• Home
  • »
  • News
  • »
  • entertainment
  • »
  • Rakshit Shetty-Rishab Shetty: ರಕ್ಷಿತ್​​ಗೆ ರಿಷಬ್ ಕೈಕೊಡೋಕೆ ಕಾರಣ ಇದೇನಾ? ಅಭಿಮಾನಿಗಳಿಗೆ ಶಾಕ್!

Rakshit Shetty-Rishab Shetty: ರಕ್ಷಿತ್​​ಗೆ ರಿಷಬ್ ಕೈಕೊಡೋಕೆ ಕಾರಣ ಇದೇನಾ? ಅಭಿಮಾನಿಗಳಿಗೆ ಶಾಕ್!

ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ

ರಕ್ಷಿತ್ ಶೆಟ್ಟಿ ಅವರ ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಬ್ಯಾಚುರಲ್ ಪಾರ್ಟಿ ಅನೌನ್ಸ್ ಮಾಡುವ ಮೂಲಕ ಸಪ್ರೈಸ್ ಕೊಟ್ಟಿದ್ದರು ಕಿರಿಕ್ ಪಾರ್ಟಿ ಹೀರೋ. ಆದರೆ ಈಗ ರಿಷಬ್ ಸಿನಿಮಾದಿಂದ ದಿಢೀರ್ ಬ್ಯಾಕೌಟ್ ಮಾಡಿದ್ದಾರೆ. ಇದರ ಹಿಂದಿನ ಕಾರಣ ಏನು ಗೊತ್ತಾ?

  • News18 Kannada
  • Last Updated :
  • Bangalore, India
  • Share this:

ಸ್ಯಾಂಡಲ್​ವುಡ್​ನಲ್ಲಿ (Sandalwood) ರಕ್ಷಿತ್ ಶೆಟ್ಟಿ (Rakshit Shetty) ಅಭಿಮಾನಿಗಳು ಅವರ ಸಿನಿಮಾಗೋಸ್ಕರ ಕಾಯುತ್ತಿದ್ದರು. ಅದೇ ರೀತಿ ರಕ್ಷಿತ್ ಕೂಡಾ ಸೂಪರ್ ಆಗಿರುವ ಒಂದು ಪೋಸ್ಟರ್ ಪೋಸ್ಟ್ ಮಾಡಿ ಸಿನಿಮಾ ಕೂಡಾ ಅನೌನ್ಸ್ ಮಾಡಿದ್ದರು. ಸಖತ್ ಆಗಿದ್ದ ಪೋಸ್ಟರ್​​ನಲ್ಲಿ ದಿಗಂತ್,  ರಿಷಬ್ (Rishab Shetty), ಅಚ್ಯುತ್ ಕುಮಾರ್ ಅವರ ಫನ್ನಿ ಲುಕ್ ಕಾಣಬಹುದಾಗಿತ್ತು. ಇದನ್ನು ನೋಡಿದ ಜನ ಇದೊಂದು ಪಕ್ಕಾ ಕಾಮೆಡಿ ಎಂಟರ್​ಟೈನರ್ ಎಂದು ಸಖತ್ ಖುಷಿಯಾಗಿದ್ದರು. ಆದರೆ ದುರದೃಷ್ಟವಶಾತ್ ಸಿನಿಮಾದಿಂದ ರಿಷಬ್ ಶೆಟ್ಟಿ ಹೊರಬಂದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಆದರೆ ಇದುವರೆಗೂ ರಿಷಬ್ ಸಿನಿಮಾದಿಂದ ಹೀಗೆ ದಿಢೀರ್ ಬ್ಯಾಕೌಟ್ ಮಾಡಲು ಕಾರಣ ಏನೆಂಬುದು ಮಾತ್ರ ರಿವೀಲ್ ಆಗಿಲ್ಲ.


ಬ್ಯಾಚುರಲ್ ಪಾರ್ಟಿಯಿಂದ ಬ್ಯಾಕೌಟ್


ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾ ಬ್ಯಾಚುರಲ್ ಪಾರ್ಟಿಯಿಂದ ದಿಢೀರ್ ಹೊರಬಂದಿದ್ದಾರೆ ರಿಷಬ್ ಶೆಟ್ಟಿ. ಇನ್ನು ಅವರ ಸ್ಥಾನ ಯಾರು ತುಂಬುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ರಿಷಬ್ ಅವರ ಜೊತೆ ಮಾತ್ರವಲ್ಲದೆ ಅವರ ಫ್ಯಾಮಿಲಿ ಜೊತೆಗೂ ಕ್ಲೋಸ್ ಆಗಿರುವ ರಕ್ಷಿತ್ ಇದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.


ಹೊಂಬಾಳೆ ಫಿಲ್ಮ್ಸ್ ಜೊತೆ ಕಾಂಟ್ರ್ಯಾಕ್ಟ್​ನಲ್ಲಿದ್ದಾರಾ ರಿಷಬ್?


ನಟ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ ಜೊತೆ ಕಾಂಟ್ರ್ಯಾಕ್​​ನಲ್ಲಿದ್ದಾರಾ? ಅದಕ್ಕಾಗಿಯೇ ಅನಿವಾರ್ಯವಾಗಿ ಬ್ಯಾಚುರಲ್ ಪಾರ್ಟಿ ಸಿನಿಮಾದಿಂದ ಹೊರ ಬರಬೇಕಾಯ್ತಾ? ರಕ್ಷಿತ್ ಜೊತೆ ಸಿನಿಮಾ ಒಪ್ಪಿಕೊಂಡು ಪೋಸ್ಟರ್ ಕೂಡಾ ಕೊಟ್ಟಿದ್ದು ದಿಢೀರ್ ಆಗಿ ಈ ನಿರ್ಧಾರ ತೆಗೆದುಕೊಂಡಿದ್ದೇಕೆ ರಿಷಬ್ ಶೆಟ್ಟಿ?


ಹೊಂಬಾಳೆ ಜೊತೆ ಕಾಂಟ್ರ್ಯಾಕ್ಟ್?


ಬಲ್ಲ ಮೂಲಗಳ ಪ್ರಕಾರ ಕಾಂತಾರ ಸಿನಿಮಾ ನಂತರ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ಜೊತೆ ಕಾಂಟ್ರ್ಯಾಕ್ಟ್​ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಪ್ಪಂದದ ಪ್ರಕಾರ ರಿಷಬ್ ಸದ್ಯ ಬೇರೆ ಸಿನಿಮಾಗಳಲ್ಲಿ ನಟಿಸುವಂತಿಲ್ಲ. ಹಾಗಾಗಿ ಅವರು ಬ್ಯಾಚುರಲ್ ಪಾರ್ಟಿಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.


ಇದನ್ನೂ ಓದಿ: Actress Ramya: ರಾಜ್​ ಸಿನಿಮಾದಿಂದ ಹೊರಬಂದ ರಮ್ಯಾ! ಸೇರಿರೋದು ಯಾರ ಜೊತೆ?


ಇತ್ತೀಚೆಗೆ ಇಂಥದ್ದೇ ಒಂದು ಬೆಳವಣಿಗೆಗೆ ಸ್ಯಾಂಡಲ್​​ವುಡ್​ ಸಾಕ್ಷಿಯಾಗಿತ್ತು. ರಾಜ್ ಬಿ. ಶೆಟ್ಟಿ ಜೊತೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಮೋಹಕ ತಾರೆ ರಮ್ಯಾ ಕಂ ಬ್ಯಾಕ್ ಅನೌನ್ಸ್ ಆಗಿತ್ತು. ನಟಿಯ ಮೊದಲ  ನಿರ್ಮಾಣದ ಸಿನಿಮಾ ಹಾಗೆಯೇ ಕಂ ಬ್ಯಾಕ್ ಮಾಡ್ತಿರೋ ಸಿನಿಮಾ ಎನ್ನಲಾಗಿತ್ತು.
ಆದರೆ ನಟಿ ರಮ್ಯಾ ದಿಢೀರ್ ಸಿನಿಮಾದಿಂ ಬ್ಯಾಕೌಟ್ ಮಾಡಿದರು. ಸಿನಿಮಾದಿಂದ ಹೊರಬಂದು ಹೊಸ ನಟಿಗೆ ಅವಕಾಶ ಕೊಡುವುದಾಗಿ ತಿಳಿಸಿದರು. ಈ ಮೂಲಕ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಿಂದ ರಮ್ಯಾ ಸಿರಿ ರವಿಕುಮಾರ್ ಅವರನ್ನು ಸಿನಿಮಾ ನಾಯಕಿಯಾಗಿ ಸ್ವಾಗತಿಸಿದರು.
ಸದ್ಯ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ರಾಜ್ ಬಿ ಶೆಟ್ಟಿ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಸಿನಿಮಾ ಶೂಟಿಂಗ್ ಮಾಡಿಸಿ ಮುಗಿಸಿದ್ದಾರೆ. ಈಗ ಇಂಥದ್ದೇ ಪರಿಸ್ಥಿತಿ ಬ್ಯಾಚುರಲ್ ಪಾರ್ಟಿ ಸಿನಿಮಾಗೂ ಎದುರಾಗಿದ್ದು ರಕ್ಷಿತ್ ಶೆಟ್ಟಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ.


ಸದ್ಯ ರಿಷಬ್ ಅವರು ತಮ್ಮ ಸಿನಿಮಾದ ಪ್ರಮೋಷನ್ ಕೆಲಸದಲ್ಲಿಯೇ ಬ್ಯುಸಿಯಾಗಿದ್ದಾರೆ. ಬೇರೆ ಭಾಷೆಗಳಲ್ಲಿಯೂ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Published by:Divya D
First published: