Ricky Kej: ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ! 2 ಬಾರಿ ಗ್ರ್ಯಾಮಿ ಅವಾರ್ಡ್ ಗೆದ್ದಿರುವ ರಿಕಿ ಪಾಡು ಯಾರಿಗೂ ಬೇಡ

ಹಲವು ವರ್ಷಗಳ ಕಾಲ ಶ್ರಮ ವಹಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದ ರಿಕಿ ಕೇಜ್​ಗೆ ಈ ಪರಿಸ್ಥಿತಿ ಬರಬಾರದಿತ್ತು. ಅರೇ ಇದ್ದಕಿದ್ದ ಹಾಗೇ ರಿಕ್ಕಿ ಕೇಜ್​ಗೆ ಏನಾಯ್ತು ಅಂತ ಯೋಚಿಸ್ತಿದ್ದೀರಾ? ಆಗಿರುವುದು ರಿಕಿ ಕೇಜ್​ಗಲ್ಲ. ಅವರು ಗೆದ್ದಿರುವ ಗ್ರ್ಯಾಮಿ ಅವಾರ್ಡ್​ಗೆ.

ರಿಕಿ ಕೇಜ್​

ರಿಕಿ ಕೇಜ್​

  • Share this:
ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂದ ಗಾದೆ ಇದೆ. ಈ ಗಾದೆ ಎರಡೆರೆಡು ಬಾರಿ ಗ್ರ್ಯಾಮಿ ಅವಾರ್ಡ್ (Grammy Award) ಗೆದ್ದಿರುವ ನಮ್ಮ ಹೆಮ್ಮೆಯ ಭಾರತೀಯ ಗಾಯಕ ರಿಕಿ ಕೇಜ್ (Ricky Kej) ​ಗೆ ಸೂಟ್​ ಆಗಿದೆ ಎಂದು ಹೇಳಬಹುದು. ಹಲವು ವರ್ಷಗಳ ಕಾಲ ಶ್ರಮ ವಹಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದ ರಿಕ್ಕಿ ಕೇಜ್​ಗೆ ಈ ಪರಿಸ್ಥಿತಿ ಬರಬಾರದಿತ್ತು. ಅರೇ ಇದ್ದಕಿದ್ದ ಹಾಗೇ ರಿಕಿ ಕೇಜ್​ಗೆ ಏನಾಯ್ತು ಅಂತ ಯೋಚಿಸ್ತಿದ್ದೀರಾ? ಆಗಿರುವುದು ರಿಕಿ ಕೇಜ್​ಗಲ್ಲ. ಅವರು ಗೆದ್ದಿರುವ ಗ್ರ್ಯಾಮಿ ಅವಾರ್ಡ್​ಗೆ. ಭಾರತೀ(India)ಯ ಪ್ರಸಿದ್ಧ ಸಂಗೀತ ಸಂಯೋಜಕ ರಿಕಿ ಕೇಜ್‌(Ricky Kej) ಅವರು ಇಡೀ ದೇಶವೇ ಮತ್ತೊಮ್ಮೆ ಅವರತ್ತ ಹೆಮ್ಮೆಯಿಂದ ನೋಡುವಂತೆ ಮಾಡಿದ್ದರು. ಜಾಗತಿಕ ಸಂಗೀತ ಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದು ಹೇಳಲ್ಪಡುವ ಗ್ರ್ಯಾಮಿ ಪ್ರಶಸ್ತಿ(Grammy Awards)ಯನ್ನು ಎರಡನೆಯ ಬಾರಿ ತಮ್ಮದಾಗಿಸಿಕೊಳ್ಳುವ ಮೂಲಕ ಮಹಾ ಸಾಧನೆ ಮಾಡಿದ್ದರು. 

ಬೆಂಗಳೂರು ಕಸ್ಟಮ್ಸ್​ನಲ್ಲಿ ಲಾಕ್​ ಆದ ಗ್ರ್ಯಾಮಿ ಅವಾರ್ಡ್​!

ಸಂಗೀತ(Music) ಸಂಯೋಜಕ ರಿಕಿ ಕೇಜ್ ಅವರು ತಮ್ಮ ಎರಡನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದಿದ್ದರು. ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ವಿದೇಶದಲ್ಲಿ ನಡೆಸಲಾಗಿತ್ತು. ಅಲ್ಲಿಗೆ ಹೋಗಿ ಪ್ರಶಸ್ತಿ ಪಡೆದುಕೊಂಡಿದ್ದ ಬಂದಿದ್ದ ರಿಕ್ಕಿ ಕೇಜ್​ಗೆ ಬೆಂಗಳೂರಿನಿಂದ ಮನೆಗೆ ಆ ಪ್ರಶಸ್ತಿ ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲ ಅಂದರೆ ನಂಬಲು ಸಾಧ್ಯವಿಲ್ಲ. ಆದರೂ ಇದು ನಿಜ. ಹೌದು, ಬೆಂಗಳೂರು ಕಸ್ಟಮ್ಸ್​​ನಲ್ಲಿ ರಿಕ್ಕಿ ಕೇಜ್​ ಗೆದ್ದಿರುವ ಗ್ರ್ಯಾಮಿ ಅರ್ವಾಡ್​ ಸಿಲುಕಿಕೊಂಡಿದೆ. ಇದನ್ನು ಪಡೆಯಲು ರಿಕ್ಕಿ ಸಾಕಷ್ಟು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಬೇಸತ್ತು ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದಾರೆ.

ಬೇಸತ್ತು ಟ್ವೀಟ್ ಮಾಡಿದ ರಿಕ್ಕಿ ಕೇಜ್​!

ಹೌದು, ಎಲ್ಲಾ ರೀತಿಯಲ್ಲೂ ಬೆಂಗಳೂರು ಕಸ್ಟಮ್ಸ್​ನಲ್ಲಿ ಲಾಕ್​ ಆಗಿರುವ ತಮ್ಮ ಗ್ರ್ಯಾಮಿ ಅವಾರ್ಡ್ ಹಿಂಪಡೆಯಲು ರಿಕ್ಕಿ ಕೇಜ್​ ಪ್ರಯತ್ನ ಪಟ್ಟಿದ್ದಾರೆ. ಆದರೆ, ಯಾವ ಪ್ರಯತ್ನವು ಫಲ ನೀಡಿಲ್ಲ. ಈ ಬಗ್ಗೆ ಟ್ವೀಟ್ ಮಾಡಿದ ಬೇಸರ ವ್ಯಕ್ತಪಡಿಸಿದ್ದಾರೆ. ಎ ಎರಡು ತಿಂಗಳುಗಳಿಂದ ತಾಳ್ಮೆಯಿಂದ ಇದ್ದ ರಿಕ್ಕ ಕೇಜ್​, ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ, ಅದನ್ನು ತನಗೆ ಬಿಡುಗಡೆ ಮಾಡುವಂತೆ ಕಸ್ಟಮ್ಸ್ ಇಲಾಖೆಗೆ ಕೇಳಿಕೊಳ್ಳುವಂತೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: ಕೇಸ್ ಗೆದ್ದ ಖುಷಿಗೆ ಭಾರತೀಯ ರೆಸ್ಟೊರೆಂಟ್ ನಲ್ಲಿ ಪಾರ್ಟಿ ಮಾಡಿದ ಡೆಪ್, ಲಕ್ಷಗಟ್ಟಲೆ ಬಿಲ್ ಆದ್ರೂ ಡೋಂಟ್ ಕೇರ್!

ಯಾರಿಗೇ ಕೇಳಿದ್ರೂ ನೋ ರೆಸ್ಪಾನ್ಸ್​ ಅಂತೆ!

ಬೆಂಗಳೂರು, ಚೆನ್ನೈ ಮತ್ತು ದೆಹಲಿಯ ಪ್ರಧಾನ ಕಛೇರಿಯ ಕಸ್ಟಮ್ಸ್ ಇಲಾಖೆಗಳಿಗೆ ಈ ಬಗ್ಗೆ ಕೇಜ್​ ಸುದ್ದಿ ಮುಟ್ಟಿಸಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ನಿಯಮದ ಪ್ರಕಾರವೇ  ಆ ಪ್ರಶಸ್ತಿ ನನ್ನ ಕೈ ಸೇರಲಿ. ಅಧಿಕಾರಿಗಳಿಗೆ ತಿಳಿಸಲು ಟ್ವೀಟ್ ಮಾಡದ್ದೇನೆ. ಇದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಕೇಜ್​ ತಿಳಿಸಿದ್ದಾರೆ. ಬೆಂಗಳೂರು ಸಿಟಿ ಕಸ್ಟಮ್ಸ್​ ಕಮಿಷನರ್​ ಕೇಜ್​ ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದು, ಏರ್‌ವೇ ಬಿಲ್ ಸಂಖ್ಯೆ ಅಥವಾ ಫೆಡ್‌ಎಕ್ಸ್‌ನಿಂದ ಕಳುಹಿಸಲಾದ ಪ್ಯಾಕೇಜ್ ಐಡಿ ನಂಬರ್​​ ಪಡೆದುಕೊಂಡಿದ್ದಾರಂತೆ.

ಇದನ್ನೂ ಓದಿ: ಬಾದ್‌ಶಾಗೆ ಮಾನಸಿಕ ಸಮಸ್ಯೆ ಇತ್ತಂತೆ, ಜೀವನದ ನೋವಿನ ಕಥೆ ಬಿಟ್ಟಿಟ್ಟ ರ್‍ಯಾಪರ್

7 ವರ್ಷದ ಹಿಂದೆ ಫಸ್ಟ್​ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದ ರಿಕಿ!

ಈ ಕಲಾವಿದನಿಗೆ 2015 ರಲ್ಲಿ ‘ವಿಂಡ್ಸ್ ಆಫ್ ಬ್ರೂಡ್​’ ಆಲ್ಬಂಗಾಗಿ ಅವರು ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದರು. ಅಮೆರಿಕದಲ್ಲಿ ಜನಿಸಿದ ರಿಕಿ ಕೇಜ್ 8 ವರ್ಷದವನಿದ್ದಾಗಿನಿಂದಲೂ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಸಂಗೀತದ ಕಡೆಗೆ ಒಲವು ತೋರಿಸುವ ಮೊದಲು ಅವರು ದಂತವೈದ್ಯಕೀಯದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದರು.
Published by:Vasudeva M
First published: