Star Divorces: ಧನುಷ್, ಐಶ್ವರ್ಯಾ ವಿಚ್ಛೇದನದ ಬಳಿಕ ಯುವಜನತೆಗೆ Warning ಕೊಟ್ಟ RGV...!

ತಾರೆಯರ ವಿಚ್ಛೇದನಗಳು ಮದುವೆಯ ಅಪಾಯಗಳ ಬಗ್ಗೆ ಯುವಜನರನ್ನು ಎಚ್ಚರಿಸಲು ಉತ್ತಮ ಟ್ರೆಂಡ್ ಸೆಟ್ಟರ್‌ಗಳಾಗಿವೆ ಎಂದು ಮೊದಲ ಟ್ವೀಟ್‌ನಲ್ಲಿ RGV ಹೇಳಿದ್ದಾರೆ

ರಾಮ್ ಗೋಪಾಲ್ ವರ್ಮಾ

ರಾಮ್ ಗೋಪಾಲ್ ವರ್ಮಾ

  • Share this:
ಟಾಲಿವುಡ್‌ನಲ್ಲಿ(Tollywood) ಸ್ಟಾರ್ ದಂಪತಿ ಸಮಂತ ರುತ್ ಪ್ರಭು(Samantha Ruth Prabhu) ಹಾಗೂ ನಾಗಚೈತನ್ಯ (Nagachaitanya) ನಡುವಿನ ವಿಚ್ಛೇದನದ ಸುದ್ದಿ ಇನ್ನು ಎಲ್ಲೆಡೆ ಹಸಿಹಸಿಯಾಗಿಯೇ ಇದೆ. ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಅಭಿಮಾನಿಗಳಿಗೆ ವಿಚ್ಚೇದನ (Divorce) ತೆಗೆದುಕೊಳ್ಳುತ್ತಿರುವ ಬಗ್ಗೆ ಕಾರಣ ನೀಡುತ್ತಿದ್ದಾರೆ. ಇದು ನಮ್ಮಿಬ್ಬರ ಉತ್ತಮ ನಿರ್ಧಾರ ಎಂಬ ಅಭಿಪ್ರಾಯಕ್ಕೆ ಇಬ್ಬರು ಬಂದಿದ್ದು, ಅವರಿಬ್ಬರು ಅವರವರ ಸಿನಿಮಾ ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಆಗಿದ್ದಾರೆ. ನಾಗ ಚೈತನ್ಯ ಬಂಗಾರರಾಜು ಸಿನಿಮಾದ ಬಿಡುಗಡೆಯ ಖುಷಿಯಲ್ಲಿದ್ದರೆ, ಇನ್ನು ಸಮಂತಾ ಬೇರೆ ಬೇರೆ ಪ್ರಾಜೆಕ್ಟ್‌ಗಳ ಜೊತೆ ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಕುಣಿದು ಪ್ರೇಕ್ಷಕರನ್ನು (Audience) ಹುಚ್ಚೆಬ್ಬಿಸಿದ್ದಾರೆ.

ಟ್ವಿಟರ್‌ನಲ್ಲಿ ವಿಚ್ಛೇದನದ ಸದ್ದು
ಇದೀಗ ಇವರಿಬ್ಬರಾದ ನಂತರ ವಿಚ್ಛೇದನದ ಹೆಸರಿನ ಸಾಲಿನಲ್ಲಿ ಟಾಲಿವುಡ್‌ನ ಮತ್ತೊಬ್ಬ ಸೂಪರ್ ಸ್ಟಾರ್ ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ. 18 ವರ್ಷಗಳ ಜೊತೆಯಾದ ಜೀವನವನ್ನು ಇನ್ನು ಮುಂದೆ ವೈಯಕ್ತಿಕವಾಗಿ ಕಳೆಯಲು ನಿರ್ಧರಿಸಿದ್ದಾರೆ. ಇವರಿಬ್ಬರು ಟ್ವಿಟ್ ಮೂಲಕ ವಿಚ್ಛೇದನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಕಳೆದ ರಾತ್ರಿ, ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು ಬೇರೆಯಾಗುತ್ತಿರುವುದನ್ನು ಘೋಷಿಸಿದರು. ನಟ ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದು, “18 ವರ್ಷಗಳ ಕಾಲ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಮತ್ತು ಹಿತೈಷಿಗಳಾಗಿ ಪರಸ್ಪರ ನಮ್ಮಿಬ್ಬರ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯ ಮೇಲೆ ಮದುವೆಯ ಜೀವನ ಸಾಗಿತ್ತು. ನಮ್ಮ ಪರಸ್ಪರ ಮಾರ್ಗಗಳು ಪ್ರತ್ಯೇಕವಾಗಿರುವ ಸ್ಥಳದಲ್ಲಿ ನಾವಿಂದು ನಿಂತಿದ್ದೇವೆ.

ಇದನ್ನೂ ಓದಿ: Dhanush Divorce: ಆ ಸ್ಟಾರ್​ ನಟಿಯಿಂದಲೇ ಧನುಷ್​ ದಾಂಪತ್ಯದಲ್ಲಿ ಬಿರುಕು​? ನಿಜಕ್ಕೂ ಅಂದು ಸಿನಿಮಾದ ಶೂಟಿಂಗ್​ ವೇಳೆ ಏನಾಗಿತ್ತು?

ಇದೀಗ ಐಶ್ವರ್ಯ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಮತ್ತು ಉತ್ತಮ ವ್ಯಕ್ತಿಗಳಾಗಿ ನಮ್ಮನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಅಗತ್ಯವಿರುವ ಗೌಪ್ಯತೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಐಶ್ವರ್ಯಾ ರಜನಿಕಾಂತ್ ಕೂಡ ಟ್ವೀಟ್ ಮಾಡಿ, ಶೀರ್ಷಿಕೆಯ ಅಗತ್ಯವಿಲ್ಲ, ಕೇವಲ ಅರ್ಥಮಾಡಿಕೊಳ್ಳುವ ಮನಸ್ಸು ಮತ್ತು ಪ್ರೀತಿಸುವ ಹೃದಯಗಳು ಬೇಕಾಗಿವೆ ಎಂದು ಹೇಳಿದ್ದಾರೆ.

ಟ್ರೆಂಡ್ ಸೆಟ್ಟರ್‌
ಈ ಸಂಬಂಧ ಮದುವೆ ಮತ್ತು ಸ್ಟಾರ್ ವಿಚ್ಛೇದನದ ಬಗ್ಗೆ ಮಾತನಾಡಿ ಸರಣಿ ಟ್ವೀಟ್‌ಗಳನ್ನು ಹಂಚಿಕೊಂಡಿರುವ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು, ತಾರೆಯರ ವಿಚ್ಛೇದನಗಳು ಮದುವೆಯ ಅಪಾಯಗಳ ಬಗ್ಗೆ ಯುವಜನರನ್ನು ಎಚ್ಚರಿಸಲು ಉತ್ತಮ ಟ್ರೆಂಡ್ ಸೆಟ್ಟರ್‌ಗಳಾಗಿವೆ ಎಂದು ಮೊದಲ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿ, ಮದುವೆಯಾಗುವುದಕ್ಕಿಂತ ಮತ್ತೊಂದು ವೇಗವಾದ ಕೊಲೆ ಯತ್ನ ಬೇರೆ ಯಾವುದು ಇಲ್ಲ. ಪ್ರೀತಿ ಉಳಿಯುವವರೆಗೆ ಎಷ್ಟು ಮಟ್ಟಿಗೆ ಸಾಧ್ಯವೋ ಅಷ್ಟು ಪ್ರೀತಿಸುವುದು ಸಂತೋಷದ ರಹಸ್ಯ. ನಂತರ ಮದುವೆ ಎಂಬ ಜೈಲು ಸೇರುವ ಬದಲು ಅಲ್ಲಿಂದ ಮುಂದೆ ಸಾಗುವುದು. ಮದುವೆ ಮೇಲಿನ ಪ್ರೀತಿ ಕೇವಲ 3 ರಿಂದ 5 ದಿನಗಳು ಮಾತ್ರ ಉಳಿಯುತ್ತದೆ ಎಂದಿದ್ದಾರೆ.

ಅತ್ಯಂತ ಕೆಟ್ಟ ಪದ್ಧತಿ
ಮತ್ತೊಂದು ಟ್ವೀಟಿನಲ್ಲಿ ಬುದ್ಧಿವಂತ ಜನರು ಪ್ರೀತಿಸುತ್ತಾರೆ ಮತ್ತು ಮೂರ್ಖರು ಮದುವೆಯಾಗುತ್ತಾರೆ. ಕೇವಲ ವಿಚ್ಛೇದನವನ್ನು ಸಂಗೀತದೊಂದಿಗೆ ಆಚರಿಸಬೇಕು. ಏಕೆಂದರೆ ವಿಮೋಚನೆ ಪಡೆಯಬೇಕು ಮತ್ತು ಪರಸ್ಪರರ ಅಪಾಯದ ಗುಣಗಳನ್ನು ಪರೀಕ್ಷಿಸುವ ಪ್ರಕ್ರಿಯೆಯಾಗಬೇಕು. ಅತೃಪ್ತಿ ಮತ್ತು ದುಃಖದ ನಿರಂತರ ಚಕ್ರವನ್ನು ಪ್ರಚುರಪಡಿಸುವಲ್ಲಿ ನಮ್ಮ ಪೂರ್ವಜರು ಸಮಾಜದ ಮೇಲೆ ಹೇರಿದ ಅತ್ಯಂತ ಕೆಟ್ಟ ಪದ್ಧತಿ ಮದುವೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Naga Chaitanya: ಸಮಂತಾ ಖುಷಿಯಾಗಿದ್ರೆ.. ನಂಗೂ ಖುಷಿ.. ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಾಗಚೈತನ್ಯ!

ರಾಮ್ ಗೋಪಾಲ್ ವರ್ಮಾ ನೇರ ದಿಟ್ಟ ನುಡಿ ಹಾಗೂ ವರ್ತನೆಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಮದುವೆ, ಸಂಬಂಧ, ಪ್ರೀತಿಯ ಬಗ್ಗೆ ಕೊಂಚ ಖಾರವಾಗಿಯೇ ಮಾತನಾಡುತ್ತಾ ಸಿನಿಮಾ ಮೂಲಕ ಜನರ ಮುಂದೆ ತರುವ ಪ್ರಯತ್ನ ಮಾಡುತ್ತಾರೆ.
Published by:vanithasanjevani vanithasanjevani
First published: