RIP Jayanthi: ನೇತ್ರ ದಾನ: ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿರುವ ನಟಿ ಜಯಂತಿ..!

ನಟಿ ಜಯಂತಿ ಅವರ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿದ್ದು, ಈಗ ಕಣ್ಣುಗಳನ್ನು ಪಡೆಯಲು ಬನಶಂಕರಿ ಚಿತಾಗಾರದ ಬಳಿಯೇ ಬಂದಿರುವ ವೈದ್ಯರು ಕಣ್ಣುಗಳನ್ನು ಪರೀಕ್ಷೆ ಮಾಡುತ್ತಿದ್ದಾರೆ. 

ನಟಿ ಜಯಂತಿ

ನಟಿ ಜಯಂತಿ

  • Share this:
ಕಣ್ಣು ಪ್ರತಿಯೊಬ್ಬರ ಜೀವನದಲ್ಲೂ ಅಮೂಲ್ಯವಾದ ಅಂಗವಾಗಿದೆ. ನಾನಾ ಕಾರಣಗಳಿಂದ ಕಣ್ಣುಗಳನ್ನು ಕಳೆದುಕೊಂಡವರಿಗೆ ಮರಣಾನಂತರ ಕಣ್ಣುಗಳನ್ನು ಕಣ್ಣುಗಳನ್ನು ದಾನ ಮಾಡುವ ಮೂಲಕ ಬೆಳಕಾಗಬಹುದು. ಕತ್ತಲಲ್ಲಿ ಜೀವನ ಸಾಗಿಸುತ್ತಿರುವ ಅಂಧರ ಬಾಳಿಗೆ ಬೆಳಕಾಗುವ ಪುಣ್ಯದ ಕೆಲಸ ನೇತ್ರ ದಾನ. ಇಂತಹ ಕೆಲಸವನ್ನೇ ಈಗ ಸ್ಯಾಂಡಲ್​ವುಡ್​ನ ಹಿರಿಯ ನಟಿ ಜಯಂತಿ ಅವರ ಕುಟುಂಬದವರೂ ಮಾಡಿದ್ದಾರೆ. ವಯೋಸಹಜ ಕಾಯಿಲೆಯಿಂದೆ ಬಳಲುತ್ತಿದ್ದ ಜಯಂತಿ ಅವರು ಇಂದು ಅಗಲಿದ್ದು, ಅವರ ಕುಟುಂಬದವರು ಜಯಂತಿ ಅವರ ಕಣ್ಣುಗಳನ್ನು ದಾನ ಮಾಡಿದ್ದಾರೆ. ಹೌದು, ಜಯಂತಿ ಅವರ ಕಣ್ಣುಗಳು ಕತ್ತಲಲ್ಲಿರುವ ಇಬ್ಬರ ಬದುಕಿನಲ್ಲಿ ಬೆಳಕು ತುಂಬಲಿವೆ. ನಾರಾಯಣ ನೇತ್ರಾಲಯದಲ್ಲಿರೋ ಡಾ. ರಾಜ್ ಕುಮಾರ್ ಐ ಬ್ಯಾಂಕ್​ಗೆ ಜಯಂತಿ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. 

ನಟಿ ಜಯಂತಿ ಅವರ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿದ್ದು, ಈಗ ಕಣ್ಣುಗಳನ್ನು ಪಡೆಯಲು ಬನಶಂಕರಿ ಚಿತಾಗಾರದ ಬಳಿಯೇ ಬಂದಿರುವ ವೈದ್ಯರು ಕಣ್ಣುಗಳನ್ನು ಪರೀಕ್ಷೆ ಮಾಡುತ್ತಿದ್ದಾರೆ.

Anu Prabhakar, Jayanthi, death, Jayanthi death, Anu Prabhakar condolence to Jayanthi death, Anu Prabhakar Former Daughter-in-law of Jayanthi , ನಟಿ ಅನ ಪ್ರಭಾಕರ್, ಜಯಂತಿ, ನಿಧನ, ಜಯಂತಿ ನಿಧನ, ಜಯಂತಿ ನಿಧನಕ್ಕೆ ಅನು ಪ್ರಭಾಕರ್ ಭಾವುಕ ವಿದಾಯ, ಜಯಂತಿ ಮಾಜಿ ಸೊಸೆ ಅನು ಪ್ರಭಾಕರ್, Former daughter in law Anu Prabhakar expressed her condolence on death of actress Jayanthi ae
ನಟಿ ಜಯಂತಿ


'ಜಯಂತಿ ಅವರ ಅಗಲಿಕೆಯ ವಿಷಯ ಹಾಗೂ ಅವರ ಮೃತ ದೇಹವನ್ನು ಟೌನ್ ಹಾಲ್​ಗೆ ತರಲಾಗುತ್ತಿದೆ ಅನ್ನೋ ಮಾಹಿತಿ ತಿಳಿದ ಕೂಡಲೇ ಇಲ್ಲಿಗೆ ಬಂದು ಅವರ ಕುಟುಂಬದವರನ್ನು ಭೇಟಿ ಮಾಡಿದೆ. ಜಯಂತಿ ಅವರ ಮಗ ಕೃಷ್ಣ ಕುಮಾರ್ ಅವರು ಯೋಚನೆ ಮಾಡದೆ ನೇತ್ರ ದಾನಕ್ಕೆ ಅನುಮತಿ ನೀಡಿದರು. ನಾರಾಯಣ ನೇತ್ರಾಲಯದವರು ಈಗ ಕಣ್ಣುಗಳನ್ನು ತೆಗೆದುಕೊಳ್ಳುತ್ತಿದ್ದು, ಅದನ್ನು ನಾಳೆ ಇಬ್ಬರಿಗೆ ಹಾಕಲಾಗುತ್ತದೆ' ಎಂದು ಡಾ. ಶೈಲಜಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಾಣಿಕ್ಯ ಸಿನಿಮಾ ಖ್ಯಾತಿಯ ನಟಿ ವರಲಕ್ಷ್ಮಿ ಜೊತೆ ಕಾಲ ಕಳೆದ ಐಶ್ವರ್ಯಾ ರೈ-ಅಭಿಷೇಕ್​ ಬಚ್ಚನ್​..!ಬನಶಂಕರಿ ಚಿತಾಗಾರದಲ್ಲಿ ಹಿರಿಯ ನಟಿ ಜಯಂತಿ ಅಂತ್ಯ ಸಂಸ್ಕಾರ ನಡೆಯಲಿದೆ. ಜಯಂತಿ ಅವರ ಮಗ ಕೃಷ್ಣಕುಮಾರ್ ಅವರು ಅಂಅಂತಿಮ ವಿಧಿವಿಧಾನ ನೆರವೇರಿದಲಿದ್ದು, ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಕ್ರಿಯೆ ನಡೆಯಲಿದೆ.

1945, ಜನವರಿ 6ರಂದು ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ ಆಗಿತ್ತು. 60ರಿಂದ 80ರ ದಶಕಗಳವರೆಗೆ ಸ್ಯಾಂಡಲ್​ವುಡ್​ನಲ್ಲಿ ನಾಯಕನಟಿಯಾಗಿ ಜನರನ್ನ ಪುಳಕಿತಗೊಳಿಸಿದ್ದ ಜಯಂತಿ ಅವರು ಕನ್ನಡ ಮಾತ್ರವಲ್ಲದೆ ಇನ್ನೂ ಐದು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ ರಂಜಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂಗ್ಲೀಷ್ ಭಾಷೆಯ ಒಂದು ಚಿತ್ರದಲ್ಲೂ ಅವರು ನಟಿಸಿದ್ದರು. ಅನೇಕ ಬಾರಿ ಅತ್ಯುತ್ತಮ ನಟನೆಗೆ ಪ್ರಶಸ್ತಿ ಪುರಸ್ಕಾರಗಳನ್ನ ಪಡೆದಿದ್ದಾರೆ. ಕನ್ನಡ ಚಿತ್ರರಂಗದ ಅತ್ಯಂತ ದಿಟ್ಟ ಮತ್ತು ಸುಂದರಿ (ಬೋಲ್ಡ್ ಅಂಡ್ ಬ್ಯೂಟಿಫುಲ್) ಎಂದು ಖ್ಯಾತರಾಗಿದ್ದ ಅವರಿಗೆ ಅಭಿನಯ ಶಾರದೆ ಬಿರುದು ಕೂಡ ಚಿತ್ರರಂದವರು ನೀಡಿದ್ದರು.

1963ರಲ್ಲಿ ಬಿಡುಗಡೆಯಾದ ಜೇನು ಗೂಡು ಸಿನಿಮಾ ಜಯಂತಿ ಅವರ ಚೊಚ್ಚಲ ಕನ್ನಡ ಚಿತ್ರ. ಅದಕ್ಕೆ ಮೊದಲು ಅವರು 1960ರಲ್ಲಿ ಬಿಡುಗಡೆಯಾದ ಯಾನೈ ಪಾಗನ್ ತಮಿಳು ಚಿತ್ರ ಅವರ ಮೊದಲ ಸಿನಿಮಾ ಆಗಿದೆ. ಆ ಬಳಿಕ ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿ ಆನಂತರ ಸ್ಯಾಂಡಲ್​ವುಡ್​ನ ಜೇನುಗೂಡಿಗೆ ಕೈ ಹಾಕಿದರು. ಸ್ಯಾಂಡಲ್​ವುಡ್​ನಲ್ಲಿ ತಮ್ಮ ಅದ್ಭುತ ನಟನೆಯಿಂದ ಎರಡು ದಶಕಗಳ ಕಾಲ ಮೋಡಿ ಮಾಡಿದ್ದಾರೆ. ಎಂಬತ್ತರ ದಶಕದ ನಂತರ ಅವರು ಪೋಷಕ ಪಾತ್ರಗಳಲ್ಲಿ ನಟಿಸತೊಡಗಿದ್ದರು. 2011ರಲ್ಲಿ ಅವರು ಕೊನೆಯ ಸಿನಿಮಾ ನಟಿಸಿದ್ದು. ನಮಿತಾ ಐ ಲವ್ ಯೂ ಬಳಿಕ ಅವರು ಮತ್ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಕಿರುತೆರೆಯಲ್ಲೂ ಅವರು ಕಾಣಿಸಲಿಲ್ಲ. ಆಗಾಗ ಸಭೆ ಸಮಾರಂಭಗಳಿಗೆ ಕಾಣಿಸಿಕೊಳ್ಳುತ್ತಿದ್ದರು ಅಷ್ಟೇ.

ಇದನ್ನೂ ಓದಿ: Bigg Boss Kannada Season 8: ನ್ಯಾಚುರಲ್ ಸ್ಟಾರ್ ಆಗಿ ಹೊರಹೊಮ್ಮಿದ ಪ್ರಶಾಂತ್​ ಸಂಬರಗಿಗೆ ಸಿಕ್ತು ಕಿಚ್ಚನ ಚಪ್ಪಾಳೆ..!

ಜೇನು ಗೂಡು, ಕಲಾವತಿ, ಮರ್ಯಾದೆ ರಾಮಣ್ಣ. ಮಿಸ್ ಲೀಲಾವತಿ, ಎಡಕಲ್ಲು ಗುಡ್ಡದ ಮೇಲೆ, ಕಲ್ಲು ಸಕ್ಕರೆ, ಮಿಸ್ ಬೆಂಗಳೂರು, ಇಮ್ಮಡಿ ಪುಲಿಕೇಶಿ, ರೌಡಿ ರಂಗಣ್ಣ, ಶ್ರೀ ಕೃಷ್ಣ ದೇವರಾಯ, ದೇವರ ಮಕ್ಕಳು, ಕುಲ ಗೌರವ, ನಂದ ಗೋಕುಲ ಮೊದಲಾದವರು ಅವರು ನಟಿಸಿದ ಕೆಲ ಪ್ರಮುಖ ಚಿತ್ರಗಳು. ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಅವರ ಅದ್ಭುತ ಅಭಿನಯಕ್ಕೆ 1973-74ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ಮನಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತು, ಮಸಣದ ಹೂವು ಚಿತ್ರದಲ್ಲೂ ಅತ್ಯುತ್ತಮ ನಟಿ ಎಂಬ ಪ್ರಶಸ್ತಿ ಬಂದಿವೆ. ಆನಂದ್, ಟುವ್ವಿ ಟುವ್ವಿ ಟುವ್ವಿ ಚಿತ್ರದಲ್ಲಿ ಪೋಷಕ ಪಾತ್ರಕ್ಕೆ ಪ್ರಶಸ್ತಿ ಬಂದಿದೆ. 2005ರಲ್ಲಿ ರಾಜಕುಮಾರ್ ಜೀವಿತಾವಧಿ ಸಾಧನೆ ಪ್ರಶಸ್ತಿ ಗೌರವ ಅವರಿಗೆ ಸಿಕ್ಕಿದೆ.

ಇದನ್ನೂ ಓದಿ: Actress Jayanthi Death: ಅಮ್ಮನಂತಿದ್ದ ಜಯಂತಿ ಅಗಲಿಕೆಗೆ ಕಂಬನಿ ಮಿಡಿದ ಮಾಜಿ ಸೊಸೆ ಅನು ಪ್ರಭಾಕರ್​

ಪೇಕಟಿ ಶಿವರಾಮ್ ಅವರನ್ನ ವಿವಾಹವಾಗಿದ್ದ ಜಯಂತಿಗೆ ಕೃಷ್ಣ ಕುಮಾರ್ ಎಂಬ ಮಗ ಇದ್ದಾರೆ. ಅನು ಪ್ರಭಾಕರ್ ಸೊಸೆಯಾಗಿದ್ದರು. ಕುಟುಂಬದಲ್ಲಿ ಸಾಕಷ್ಟು ತೊಂದರೆ ಇದ್ದರೂ ಜಯಂತಿ ಕಷ್ಟಕಾಲದಲ್ಲೂ ನಗುನಗುತ್ತಾ ಇದ್ದರೆಂದು ಅನೇಕ ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Published by:Anitha E
First published: