Hero: ಹೀರೋ ಸಿನಿಮಾದ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್​ ಸ್ಫೋಟ: ಸ್ಪಷ್ಟನೆ ಕೊಟ್ಟ ರಿಷಭ್​ ಶೆಟ್ಟಿ

ಒಂದು ಸಿನಿಮಾ ಮಾಡುವಾಗ ಇಂತಹ ಘಟನೆಗಳು ನಡೆದರೆ, ಅದನ್ನೇ ಬಳಸಿಕೊಂಡು ಸಿನಿಮಾ ಬಗ್ಗೆ ಪ್ರಚಾರ ಪಡೆಯುವ ಅಗತ್ಯವಿಲ್ಲ. ಹೀಗಾಗಿಯೇ ಆಗ ಈ ಘಟನೆ ಬಗ್ಗೆ ನಾವು ಎಲ್ಲೂ ಹೇಳಿಕೊಳ್ಳಲು ಹೋಗಲಿಲ್ಲ. ಇನ್ನು ಕೆಲವರು ಸಿನಿಮಾ ಪ್ರಚಾರಕ್ಕಾಗಿ ಈ ವಿಡಿಯೋವನ್ನು ಬಳಸಿಕೊಳ್ಳುತ್ತಿದ್ದೇವೆ ಎನ್ನುತ್ತಿದ್ದಾರೆ. ಪ್ರಚಾರಕ್ಕಾಗಿ ಹೀಗೆ ಮಾಡುವುದಾದರೆ, ಟ್ರೇಲರ್​ ರಿಲೀಸ್​ ಸಮಯದಲ್ಲೇ ಇದನ್ನು ಲೀಕ್​ ಮಾಡುತ್ತಿದ್ದೆವು.

ಮಾರ್ಚ್​ 5ಕ್ಕೆ ಹೀರೋ ಸಿನಿಮಾ ತೆರೆಗೆ

ಮಾರ್ಚ್​ 5ಕ್ಕೆ ಹೀರೋ ಸಿನಿಮಾ ತೆರೆಗೆ

  • Share this:
ರಿಷಭ್​ ಶೆಟ್ಟಿ ಅಭಿನಯದ ಸಿನಿಮಾ ಹೀರೋ ಮಾ. 5ರಂದು ರಿಲೀಸ್ ಆಗಲಿದೆ. ಸಸ್ಪೆನ್ಸ್​ ಆ್ಯಕ್ಷನ್​ ಸಿನಿಮಾ ನೋಡಲು ಸಿನಿಪ್ರಿಯರು ಕಾತರರಾಗಿದ್ದಾರೆ. ಇನ್ನು ಈಗಾಗಲೇ ಸಿನಿಮಾದ ಪ್ರಚಾರ ಕಾರ್ಯ ನಾನಾ ರೀತಿ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಪ್ರಯತ್ನಗಳ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದೆ ಹೀರೋ ಚಿತ್ರತಂಡ. ಇನ್ನು ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗುತ್ತಿದ್ದಂತೆಯೇ ಸಿನಿಮಾ ಚಿತ್ರೀಕರಣದ ವೇಳೆ ನಡೆದಿದ್ದ ಪೆಟ್ರೋಲ್​ ಬಾಂಬ್​ ಸ್ಫೋಟಗೊಂಡು ನಡೆದಿದ್ದ ಅವಘದ ವಿಡಿಯೋ ಲೀಕ್​ ಆಗಿತ್ತು. ಆ ವಿಡಿಯೋದಲ್ಲಿ ರಿಷಭ್​ ಶೆಟ್ಟಿ ಬೆನ್ನು ಹಾಗೂ ತೆಗೂದಲಿಗೆ ಬೆಂಕಿ ಹೊತ್ತಿಕೊಳ್ಳುವುದು ಕಾಣಿಸುತ್ತದೆ. ಆದರೆ ಅದೃಷ್ಟವಶಾತ್​ ಯಾವುದೇ ಅಪಾಯವಾಗದೆ ರಿಷಭ್​ ಶೆಟ್ಟಿ ಈ ಅವಘಡದಿಂದ ಪಾರಾಗಿದ್ದಾರೆ. ಇನ್ನು ಈ ವಿಡಿಯೋವನ್ನು ಸಿನಿಮಾ ರಿಲೀಸ್​ಗೆ ಕೆಲವೇ ದಿನಗಳು ಇರುವಾಗ ಪರಚಾರಕ್ಕಾಗಿ ರಿಲೀಸ್​ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ. ಈ ಕುರಿತಾಗಿ ರಿಷಭ್​ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. 

ನಿನ್ನೆ ಸಂಜೆ ತಮ್ಮ ಇನ್​ಸ್ಟಾಗ್ರಾಂನಿಂದ ಲೈವ್​ ಬಂದಿದ್ದ ರಿಷಭ್​ ಶೆಟ್ಟಿ, ಮೊದಲಿಗೆ ಪೆಟ್ರೋಲ್​ ಬಾಂಬ್​ ಸ್ಫೋಟದ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಎಲ್ಲ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೆವು. ಆದರೂ ಈ ಘಟನೆ ಸಂಭವಿಸಿತು. ಆದರೆ ಯಾರಿಗೂ ಏನೂ ಆಗಲಿಲ್ಲ. ಈ ಘಟನೆ ನಡೆದಾಗ ಮನೆಯಲ್ಲಿ ಮಡದಿ ಪ್ರಗತಿ ಹಾಗೂ ಸ್ನೇಹಿತರಾದ ರಕ್ಷಿತ್​ ಹಾಗೂ ಇತರರಿಗೆ ಈ ಬಗ್ಗೆ ವಿಷಯ ತಿಳಿಸಲಿಲ್ಲ ಎಂದಿದ್ದಾರೆ.
ಒಂದು ಸಿನಿಮಾ ಮಾಡುವಾಗ ಇಂತಹ ಘಟನೆಗಳು ನಡೆದರೆ, ಅದನ್ನೇ ಬಳಸಿಕೊಂಡು ಸಿನಿಮಾ ಬಗ್ಗೆ ಪ್ರಚಾರ ಪಡೆಯುವ ಅಗತ್ಯವಿಲ್ಲ. ಹೀಗಾಗಿಯೇ ಆಗ ಈ ಘಟನೆ ಬಗ್ಗೆ ನಾವು ಎಲ್ಲೂ ಹೇಳಿಕೊಳ್ಳಲು ಹೋಗಲಿಲ್ಲ. ಇನ್ನು ಕೆಲವರು ಸಿನಿಮಾ ಪ್ರಚಾರಕ್ಕಾಗಿ ಈ ವಿಡಿಯೋವನ್ನು ಬಳಸಿಕೊಳ್ಳುತ್ತಿದ್ದೇವೆ ಎನ್ನುತ್ತಿದ್ದಾರೆ. ಪ್ರಚಾರಕ್ಕಾಗಿ ಹೀಗೆ ಮಾಡುವುದಾದರೆ, ಟ್ರೇಲರ್​ ರಿಲೀಸ್​ ಸಮಯದಲ್ಲೇ ಇದನ್ನು ಲೀಕ್​ ಮಾಡುತ್ತಿದ್ದೆವು. ಇನ್ನು ಸಿನಿಮಾ ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ವಿಡಿಯೋ ಕ್ಲಿಪ್​ ಕೊಡುವಾಗ ಈ ವಿಡಿಯೋ ಸಹ ಕೆಲವರ ಕೈ ತಲುಪಿದೆ ಇದರಿಂದಾಗಿ ಈ ಗ ಈ ಘಟನೆ ಕುರಿತಾದ ಸುದ್ದಿಗಳು ಹಾಗೂ ಈ ವಿಡಿಯೋ ಹರಿದಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಕ್ಷಿತ್​ ತುಂಬಾ ಪೆಟ್ಟು ಮಾಡಿಕೊಂಡಿದ್ದ: ರಿಷಭ್​ ಶೆಟ್ಟಿ

ಈ ಸಿನಿಮಾವನ್ನು 24 ಜನ ಮಜ್ಸೇರಿ ಮಾಡಿದ್ದು. ಆ್ಯಕ್ಷನ್​ ಸೀಕ್ವೆನ್ಸ್​ಗಳಿಗೆ ಸುರಕ್ಷತಾ ಕರಮಗಳನ್ನು ತೆಗೆದುಕೊಂಡು ಮಾಡಿದ್ದರೂ, ನನಗೂ ಬೆನ್ನು ಸುಟ್ಟು, ಸೊಂಟಕ್ಕೆ ಬೆಲ್ಟ್​ ಹಾಕಿಕೊಂಡು ಚಿತ್ರೀಕರಣ ಮಾಡುವ ಪರಿಸ್ಥಿತಿ ಉಂಟಾಗಿತ್ತು. ನನಗಿಂತ ಈ ಸಿನಿಮಾದಲ್ಲಿ ಹೆಚ್ಚಾಗಿ ಪೆಟ್ಟು ಮಾಡಿಕೊಂಡಿದ್ದು ರಕ್ಷಿತ್​ ಎಂಬ ಹುಡುಗ. ಟ್ಯ್ರಾಕ್ಟರ್​ನಿಂದ ಜಿಗಿಯುವ ಸೀನ್​ ಒಂದು ಇದೆ. ಅದರಲ್ಲಿ ರಕ್ಷಿತ್​ ಪೆಟ್ಟು ಮಾಡಿಕೊಂಡ. ಜೊತೆಗೆ ಇಡೀ ಸೀಕ್ವೆನ್ಸ್​ನಲ್ಲಿ ರಕ್ಷಿತ್ ಬರಿಗಾಲಿನಲ್ಲಿ ಓಡಾಡಬೇಕಾಗಿತ್ತು ಎಂದು ರಿಷಭ್​ ವಿವರಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಶೇಂಗಾ ಹೋಳಿಗೆ-ರೊಟ್ಟಿ ಊಟ ಸವಿದ ರಾಬರ್ಟ್​ ರಾಣಿ ಆಶಾ ಭಟ್​..!

ಈ ಸಲ ಕೊಂಚ ವಿಭಿನ್ನವಾಗಿ ಸಿನಿಮಾ ಮಾಡಿದ್ದೇವೆ. ಇದರಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಪ್ರಯತ್ನ ಮಾಡಿಲ್ಲ. ಆದರೆ ಸಿನಿಮಾ ನೋಡಲು ಬಂದರೆ ಒಂದೊಳ್ಳೆ ಅನುಭವದ ಜೊತೆ ಮನೆಗಳಿಗೆ ಹೋಗುತ್ತೀರಿ. ಇದು ಒಂದು ದಿನದಲ್ಲಿ ನಡೆಯುವ ಕಥೆ. ಲಾಕ್​ಡೌನ್​ನಲ್ಲಿ ಹೇಗೆ ಕೆಲಸ ಮಾಡಿದ್ದೇವೆ ಎಂದು ನೋಡಲು ಚಿತ್ರಮಂದಿರಗಳಿಗೆ ಬನ್ನಿ ಎಂದು ಹೇಳಿದ್ದಾರೆ ರಿಷಭ್​.
ಸಿನಿಮಾ ರಿಲೀಸ್​ ಆದ ಮೂರು ದಿನ ಬೆಂಗಳೂರಿನಲ್ಲೇ ಇರುತ್ತೇವೆ. ನಂತರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ನಿಮ್ಮ ಜಿಲ್ಲೆಗಳಿಗೆ ಬಂದಿ ಅಭಿಮಾನಿಗಳನ್ನು ಭೇಟಿಯಾಗಲಿದ್ದೇವೆ ಎಂದಿದ್ದಾರೆ ರಿಷಭ್​ ಶೆಟ್ಟಿ.

ಇದನ್ನೂ ಓದಿ: ಮುದ್ದಾದ ಮದು ಮಗಳು ಮೇಘಾ ಶೆಟ್ಟಿಯ ಕಿರುನಗೆಗೆ ಅಭಿಮಾನಿಗಳು ಫಿದಾ..!

ಇನ್ನು ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡ ರಿಷಭ್ ಶೆಟ್ಟಿ, ಪ್ರಚಾರ ಕಾರ್ಯಜೋರಾಗಿ ನಡೆಯುತ್ತಿದೆ. ಎಲ್ಲರೂ ಸಿನಿಮಾ ಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿ. ಸಿನಿಮಾ ಟಿಕೆಟ್​ ಬುಕ್​ ಮಾಡಿದರೆ, ನಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್​ ಮಾಡಿ ನಮಗೆ ಖುಷಿಯಾಗುತ್ತೆ ಎಂದು ಮನವಿ ಮಾಡಿದ್ದಾರೆ.
Published by:Anitha E
First published: