ್ದಿದ್ದರು. ಕಾಂತಾರ ಹಿಟ್ ನಂತರ ಬೆಲ್ ಬಾಟಮ್ 2 ಚಿತ್ರದಲ್ಲಿ ರಿಷಬ್ ನಟಿಸ್ತಾರ ಅನ್ನೋ ಕುತೂಹಲ ಈಗಾಗಲೇ ಅಭಿಮಾನಿಗಳು ವ್ಯಕ್ತಪಡಿಸಿದ್ದರು.
ಬೆಲ್ ಬಾಟಮ್ 2 ಸಿನಿಮಾ ಬಂದೇ ಬರುತ್ತೆ ಎಂದು ನಿರ್ಮಾಪಕ ಸಂತೋಷ್ ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ. ಕಾಂತಾರ 2 ಮುಗಿಸಿ ಬೆಲ್ ಬಾಟಮ್ 2 ಮಾಡೋಣ ಅಂತ ರಿಷಬ್ ಹೇಳಿದ್ದಾರೆ ಎಂದು ಅವರು ರಿವೀಲ್ ಮಾಡಿದ್ದಾರೆ.
ಈಗಿನ ಟ್ರೆಂಡ್ಗೆ ತಕ್ಕ ಹಾಗೆ ಬರುತ್ತೆ ಬೆಲ್ಬಾಟಂ 2
ಈಗಿನ ಟ್ರೆಂಡ್ಗೆ ತಕ್ಕಂತೆ ನಾವು ಕೂಡ ಬೆಲ್ ಬಾಟಮ್ 2 ಅನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತೇವೆ. ಬೆಲ್ ಬಾಟಮ್ 2 ನಲ್ಲಿ ರಿಷಬ್ ಜೊತೆಗೆ ಸ್ಟಾರ್ ನಟರನ್ನು ಕರೆತರುತ್ತೇವೆ. ಡಿಟೆಕ್ಟಿವ್ ಅನ್ನೋದು ಯೂನಿವರ್ಸಲ್ ಸಬ್ಜೆಕ್ಟ್. ಅದಕ್ಕೆ
ಬೆಲ್ ಬಾಟಮ್ 2 ಅನ್ನು ಪ್ಯಾನ್ ಇಂಡಿಯಾ ಚಿತ್ರವಾಗಿ ರಿಲೀಸ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಾಂತಾರ 2 ಬರುತ್ತಾ?
ಕಾಂತಾರ 2 ಸಿನಿಮಾ ಬರುತ್ತಾ ಎನ್ನುವುದು ಈಗ ಕನ್ನಡ ಸಿನಿಪ್ರೇಕ್ಷಕರ ಕುತೂಹಲ ಅಷ್ಟೇ ಅಲ್ಲ. ದೇಶಾದ್ಯಂತ ಎಲ್ಲ ಇಂಡಸ್ಟ್ರಿಯ ಪ್ರೇಕ್ಷಕರು ಕೂಡಾ ಕಾಂತಾರ 2 ಸಿನಿಮಾ ಕುರಿತ ಅಪ್ಡೇಟ್ ಎದುರು ನೋಡುತ್ತಿದ್ದಾರೆ. ಕಾಂತಾರ 2 ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಅವರು ಇದುವರೆಗೂ ಯಾವುದೇ ಅಪ್ಡೇಟ್ ಕೊಡದೇ ಇದ್ದರೂ ಈ ಬಗ್ಗೆ ಈಗಾಗಲೇ ಸಾಕಷ್ಟು ಹಿಂಟ್ ಸಿಕ್ಕಿದೆ.
ಬ್ಯಾಚುರಲ್ ಪಾರ್ಟಿಯಿಂದ ಹೊರಬಂದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅವರು ಬ್ಯಾಚುರಲ್ ಪಾರ್ಟಿ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಹಾಗೂ ದಿಗಂತ್ ಜೊತೆಗೆ ನಟಿಸಬೇಕಾಗಿತ್ತು, ಇದರ ಪೋಸ್ಟರ್ ಕೂಡಾ ರಿಲೀಸ್ ಆಗಿತ್ತು. ಆದರೆ ಸಡನ್ನಾಗಿ ನಟ ಈ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದಲ್ಲಿ ಬ್ಯುಸಿ ಇರುವ ಕಾರಣದಿಂದಲೇ ಅವರು ಬ್ಯಾಚುರಲ್ ಪಾರ್ಟಿಯಿಂದ ಹೊರ ಬಂದಿದ್ದಾರೆ ಎನ್ನುವುದು ಕಾಂತಾರ ಸೀಕ್ವೆಲ್ ಬರುತ್ತಿರುವುದಕ್ಕೆ ಒಂದು ಬಲವಾದ ಹಿಂಟ್.
ಇದನ್ನೂ ಓದಿ: Kantara: ಇಂಗ್ಲಿಷ್ಗೆ ಡಬ್ ಆಗುತ್ತಾ ಕಾಂತಾರ? ಹೇಗಿರ್ಬೋದು ಡೈಲಾಗ್ಸ್?
ರಿಷಬ್ ಬದಲಿ ಹೀರೋಗಾಗಿ ಹುಡುಕಾಟ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿಗಂತ್ ಹೇಳಿದ ಮಾತು ಕಾಂತಾರ 2 ಕುರಿತು ಚಿಕ್ಕ ಹಿಂಟ್ ಕೊಟ್ಟಿದೆ. ರಿಷಬ್ ಅವರು ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಅವರ ಬದಲಿಗೆ ಬೇರೆ ಆರ್ಟಿಸ್ಟ್ನನ್ನು ಹೊಡುಕಲಾಗುತ್ತಿದೆ ಎನ್ನುವುದನ್ನು ದಿಗಂತ್ ಅವರೇ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಅದೇ ರೀತಿ ರಿಷಬ್ ಅವರ ರೋಲ್ಗೆ ಟಾಪ್ ನಟನನ್ನೇ ಕರೆತರಲು ಸಿದ್ಧತೆ ಕೂಡಾ ನಡೆಯುತ್ತಿದೆ ಎನ್ನಲಾಗಿದೆ. ಇದನ್ನು ದಿಗಂತ್ ರಿವೀಲ್ ಮಾಡಿದ ಬೆನ್ನಲ್ಲೇ ಕಾಂತಾರ 2 ಕುರಿತು ಕುತೂಹಲ ಹೆಚ್ಚಾಗಿದೆ.
ಕಾಂತಾರ 2 ಸಿನಿಮಾಗೆ ಹೆಚ್ಚಿದ ಬೇಡಿಕೆ
ಜನರು ಕಾಂತಾರ 2 ಸಿನಿಮಾಗ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾಂತಾರ ಸಿನಿಮಾ ಹಿಟ್ ಆಗಿರುವ ಕಾರಣ ಮತ್ತೆ ಇದೇ ರೀತಿಯ ಕಾನ್ಸೆಪ್ಟ್ನಲ್ಲಿ ಸೀಕ್ವೆಲ್ ಸಿನಿಮಾ ಸಿದ್ಧವಾಗುತ್ತಾ ಎನ್ನುವುದನ್ನು ಕಾದುನೋಡಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ