Shivarajkumar 126th Movie: ಶಿವರಾಜ್​ಕುಮಾರ್​ ಜತೆ ಹೊಸ ಸಿನಿಮಾ ಪ್ರಕಟಿಸಿದ ರಿಷಭ್ ಶೆಟ್ಟಿ..!

ನಟನೆ ಹಾಗೂ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ರಿಷಭ್​ ಶೆಟ್ಟಿ ಈಗ ಶಿವರಾಜ್​ಕುಮಾರ್​ ಅವರ 126ನೇ ಸಿನಿಮಾವನ್ನು ನಿರ್ದೇಶಿಸಲು ಸಜ್ಜಾಗುತ್ತಿದ್ದಾರೆ. ಅದಕ್ಕಾಗಿಯೇ ಶಿವರಾಜ್​ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಶಿವಣ್ಣನ ಜೊತೆ ರಿಷಭ್ ಶೆಟ್ಟಿ

ಶಿವಣ್ಣನ ಜೊತೆ ರಿಷಭ್ ಶೆಟ್ಟಿ

  • Share this:
ಶಿವರಾಜ್​ಕುಮಾರ್ ಕನ್ನಡ ಸಿನಿರಂಗದಲ್ಲೇ ಬ್ಯುಸಿಯಾಗಿರುವ ನಟ. ವರ್ಷದಲ್ಲಿ 3-4 ಸಿನಿಮಾಗಳು ಶಿವಣ್ಣನ ಕೈಯಲ್ಲಿರುತ್ತವೆ. ಇಂತಹ ನಟ ಈಗ 126ನೇ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಶಿವರಾಜ್​ಕುಮಾರ್ ಅವರ 124ನೇ ಸಿನಿಮಾದ ಮುಹೂರ್ತ ನೆರವೇರಿದೆ. ಶಿವರಾಜ್​ಕುಮಾರ್ ಅವರ 124ನೇ ಚಿತ್ರಕ್ಕೆ ಸುದೀಪ್​ ಅವರು ಕ್ಲ್ಯಾಪ್​ ಮಾಡಿದರೆ, ಗೀತಾ ಶಿವರಾಜ್​ಕುಮಾರ್ ಅವರು ಕ್ಯಾಮೆರಾಗೆ ಚಾಲನೆ ನೀಡಿದ್ದರು. ಈಗ ಈ ಸಿನಿಮಾ ಪ್ರಕಟವಾದ ಬೆನ್ನಲ್ಲೇ ಈಗ 126ನೇ ಚಿತ್ರ ಸಹ ಅನೌನ್ಸ್​ ಆಗಿದೆ. ಹೌದು, 126ನೇ ಸಿನಿಮಾವನ್ನು ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಅವರ ಜೊತೆ ಮಾಡಲಿದ್ದಾರೆ ಶಿವರಾಜ್​ಕುಮಾರ್​. ಈಗಾಗಲೇ ಈ ಸಿನಿಮಾ ಕುರಿತಾಗಿ ಮಾತುಕತೆ ಸಹ ನಡೆದಿದೆ. ರಿಷಭ್​ ಶೆಟ್ಟಿ ಅವರು ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಲ ರಿಷಭ್​ ಹ್ಯಾಟ್ರಿಕ್ ಹೀರೋಗೆ ಆ್ಯಕ್ಷನ್​ ಕಟ್ ಹೇಳಲಿದ್ದಾರಂತೆ. 

ಹೌದು, ನಟನೆ ಹಾಗೂ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ರಿಷಭ್​ ಶೆಟ್ಟಿ ಈಗ ಶಿವರಾಜ್​ಕುಮಾರ್​ ಅವರ 126ನೇ ಸಿನಿಮಾವನ್ನು ನಿರ್ದೇಶಿಸಲು ಸಜ್ಜಾಗುತ್ತಿದ್ದಾರೆ. ಅದಕ್ಕಾಗಿಯೇ ಶಿವರಾಜ್​ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.






ಇಂದು ಬೆಳ್ಳಂಬೆಳಗ್ಗೆ ಶಿವಣ್ಣ ಅವರನ್ನು ಭೇಟಿ ಮಾಡುವ ಭಾಗ್ಯ ನನ್ನದಾಯ್ತು. ಹೊಸ ಹೆಜ್ಜೆಯೊಂದ ಇಡುವ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಪೋಸ್ಟ್​ ಮಾಡುವುದರ ಜೊತೆಗೆ ಶಿವರಾಜ್​ಕುಮಾರ್ ಜತೆಗಿನ ಎರಡು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ ರಿಷಭ್ ಶೆಟ್ಟಿ.

ಇದನ್ನೂ ಓದಿ: Shwetha Srivatsav: ವರಮಹಾಲಕ್ಷ್ಮಿ ಹಬ್ಬದ ವಿಶೇಷ ಫೋಟೋಶೂಟ್​ನಲ್ಲಿ ಅಮ್ಮ-ಮಗಳ ಟ್ವಿನ್ನಿಂಗ್​..!

ರಿಷಭ್ ಶೆಟ್ಟಿ ಅವರು ನಿರ್ಮಾಪಕ ಜಯಣ್ಣ ಅವರ ಜತೆ ಶಿವರಾಜ್​ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಇನ್ನು ರಿಷಭ್ ಶೆಟ್ಟಿ ಅವರೇ ಕೊಟ್ಟಿರುವ ಸುಳಿವಿನ ಪ್ರಕಾರ ರಿಷಭ್​ ಶೆಟ್ಟಿ ಮತ್ತೆ ನಿರ್ದೇಶಕನ ಕ್ಯಾಪ್​ ತೊಟ್ಟು ಶಿವರಾಜ್​ಕುಮಾರ್ ಅವರಿಗೆ ಆ್ಯಕ್ಷನ್​ ಕಟ್ ಹೇಳೋದು ಬಹುತೇಕ ಖಚಿತವಾಗಿದೆ.

ರಿಷಭ್ ಶೆಟ್ಟಿ ಹಾಗೂ ಶಿವರಾಜ್​ಕುಮಾರ್ ಅವರ ಸಿನಿಮಾಗೆ ಜಯಣ್ಣ ಬಂಡವಾಳ ಹಾಕಲಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ಬೇರೆ ಯಾವ ಕಲಾವಿದರು ಅಭಿನಯಿಸಲಿದ್ದಾರೆ. ಯಾವಾಗ ಸಿನಿಮಾ ಸೆಟ್ಟೇರಲಿದೆ ಹಾಗೂ ಕತೆ ಕುರಿತಾದ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಈ ಸಿನಿಮಾ ಆರಂಭಕ್ಕೂ ಮುಂಚೆ ಶಿವರಾಜ್​ ಕುಮಾರ್ ಅವರು 123, 124 ಹಾಗೂ 125ನೇ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಬೇಕಿದೆ. ಇನ್ನು ರಿಷಭ್ ಶೆಟ್ಟಿ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಪ್ರಿಯಾ ಪ್ರಕಾಶ್​ ವಾರಿಯರ್​ ಲೆಟೆಸ್ಟ್ ಫೋಟೋಶೂಟ್​: ನಟಿಯ ಸಾಂಪ್ರದಾಯಿಕ ಲುಕ್​ಗೆ ನೆಟ್ಟಿಗರು ಫಿದಾ..!

ಶಿವರಾಜ್​ಕುಮಾರ್​ ಅವರ 123ನೇ ಸಿನಿಮಾ ಬೈರಾಗಿ. ವಿಜಯ್ ಮಿಲ್ಟನ್​ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 125ನೇ ಸಿನಿಮಾ ವೇದ. ಹರ್ಷ ನಿರ್ದೇಶನದ ಸಿನಿಮಾ ಇದಾಗಿದ್ದು, ಇದರ ಫಸ್ಟ್​ಲುಕ್​ ಪೋಸ್ಟರ್​ ಸಹ ಬಿಡುಗಡೆಯಾಗಿದೆ.

ಇದನ್ನೂ ಓದಿ: Hariprriya: ಕಾಲಿವುಡ್​ಗೆ ರೀ -ಎಂಟ್ರಿ ಕೊಟ್ಟ ನಟಿ ಹರಿಪ್ರಿಯಾ...!

ಒಂದು ಕಡೆ ಹೊಂಬಾಳೆ ಫಿಲಂಸ್​ ನಿರ್ಮಾಣದ ಕಾಂತಾರ. ಈಗಾಗಲೇ ಈ ಸಿನಿಮಾದ ಫಸ್ಟ್​ಲುಕ್​ ಸಹ ರಿಲೀಸ್ ಆಗಿದೆ. ಆಗಸ್ಟ್​ 27ರಂದು ಚಿತ್ರ ಮುಹೂರ್ತ ನಡೆಲಿದೆ. ಅಂದಿನಿಂದಲೇ ಶೂಟಿಂಗ್​ ಸಹ ಆರಂಭವಾಗಲಿದೆ. ಈ ಚಿತ್ರ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದ ಮೇಲೆ ಚಿತ್ರೀಕರಿಸಲಾಗುತ್ತಿದೆಯಂತೆ. ಕಾಂತಾರ ಸಿನಿಮಾದ ಚಿತ್ರೀಕರಣ ಕುಂದಾಪುರದ ಸುತ್ತಮುತ್ತಲೇ ನಡೆಯಲಿದೆಯಂತೆ.
Published by:Anitha E
First published: