Rider Reels Contest: ರೀಲ್ಸ್ ಮಾಡಿ ನಿಖಿಲ್ ಕುಮಾರಸ್ವಾಮಿ ಜತೆ ಲಂಚ್​ ಮಾಡುವ ಅವಕಾಶ ನಿಮ್ಮದಾಗಿಸಿಕೊಳ್ಳಿ

ಟಾಲಿವುಡ್​ ನಿರ್ದೇಶಕ ವಿಜಯ್​ಕುಮಾರ್ ಕೊಂಡ ನಿರ್ದೇಶನದ ಈ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿರುವ ಬೆನ್ನಲ್ಲೇ ಚಿತ್ರತಂಡ ಸಿನಿಪ್ರಿಯರಿಗೆ ಒಂದು ಸ್ಪರ್ಧೆ ಏರ್ಪಡಿಸಿದೆ. ಜೊತೆಗೆ ಆಕರ್ಷಕ ಬಹುಮಾನ ಹಾಗೂ ನಿಖಿಲ್ ಕುಮಾರ್​ ಜತೆ ಲಂಚ್​ ಮಾಡುವ ಅವಕಾಶ ಸಹ ಕಲ್ಪಿಸಿದೆ.

ರೈಡರ್​ ಸಿನಿಮಾಗಾಗಿ ಇನ್​ಸ್ಟಾ ರೀಲ್ಸ್​​ ಮಾಡಿದ ನಿಖಿಲ್​ ಹಾಗೂ ಕಾಶ್ಮೀರಾ ಪರ್ದೇಸಿ

ರೈಡರ್​ ಸಿನಿಮಾಗಾಗಿ ಇನ್​ಸ್ಟಾ ರೀಲ್ಸ್​​ ಮಾಡಿದ ನಿಖಿಲ್​ ಹಾಗೂ ಕಾಶ್ಮೀರಾ ಪರ್ದೇಸಿ

  • Share this:
ಸ್ಯಾಂಡಲ್​ವುಡ್​ ಯುವರಾಜ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಅವರ ಹೊಸ ಸಿನಿಮಾ ರೈಡರ್​ನ (Rider) ಮೊದಲ ವಿಡಿಯೋ ಹಾಡು ರಿಲೀಸ್ ಆಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನಿಮಾ ಡವ್ವ ಡವ್ವ ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. ರಿಲೀಸ್​ ಆದಾಗ ಈ ಹಾಡು ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿತ್ತು. ಬಹಳ ಸಮಯದ ನಂತರ ರಿಲೀಸ್ ಆಗುತ್ತಿರುವ ಸಿನಿಮಾ ಇದಾಗಿದ್ದು, ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಕಾಶ್ಮೀರಿ ಪರ್ದೇಸಿ ಅವರು ಸಖತ್ ಸ್ಟೈಲಿಶ್​ ಆಗಿ ಸ್ಟೆಪ್ಸ್​ ಹಾಕಿದ್ದಾರೆ. ಈ ಹಾಡಿಗೆ ಈಗಾಗಲೇ 39 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದ್ದು, 1.31 ಲಕ್ಷ ಲೈಕ್ಸ್​ ಸಿಕ್ಕಿದೆ. ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ಲವರ್​ ಬಾಯ್​ ಆಗಿ ರಂಜಿಸಿದ್ದ ನಿಖಿಲ್ ಕುಮಾರಸ್ವಾಮಿ ನಂತರದಲ್ಲಿ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯುವಾಗಿ ಅಬ್ಬರಿಸಿದ್ದರು. ಈಗ ಇದೇ ಯುವರಾಜ ಬಾಸ್ಕೆಟ್​ ಬಾಲ್​ ಆಟಗಾರನಾಗಿ ರಂಜಿಸಲಿದ್ದಾರೆ.

ಟಾಲಿವುಡ್​ ನಿರ್ದೇಶಕ ವಿಜಯ್​ಕುಮಾರ್ ಕೊಂಡ ನಿರ್ದೇಶನದ ಈ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿರುವ ಬೆನ್ನಲ್ಲೇ ಚಿತ್ರತಂಡ ಸಿನಿಪ್ರಿಯರಿಗೆ ಒಂದು ಸ್ಪರ್ಧೆ ಏರ್ಪಡಿಸಿದೆ. ಜೊತೆಗೆ ಆಕರ್ಷಕ ಬಹುಮಾನ ಹಾಗೂ ನಿಖಿಲ್ ಕುಮಾರ್​ ಜತೆ ಲಂಚ್​ ಮಾಡುವ ಅವಕಾಶ ಸಹ ಕಲ್ಪಿಸಿದೆ.

Davva davva song form Rider, Davva davva Reels, Nikhil Kumaraswamy first Reels, Rider Movie promotion, Davva davva song Promotion,ಡವ್ವ ಡವ್ವ ಹಾಡಿನ ರೀಲ್ಸ್​, ಮೊದಲ ರೀಲ್ಸ್ ಮಾಡಿದ ನಿಖಿಲ್ ಕುಮಾರಸ್ವಾಮಿ, ರೈಡರ್ ಸಿನಿಮಾದ ರೀಲ್ಸ್​ ಸ್ಪರ್ಧೆ, ರೀಲ್ಸ್​ ಮಾಡಿ ನಿಖಿಲ್​ ಕುಮಾರಸ್ವಾಮಿ ಜತೆ ಲಂಚ್​ ಮಾಡಿ, Rider movie video song Release, ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್​ ಚಿತ್ರ ವಿಡಿಯೋ ಸಾಂಗ್ ರಿಲೀಸ್​, ಅಕ್ಓಬರ್ 16ಕ್ಕೆ ರೈಡರ್​ ಚಿತ್ರದ ಹಾಡು ರಿಲೀಸ್​, Rider movie video song Release on October 16th, Nikhil Kumaraswamy's Rider movie, Rider Movie Release Date, Rider will release in Kannada and Telugu, Rider movie telugu Songs, Rider Movie Kannada Songs, Rider Movie Teaser, Rider movie team completed dubbing, Director Vijay, Rider Movie trailer release, Nikhil Kumar Wife Revathi Nikhil Kumar Baby Shower, Revathi Nikhil Kumar Baby Shower photos, Revathi Instagram, Nikhil Kumaraswamy, Nikhil Kumar Wife, Revathi Nikhil Kumar, Baby Shower, HD Kumaraswamy, ನಿಖಿಲ್​ ಕುಮಾರಸ್ವಾಮಿ, ನಿಖಿಲ್​ ಕುಮಾರ್ ಪತ್ನಿ ರೇವತಿ, ರೇವತಿ ಸೀಮಂತ, ನಿಖಿಲ್​ ಕುಮಾರಸ್ವಾಮಿ ಪತ್ನಿ ರೇವತಿಗೆ ಸೀಮಂತ, ಎಚ್​ಎಸ್​ಆರ್​ ಲೇಔಟ್​ನಲ್ಲಿ ಇರುವ ಮಾನ್ವಿ ಕನ್ವೆನ್ಷನ್ ಹಾಲ್​ನಲ್ಲಿ ರೇವತಿ ಅವರ ಸೀಮಂತ ಕಾರ್ಯಕ್ರಮ, Baby Shower, HD Kumaraswamy, Nikhil Kumar Wife, Nikhil Kumaraswamy, Revathi Nikhil Kumar, ಕುಮಾರಸ್ವಾಮಿ ಫ್ಯಾಮಿಲಿ ಫೋಟೋಗಳು, ಕುಮಾರಸ್ವಾಮಿ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ, ನಿಖಿಲ್ ರೇವತಿ ಹಬ್ಬದ ಸಂಭ್ರಮ, HD Kum, Rider Reels Contest make a best Davva Davva Reels and win a chance to have lunch with Nikhil Kumaraswamy ae
ರೈಡರ್​ ಸಿನಿಮಾದ ರೀಲ್ಸ್ ಸ್ಪರ್ಧೆ


ಹೌದು, ಡವ್ವ ಡವ್ವ ಹಾಡಿನ ರೀಲ್ಸ್​ ಮಾಡಿ ಅವರು ಕೊಟ್ಟಿರುವ ಹ್ಯಾಶ್​ಟ್ಯಾಗ್​ಗಳನ್ನು ಹಾಕಿ ಪೋಸ್ಟ್​ ಮಾಡಬೇಕು. ಅದರಲ್ಲೂ ರೀಲ್ಸ್​ ಮಾಡುವವರು ಹಾಡಿಗೆ ತಕ್ಕ ಉಡುಗೆ ತೊಟ್ಟಿರಬೇಕು. ಔಟ್​ಡೋರ್​ನಲ್ಲಿ ವಿಡಿಯೋ ಶೂಟ್​ ಮಾಡಬೇಕು. ಜೊತೆಗೆ ವಿಡಿಯೋ ಉತ್ತಮ ಗುಣಮಟ್ಟದ್ದಾಗಿರಬೇಕು. ಜೊತೆಗೆ ಹ್ಯಾಶ್​ ಟ್ಯಾಗ್​ ಅನ್ನು ತಪ್ಪದೇ ಹಾಕಬೇಕು ರೀಲ್ಸ್​ ಅನ್ನು ಪೋಸ್ಟ್​ ಮಾಡಬೇಕು.

ಇದನ್ನೂ ಓದಿ:Nikhil Kumaraswamy-Revathi ದಂಪತಿಗೆ ಗಂಡು ಮಗು ಜನನ: ತಾತನಾದ ಖುಷಿಯಲ್ಲಿ ಮಾಜಿ ಸಿಎಂ ಎಚ್ಡಿಕೆ

ರೈಡರ್​ ರೀಲ್ಸ್​ ಕಂಟೆಸ್ಟ್​ನಲ್ಲಿ ಗೆದ್ದವ ಮೊದಲ ಹತ್ತು ಮಂದಿಗೆ ಯುವರಾಜ ನಿಖಿಲ್ ಕುಮಾರ್​ ಜತೆ ಲಂಚ್ ಮಾಡುವ ಅವಕಾಶ ಲಭಿಸಲಿದೆ. ಜೊತೆಗೆ ಸಾಕಷ್ಟು ಗಿಫ್ಟ್​ ಸಹ ಸಿಗಲಿದೆಯಂತೆ. ಜೊತೆಗೆ ಹಾಡಿನ ಪ್ರಮೋಷನ್​ಗಾಗಿ ನಿಖಿಲ್​ ಸಹ ಇದೇ ಮೊದಲ ಸಲ ರೀಲ್ಸ್​ ಮಾಡಿದ್ದಾರೆ.

ಇಲ್ಲಿದೆ ನಿಖಿಲ್​ ಕುಮಾರಸ್ವಾಮಿ ಅವರ ರೀಲ್ಸ್​ ಲಿಂಕ್​....









ಜಾಗ್ವಾರ್​, ಸೀತಾರಾಮ ಕಲ್ಯಾಣ ಹಾಗೂ ಕುರುಕ್ಷೇತ್ರ ಸಿನಿಮಾದ ನಂತರ ನಿಖಿಲ್ ಕುಮಾರಸ್ವಾಮಿ  ನಟಿಸುತ್ತಿರುವ ನಾಲ್ಕನೇ ಚಿತ್ರ ರೈಡರ್​ ಆಗಿದೆ. ಸೀತಾರಾಮ ಕಲ್ಯಾಣ ನಂತರ ನಿಖಿಲ್​ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಈ ಕಾರಣದಿಂದ ಅವರ ಯಾವುದೇ ಸಿನಿಮಾಗಳು ಸೆಟ್ಟೇರಿರಲಿಲ್ಲ. ನಂತರ ಕಳೆದ ದೀಪಾವಳಿ ಹಬ್ಬದ ಸಮಯದಲ್ಲಿ ರೈಡರ್ ಚಿತ್ರದ ಪೋಸ್ಟರ್​ ರಿಲೀಸ್ ಮಾಡುವ ಮೂಲಕ ತಮ್ಮ ಹೊಸ ಸಿನಿಮಾದ ಪ್ರಕಟಣೆ ಮಾಡಿದ್ದರು.

ಇದನ್ನೂ ಓದಿ: Nikhil-Revathi: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿಖಿಲ್-ರೇವತಿ: ಗೌಡರ ಮನೆಯ ಸೊಸೆಗೆ ಈಗ 5 ತಿಂಗಳು..!

N4 ವರ್ಕಿಂಗ್ ಟೈಟಲ್​ನಲ್ಲೇ ಆರಂಭವಾದ ರೈಡರ್​ ಸಿನಿಮಾ ಈಗ ರಿಲೀಸ್​ಗೆ ರೆಡಿಯಾಗಿದೆ. ಟಾಲಿವುಡ್​ ನಿರ್ದೇಶಕ ಆ್ಯಕ್ಷನ್ ಕಟ್​ ಹೇಳಿರುವ ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ರೈಡರ್​ ಚಿತ್ರದಲ್ಲಿ ಚಿಕ್ಕಣ್ಣ, ದತ್ತಣ್ಣ ಹಾಗೂ ಶಿವರಾಜ್​ ಕೆ.ಆರ್ ಪೇಟೆ ಅವರ ತಾರಾಗಣವಿದೆ. ನಿಖಿಲ್​ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ರೈಡರ್​ ಒಂದು ಪಕ್ಕಾ ಆ್ಯಕ್ಷನ್​ ಚಿತ್ರವಾಗಿದ್ದು, ಕನ್ನಡದ ಜೊತೆ ತೆಲುಗಿನಲ್ಲೂ ರಿಲೀಸ್ ಆಗಲಿದೆ.

ನಿಖಿಲ್ ಇತ್ತೀಚೆಗಷ್ಟೆ ತಮ್ಮ ಐದನೇ ಸಿನಿಮಾ ಸಹಿ ಮಾಡಿದ್ದಾರೆ. ಕೆವಿಎನ್​ ಪ್ರೊಡಕ್ಷನ್ಸ್​ ನಿರ್ಮಾಣದ ಈ ಹೊಸ ಸಿನಿಮಾವನ್ನು ಹೊಸ ನಿರ್ದೇಶಕ ಮಂಜು ಅಥರ್ವ ನಿರ್ದೇಶನ ಮಾಡಲಿದ್ದಾರಂತೆ. ಈ ಹಿಂದೆ ಮಂಜು ಅಥರ್ವ ಅವರು ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
Published by:Anitha E
First published: