• Home
  • »
  • News
  • »
  • entertainment
  • »
  • Kantara: ಸುಖಾಸುಮ್ಮನೆ ಕ್ಲೈಮ್ಯಾಕ್ಸ್​ನಲ್ಲಿ ಬರೋ ಪದ ಬಳಸ್ಬೇಡಿ, ದೈವಕ್ಕೆ ಅವಮಾನ ಮಾಡ್ಬೇಡಿ ಎಂದ ರಿಷಬ್ ಶೆಟ್ಟಿ!

Kantara: ಸುಖಾಸುಮ್ಮನೆ ಕ್ಲೈಮ್ಯಾಕ್ಸ್​ನಲ್ಲಿ ಬರೋ ಪದ ಬಳಸ್ಬೇಡಿ, ದೈವಕ್ಕೆ ಅವಮಾನ ಮಾಡ್ಬೇಡಿ ಎಂದ ರಿಷಬ್ ಶೆಟ್ಟಿ!

ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ

Rishab Shetty: ಕಾಂತಾರ (Kantara) ಅಂದಕೂಡಲೇ ನಮ್ಮ ಮಣ್ಣಿನ ಸೊಗಡಿನ ಕಥೆ ಅನ್ನಿಸುತ್ತೆ. ಅದನ್ನು ತೆರೆ ಮೇಲೆ ತಂದು ನಟ, ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty) ಗೆದ್ದಿದ್ದಾರೆ. ಕಾಂತಾರ ರಿಲೀಸ್ ಆಗಿ ಮೂರನೇ ದಿನವೂ ಇಡೀ ರಾಜ್ಯಾದ್ಯಂತ ಹೌಸ್​ಫುಲ್ (Housefull)​ ಪ್ರದರ್ಶನ ಕಾಣುತ್ತಿದೆ.

ಮುಂದೆ ಓದಿ ...
  • Share this:

ಇತ್ತೀಚೆಗೆ ಎಲ್ಲಿ ನೋಡಿದರೂ ಕೆಜಿಎಫ್ (KGF) ​, ರಾಕಿ ಭಾಯ್ (Rocky Bhai)​ ಎಂಬ ಮಾತುಗಳು ಎಲ್ಲ ಚಿತ್ರರಂಗದಲ್ಲೂ ಕೇಳುತ್ತಿತ್ತು. ಅದೇ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆಯಾದ ಮತ್ತೊಂದು ಸಿನಿಮಾದ ಹೆಸರು ಕೂಡ ಈಗ ಇಡೀ ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ. ಅದು ನಮ್ಮ ಕನ್ನಡ ಸಿನಿಮಾ ಅನ್ನೋದು ನಮ್ಮ ಹೆಮ್ಮೆ. ಕಾಂತಾರ (Kantara) ಅಂದಕೂಡಲೇ ನಮ್ಮ ಮಣ್ಣಿನ ಸೊಗಡಿನ ಕಥೆ ಅನ್ನಿಸುತ್ತೆ. ಅದನ್ನು ತೆರೆ ಮೇಲೆ ತಂದು ನಟ, ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty) ಗೆದ್ದಿದ್ದಾರೆ. ಕಾಂತಾರ ರಿಲೀಸ್ ಆಗಿ ಮೂರನೇ ದಿನವೂ ಇಡೀ ರಾಜ್ಯಾದ್ಯಂತ ಹೌಸ್​ಫುಲ್ (Housefull)​ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿ ಕರಾವಳಿ ಕಡೆಯವರು. ಅಲ್ಲಿನ ಭಾಷೆ, ಸೊಗಡು, ಆಚರಣೆಗಳು, ನಂಬಿಕೆ ಎಲ್ಲದರ ಬಗ್ಗೆಯೂ ತಿಳಿದುಕೊಂಡವರು. 'ಕಾಂತಾರ' (Kantara Movie Review) ಮೂಲಕ ಕರಾವಳಿ ಸೊಗಡಿನ ಆಳಕ್ಕಿಳಿದು ಸಿನಿಮಾ ಮಾಡಿದ್ದಾರೆ.


ಎಲ್ಲೆಲ್ಲೂ ರಿಷಬ್ ಶೆಟ್ಟಿ ಹವಾ!\


ಕಾಂತಾರ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿರದಷ್ಟು ಪವರ್​ಫುಲ್​ ಪಾತ್ರದಲ್ಲಿ ರಿಷಬ್​ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಈ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿರಿಷಬ್​ ಶೆಟ್ಟಿ ಅಭಿನಯ ನೋಡಿ ಫಿದಾ ಆಗದವರೇ ಇಲ್ಲ. ಕೊನೆಯ 20 ನಿಮಿಷಗಳಲ್ಲಿ ತಾನೆಂಥ ನಟ ಎಂಬುದನ್ನು ರಿಷಬ್​ ಶೆಟ್ಟಿ ಪ್ರೂವ್ ಮಾಡಿದ್ದಾರೆ. ಕಾಂತಾರ ಸಿನಿಮಾ ನೋಡಿದವರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುತ್ತಿದ್ದಾರೆ. ರಿಷಬ್​ ಕೆರಿಯರ್​ನಲ್ಲೇ ಟರ್ನಿಂಗ್ ಪಾಯಿಂಟ್ ಈ ಕಾಂತಾರ ಅಂದರೆ ತಪ್ಪಾಗಲ್ಲ. ದೈವದ ಕಥೆ ಹೊಂದಿರುವ ಈ  ಸಿನಿಮಾದಲ್ಲಿ ಓ ಎಂಬ ದೈವ ಪದ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ.


ಓ ಎಂದು ಹೇಳಿ ಅವಮಾನ ಮಾಡಬೇಡಿ


ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಈ ಒಂದು ಪದ ಚೆನ್ನಾಗಿ ತಲೆಯಲ್ಲಿ ಉಳಿಯತ್ತದೆ. ಈ ಪದವನ್ನು ಎಲ್ಲರೂ ಹೇಳುತ್ತಿದ್ದಾರೆ. ಇದು ದೈವದ ಮಾತು. ಇದನ್ನು ಜನಸಾಮಾನ್ಯರು ಸುಮ್ಮನೆ ಹೇಳುವಂತಿಲ್ಲ. ಈ ಬಗ್ಗೆ ರಿಷಬ್​ ಶೆಟ್ಟಿ ನೇರವಾಗಿ ಮಾತನಾಡಿದ್ದಾರೆ. ಜೊತೆಗೆ ಓ ಎಂದು ಕೂಗಿ ದೈವಕ್ಕೆ ಅವಮಾನ ಮಾಡಬೇಡಿ ಎಂದು ರಿಷಬ್​ ಸಂದೇಶ ರವಾನಿಸಿದ್ದಾರೆ.


ಇದನ್ನೂ ಓದಿ: ಕಾಂತಾರ ಕ್ಲೈಮ್ಯಾಕ್ಸ್​​ ನೋಡ ನೋಡುತ್ತಲೇ ದೈವ ಆವಾಹನೆ, ಥಿಯೇಟರ್‌ನಲ್ಲೇ ಓ ಎಂದು ಆರ್ಭಟಿಸಿದ ಮಹಿಳೆ!


ಸುಮ್​ ಸುಮ್ನೆ ಓ ಎನ್ನಬೇಡಿ ಎಂದ ರಿಷಬ್!


ದೈವ ಆರಾಧನೆ ಮಾಡುವುದು ನಮ್ಮ ಸಂಸ್ಕೃತಿ. ನಮ್ಮ ಮಣ್ಣಿನ ಕಥೆ. ಈ ಜನಪದ ಅನ್ನೋದು ಮಕ್ಕಳಿಗೆ ತಲುಪಬೇಕು. ನಿಮ್ಮ ಮಕ್ಕಳನ್ನು ಸಿನಿಮಾಗೆ ಕರೆದುಕೊಂಡು ಬನ್ನಿ. ಇದು ಕೇವಲ ಸೌತ್​ಗೆ ಸೇರಿದ ಸಿನಿಮಾ ಅಂತಲ್ಲ. ಎಲ್ಲರಿಗೂ ಸೇರಬೇಕಾದ ಸಿನಿಮಾ. ಸಿನಿಮಾ ನೋಡಿ ಬಂದು ಹೊರಗಡೆ ಎಲ್ಲರೂ ಓ ಎಂಬ ಪದವನ್ನು ಬೇರೆ ಬೇರೆ ರೀತಿಯಲ್ಲಿ ಬಳಸುತ್ತಿದ್ದಾರೆ. ಇದನ್ನು ಮಾಡಬೇಡಿ. ಸುಮ್​ ಸುಮ್ನೆ ಆ ಪದ ಬಳಸಬೇಡಿ. ಇದು ಬೇರೆ ಸಿನಿಮಾದ ಡೈಲಾಗನಂತಲ್ಲ. ಅದಕ್ಕೆ ಒಂದು ಬೆಲೆ ಇದೆ ಎಂದು ರಿಷಭ್​ ಶೆಟ್ಟಿ ಲೈವ್ ಬಂದು ಸಂದೇಶ ಕೊಟ್ಟಿದ್ದಾರೆ.



ಇದನ್ನೂ ಓದಿ:ಕಾಂತಾರ ಸಿನಿಮಾ ಮಾಡೋ ಮುನ್ನ ರಿಷಬ್​ ಶೆಟ್ಟಿ ಧರ್ಮಸ್ಥಳಕ್ಕೆ ಹೋಗಿದ್ದೇಕೆ?


ಥಿಯೇಟರ್‌ನಲ್ಲೇ ಓ ಎಂದು ಆರ್ಭಟಿಸಿದ ಮಹಿಳೆ!


ಷಬ್ ಶೆಟ್ಟಿ ಕೆರಿಯರ್​ನಲ್ಲಿ ದೊಡ್ಡ ಬ್ರೇಕ್​ ಪಡೆದುಕೊಂಡ ಸಿನಿಮಾ ಕಾಂತಾರ. ಈ ಸಿನಿಮಾ ಸ್ಯಾಂಡಲ್ ವುಡ್ ನ ಮೈಲಿಗಲ್ಲು ಎಂದರೆ ತಪ್ಪಾಗಲ್ಲ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ, ರಿಷಬ್ ಶೆಟ್ಟಿ ಮನೋಜ್ಞ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದ ಸಿನಿಮಾ ಈ ‘ಕಾಂತಾರ’.ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆಯಾಗಿದೆ ಎಂದು ತಿಳಿದುಬಂದಿದೆ. ಸಿನಿಮಾದ ಕ್ಲೈಮಾಕ್ಸ್ ನೋಡುತ್ತಿದ್ದಂತೆ ದೈವ ಮೈಮೇಲೆ ಬಂದಂತೆ ಮಹಿಳೆ ವರ್ತಿಸಿದ್ದಾರೆ.


>ಮಂಗಳೂರಿನ ಪಿವಿಆರ್ ಮಾಲ್​​ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಮಹಿಳೆಯ ವರ್ತನೆ ಕಂಡು ಅಲ್ಲಿ ನೆರೆದಿದ್ದ ಜನ ಭಯಬೀತಗೊಂಡಿದ್ದಾರೆ. ವಿಡಿಯೋ ಮಾಡುವುದಕ್ಕೂ ಸಹ ಹೆದರಿಕೊಂಡಿದ್ದಾರೆ.

Published by:ವಾಸುದೇವ್ ಎಂ
First published: