ಮದುವೆಗೆ ಮುನ್ನವೇ Divorce ಯಾವಾಗ ಎಂದು ಪ್ರಶ್ನಿಸಿದ ನೆಟ್ಟಿಗನಿಗೆ ಛೀಮಾರಿ ಹಾಕಿದ ನಟಿ ರಿಚಾ ಚಡ್ಡಾ

ಅಲಿ ಫಜಲ್​ ಮತ್ತು ರಿಚಾ ಚಡ್ಡಾ ಕಳೆದ ವರ್ಷವೇ ಮದುವೆ ಆಗಲು ನಿರ್ಧರಿಸಿದ್ದರು, ಆದರೆ ಅಲಿ ಅವರ ತಾಯಿ ಕೊನೆಯುಸಿರೆಳೆದರು. ಅದರಿಂದಾಗಿ ಅಲಿ ಹಾಗೂ ರಿಚಾ ತಮ್ಮ ಮದುವೆಯನ್ನು ಮುಂದೂಡಿದರು.

ರಿಚಾ ಚಡ್ಡಾ-ಅಲಿ ಫಜಲ್

ರಿಚಾ ಚಡ್ಡಾ-ಅಲಿ ಫಜಲ್

  • Share this:
ನಟಿ ರಿಚಾ ಚಡ್ಡಾ (Richa Chadha) ಮತ್ತು ನಟ ಅಲಿ ಫಸಲ್ (Ali Fazal) ಬಾಲಿವುಡ್‍ನಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳದಿದ್ದರೂ, ಒಟಿಟಿ ಮತ್ತು ವೆಬ್ ಸರಣಿ ಪ್ರಿಯರಿಗೆ ಸಿಕ್ಕಾಪಟ್ಟೆ ಅಚ್ಚುಮೆಚ್ಚು. ಅವರಿಬ್ಬರು ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು, ಆದಷ್ಟು ಬೇಗ ಮದುವೆ ಆಗಲಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನೆಟ್ಟಿಗನೊಬ್ಬ ವ್ಯಂಗ್ಯವಾದ ಟ್ವೀಟ್ ಮಾಡಿದ್ದು, ಅದಕ್ಕೆ ರಿಚಾ ಚಡ್ಡಾ ಕೂಡ ಅಷ್ಟೇ ವ್ಯಂಗ್ಯವಾಗಿ ಮತ್ತು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗನೊಬ್ಬ “ ನೀವು ಯಾವಾಗ ವಿಚ್ಛೇದನ ಪಡೆದುಕೊಳ್ಳುತ್ತಿದ್ದೀರಿ? ನಮಗೆ ಹೇಳಿ. ಯಾಕೆಂದರೆ  ಅಮೀರ್​ ಖಾನ್ ಅವರಂತೆಯೇ, ನಿಮ್ಮ ಮದುವೆ ತುಂಬಾ ಕಾಲ ಉಳಿಯುವುದಿಲ್ಲ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಆ ವ್ಯಕ್ತಿಯ ಟ್ವೀಟ್ ಓದಿ ರಿಚಾ ಸುಮ್ಮನೆ ಕೂರಲಿಲ್ಲ. ಹಿಂದಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. “ ಸರ್ವೇಶ್, ನನ್ನ ವಿಷಯ ಬಿಡು, ನಿನ್ನಂತ ಭಿಕಾರಿಯನ್ನು ಯಾರೂ ಸ್ವಇಚ್ಚೆಯಿಂದ ಮದುವೆ ಆಗೋಲ್ಲ. ಅದರಿಂದ ಮತಿ ಕಳೆದುಕೊಳ್ಳುತ್ತಿದ್ದೀಯಾ? ನಿನ್ನ ವಿಷಯದಲ್ಲಿ ಹುಡುಗಿಯೇ ವರದಕ್ಷಿಣೆ ಕೇಳಿರಬೇಕು. ರೂಪವಿಲ್ಲ, ಬುದ್ಧಿವಂತಿಕೆ ಇಲ್ಲ ಮತ್ತು ನೀನು ಬಡವ ಕೂಡ? ನಿನ್ನ ತಾಯಿ ಎಲ್‍ಪಿಜಿಯಿಂದ ಕಟ್ಟಿಗೆ ಒಲೆ ಬಳಕೆಗೆ ಮರಳಿರಬೇಕು. ನಿಮಗೆ ನನ್ನ ನಮಸ್ಕಾರಗಳು ಆಂಟಿ. ಎಂತಹ ಹೊಲಸು ರಾಕ್ಷಸನನ್ನು ಈ ಭೂಮಿಗೆ ತಂದಿದ್ದೀರಿ? ಈ ನಿರುದ್ಯೋಗಿ, ದಯಾನೀಯ ವ್ಯಕ್ತಿಗೆ ಇಲ್ಲಿ ಮಾತ್ರ ಮಾತನಾಡಲು ಧೈರ್ಯ ಇರುವುದು” ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಈ ನಟಿ.

Richa Chadha and Ali Fazal wedding, Richa Chadha slams netizen who asked about her divorce, Richa Chadha,  Ali Fazal, Twitter, ರಿಚಾ ಚಡ್ಡಾ, ಅಲಿ ಫಜಲ್, ಟ್ವಿಟ್ಟರ್
ನೆಟ್ಟಿಗ ಕೇಳಿದ ಪ್ರಶ್ನೆಗೆ ರಿಚಾ ಚಡ್ಡಾ ಟ್ವೀಟ್​  ಮೂಲಕ ಉತ್ತರ ಕೊಟ್ಟ ರಿಚಾ ಚಡ್ಡಾ


ಅಲಿ ಫಜಲ್​ ಮತ್ತು ರಿಚಾ ಚಡ್ಡಾ ಕಳೆದ ವರ್ಷವೇ ಮದುವೆ ಆಗಲು ನಿರ್ಧರಿಸಿದ್ದರು, ಆದರೆ ಅಲಿ ಅವರ ತಾಯಿ ಕೊನೆಯುಸಿರೆಳೆದರು. ಅದರಿಂದಾಗಿ ಅಲಿ ಹಾಗೂ ರಿಚಾ ತಮ್ಮ ಮದುವೆಯನ್ನು ಮುಂದೂಡಿದರು.

ಇದನ್ನೂ ಓದಿ: ಹಾಲಿವುಡ್​ ಸಿನಿಮಾ ನೋಡುತ್ತಲೇ ಪ್ರಪೋಸ್​ ಮಾಡಿದ್ದರಂತೆ ಈ ಬಾಲಿವುಡ್​ ನಟಿ..!

ಸಂದರ್ಶನ ಒಂದರಲ್ಲಿ ಅಲಿ ಫಜಲ್​ ಅವರನ್ನು ಹೊಗಳುತ್ತಾ, “ನಾವು ಸ್ಥಳಾಂತರಗೊಂಡ ಬಳಿಕ ಲಾಕ್‍ಡೌನ್ ಇತ್ತು. ನಾವು ಮನೆಯ ಕೆಲಸಗಳನ್ನು ನಮ್ಮ ನಡುವೆ ಹಂಚಿಕೊಂಡಿದ್ದೆವು. ನಾವು ವೃತ್ತಿಯ ವಿಷಯದಲ್ಲಿ ಒಬ್ಬರಿಗೊಬ್ಬರು ಖಂಡಿತಾ ಸ್ಪೇಸ್ ನೀಡುತ್ತೇವೆ. ಅವನು ನನಗೋಸ್ಕರ ಏನಾದರೂ ವಿಶೇಷ ಮಾಡಬೇಕು ಎಂದು ನನಗೆ ಅನಿಸುವುದಿಲ್ಲ. ಅವನ ದೈನಂದಿನ ಜೀವನವು ತುಂಬಾ ಹೋಲುತ್ತದೆ. ಅದು ಒಂದು ಸಮತಾವಾದಿ ಮನೆ. ಅದು ಹಳೆಯ ತಲೆಮಾರಿನಂತೆ ಅಲ್ಲ (ಮಹಿಳೆಯರು ಮನೆಯ ಎಲ್ಲ ಕೆಲಸಗಳನ್ನು ಮಾಡುವುದನ್ನು ನಿರೀಕ್ಷಿಸುವ ವ್ಯಕ್ತಿ ಅಲ್ಲ). ಅಲಿ ಫೈಜಲ್ ಚೆನ್ನಾಗಿ ಅಡುಗೆ ಮಾಡುತ್ತಾನೆ, ಮನೆಯನ್ನು ಚೆನ್ನಾಗಿ ಇಟ್ಟುಕೊಳ್ಳುತ್ತಾನೆ. ತನ್ನ ಬೆಕ್ಕಿಗೆ ಒಳ್ಳೆಯ ಪೋಷಕನಾಗಿದ್ದಾನೆ. ಈ ಎಲ್ಲ ವಿಷಯಗಳು ನನಗೆ ತುಂಬಾ ಮುಖ್ಯವಾಗುತ್ತವೆ” ಎಂದು ಹೇಳಿಕೊಂಡಿದ್ದಾರೆ.

ರಿಚಾ ತನ್ನ ಅಂತರ ಧರ್ಮೀಯ ಪ್ರೇಮ ಸಂಬಂಧದ ಕಾರಣದಿಂದಾಗಿ ಯಾವಾಗಲೂ ಟ್ರೋಲ್ ಆಗುತ್ತಿರುತ್ತಾರೆ. “ನನಗೆ ಅಲಿಫಜಲ್​ ಅವರ ಕುಟುಂಬದಿಂದ ಮತ್ತು ಅವನಿಗೆ ನನ್ನ ಕುಟುಂಬದಿಂದ ತುಂಬಾ ಪ್ರೀತಿ ಸಿಕ್ಕಿದೆ. ನನಗೆ, ಬೇರೆಯವರ ಮದುವೆಯ ಆಯ್ಕೆಯ ಬಗ್ಗೆ ಆಕ್ಷೇಪಣೆ ಹೊಂದಿರುವ ಪ್ರೀತಿ ಹೀನ ವ್ಯಕ್ತಿಗಳ ಬಗ್ಗೆ ಮರುಕವಾಗುತ್ತದೆ“ ಎಂದು ಈ ಹಿಂದೆ ಸಂದರ್ಶನ ಒಂದರಲ್ಲಿ ಹೇಳಿದ್ದರು.

ಇದನ್ನೂ ಓದಿ: Richa Chadha: ಮಧುರವಾದ ಕ್ಷಣಗಳನ್ನು ನೆನಪಿನ ಬುತ್ತಿಗೆ ತುಂಬಿಕೊಳ್ಳಲು ಈಜಿಪ್ಟ್​ಗೆ ಹೋದ ರಿಚಾ ಚಡ್ಡಾ-ಅಲಿ ಫಜಲ್​

ಅಲಿ ಫಜಲ್​ ಮತ್ತು ರಿಚಾ ಚಡ್ಡಾ,  2013 ರಲ್ಲಿ ಫುಕ್ರೆ ಎಂಬ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ರಿಚಾ ಕೊನೆಯದಾಗಿ ವೂಟ್‍ನ ಕ್ಯಾಂಡಿ ಎಂಬ ವೆಬ್‍ ಸೀರಿಸ್‍ನಲ್ಲಿ ಕಾಣಿಸಿಕೊಂಡಿದ್ದರು. ಅಲಿಯ ಕೈಯಲ್ಲಿ ಪ್ರಸ್ತುತ ಬಾಲಿವುಡ್ ಮತ್ತು ಹಾಲಿವುಡ್ ಪ್ರಾಜೆಕ್ಟ್‌ಗಳು ಇವೆ.
Published by:Anitha E
First published: