Rishab Shetty: ಹೊಸ ದುಬಾರಿ ಕಾರು ಖರೀದಿಸಿದ ರಿಷಭ್ ಶೆಟ್ಟಿ, ಇಲ್ಲಿದೆ ನೋಡಿ ಫೋಟೋಗಳು

Rishab Shetty: ಇದೀಗ ರಿಷಭ್ ಶೆಟ್ಟಿ ಕೂಡ ಈ ಕಾರಿನ ಒಡೆಯರಾಗಿದ್ದಾರೆ. ಈ ವಿಚಾರವನ್ನು ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಮಕ್ಕಳ ಜೊತೆ ಇರುವ ಫೋಟೋಗಳು ಸದ್ಯ ವೈರಲ್ ಆಗಿದೆ.

ರಿಷಭ್ ಶೆಟ್ಟಿ

ರಿಷಭ್ ಶೆಟ್ಟಿ

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ತಮ್ಮ ವಿಭಿನ್ನ ನಿರ್ದೇಶನ ಕಥೆಯ ಮೂಲಕ ಹೆಸರಾದ ನಿರ್ದೇಶಕ ಎಂದರೆ ರಿಷಭ್ ಶೆಟ್ಟಿ (Rishab Shetty). ಅವರು ಯಾವಾಗಲೂ ತಮ್ಮ ಡಿಫ್ರೆಂಟ್​ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಿನಿಮಾ ನಿರ್ದೇಶನ, ನಟನೆ ಹೀಗೆ ಎಲ್ಲದರಲ್ಲೂ ಇವರು ವಿಭಿನ್ನ ಹಾಗೂ ವಿಚಿತ್ರ ಎನ್ನಬಹುದು. ಕನ್ನಡ ಸಿನಿಮಾ ರಂಗದಲ್ಲಿ (Film Industry) ತಮ್ಮದೇ ಆದ ಛಾಪು ಮೂಡಿಸಿದವರು ರಿಷಭ್ ಶೆಟ್ಟಿ. ಇದೀಗ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

ಹೊಸ ಕಾರು ಖರೀದಿಸಿದ ರಿಷಭ್

ಅರೇ ಇದೇನು ಮೊನ್ನೆಯಷ್ಟೇ ಎರಡನೇ ಮಗುವಿನ ತಂದೆಯಾಗಿದ್ದರು, ಇದೇನು ಮತ್ತೆ ಎಂದು ಅನುಮಾನ ಬೇಡ. ಅವರು ಹೊಸ ಕಾರ್​ ಖರೀದಿಸಿದ್ದಾರೆ. ಹೌದು, ರಿಷಭ್ ಶೆಟ್ಟಿ ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಕಾರಿನ ಜೊತೆಗೆ ರಿಷಭ್ ಹಾಗೂ ಅವರ ಕುಟುಂಬ ತೆಗೆಸಿಕೊಂಡಿರುವ ಫೋಟೊಗಳು ವೈರಲ್ ಆಗಿದೆ.  ನಿರ್ದೇಶಕ ರಿಷಭ್ ಶೆಟ್ಟಿ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ಆಡಿ ಕ್ಯೂ7 ಕಾರನ್ನು ಖರೀದಿ ಮಾಡಿದ್ದು, ಅಭಿಮಾನಿಗಳು ಹುಬ್ಬೇರಿಸಿದ್ದಾರೆ.



ಈ ಆಡಿ ಕ್ಯೂ7 ಸೆಲೆಬ್ರೆಟಿಗಳ ಅಚ್ಚು ಮೆಚ್ಚಿನ ಕಾರುಗಳಲ್ಲಿ ಒಂದು. ಈ ಕಾರು ಹಲವಾರು ಸೆಲೆಬ್ರಿಟಿಗಳ ಬಳಿ ಇದ್ದು, ಇದೀಗ ರಿಷಭ್ ಶೆಟ್ಟಿ ಕೂಡ ಈ ಕಾರಿನ ಒಡೆಯರಾಗಿದ್ದಾರೆ. ಈ ವಿಚಾರವನ್ನು ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಮಕ್ಕಳ ಜೊತೆ ಇರುವ ಫೋಟೋಗಳು ಸದ್ಯ ವೈರಲ್ ಆಗಿದೆ.

ಇನ್ನು ರಿಷಭ್ ಶೆಟ್ಟಿ ಸಿನಿಮಾಗಳಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾ ಸೂಪರ್ ಹಿಟ್​ ಆದ ನಂತರ ಹರಿ ಕಥೆ ಅಲ್ಲ ಗಿರಿ ಕಥೆ ಸಿನಿಮಾ ಮೂಲಕ ಮತ್ತೆ ಜನರ ಮುಂದೆ ಬಂದಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ರಿಷಭ್ ಶೆಟ್ಟಿ ಸಿನಿಮಾ ಎಂದ ಮೇಲೆ ಅದರ ಬಗ್ಗೆ ನಿರೀಕ್ಷೆಗಳು ಹೆಚ್ಚಿರುತ್ತದೆ. ಹಾಗೆಯೇ ಈ ಸಿನಿಮಾ ಬಗ್ಗೆ ಜನರು ಬಹಳ ಕಾತುರದಿಂದ ಕಾಯುತ್ತಿದ್ದರು.




ಇದನ್ನೂ ಓದಿ: ಮತ್ತೆ ಅಭಿಮಾನಿಗಳ ಎದೆ ಝಲ್ ಎನಿಸಿದ ಆಶಿಕಾ ರಂಗನಾಥ್, ಪಟಾಕಿ ಪೋರಿ ನೋಡಿ ಸುಸ್ತಾದ ಫ್ಯಾನ್ಸ್



ರಿಷಭ್ ಶೆಟ್ಟಿಯ ಬಹುನಿರೀಕ್ಷಿತ ಹೊಂಬಾಳೆ ಫಿಲ್ಮ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಾಂತಾರ ಚಿತ್ರದ ಟೀಸರ್ ಈಗಾಗಲೇ ಎಲ್ಲೆಡೆ ಧೂಳೆಬ್ಬಿಸಿದೆ. ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ರಿಷಬ್ ಶೆಟ್ಟಿ ಕರಾವಳಿ ಭಾಗದ ಗ್ರಾಮೀಣ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಕರಾವಳಿಯ ಧಾರ್ಮಿಕ ಆಚಾರ ವಿಚಾರ, ಸಂಪ್ರದಾಯ, ಆಚರಣೆಗಳನ್ನು ನಂಬಿಕೊಂಡು ಬರುತ್ತಿರುವ ಸಮುದಾಯಕ್ಕೆ ಪೊಲೀಸ್ ಆಫೀಸರ್ ಆಗಿರುವ ಕಿಶೋರ್ ಸೆಡ್ಡು ಹೊಡೆಯುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಕರಾವಳಿ ಯುವಕನ ನಡುವಿನ ತಿಕ್ಕಾಟಗಳು ಚಿತ್ರವನ್ನು ತುದಿಗಾಲಲ್ಲಿ ಕುಳಿತು ನೋಡುವಂತೆ ಮಾಡುತ್ತವೆ ಎಂದು ಟೀಸರ್ ನೋಡಿ ಅನಿಸುತ್ತದೆ.

ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ಪು ಸ್ಮಾರಕ ನಿರ್ಮಾಣ, ನೆಚ್ಚಿನ ನಟನಿಗೆ ಅಭಿಮಾನಿಗಳಿಂದ ವಿಶೇಷ ಗೌರವ

ಕಾಂತಾರ ಬಿಡುಗಡೆಗೆ ಕಾಯುತ್ತಿದ್ದಾರೆ  ಅಭಿಮಾನಿಗಳು

ಕೆಲ ದಿನಗಳ ಹಿಂದೆ ಕಾಂತಾರ ಚಿತ್ರದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ತಿಳಿಸಿದ್ದು, ಚಿತ್ರವು ಸೆಪ್ಟೆಂಬರ್ 30ರಂದು ಅಂದರೆ ದಸರಾ ಸಮಯದಲ್ಲಿ ಬಿಡುಗಡೆ ಮಾಡಲಿದೆ ಎಂದು ಅಧಿಕೃತವಾಗಿ ತಿಳಿಸಿದೆ. ಇನ್ನು, ಈ ಚಿತ್ರದಲ್ಲಿ ರಿಷಬ್​ ಶೆಟ್ಟಿ ಜೊತೆ ಅಚ್ಯುತ್ ಕುಮಾರ್, ಪ್ರಮೋದ್​ ಶಟ್ಟಿ ಮುಂತಾದವರು ನಟಿಸುತ್ತಿದ್ದು, ರಿಷಬ್ ಅವರ ಬಹುತೇಕ ಚಿತ್ರಗಳಿಗೆ ಸಂಗೀತ ನೀಡಿರುವ ಅಜನೀಶ್​ ಲೋಕ್​ನಾಥ್​ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
Published by:Sandhya M
First published: