Rishab Shetty: ಟಾಲಿವುಡ್​ನಲ್ಲೂ ಅಬ್ಬರಿಸೋಕೆ ರೆಡಿಯಾದ ರಿಷಬ್​ ಶೆಟ್ಟಿ! ತೆಲುಗು ಸಿನಿಮಾದ ಟ್ರೈಲರ್​ ರಿಲೀಸ್​

ಕನ್ನಡದ ಸ್ಟಾರ್​​ ನಿರ್ದೇಶಕ ಹಾಗೂ ನಟ ರಿಷಬ್​ ಶೆಟ್ಟಿ (Rishab Shetty) ತೆಲುಗಿಗೆ ಪದಾರ್ಪಣೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ ತೆಲುಗು (Telugu) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್​ ಶೆಟ್ಟಿ ತೆಲುಗು ಚಿತ್ರದ ಟೈಟಲ್​ ಸಖತ್ ​ಚ್ಯೂಸಿಯಾಗಿದೆ.

ನಟ ರಿಷಬ್​ ಶೆಟ್ಟಿ

ನಟ ರಿಷಬ್​ ಶೆಟ್ಟಿ

  • Share this:
ಸ್ಯಾಂಡಲ್​ವುಡ್ (Sandalwood)​ ನಾಯಕರು ಬೇರೆ ಭಾಷೆಗಳಲ್ಲಿ ನಟಿಸುವುದು ಕಾಮನ್​. ಅದರಲ್ಲೂ ಟಾಲಿವುಡ್ (Tollywood)​ ಸಿನಿಮಾ ರಂಗದಲ್ಲಿ ಈಗ ಕನ್ನಡ  ನಟಿಯರ ಹವಾ ಅನ್ನೋದು ಎಲ್ಲರಿಗೂ ಗೊತ್ತಿದೆ. ರಶ್ಮಿಕಾ ಮಂದಣ್ಣ (Rashmika Mandanna), ನಭಾ ನಟೇಶ್ (Nabha Natesh)​ ಹಾಗೂ ಇತ್ತೀಚೆಗೆ ಶ್ರೀಲೀಲಾ (Sreeleela) ಕೂಡ ಟಾಲಿವುಡ್​(Tollywood)ನಲ್ಲಿ ಮಿಂಚುತ್ತಿದ್ದಾರೆ.  ಇದೀಗ ಕನ್ನಡದ ನಟರೊಬ್ಬರು ಟಾಲಿವುಡ್​ನಲ್ಲಿ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ಹೌದು, ಕನ್ನಡದ ಸ್ಟಾರ್​​ ನಿರ್ದೇಶಕ ಹಾಗೂ ನಟ ರಿಷಬ್​ ಶೆಟ್ಟಿ (Rishab Shetty) ತೆಲುಗಿಗೆ ಪದಾರ್ಪಣೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ ತೆಲುಗು (Telugu) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್​ ಶೆಟ್ಟಿ ತೆಲುಗು ಚಿತ್ರದ ಟೈಟಲ್​ ಸಖತ್ ​ಚ್ಯೂಸಿಯಾಗಿದೆ. ಈ ಟೈಟಲ್(Title)​ನಲ್ಲಿ ಹಾಲಿವುಡ್(Hollywood)​ನಲ್ಲಿ ಸರಣಿ ಸಿನಿಮಾಗಳು ತೆರೆಕಂಡು ಸೂಪರ್​ ಡೂಪರ್​ ಹಿಟ್​ ಎನಿಸಿಕೊಂಡಿದೆ.

ಮಿಷನ್​ ಇಂಪಾಸಿಬಲ್​ ಸಿನಿಮಾದಲ್ಲಿ ರಿಷಬ್​ ಶೆಟ್ಟಿ!

ಹೌದು, ರಿಷಬ್​ ಶೆಟ್ಟಿ ಬಾಲಿವುಡ್​ನ ಸ್ಟಾರ್​ ನಟಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಿಷನ್​ ಇಂಪಾಸಿಬಲ್​  ಎಂದು ಹೆಸರಿಡಲಾಗಿದೆ. ಈ  ಸಿನಿಮಾದ ಟ್ರೈಲರ್​ ಅನ್ನು ನಟ ಮಹೇಶ್ ಬಾಬು ನಿನ್ನೆಯಷ್ಟೆ ಬಿಡುಗಡೆ ಮಾಡಿದ್ದು, ಟ್ರೈಲರ್​​ ಕೊನೆಯಲ್ಲಿ ರಿಷಬ್ ಶೆಟ್ಟಿಯ ದರ್ಶನವಾಗುತ್ತದೆ. ಟ್ರೈಲರ್​ನಲ್ಲಿ ರಿಷಬ್​ ಪಾತ್ರ ನೋಡಿದಾಗ ಇವರು ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸ್ಪಷ್ಟವಾಗಿ ಗೊತ್ತಗುತ್ತೆ.ಸಿನಿಮಾವು ಬೆಂಗಳೂರಿನಲ್ಲೂ ಚಿತ್ರೀಕರಣಗೊಂಡಿದ್ದು ಸಿನಿಮಾದಲ್ಲಿ 'ಕೆಜಿಎಫ್' ಸಿನಿಮಾದ ಹೆಸರು ಕೂಡ ಇದೆ.

ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ತಾಪ್ಸಿ ಪನ್ನು!

ರಘುಪತಿ, ರಾಘವ, ರಾಜಾರಾಂ ಹೆಸರಿನ ಮೂವರು ಮಕ್ಕಳು ದಾವೂದ್ ಇಬ್ರಾಹಿಂ ಅನ್ನು ಹುಡುಕಿಕೊಂಡು ಹುಡುಕಲು ಹೊರಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು ಸಹ ಇದ್ದು ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಖಲೀಲ್​ ಎಂಬ ಡಾನ್​ ಪಾತ್ರದಲ್ಲಿ ಮಿಂಚಿದ್ದಾರೆ. ‘ಮಿಷನ್​ ಇಂಪಾಸಿಬಲ್​’ ಅಲ್ಲದೆ, ಇನ್ನೂ ಹಲವು ಸಿನಿಮಾಗಳಲ್ಲಿ ರಿಷಬ್​ ಶೆಟ್ಟಿ ನಟಿಸುತ್ತಿದ್ದಾರೆ. ‘ಕಾಂತಾರ’,  ‘ರುದ್ರಪ್ರಯಾಗ’, ಶಿವರಾಜ್​ಕುಮಾರ್​ ನಟನೆಯ 126ನೇ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಚುಮು ಚುಮು ಚಳಿಯಲ್ಲಿ `ಮಾರ್ಟಿನ್’ ಶೂಟಿಂಗ್! ಸೈಲೆಂಟ್​ ಆಗಿ ಕೊನೆ ಹಂತಕ್ಕೆ ಬಂದ ಧ್ರುವ ಸಿನಿಮಾ!

ಕನ್ನಡದ ಸಿನಿಮಾಗಳಲ್ಲೂ ರಿಷಬ್​ ಶೆಟ್ಟಿ ಬ್ಯುಸಿ!

ಇನ್ನು ನಟ ರಿಷಬ್ ಶೆಟ್ಟಿ ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಬೆಲ್ ಬಾಟಮ್ 2' ಸೇರಿದಂತೆ ಹಲವು ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಜೊತೆಗೆ 'ಕಾಂತಾರ', 'ರುದ್ರ ಪ್ರಯಾಗ' ಹಾಗೂ ಶಿವರಾಜ್ ಕುಮಾರ್ ಅವರಿಗಾಗಿ ಹೊಸ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ ರಿಷಬ್.ಇತ್ತೀಚೆಗೆ ಅವರ ನಟನೆಯ ಗರುಡ ಗಮನ ವೃಷಭ ವಾಹನ ಹಿಟ್ ಆಗಿದೆ. 'ಹರಿಕಥೆ ಅಲ್ಲ ಗಿರಿಕಥೆ' , 'ಬೆಲ್ ಬಾಟಂ 2', 'ಮಹಾನೀಯರೆ ಮಹಿಳೆಯರೇ', 'ಆಂಟಗೋನಿ ಶೆಟ್ಟಿ',  ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ರಿಷಬ್​ ಶೆಟ್ಟಿಯವರು ಈ ವರ್ಷ ಫುಲ್​ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಧಿಡೀರ್​​ ಅಮೇಜಾನ್​ ಪ್ರೈಮ್​ಗೆ ಬಂದ ಲವ್​ ಮಾಕ್​ಟೈಲ್​ 2, ಇದು ಕೇವಲ ಸಿನಿಮಾವಲ್ಲ, ಪ್ರೇಮಿಗಳಿಗೆ ಪಾಠ!

‘ಪೆದ್ರೋ’ ಸಿನಿಮಾ ನಿರ್ಮಾಣ ಮಾಡಿರೋ ರಿಷಬ್​!

ರಿಷಬ್ ಶೆಟ್ಟಿ ನಿರ್ಮಿಸಿದ 'ಪೆದ್ರೊ' ಸಿನಿಮಾ ಈಗ ಆರಂಭವಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆ ಆಗಿಲ್ಲ ಎಂದು ಬಹಿರಂಗವಾಗಿ ಬೇಸರ ಹೊರಹಾಕಿದ್ದರು. 'ಪೆದ್ರೊ' ಚಿತ್ರವನ್ನು ನಟೇಶ್ ಹೆಗ್ಡೆ ನಿರ್ದೇಶನ ಮಾಡಿದ್ದು, ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಈಗಾಗಲೇ ಭಾಗಿಯಾಗಿದೆ. ಆದರೆ, ನಮ್ಮ ನಾಡಿನಲ್ಲೇ ಬೆಲೆ ಕೊಟ್ಟಿಲ್ಲ ಎಂದು ಬೇಸರ ಹೊರಹಾಕಿದ್ದರು. ಇನ್ನೂ ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಸಿನಿಮಾ ಮೇಲಿರುವ ನಿರೀಕ್ಷೆ ಹೆಚ್ಚಾಗಿದೆ.
Published by:Vasudeva M
First published: