HOME » NEWS » Entertainment » RHEA CHAKRABORTY GETS TROLLED AFTER ASKING FOR CBI INQUIRY FROM HOME MINISTER AMIT SHAH IN SUSHANT SINGH CASE AE

Rhea Chakraborty: ಸುಶಾಂತ್​ ಸಿಂಗ್​ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಿ: ಗೃಹಸಚಿವ ಅಮಿತ್​ ಶಾಗೆ ರಿಯಾ ಚಕ್ರವರ್ತಿ ಮನವಿ

Rhea Chakraborty-Sushant: ರಿಯಾ ಚಕ್ರವರ್ತಿ ಇದು ಎರಡನೇ ಸಲ ಸುಶಾಂತ್​ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ತಮ್ಮನ್ನ ಸುಶಾಂತ್ ಅವರ ಪ್ರೇಯಸಿ ಎಂದೇ ಪರಿಚಯಿಸಿಕೊಂಡಿದ್ದಾರೆ. ನನಗೆ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಸುಶಾಂತ್​ ಅವರ ಪ್ರಕರಣದ ತನಿಖೆಯನ್ನು ದಯವಿಟ್ಟು ಸಿಬಿಐಗೆ ವಹಿಸಿ ಎಂದು ಕೈ ಮುಗಿದು ಕೇಳುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

Anitha E | news18-kannada
Updated:July 16, 2020, 8:21 PM IST
Rhea Chakraborty: ಸುಶಾಂತ್​ ಸಿಂಗ್​ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಿ: ಗೃಹಸಚಿವ ಅಮಿತ್​ ಶಾಗೆ ರಿಯಾ ಚಕ್ರವರ್ತಿ ಮನವಿ
ಸುಶಾಂತ್​ ಸಿಂಗ್​ ಹಾಗೂ ರಿಯಾ ಚಕ್ರವರ್ತಿ
  • Share this:
ಸುಶಾಂತ್​ ಸಿಂಗ್​ ರಜಪೂತ್ ಅಗಲಿ ತಿಂಗಳು ಕಳೆದ ನಂತರ ಅವರ ಗೆಳತಿ ರಿಯಾ ಚಕ್ರವರ್ತಿ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಮೊದಲ ಸಲ ಪೋಸ್ಟ್​ ಮಾಡಿದ್ದರು. ಇದಾದ ನಂತರ ಈಗ ಮತ್ತೆ ಸುಶಾಂತ್​ ಸಿಂಗ್ ಸಾವಿನ ತನಿಖೆಯನ್ನು ಸಿಬಿಐಗೆ ನೀಡುವಂತೆ ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ ರಿಯಾ.

ರಿಯಾ ಚಕ್ರವರ್ತಿ ಇದು ಎರಡನೇ ಸಲ ಸುಶಾಂತ್​ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ತಮ್ಮನ್ನು ಸುಶಾಂತ್ ಅವರ ಪ್ರೇಯಸಿ ಎಂದೇ ಪರಿಚಯಿಸಿಕೊಂಡಿದ್ದಾರೆ. ನನಗೆ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಸುಶಾಂತ್​ ಸಾವಿನ ಪ್ರಕರಣದ ತನಿಖೆಯನ್ನು ದಯವಿಟ್ಟು ಸಿಬಿಐಗೆ ವಹಿಸಿ ಎಂದು ಕೈ ಮುಗಿದು ಕೇಳುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.ಸುಶಾಂತ್​ ಈ ರೀತಿಯ ನಿರ್ಧಾರಕ್ಕೆ ಬರಲು ಕಾರಣ ಏನೆಂದು ನನಗೂ ತಿಳಿಯಬೇಕಿದೆ ಎಂದು  ಅಮಿತ್​ ಶಾ ಅವರಿಗೆ ಟ್ವೀಟ್ ಮಾಡಿದ್ದಾರೆ ರಿಯಾ. ಇನ್ನು ರಿಯಾ ಟ್ವೀಟ್​ ಮಾಡುತ್ತಿದ್ದಂತೆಯೇ ನೆಟ್ಟಿಗರು ಅವರನ್ನು ಟ್ರೋಲ್​ ಮಾಡಲು ಆರಂಭಿಸಿದ್ದಾರೆ. ಒಂದು ತಿಂಗಳವರೆಗೆ ಎಲ್ಲಿದ್ದಿರಿ. ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಿದ ಮೇಲೆ ಐಬಿಐ ತನಿಖೆಗೆ ಒತ್ತಾಯಿಸುತ್ತಿದ್ದೀರಾ ಎಂದು ಕಮೆಂಟ್​ ಮಾಡುತ್ತಿದ್ದಾರೆ ನೆಟ್ಟಿಗರು.

rhea chakraborty gets trolled after asking for cbi inquiry from home minister amit shah in sushant singh case
ರಿಯಾ ಅವರನ್ನು ಟ್ರೋಲ್​ ಮಾಡುತ್ತಿರುವ ನೆಟ್ಟಿಗರು


ಸುಶಾಂತ್​ ಅವರ ಸಾವಿನ ಸುದ್ದಿ ಬಹಿರಂಗವಾಗಿತ್ತಿದ್ದಂತೆಯೇ ಕರಣ್​ ಜೋಹರ್​, ಸಲ್ಮಾನ್​ ಖಾನ್, ಆಲಿಯಾ ಭಟ್​, ಸೋನಮ್​ ಕಪೂರ್​​ ಸೇರಿದಂತೆ ರಿಯಾ ಅವರನ್ನು ನೆಟ್ಟಿಗರು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಅದೇ ಸಮಯದಲ್ಲಿ ಮಹೇಶ್​ ಭಟ್​ ಜೊತೆ ರಿಯಾ ತೆಗೆಸಿಕೊಂಡಿದ್ದ ಫೋಟೋಗಳನ್ನೂ ಟ್ರೋಲ್​ ಮಾಡಲಾಗಿತ್ತು. ಇದಾವುದಕ್ಕೂ ರಿಯಾ ಪ್ರತಿಕ್ರಿಯಿಸಿರಲಿಲ್ಲ.


ಆದರೆ ಈಗ ರಿಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಹಾಗೂ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ. ಇದರ ವಿರುದ್ಧ ರಿಯಾ ಈಗ ತಿರುಗಿ ಬಿದ್ದಿದ್ದಾರೆ. ಸಾಲದಕ್ಕೆ ಇಂತಹ ಪೋಸ್ಟ್​ ಮಾಡುವವರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: Remo: ಬೆಂಗಳೂರಿಗರಿಗಾಗಿ ರೆಮೊ ಹಾಡಿರುವ ಸಖತ್ ಹಾಡು ಇಲ್ಲಿದೆ..!
Published by: Anitha E
First published: July 16, 2020, 8:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories