ಟ್ರೋಲ್​ ಆಗುತ್ತಿದೆ ಮಹೇಶ್​ ಭಟ್​ - ರಿಯಾ ಚಕ್ರವರ್ತಿ ಫೋಟೋ: ಸುಶಾಂತ್ ಜೊತೆಗಿನ ಚಿತ್ರಗಳನ್ನು ಡಿಲೀಟ್​ ಮಾಡಿದ ನಟಿ..!

Mahesh Bhatt And Rhea Chakraborty: ರಿಯಾ ಹಾಗೂ ಸುಶಾಂತ್ ಬಹಳ ಸಮಯದಿಂದ ಡೇಟ್​ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಅಲ್ಲದೆ ಇವರಿಬ್ಬರು ಜೊತೆಗೆ ಸುತ್ತಾಡಿದ ಹಲವಾರು ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಲ್ಲದೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು ಅನ್ನೋ ಸುದ್ದಿ ಸಹ ಬಿ-ಟೌನ್​ನಲ್ಲಿ ಓಡಾಡುತ್ತಿತ್ತು. ಆದರೆ ಸುಶಾಂತ್ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ರಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿದ್ದ ನಟನ ಫೋಟೋಗಳನ್ನು ಡಿಲೀಟ್​ ಮಾಡಿದ್ದಾರೆ.

ರಿಯಾ ಚಕ್ರವರ್ತಿ ಹಾಗೂ ಮಹೇಶ್​ ಭಟ್​

ರಿಯಾ ಚಕ್ರವರ್ತಿ ಹಾಗೂ ಮಹೇಶ್​ ಭಟ್​

  • Share this:
ಸುಶಾಂತ್​ ಹಾಗೂ ರಿಯಾ ಚಕ್ರವರ್ತಿ ಇಬ್ಬರು ಒಳ್ಳೆಯ ಸ್ನೇಹಿತರು. ಸುಶಾಂತ್ ನೇಣಿಗೆ ಶರಣಾಗುವ ಮುನ್ನ ರಿಯಾಗೆ ಕರೆ ಮಾಡಿದ್ದರು. ಆದರೆ ಅವರು ಅಂದು ಕರೆ ರಿಸೀವ್​ ಮಾಡಿರಲಿಲ್ಲ. ಇದೇ  ವಿಷಯವಾಗಿ ಇಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೀಗಿರುವಾಗಲೇ ರಿಯಾ ಹಾಗೂ ಮಹೇಶ್ ಭಟ್​ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ರಿಯಾ ಹಾಗೂ ಸುಶಾಂತ್ ಬಹಳ ಸಮಯದಿಂದ ಡೇಟ್​ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಅಲ್ಲದೆ ಇವರಿಬ್ಬರು ಜೊತೆಗೆ ಸುತ್ತಾಡಿದ ಹಲವಾರು ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಲ್ಲದೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು ಅನ್ನೋ ಸುದ್ದಿ ಸಹ ಬಿ-ಟೌನ್​ನಲ್ಲಿ ಓಡಾಡುತ್ತಿತ್ತು. ಆದರೆ ಸುಶಾಂತ್ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ರಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿದ್ದ ನಟನ ಫೋಟೋಗಳನ್ನು ಡಿಲೀಟ್​ ಮಾಡಿದ್ದಾರೆ.

#MaheshBhatt #RheaChakraborty I seriously find it very strange.Rhea Chakraborty and Mahesh Bhatt photo trolled in social media and actress deleted sushants photos from her Instagram
ಸುಶಾಂತ್ ಹಾಗೂ ರಿಯಾ ಚಕ್ರವರ್ತಿ


ರಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಸುಶಾಂತ್​ ಅವರ ಫೋಟೋಗಳನ್ನು ಡಿಲೀಟ್​ ಮಾಡಿದ್ದು ಏಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ದಿನವೇ ರಿಯಾ ಇನ್​ಸ್ಟಾಗ್ರಾಂನಲ್ಲಿ ತಮ್ಮ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಶೂಟಿಂಗ್​ ದಿನಗಳನ್ನು ಮಿಸ್​ ಮಾಡಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ. 
View this post on Instagram
 

I really miss shooting ! Ok bye 😡 #rheality


A post shared by Rhea Chakraborty (@rhea_chakraborty) on


ಅಲ್ಲದೆ ರಿಯಾ 'ಜಲೇಬಿ' ಸಿನಿಮಾ ಚಿತ್ರೀಕರಣದ ವೇಳೆ ಮಹೇಶ್​ ಭಟ್​ ಜೊತೆ ತೆಗೆಸಿಕೊಂಡಿದ್ದ ಫೋಟೋವನ್ನೂ ಡಿಲೀಟ್ ಮಾಡಿದ್ದಾರೆ. ಅಲ್ಲದೆ ರಿಯಾ ಹಾಗೂ ಸುಶಾಂತ್​ ನಡುವಿನ ಸಂಬಂಧ ಮಹೇಶ್​ ಭಟ್​ಗೆ ಇಷ್ಟವಿರಲಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.ತನ್ನ ಬುದ್ಧ ಎಂದು ರಿಯಾ ಮಹೇಶ್​ ಭಟ್​ ಜೊತೆ ತೆಗೆಸಿಕೊಂಡಿದ್ದ ಫೋಟೋವನ್ನು ಹಂಚಿಕೊಂಡಿದ್ದರು. ತಂದೆ ಮಗಳ ಸಂಬಂಧ ತೋರುವ ಚಿತ್ರ ಎಂದು ಹೇಳುತ್ತಿದ್ದ ರಿಯಾ, ಅದನ್ನು ಈಗ ಏಕೆ ಡಿಲೀಟ್​ ಮಾಡಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಸುಶಾಂತ್​ ಆತ್ಮಹತ್ಯೆಗೂ ಮಹೇಶ್ ಭಟ್​ ಹಾಗೂ ರಿಯಾ ಚಕ್ರವರ್ತಿಗೂ ಸಂಬಂಧವಿದೆ. ಈ ಕುರಿತಾಗಿ ತನಿಖೆ ನಡೆಯಬೇಕು ಎಂದೂ ಆಗ್ರಹಿಸುತ್ತಿದ್ದಾರೆ.

Nithya Menen: ನಾವು ಚೆನ್ನಾಗಿದ್ದರೆ ಮಾತ್ರ ಬೇರೆಯವರಿಗೆ ನೆರವಾಗಬಹುದು ಎಂದ ನಿತ್ಯಾ ಮೆನನ್​..!


 

 

ಇದನ್ನೂ ಓದಿ: ತನ್ನ ನೃತ್ಯ ಪ್ರದರ್ಶನದಲ್ಲಿ ಸಹ ನೃತ್ಯಗಾರನಾಗಿದ್ದ ಸುಶಾಂತ್​ ಅಗಲಿಕೆಗೆ ಕಂಬನಿ ಮಿಡಿದ ಐಶ್ವಯಾ ರೈ..!

 

 
First published: