ಗರ್ಲ್​ಫ್ರೆಂಡ್ಸ್​​ಗೆ ಸಹೋದರಿಯ ಬಟ್ಟೆಯನ್ನು ಉಡುಗೊರೆಯಾಗಿ ಕೊಡುತ್ತಿದ್ದ Ranbir Kapoor..!

ಕಿರುತೆರೆಯಲ್ಲಿ ಪ್ರಸಾರವಾಗುವ ಜನಪ್ರಿಯ ಹಾಸ್ಯ ಕಾರ್ಯಕ್ರಮ ದ ಕಪಿಲ್ ಶರ್ಮಾ ಶೋಗೆ ಬಂದಿದ್ದ ಸೆಲೆಬ್ರಿಟಿ ಅಮ್ಮ-ಮಗಳು ರಿದ್ಧಿಮಾ ಕಪೂರ್ ಹಾಗೂ ಅವರ ಅಮ್ಮ ನೀತು ಸಿಂಗ್​ ಅವರು ಸಖತ್​ ಮಜವಾದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಒಂದು ರಣಬೀರ್ ಕಪೂರ್​ ಅವರ ಗರ್ಲ್ ಫ್ರೆಂಡ್ಸ್​ ವಿಷಯ ಸಹ ಒಂದು. 

ನೀತು ಕಪೂರ್​, ರಣಬೀರ್ ಕಪೂರ್ ಹಾಗೂ ರಿದ್ಧಿಮಾ ಕಪೂರ್​

ನೀತು ಕಪೂರ್​, ರಣಬೀರ್ ಕಪೂರ್ ಹಾಗೂ ರಿದ್ಧಿಮಾ ಕಪೂರ್​

  • Share this:
ಬಾಲಿವುಡ್​ ನಟ ರಣಬೀರ್ ಕಪೂರ್​ (Ranbir Kapoor) ಹಾಗೂ ಸಹೋದರಿ ರಿದ್ಧಿಮಾ ಕಪೂರ್​ (Riddhima Kapoor)​ ಅವರ ನಡುವೆ ಆತ್ಮೀಯವಾದ ಸಂಬಂಧ ಇದೆ. ಈ ಸ್ಟಾರ್​ ಅಕ್ಕ-ತಮ್ಮನ ಜೋಡಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇನ್ನು ರಣಬೀರ್ ಕಪೂರ್ ಅವರ ಗರ್ಲ್​ ಫ್ರೆಂಡ್ಸ್​ ಜತೆಯಲ್ಲೂ ರಿದ್ಧಿಮಾ ಅವರಿಗೆ ಉತ್ತಮ ಸಂಬಂಧ ಇರುತ್ತದೆ. ಸದ್ಯಕ್ಕೆ ಆಲಿಯಾ ಭಟ್​ ಹಾಗೂ ರಣಬೀರ್ ಕಪೂರ್ ಅವರ ಮದುವೆಯ ಸುದ್ದಿ ಆಗಾಗ ಚರ್ಚೆಗೆ ಬಂದು ಹೋಗುತ್ತಿರುತ್ತದೆ. ಇನ್ನು ಆಲಿಯಾ ಭಟ್​ ಸಹ ರಣಬೀರ್ ಅವರ ಸಹೋದರಿ ರಿದ್ಧಿಮಾ ಜೊತೆ ಹೆಚ್ಚಾಗಿ ಕಾಣಿಕೊಳ್ಳುತ್ತಿರುತ್ತಾರೆ. ರಿಷಿ ಕಪೂರ್ ಅವರ ಅಗಲಿಕೆ ನಂತರ ಅಮ್ಮನ ಜತೆ ಹೆಚ್ಚಾಗಿ ಕಾಣಸಿಗುವ ರಿದ್ಧಿಮಾ ಅವರು ಸಹೋದರ ರಣಬೀರ್ ಕಪೂರ್ ಕುರಿತಾದ ಸಖತ್ ಇಂಟರೆಸ್ಟಿಂಗ್ ವಿಷಯವೊಂದನ್ನು ಸಾರ್ವಜನಿಕವಾಗಿ ಕಿರುತೆರೆಯ ರಿಯಾಲಿಟಿ ಕಾರ್ಯಕ್ರಮದಲ್ಲಿ ಬಹಿರಗಗೊಳಿಸಿದ್ದಾರೆ.

ಹೌದು, ರಣಬೀರ್ ಕಪೂರ್​ ಹಾಗೂ ಅವರ ಗರ್ಲ್​ಫ್ರೆಂಡ್ಸ್​ ಕುರಿತಾಗಿ ಸಖತ್ ಫನ್ನಿ ವಿಷಯವನ್ನು ತಮ್ಮ ಅಮ್ಮ ನೀತು ಕಪೂರ್ ಅವರ ಮುಂದೆಯೇ ರಿವೀಲ್ ಮಾಡಿದ್ದಾರೆ ರಿದ್ದಿಮಾ ಕಪೂರ್​. ಈ ವಿಡಿಯೋ ನೋಡಿ ನಿಮಗೆ ತಿಳಿಯುತ್ತೆ.ಕಿರುತೆರೆಯಲ್ಲಿ ಪ್ರಸಾರವಾಗುವ ಜನಪ್ರಿಯ ಹಾಸ್ಯ ಕಾರ್ಯಕ್ರಮ ದ ಕಪಿಲ್ ಶರ್ಮಾ ಶೋಗೆ ಬಂದಿದ್ದ ಸೆಲೆಬ್ರಿಟಿ ಅಮ್ಮ-ಮಗಳು ರಿದ್ಧಿಮಾ ಕಪೂರ್ ಹಾಗೂ ಅವರ ಅಮ್ಮ ನೀತು ಸಿಂಗ್​ ಅವರು ಸಖತ್​ ಮಜವಾದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಒಂದು ರಣಬೀರ್ ಕಪೂರ್​ ಅವರ ಗರ್ಲ್​ಫ್ರೆಂಡ್ಸ್​ ವಿಷಯ ಸಹ ಒಂದು.

ಇದನ್ನೂ ಓದಿ: Happy Birthday Anant Nag: ಅನಂತ್​ ನಾಗ್​ ಬಗ್ಗೆ ತಿಳಿಯಲೇಬೇಕಾದ ಆಸಕ್ತಿಕರ ವಿಷಯಗಳಿವು..!

ರಿದ್ಧಿಮಾ ಕಪೂರ್ ಲಂಡನ್​ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಮನೆಯಲ್ಲಿ ಅಪ್ಪ-ಅಮ್ಮನಜತೆ ಇದ್ದ ರಣಬೀರ್​ ಕಪೂರ್​, ತಮ್ಮ ಗರ್ಲ್​ಫ್ರೆಂಡ್ಸ್​ಗೆ ಸಹೋದರಿಯ ಬಟ್ಟೆಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದರಂತೆ.

ಹೇಗಿದ್ದರೂ ರಿದ್ಧಿಮಾ ವಿದೇಶದಲ್ಲಿರುತ್ತಿದ್ದರು. ಈ ವೇಳೆ ಮನೆಯಲ್ಲಿದ್ದ ಅವರ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ತಮ್ಮ ಗೆಳೆತಿಯರಿಗೆ ಗಿಫ್ಟ್​ ಆಗಿ ಕೊಡುತ್ತಿದ್ದರಂತೆ. ಒಮ್ಮೆ ರಿದ್ಧಿಮಾ ರಜೆ ಅಂತ ಲಂಡನ್​ನಿಂದ ಮನೆಗೆ ಬರುತ್ತಾರೆ. ಆಗ ರಣಬೀರ್ ಕಪೂರ್ ಅವರ ಗರ್ಲ್​ಫ್ರೆಂಡ್ ಒಬ್ಬರು ಕಾಣಿಸಿಕೊಳ್ಳುತ್ತಾರೆ. ಆಗ ಅವರು ರಿದ್ಧಿಮಾ ಅವರ ಟಾಪ್​ ತೊಟ್ಟಿರುತ್ತಾರಂತೆ. ಅದನ್ನು ನೋಡಿದ ರಿದ್ಧಿಮಾಗೆ ಶಾಕ್​ ಆಗುತ್ತದೆ. ಆಗಲೇ ಗೊತ್ತಾಗುತ್ತೆ, ಮಿಸ್​ ಆಗಿ ತನ್ನ ಟಾಪ್​ ಎಲ್ಲಿ ಹೋಗಿದೆ ಅನ್ನೋದು. ಈ ವಿಷಯವನ್ನು ರಿದ್ಧಿಮಾ ಅವರು ಕಪಿಲ್ ಶರ್ಮಾ ಶೋನಲ್ಲಿ ರಿವೀಲ್ ಮಾಡಿದ್ದಾರೆ.


ರಣಬೀರ್ ಕಪೂರ್​ ಹೀಗೆ ತಮ್ಮ ಸಹೋದರಿಯ ಬಟ್ಟೆಗಳನ್ನು ಗರ್ಲ್​ಫ್ರೆಂಡ್ಸ್​ಗೆ ಗಿಫ್ಟ್​ ಮಾಡಲು ಒಂದು ಕಾರಣ ಇತ್ತಂತೆ. ಅದು ತಮ್ಮ ಪಾಕೆಟ್ ಮನಿ ಉಳಿಸಿಕೊಳ್ಳಲು ಹೀಗೆಲ್ಲ ಮಾಡುತ್ತಿದ್ದರು ಎಂದು ರಿದ್ಧಿಮಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Sunny Leone: ನೆಟ್ಟಿಗರಿಗೆ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಕೊಟ್ರು ಸಖತ್ ಆಫರ್​..!

ರಣಬೀರ್ ಕಪೂರ್ ಅವರು ತಮ್ಮ ಸಿನಿಮಾಗಿಂತ ಹೆಚ್ಚಾಗಿ ಸದ್ದು ಮಾಡಿದ್ದು ಲವ್​ ಲೈಫ್​ ಸ್ಟೋರಿಗಳಿಂದ ಎಂದರೆ ತಪ್ಪಾಗದು. ಸದಾ ತಮ್ಮ ಪ್ರೀತಿ-ಪ್ರೇಮದ ವಿಷಯ ಹಾಗೂ ಬ್ರೇಕಪ್​ ವಿಷಯಗಳಿಂದಾಗಿಯೇ ಸುದ್ದಿಯಲ್ಲಿರುತ್ತಿದ್ದರು. ಈ ಹಿಂದೆ ದೀಪಿಕಾ ಪಡುಕೋಣೆ ಹಾಗೂ ಕತ್ರಿನಾ ಕೈಫ್​ ಜತೆಗಿನ ಲವ್​ ಲೈಫ್​, ಡೇಟಿಂಗ್​ನಿಂದಾಗಿ ತುಂಬಾ ಚರ್ಚೆಯಲ್ಲಿದ್ದರು. ದೀಪಿಕಾ ಸಹ ಈ ಹಿಂದೆ ರಣಬೀರ್ ಕಪೂರ್ ಪ್ರೀತಿಯಲ್ಲಿದ್ದಾಗ ಮಾಡಿದ್ದ ಮೋಸದ ಬಗ್ಗೆ ಅವರ ಹೆಸರನ್ನು ಉಲ್ಲೇಖಿಸದೆ ಸಂದರ್ಶನವೊಂದರಲ್ಲಿ ಹೇಳಿದ್ದರು.
Published by:Anitha E
First published: