• Home
  • »
  • News
  • »
  • entertainment
  • »
  • Kantara Rishab Next Movie: ರಿಷಬ್ ಶೆಟ್ಟಿ ಅಭಿನಯದ 10 ವರ್ಷದ ಹಿಂದಿನ ಚಿತ್ರಕ್ಕೆ ಪುಂಜುರ್ಲಿ ದೈವದಿಂದ ಮರು ಜೀವ ಬಂತು !

Kantara Rishab Next Movie: ರಿಷಬ್ ಶೆಟ್ಟಿ ಅಭಿನಯದ 10 ವರ್ಷದ ಹಿಂದಿನ ಚಿತ್ರಕ್ಕೆ ಪುಂಜುರ್ಲಿ ದೈವದಿಂದ ಮರು ಜೀವ ಬಂತು !

ದಾಖಲೆಗಾಗಿ ಮಾಡಿದ್ದ ಚಿತ್ರ 10 ವರ್ಷದ ಬಳಿಕ ರಿಲೀಸ್​ಗೆ ರೆಡಿ

ದಾಖಲೆಗಾಗಿ ಮಾಡಿದ್ದ ಚಿತ್ರ 10 ವರ್ಷದ ಬಳಿಕ ರಿಲೀಸ್​ಗೆ ರೆಡಿ

ಅಟ್ಯಾಕ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಟೆರರಿಸ್ಟ್ ಪಾತ್ರವನ್ನೆ ಮಾಡಿದ್ದಾರೆ. ಆದರೆ ಕಾಂತಾರ ಸಿನಿಮಾ ಬಂದ್ಮೇಲೆ ರಿಷಬ್ ಶೆಟ್ಟಿಯ ಈ ಪಾತ್ರದ ಚಿತ್ರವನ್ನ ಜನ ಹೇಗೆ ಒಪ್ಪಿಕೊಳ್ತಾರೋ ಏನೋ, ಆದರೂ ಅಟ್ಯಾಕ್ ಸಿನಿಮಾ ಈಗ ರಿಲೀಸ್​ಗೆ ರೆಡಿ ಆಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ (Kannada Industry) ಚಿತ್ರರಂಗದಲ್ಲಿ ಅನೇಕ ಪ್ರಯೋಗಗಳು ಆಗಿವೆ. ಈ ಪ್ರಯೋಗದಲ್ಲಿ ಸುಗ್ರೀವ ಹೆಸರಿನ ಸಿನಿಮಾ ಬಂತು. ಹ್ಯಾಟ್ರಿಕ್ ಹೀರೋ ಶಿವರಾಜ್ (Shivaraj Kumar) ಕುಮಾರ್ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಇದನ್ನ ನಿರ್ಮಾಪಕ ಅಣಜಿ (Anaji Nagaraj) ನಾಗರಾಜ್ ಪ್ರೋಡ್ಯೂಸ್​ ಮಾಡಿದ್ದರು. ಅದೇ ಅಣಜಿ ನಾಗರಾಜ್ 2012 ಜುಲೈ-3 ಕ್ಕೆ ಇನ್ನೂ ಒಂದು ಸಿನಿಮಾ ಲಾಂಚ್ ಮಾಡಿದರು. ಇದು ಒಂದು ಗಂಟೆ 47 ನಿಮಿಷದಲ್ಲಿ ಚಿತ್ರೀಸಿದ ಸಿನಿಮಾನೇ ಆಗಿತ್ತು. ರಿಯಲ್ ಟೈಮ್ ನ ಡ್ರಾಮಾನೇ (Real Time Drama) ಇದಾಗಿತ್ತು. ಡೈರೆಕ್ಟರ್ ಅರವಿಂದ್ ಕೌಶಿಕ್ ಈ ಚಿತ್ರವನ್ನ ನಿಗದಿತ ಸಮಯದಲ್ಲಿಯೇ ಚಿತ್ರೀಕರಿಸಿದ್ದರು. ಆದರೆ ಇದಾಗಿ ಈಗ 10 ವರ್ಷಗಳೇ ಕಳೆದು ಹೋಗಿವೆ. ಕಾಂತಾರ ಸಿನಿಮಾ ಬಂದ್ಮೇಲೆ ಈ ಚಿತ್ರಕ್ಕೆ ಈಗ ಜೀವ ಬಂದಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.


ಕಾಂತಾರದಿಂದ 10 ವರ್ಷದ ಹಿಂದಿನ ರಿಷಬ್ ಚಿತ್ರಕ್ಕೆ ಮತ್ತೆ ಜೀವ!
ಕನ್ನಡದ ಕಾಂತಾರ ಎಲ್ಲ ಸಿನಿಮಾ ಮೇಕರ್ಸ್ ಗೆ ಒಂದು ಹೊಸ ಉತ್ಸಾಹ ತಂದಿದೆ. ಕಂಟೆಂಟ್ ಇರೋ ಚಿತ್ರಕ್ಕೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಲೆ ಇದೆ ಅನ್ನೋದು ತಿಳಿದು ಹೋಗಿದೆ.


ಕಾಂತಾರದ ಅದ್ಭುತ ಸಕ್ಸಸ್ ಕನ್ನಡದ ನಿರ್ಮಾಪಕರಿಗೆ ಹೊಸದೊಂದು ನಂಬಿಕೆ ಹುಟ್ಟಿಸಿದೆ. ಅದೇ ರೀತಿ ಕನ್ನಡದ ಹೆಸರಾಂತ ನಿರ್ಮಾಪಕ ಮತ್ತು ಕ್ಯಾಮೆರಾಮೆನ್ ಅಣಜಿ ನಾಗರಾಜ್ ಅವರು ತಮ್ಮ 10 ವರ್ಷದ ಹಿಂದಿನ ಸಿನಿಮಾವನ್ನ ಈಗ ರಿಲೀಸ್ ಮಾಡೋಕೆ ರೆಡಿ ಆಗಿದ್ದಾರೆ.


ಅಟ್ಯಾಕ್ ಎಂಬ ಅದ್ಭುತ ಪ್ರಯೋಗಕ್ಕೆ ಈಗ 10 ವರ್ಷ ಪೂರ್ಣ
ಹೌದು, ಅಟ್ಯಾಕ್ 10 ವರ್ಷದ ಹಿಂದಿನ ಸಿನಿಮಾ. ಈ ಸಿನಿಮಾದಲ್ಲಿ ಕನ್ನಡಿಗರೆಲ್ಲ ಹೆಮ್ಮೆ ಪಡುವ ಪ್ರಯೋಗವೇ ಆಗಿದೆ. ರಿಯಲ್ ಟೈಮ್​ ನಲ್ಲಿಯೇ ಇಡೀ ಸಿನಿಮಾ ಚಿತ್ರೀಕರಣ ಆಗಿದೆ. 9 ಕ್ಯಾಮೆರಾಗಳು, 1 ಗಂಟೆ 47 ನಿಮಿಷದಲ್ಲಿಯೇ ಇಡೀ ಸಿನಿಮಾದ ಕಥೆಯನ್ನ ಚಿತ್ರೀಕರಿಸಲಾಗಿದೆ.


Rishab Shetty Attack Film Now Preparing to Release
ಅಟ್ಯಾಕ್ ಚಿತ್ರದ ಚಿತ್ರೀಕರಣಕ್ಕಾಗಿ 45 ದಿನ ರಿಹರ್ಸಲ್


ಒಂದು ಗಂಟೆ 47 ನಿಮಿಷದ ಈ ಚಿತ್ರದಲ್ಲಿ ಫೈಟ್ಸ್ ಇವೆ. ಹಾಡು ಕೂಡ ಇರೋದು ವಿಶೇಷ. ಇಂತಹ ಈ ಚಿತ್ರದಲ್ಲಿ ಕನ್ನಡದ ಕಲಾವಿದರು ಅಭಿನಯಿಸಿದ್ದಾರೆ. ರೂಪಿಕಾ, ಚೇತನ್ ಚಂದ್ರ, ಹಾಸ್ಯ ನಟ ರವಿಶಂಕರ್, ನಟ ಸತ್ಯ, ಪಟ್ರೆ ಅಜೀತ್, ಕಾಂತಾರದ ಸಿನಿಮಾದ ಅಚ್ಯುತ್ ಕುಮಾರ್ ಎಲ್ಲರೂ ಇಲ್ಲಿ ಅಭಿನಯಿಸಿದ್ದಾರೆ.


ಅಟ್ಯಾಕ್ ಚಿತ್ರದ ಚಿತ್ರೀಕರಣಕ್ಕಾಗಿ 45 ದಿನ ರಿಹರ್ಸಲ್
ಕನ್ನಡದ ಅಟ್ಯಾಕ್ ಚಿತ್ರದ ರಿಯಲ್ ಟೈಮ್ ಚಿತ್ರೀಕರಣಕ್ಕಾಗಿಯೇ ಇಡೀ ಟೀಮ್ 45 ದಿನ ರಿಹರ್ಸಲ್ ಮಾಡಲಾಗಿತ್ತು. ಈ ಒಂದು ಅದ್ಭುತ ಪ್ರಯೋಗದ ಸಿನಿಮಾ ಅಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್​ಗಾಗಿಯೇ ರಿಯಲ್ ಟೈಮ್​ ನಲ್ಲಿ ಚಿತ್ರೀಕರಿಸಲಾಗಿತ್ತು.


Head Bush: ಡಾಲಿಗೆ ಫ್ಯಾನ್ಸ್ ಸಪೋರ್ಟ್! ಅಮೆರಿಕಾದಿಂದಲೇ 10 ಟಿಕೆಟ್ ಬುಕ್ ಮಾಡಿದ ಅಭಿಮಾನಿ


ಆದರೆ ಸಿನಿಮಾ ಚಿತ್ರೀಕರಣವೇನೋ ಆಯಿತು. ಮುಂದೇನ್ ಆಯ್ತೋ ಏನೋ ಅನ್ನೋ ಉತ್ತರವನ್ನ ಸಿನಿಮಾದ ಡೈರೆಕ್ಟರ್ ಅರವಿಂದ್ ಕೌಶಿಕ್ ನ್ಯೂಸ್-18 ಕನ್ನಡ ಡಿಜಿಟಲ್​ಗೆ ಕೊಟ್ಟಿದ್ದಾರೆ. ಹಾಗೇನೆ ಈಗ ನೀವು ಓದಿರೋ ಅಷ್ಟು ಮಾಹಿತಿಯನ್ನೂ ಅವರೇ ಕೊಟ್ಟಿರೋದು.


ದಾಖಲೆಗಾಗಿ ಮಾಡಿದ್ದ ಚಿತ್ರ 10 ವರ್ಷದ ಬಳಿಕ ರಿಲೀಸ್​ಗೆ ರೆಡಿ
ಇದು ನಿಜ ನೋಡ್ರಿ, ನಿರ್ಮಾಪಕ ಅಣಜಿ ನಾಗರಾಜ್ ತಮ್ಮ ಈ ಚಿತ್ರವನ್ನ ಈಗ ರಿಲೀಸ್ ಮಾಡೋಕೆ ಮನಸ್ಸು ಮಾಡಿದ್ದಾರೆ. ಇದಕ್ಕೆ ಕಾರಣ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಅಂತ ಹೇಳಿದ್ರೆ ತಪ್ಪೇ ಆಗೋದಿಲ್ಲ. ಆ ಸತ್ಯವನ್ನ ಸ್ವತಃ ಅಣಜಿ ನಾಗರಾಜ್ ನಮ್ಮೊಟ್ಟಿಗೆ ಹೇಳಿಕೊಂಡಿದ್ದಾರೆ.


ಅಣಜಿ ನಾಗರಾಜ್ ಈಗ ತಮ್ಮ ಈ ಚಿತ್ರದ ಫಸ್ಟ್ ಕಾಪಿ ಹೊರ ತಂದಿದ್ದಾರೆ. ಇಷ್ಟು ದಿನ ಲೇಟ್ ಆಗಲು ಬಲವಾದ ಕಾರಣ ಏನೂ ಅಂತ ಹೇಳಲಿಲ್ಲ. ಆದರೆ ಸಿನಿಮಾದ ಸಂಗೀತದ ಒಂದಷ್ಟು ಕೆಲಸ ಇತ್ತು. ಅದನ್ನ ಮುಗಿಸಿದ್ದೇವೆ. ಈಗಾಗಲೇ ಫಸ್ಟ್ ಕಾಪಿ ಬಂದಿದೆ.


ಮುಂದಿನ ವಾರದಲ್ಲಿ ಸಿನಿಮಾವನ್ನ ಸೆನ್ಸಾರ್​ಗೂ ಕಳಿಸೋ ಪ್ಲಾನ್ ಕೂಡ ಇದೆ. ಆದರೆ ಅದ್ಯಾಕೋ ಅಣಜಿ ನಾಗರಾಜ್ ತಮ್ಮ ಈ ಚಿತ್ರವನ್ನ ರೆಕಾರ್ಡ್ ಮೂವಿ ಅಂತಲೇ ಹೇಳ್ತಿಲ್ಲ. ಅಟ್ಯಾಕ್ ಅಂತ ಟೈಟಲ್ ಇಟ್ಟುಕೊಂಡು ರಿಲೀಸ್ ಮಾಡ್ತಾಯಿದ್ದಾರೆ ಎಂದು ನಿರ್ದೇಶಕ ಅರವಿಂದ್ ಕೌಶಿಕ್ ಹೇಳುತ್ತಾರೆ.


Rishab Shetty Attack Film Now Preparing to Release
ಅಟ್ಯಾಕ್ ಎಂಬ ಅದ್ಭುತ ಪ್ರಯೋಗಕ್ಕೆ ಈಗ 10 ವರ್ಷ ಪೂರ್ಣ


ಅಸಲಿಗೆ ಈ ಚಿತ್ರದಲ್ಲಿ ರಿಷಬ್ ಪಾತ್ರ ಏನು ಗೊತ್ತೇ?
ಅಟ್ಯಾಕ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಟೆರರಿಸ್ಟ್ ಪಾತ್ರವನ್ನೆ ಮಾಡಿದ್ದಾರೆ. ಆದರೆ ಕಾಂತಾರ ಸಿನಿಮಾ ಬಂದ್ಮೇಲೆ ರಿಷಬ್ ಶೆಟ್ಟಿಯ ಈ ಪಾತ್ರದ ಚಿತ್ರವನ್ನ ಜನ ಹೇಗೆ ಒಪ್ಪಿಕೊಳ್ತಾರೋ ಇಲ್ವೋ ಗೊತ್ತಿಲ್ಲ. ಆದರೂ ಅಟ್ಯಾಕ್ ಸಿನಿಮಾ ಈಗ ರಿಲೀಸ್​ಗೆ ರೆಡಿ ಆಗಿದೆ.


ಅಟ್ಯಾಕ್ ಸಿನಿಮಾ ಕನ್ನಡದ ಮಟ್ಟಿಗೆ ಒಂದು ಒಳ್ಳೆ ಪ್ರಯೋಗದ ಸಿನಿಮಾನೇ ಆಗಿದೆ. ರಿಯಲ್ ಟೈಮ್ ಸಿನಿಮಾಗಳ ಪಟ್ಟಿಯಲ್ಲಿ ಸುಗ್ರೀವ ಆದ್ಮೇಲೆ ಇದು ಎರಡನೇ ಸಿನಿಮಾ ಆಗಿದೆ. ಇದಾದ್ಮೇಲೆ ಒನ್ ಟೇಕ್ ಸಿನಿಮಾಗಳು ಕನ್ನಡದಲ್ಲಿ ಬಂದಿವೆ.


ಇದನ್ನೂ ಓದಿ: Villain Loki-Kantara: ರಿಷಬ್ ಶೆಟ್ಟಿಯ ಆ ಕಟ್ಟೆ ಕಡೆಯ 2 ನಿಮಿಷದ ದೃಶ್ಯ ಇನ್ನೂ ಕಾಡುತ್ತಿದೆ ಎಂದ ಭಜರಂಗಿ ಲೋಕಿ


ಹೀಗಿರೋವಾಗ ಕನ್ನಡದ ಅಟ್ಯಾಕ್ ಸಿನಿಮಾ ತನ್ನ ಆ ಹಳೆಯ ಪ್ರಯೋಗವನ್ನ ಇಟ್ಟುಕೊಂಡು ಈಗ ರಿಲೀಸ್​ಗೆ ರೆಡಿ ಆಗುತ್ತಿದೆ. ಯಾವುದಕ್ಕೂ ಈ ಸಿನಿಮಾದ ಇನ್ನಷ್ಟು ಅಪ್​ಡೇಟ್ ಕೊಡ್ತಾ ಇರುತ್ತೇವೆ ವೇಟ್ ಮಾಡಿ.

First published: