ಹರಿಕಥೆ ಅಲ್ಲ ಗಿರಿಕಥೆ ಹೇಳಲಿದ್ದಾರೆ ರಿಷಭ್ ಶೆಟ್ಟಿ!

ಜನರ ಮನಸ್ಸಿಗೂ ಲಗ್ಗೆ ಹಾಕಿವೆ. ಹಾಗೇ ಈ ಹಿಂದೆ ಕೆಲ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರೂ, ರಿಷಭ್  ನಾಯಕನಾಗಿ ಡೆಬ್ಯೂ ಮಾಡಿದ ಬೆಲ್ ಬಾಟಮ್ ಸಿನಿಮಾ, ಅವರಿಗೆ ನಟನಾಗಿಯೂ ಹೊಸ ಇಮೇಜ್ ತಂದುಕೊಟ್ಟಿದೆ.ಈ ಎಲ್ಲ ಯಶಸ್ಸಿನ ಜತೆಗೆ ಸದ್ಯ ಲಾಕ್​ಡೌನ್​ನಿಂದಾಗಿ ತಮ್ಮ ಮುದ್ದು ಮಗನೊಂದಿಗೆ ಕಾಲ ಕಳೆಯುತ್ತಿದ್ದರು ರಿಷಭ್.

ರಿಷಭ್​ ಶೆಟ್ಟಿ ದಂಪತಿ ಹಾಗೂ ಸಂದೇಶ್​ ನಾಗರಾಜ್​

ರಿಷಭ್​ ಶೆಟ್ಟಿ ದಂಪತಿ ಹಾಗೂ ಸಂದೇಶ್​ ನಾಗರಾಜ್​

  • Share this:
ದೊಡ್ಡ ಮಟ್ಟದ ತಾರಾ ವರ್ಚಸ್ಸು ಪಡೆಯದೇ ಇದ್ದರು ತಾವು ನಟಿಸಿದ, ನಿರ್ದೇಶಿಸಿದ ಸಿನಿಮಾಗಳ ಮೂಲಕ ಹಂತ ಹಂತವಾಗಿ ಜನರ ಮನದಲ್ಲಿ ಛಾಪು ಮೂಡಿಸುತ್ತಿದ್ದಾರೆ ರಿಷಭ್ ಶೆಟ್ಟಿ. ಅವರು ನಿರ್ದೇಶಿಸಿರುವ ರಿಕ್ಕಿ, ಕಿರಿಕ್ ಪಾರ್ಟಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಮೂರೂ ಸಿನಿಮಾಗಳೂ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಿವೆ.

ಜನರ ಮನಸ್ಸಿಗೂ ಲಗ್ಗೆ ಹಾಕಿವೆ. ಹಾಗೇ ಈ ಹಿಂದೆ ಕೆಲ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರೂ, ರಿಷಭ್  ನಾಯಕನಾಗಿ ಡೆಬ್ಯೂ ಮಾಡಿದ ಬೆಲ್ ಬಾಟಮ್ ಸಿನಿಮಾ, ಅವರಿಗೆ ನಟನಾಗಿಯೂ ಹೊಸ ಇಮೇಜ್ ತಂದುಕೊಟ್ಟಿದೆ.ಈ ಎಲ್ಲ ಯಶಸ್ಸಿನ ಜತೆಗೆ ಸದ್ಯ ಲಾಕ್​ಡೌನ್​ನಿಂದಾಗಿ ತಮ್ಮ ಮುದ್ದು ಮಗನೊಂದಿಗೆ ಕಾಲ ಕಳೆಯುತ್ತಿದ್ದರು ರಿಷಭ್.

Rishab Shetty celebrated his son RanvitShetty Birthday in village style
ಲಾಕ್​ಡೌನ್​ನಿಂದಾಗಿ ಊರಿನಲ್ಲಿರುವ ರಿಷಭ್​ ತಮ್ಮ ಕುಟುಂಬದೊಂದಿಗೆ ಮಗನ ಮೊದಲ ವರ್ಷದ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಹಾಗೂ ಪಕ್ಕಾ ಹಳ್ಳಿ ಸ್ಟೈಲ್​ನಲ್ಲಿ ಆಚರಿಸಿದ ಚಿತ್ರ.


ಆದರೆ ಸದ್ಯ ಸಿನಿಮಾಗಳಿಗೆ ಸ್ವಲ್ಪ ರಿಲೀಫ್ ಸಿಕ್ಕ ಬೆನ್ನಲ್ಲೇ ಮತ್ತೆ ಬ್ಯುಸಿಯಾಗಿದ್ದಾರೆ. ರುದ್ರಪ್ರಯಾಗ್ ಚಿತ್ರಕ್ಕೆ ಅವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಜತೆಗೆ ಆರೇಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರಿಷಭ್ ಶೆಟ್ಟಿ.

ಇದನ್ನೂ ಓದಿ: Abhay Deol: ಹೃತಿಕ್​ ರೋಷನ್​ನಿಂದಾಗಿ ಅಭಯ್​ಗೆ ಆಗಿತ್ತಾ ಮೋಸ: ತಮ್ಮ ಅನುಭವ ಹಂಚಿಕೊಂಡ ನಟ..!

ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಸಿನಿಮಾ ಲಾಂಚ್ ಮಾಡಿದ ನಿರ್ಮಾಪಕ ಸಂದೇಶ್ ನಾಗರಾಜ್, ಈಗ ರಿಷಭ್ ಶೆಟ್ಟಿ ಫಿಲಂಸ್ ಸಹಭಾಗಿತ್ವದಲ್ಲಿ ಮತ್ತೊಂದು ಸಿನಿಮಾ ಮುಹೂರ್ತ ನೆರವೇರಿಸಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಎಂಬ ಈ ಚಿತ್ರಕ್ಕೆ ರಿಷಭ್ ಶೆಟ್ಟಿ ಹೀರೋ. ಇಂದು ಈ ಚಿತ್ರದ ಮುಹೂರ್ತ ಸಮಾರಂಭ ರಿಷಭ್ ಶೆಟ್ಟಿ ಅವರ ಕಛೇರಿಯಲ್ಲೇ ಸರಳವಾಗಿ ನೆರವೇರಿದೆ.

ದೇವರ ಮೇಲೆ ಸೆರೆಹಿಡಿಯಲಾದ ಮೊದಲ ದೃಶ್ಯಕ್ಕೆ ರಿಷಭ್ ಶೆಟ್ಟಿ ಪುತ್ರ ಮಾಸ್ಟರ್ ರಣವೀತ್ ಶೆಟ್ಟಿ ಆರಂಭಫಲಕ ತೋರಿದರು. ನಿರ್ಮಾಪಕ ಸಂದೇಶ್ ಎನ್. ಕ್ಯಾಮೆರಾ ಚಾಲನೆ ಮಾಡಿದರು. ರಿಷಭ್ ಪತ್ನಿ ಪ್ರಗತಿ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ವಿತರಕ ಜಯಣ್ಣ, ಕೆಆರ್​ಪೇಟೆ ಮಂಜಣ್ಣ ಸೇರಿದಂತೆ ಇನ್ನೂ ಹಲವರು ಪೂಜೆಯಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭಹಾರೈಸಿದರು.

ಇದನ್ನೂ ಓದಿ: 'ಲಕ್ಷ್ಯ' ಚಿತ್ರಕ್ಕೆ 16ರ ಸಂಭ್ರಮ: ಸಿನಿಮಾ ಕುರಿತಾಗಿ ನಿಮಗೆ ತಿಳಿಯದ ಐದು ಸತ್ಯಗಳು..!

ಸೂಪರ್ ​ ಹಿಟ್​ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿದ್ದ ಗಿರಿಕೃಷ್ಣ, ಹರಿಕಥೆ ಅಲ್ಲ ಗಿರಿಕಥೆಗೆ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಿರಿಕ್ ಪಾರ್ಟಿಗೆ ಸಂಗೀತ ನೀಡಿದ್ದ ಅಜನೀಶ್ ಲೋಕನಾಥ್ ಈ ಚಿತ್ರದ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ಹೊಸ ಸಿನಿಮಾಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡುತ್ತಲೇ, ಬೆಂಗಳೂರಿನಲ್ಲೇ ಮೊದಲ ಶೆಡ್ಯೂಲ್ ಶೂಟಿಂಗ್ ಮಾಡುವ ಯೋಜನೆ ಚಿತ್ರತಂಡದ್ದು.

Sushant Singh Rajput: ಸೆಲೆಬ್ರಿಟಿ ಫೋಟೋಗ್ರಾಫರ್​ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ ಸುಶಾಂತ್: ಇಲ್ಲಿವೆ​ ಫೋಟೋಗಳು..! 

ಇದನ್ನೂ ಓದಿ: ಟ್ರೋಲ್​ ಆಗುತ್ತಿದೆ ಮಹೇಶ್​ ಭಟ್​ - ರಿಯಾ ಚಕ್ರವರ್ತಿ ಫೋಟೋ: ಸುಶಾಂತ್ ಜೊತೆಗಿನ ಚಿತ್ರಗಳನ್ನು ಡಿಲೀಟ್​ ಮಾಡಿದ ನಟಿ..!
First published: