Silk Smitha: ಆ ಸ್ಟಾರ್ ನಟನಿಂದ ಸಿಲ್ಕ್ ಸ್ಮಿತಾ ಬದುಕು ಹಾಳಾಯ್ತಾ? ಆಕೆ ಸಾಯುವ ದಿನ ನಿಜಕ್ಕೂ ಆಗಿದ್ದೇನು?

ಒಂದಾನೊಂದು ಕಾಲದಲ್ಲಿ ಇಡೀ ಚಿತ್ರರಂಗವನ್ನೇ ಆವರಿಸಿಕೊಂಡಿದ್ದ ಸಿಲ್ಕ್​ ಸ್ಮೀತಾ ಕೊನೆಯ ದಿನಗಳಲ್ಲಿ ಪಡಬಾರದ ಕಷ್ಟು ಪಟ್ಟು ಜೀವ ಬಿಟ್ಟರು. ತಮ್ಮ ಸಿನಿಮಾದಲ್ಲಿ ಸಿಲ್ಕ್​ ಸ್ಮೀತಾ ಸಾಂಗ್​ ಇದ್ದರೆ ಸಿನಿಮಾ ಹಿಟ್ ಆಗುತ್ತೆ ಅಂತ  ನಿರ್ಮಾಪಕರು ಡಿಸೈಡ್ ಮಾಡಿಕೊಂಡಿದ್ದರು.

ಸಿಲ್ಕ್​ ಸ್ಮಿತಾ

ಸಿಲ್ಕ್​ ಸ್ಮಿತಾ

  • Share this:
ಸಿನಿಮಾ ದುನಿಯಾ ಅಂದ್ರೆ ಮಾಯಾ ಪ್ರಪಂಚ (Magic World) . ಅದೆಷ್ಟೋ ನಟ ನಟಿಯರಿಗೆ ಸ್ಟಾರ್ (Star)​ ಪಟ್ಟ ತಂದುಕೊಟ್ಟಿದ್ದು ಈ ತಾರಾ ಪ್ರಪಂಚ. ಇಂಥ ಪ್ರಪಂಚದಲ್ಲಿ ಅದೆಷ್ಟೋ ನಟ ನಟಿಯರು ತಮ್ಮದೆ ನಟನಾ ಕಲೆ ಮೂಲಕ ಅಭಿಮಾನಿಗಳ ಹೃದಯ ಗೆದ್ದವರಲ್ಲಿ ದಕ್ಷಿಣ ಭಾರತದ ಮಾಧಕ ನಟಿ ಎಂದೆ ತನ್ನನ್ನು ತಾ ಗುರುತಿಸಿಕೊಂಡವರು ನಟಿ ಸಿಲ್ಕ್​ ಸ್ಮೀತಾ (Silk Smitha). ಒಂದಾನೊಂದು ಕಾಲದಲ್ಲಿ ಇಡೀ ಚಿತ್ರರಂಗವನ್ನೇ ಆವರಿಸಿಕೊಂಡಿದ್ದ ಸಿಲ್ಕ್​ ಸ್ಮೀತಾ ಕೊನೆಯ ದಿನ (Silk Smitha Last Days) ಗಳಲ್ಲಿ ಪಡಬಾರದ ಕಷ್ಟು ಪಟ್ಟು ಜೀವ ಬಿಟ್ಟರು. ತಮ್ಮ ಸಿನಿಮಾದಲ್ಲಿ ಸಿಲ್ಕ್​ ಸ್ಮೀತಾ ಸಾಂಗ್ (Silk Smitha Songs)​ ಇದ್ದರೆ ಸಿನಿಮಾ ಹಿಟ್ ಆಗುತ್ತೆ ಅಂತ  ನಿರ್ಮಾಪಕರು (Producers) ಡಿಸೈಡ್ ಮಾಡಿಕೊಂಡಿದ್ದರು. ಹೀಗಿದ್ದ ಸಿಲ್ಕ್​ ಸ್ಮಿತಾ ಸೂಸೈಡ್ (Silk Smitha Suicide)​ ಮಾಡಿಕೊಂಡಿದ್ದರು. ಅವರ ಶವ ಫ್ಯಾನ್​​ನಲ್ಲಿ ನೇತಾಡುತ್ತಿತ್ತು. ಸಾಕಷ್ಟು ದುಡ್ಡು ಮಾಡಿದ್ದ ಸಿಲ್ಕ್​ ಸ್ಮಿತಾ ಅಲಿಯಾಸ್​ ವಿಜಯಲಕ್ಷ್ಮಿ ನೇಣಿಗೆ ಶರಣಾಗಿದ್ದೇಕೆ. ಚಿಕ್ಕವಯಸ್ಸಿಗೆ ಸೂಸೈಡ್​ ಮಾಡಿಕೊಳ್ಳುವಂಥದ್ದು ಏನಾಗಿತ್ತು? ಇಲ್ಲಿದೆ ನೋಡಿ.

ದಂತದ ಮೈಕಟ್ಟು ಬಟ್ಟಲು ಕಣ್ಗಳ ಕೃಷ್ಣ ಸುಂದರಿ!

ದಂತದ ಮೈಕಟ್ಟು ಬಟ್ಟಲು ಕಣ್ಗಳ ಈ ಕೃಷ್ಣ ಸುಂದರಿಯ ಅಂದ ಕಣ್ಣ್ ತುಂಬಿಕೊಳ್ಳಲು ಥಿಯೇಟರ್​​ಗೆ ಬರುತ್ತಿದ್ದರು.  ಕ್ಯಾಬ್ರೆ ಡ್ಯಾನ್ಸ್ರ್ ಆದ್ರು ಇಕೆಯ ಅಭಿಮಾನಿಗಳ ಬಳಗಕ್ಕೆನು ಕಡಿಮೆ ಇರಲಿಲ್ಲ ಅದುವೆ ಇಕೆಯ ನಟನಾ ಕಲೆಗೆ‌ ಸಾಕ್ಷಿ ಈ ಪಡ್ಡೆ ಯುವಕರ ಮನಗೆದ್ದ ಸ್ಮೀತಾ ಜನಿಸಿದ್ದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಎಲ್ಲೂರಿನಲ್ಲಿ 1960 ರ ಡಿಸೆಂಬರ್ 2ರಂದು ಸರಸಮ್ಮ ಮತ್ತು ರಾಮುಲುಗೆ ಮಗಳಾಗಿ ಜನಿಸಿದರು. ಇವರು ಮೂಲ ವಿಜಯಲಕ್ಷ್ಮಿ ವಾಟ್ಲಪಟ್ಲಾ. ಬೆಳೆಯುತ್ತಾ ಬೆಳೆಯುತ್ತಾ ಆಕೆಯ ಸೌಂದರ್ಯಕ್ಕೆ ಮಾರುಹೋಗುತ್ತಿದ್ದರು. ಬಡತನದಿಂದ ವಿದ್ಯಾಭ್ಯಾಸ ಕೂಡ ಎಸ್​ಎಸ್​​ಎಲ್​ಸಿಗೆ ಮುಗಿದಿತ್ತು.

16ನೇ ವಯಸ್ಸಿಗೆ ಮದುವೆಯಾದ ಸಿಲ್ಕ್ ಸ್ಮಿತಾ

ಕಪ್ಪು ಬಣ್ಣ ಇವಳದಾದ್ರು ಇವಳ ಅಂದ ಚಂದ ಮೈಮಾಟಕ್ಕೆ ಮಾರುಹೋಗದವರಿಲ್ಲ. ಬಡತನದ ಜೊತೆಗೆ ಚಿಕ್ಕವಯಸ್ಸಿನಲ್ಲಿ ಬಾಲ್ಯ ವಿವಾಹಕ್ಕೆ ಒಳಗಾದ ಈಕೆಗೆ ಕಷ್ಟಗಳ ಸುರಿಮಳೆಎದುರಾಗಿತ್ತು . ಮದುವೆ ನಂತರ ಮನೆಯವರ ಕಿರುಕುಳಕ್ಕಾಗಿ ಮನೆ ತೊರೆದು ಊರು ಬಿಟ್ಟು ಚೆನ್ನೈನತ್ತ ಹೋಗಿದ್ದರು ಸಿಲ್ಕ್​ ಸ್ಮಿತಾ. ಸಿನಿಮಾದ ಹುಚ್ಚು ಸಿಲ್ಕ್​ ಸ್ಮಿತಾಗೆ ಮೊದಲಿನಿಂದಲೂ ಇತ್ತು. ದಿನ ಪೂರ್ತಿ ರೆಡಿಯೋ ಕೇಳುತ್ತಾ ಮುಳುಗಿಹೋಗುತ್ತಿದ್ದರು. ಇದನ್ನು ಗಂಡನ ಮನೆಯವರಿಗೆ ಸಹಿಸಲು ಆಗಲಿಲ್ಲ. ಈಕೆ ಮೇಲೆ ಅನುಮಾನ. ಪ್ರತಿದಿನ ಗಂಡ ಕುಡಿದು ಬಂದು ಸಿಲ್ಕ್​ ಸ್ಮಿತಾ ಮೇಲೆ ಹಲ್ಲೆ ಮಾಡುತ್ತಿದ್ದರಂತೆ.

ರಾತ್ರೋರಾತ್ರಿ ಗಂಡನ ಮನೆ ಬಿಟ್ಟು ಚೆನ್ನೈ ಸೇರಿದ್ದ ಸಿಲ್ಕ್​!

ಪ್ರತಿ ಹಂತದಲ್ಲೂ ಸಿಲ್ಕ್​ ಸ್ಮಿತಾ ಸೌಂದರ್ಯವೇ ಆಕೆಗೆ ಮುಳುವಾಗಿತ್ತು. ಗಂಡನ ಮನೆ ಬಿಟ್ಟು ಗೊತ್ತು ಗುರಿ ಇಲ್ಲದ ಚೆನ್ನೈಗೆ ಬಂದಿದ್ದರು ಸಿಲ್ಕ್​. ಇಲ್ಲಿ ವಿಧವೆಯೊಬ್ಬಳು ಸಿಲ್ಕ್​ ಸ್ಮಿತಾಗೆ ಆಶ್ರಯ ನೀಡಿದ್ದರು. ಆಕೆಯ ಹೋಟೆಲ್​ನಲ್ಲೇ ಕೆಲಸ ಮಾಡಿಕೊಂಡಿದ್ದರು ಸಿಲ್ಕ್​. ಆದರೆ ಸಿನಿಮಾ ಮೇಲಿರುವ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ. ಅವಕಾಶಕ್ಕಾಗಿ ಅಲೆದಾಡುತ್ತಿದ್ದರು. ಹೋದಕಡೆಯಲ್ಲೆಲ್ಲಾ ಈಕೆಯ ಸೌಂದರ್ಯಕ್ಕೆ ಮರುಳಾಗುತ್ತಿದ್ದರು. ಎಲ್ಲರಿಗೂ ಈಕೆಯ ದೇಹದ ಮೇಲೆ ವ್ಯಾಮೋಹ ಮೂಡುತ್ತಿತ್ತು.

ಇದನ್ನೂ ಓದಿ: ಇವ್ನ ಮುಸುಡಿ ನೋಡಿ ಹೀರೋ ಆಗ್ತಾನಾ! ಅವಮಾನ ಮಾಡಿದವ್ರ ಮುಂದೆಯೇ ಗೆದ್ದು ಬೀಗಿದ್ದ ನಟ ರಘುವೀರ್​

ಟಚ್​ಅಪ್​ ವುಮೆನ್​ ಆಗಿದ್ದ ಸಿಲ್ಕ್​ ಸ್ಮಿತಾ!

ತಾನೂ ಮೇಕಪ್ ತೊಟ್ಟು ಸ್ಟಾರ್​ ಆಗಬೇಕೆಂದು ಅಂದುಕೊಂಡಿದ್ದ ಸಿಲ್ಕ್​ ಸ್ಮಿತಾ ಮತ್ತೊಬ್ಬರಿಗೆ ಮೇಕಪ್​ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದರು. ಬೆಳಿಗ್ಗೆ ಶೂಟಿಂಗ್​ ಇದ್ದಾಗೆಲ್ಲ ಮೇಕಪ್​ ಕೆಲಸ. ರಾತ್ರಿಯಾದರೆ ಅಸಿಸ್ಟೆಂಟ್​ ಡೈರೆಕ್ಟರ್​​, ನಿರ್ದೇಶಕರ ಜೊತೆ ಮಂಚ ಹಂಚಿಕೊಳ್ಳಬೇಕಿತ್ತು. ರಾತ್ರಿಯೆಲ್ಲ ಈಕೆ ಜೊತೆ ಇರುತ್ತಿದ್ದ ನಿರ್ದೇಶಕರು ಬೆಳಗ್ಗೆ ಆಗುತ್ತಿದ್ದಂತೆ ಈಕೆ ಮುಖ ಕೂಡ ನೋಡುತ್ತಿರಲಿಲ್ಲವಂತೆ.

ಒಂಡಿ ಚಕ್ರನ್​ ಸಿನಿಮಾದ ಮೂಲಕ ಎಂಟ್ರಿ!

ಟಚಪ್ ಲೇಡಿ ಮೇಕಪ್ ಆರ್ಟಿಸ್ಟ್ ಆಗಿ ಸಿನಿಮಾ ಇಂಡಸ್ಟ್ರಿಗೆ ಪಾದ ಇಟ್ಟಿದ್ದ ಸ್ಮಿತಾಳನ್ನು ಗುರುತಿಸಿದ್ದು ಎವಿಎಂ ಸ್ಟುಡಿಯೋದ ಪ್ರಸಿದ್ಧ ನಿರ್ದೇಶಕ ವಿನು ಚಕ್ರವರ್ತಿ. ಆಕೆಯ ಹಾವಭಾವ ನಡೆ ನುಡಿ ಗಮನಿಸಿ ಆಕೆಯನ್ನು ಈ ಲೋಕಕ್ಕೆ ಕರೆತಂದರು. ಈ ಸ್ಮಿತಾಳ ಮೂಲ ಹೆಸರು ವಿಜಯಲಕ್ಷ್ಮಿ ವಾಡ್ಲಾ ಪಟ್ಲ ನಂತರ ಸ್ಮಿತಾ ಎಂದು ಬದಲಾಗಿತ್ತು. ಈ ಸಿನಿಮಾದಲ್ಲಿ ಅವರು ಸಾರಾಯಿ ಅಂಗಡಿ ಮಾಲೀಕಳಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಈಕೆಯ ರೇಂಜ್​ ಚೇಂಜ್​ ಆಗಿತ್ತು. ಎಲ್ಲರೂ ಈಕೆಯನ್ನು ಸೆಕ್ಸ್​ ಬಾಂಬ್​ ಎಂದು ಕರೆಯಲು ಶುರು ಮಾಡಿದ್ದರು.

ಸಿಲ್ಕ್​ ಸ್ಮಿತಾ


ಸ್ಟಾರ್​ ನಟರ ಜೊತೆ ನಟಿಸಿದ್ದ ಸಿಲ್ಕ್​ ಸ್ಮಿತಾ!

ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಪ್ರತಿಯೊಂದು ಭಾಷೆಯಲ್ಲೂ ಮಿಂಚಲು ಶುರು ಮಾಡಿದ್ದರು ಸಿಲ್ಕ್​ ಸ್ಮಿತ್​. ಈಕೆ ನಟಿಸಿದ್ದ ಬಹುತೇಕ ಸಿನಿಮಾಗಳು ಈಕೆಗೆ ಹೆಸರು ತಂದುಕೊಟ್ಟಿತ್ತು. ಚಿಕ್ಕ ಚಿಕ್ಕ ರೋಲ್​ಗಳಿಗೆ ತೃಪ್ತಿ ಪಟ್ಟುಕೊಳ್ಳದ ಸಿಲ್ಕ್​, ರಜನಿಕಾಂತ್​, ಕಮಲ್​ ಹಾಸನ್​, ಮೋಹನ್​ ಲಾಲ್​ ಜೊತೆ ನಟಿಸಿದ್ದರು.ಇದಾದ ಬಳಿಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿಯಾಗಿದ್ದರು. ಗೆದ್ದ ಮಗ, ಪ್ರಚಂಡ ಕುಳ್ಳ, ಹಳ್ಳಿಮೇಷ್ಟ್ರು, ಅಳಿಮಯ್ಯ, ಚಿನ್ನ, ಲಾಕಪ್​ ಡೆತ್​ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿಲ್ಕ್​ ಸ್ಮಿತಾ


ಇದನ್ನೂ ಓದಿ: ಆರತಿ ಪುಟ್ಟಣ್ಣ ಕಣಗಾಲ್​ಗೆ ಕೈಕೊಟ್ಟಿದ್ದು ಮಂತ್ರಿಯೊಬ್ಬರನ್ನು ಮದುವೆಯಾಗೋಕಾ? ಪುಟ್ಟಣ್ಣ ಸಾವಿಗೆ ಇದೇ ಕಾರಣವಾ?

ಹಂತ ಹಂತವಾಗಿ ಸಿಲ್ಕ್​ ಸ್ಮಿತಾ ಬೆಳೆಯುತ್ತಾ ಹೋಗುತ್ತಾರೆ. ಆ ಕಾಲದಲ್ಲೇ ಒಂದು ಸಿನಿಮಾಗೆ 50 ಸಾವಿರ ಸಂಭಾವನೆ ಪಡೆಯುತ್ತಿದ್ದರಂತೆ. ದುಡ್ಡು ಹೆಚ್ಚಾದಗ ಈಕೆಯ ಸಹವಾಸ ಕೂಡ ಹೆಚ್ಚಾಗುತ್ತೆ. ಸ್ಟಾರ್​ ನಟರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಾರೆ. ಸೂಪರ್​ ಸ್ಟಾರ್​ ಆಗಿದ್ದ ಕೃಷ್ಣ ಅವರ ಜೊತೆ ಸಿಲ್ಕ್​ ಸ್ಮಿತಾ ಸಂಬಂಧ ಇತ್ತು. ಇನ್ನೂ ಕೆಲವರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು ಸಿಲ್ಕ್​ ಸ್ಮಿತಾ. ಈಕೆಗೆ ಮನಸ್ಸಿನಲ್ಲಿ ಒಂದು ವಿಚಾರ ಕಾಡುತ್ತಿತ್ತು. ಎಲ್ಲರೂ ತನ್ನ ದೇಹಕ್ಕೆ ಆಸೆ ಪಡುತ್ತಾರೆ. ಆದರೆ, ಮನಸ್ಸಿನಲ್ಲಿ ಏನಿದೆ ಎಂದು ಯಾರು ತಿಳಿದುಕೊಳ್ಳುತ್ತಿಲ್ಲ ಎಂದು ಕೊರಗುತ್ತಿದ್ದರು.

ಸಿಲ್ಕ್​ ಸ್ಮಿತಾ


ಅವಕಾಶ ಕಡಿಮೆಯಾಗಿತ್ತು

ನೇರ ನಿಖರ ನುಡಿಯ ನಟಿ ಸಮಯ ಮತ್ತು ತನ್ನ ಕೆಲಸದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದರು. 1994ರ ಬಳಿಕ ಈಕೆಗೆ ಅವಕಾಶಗಳ ಸಿಕ್ಕಿದ್ದು ಬೆರಳಿಕೆಯಷ್ಟು. ಈಕೆಗೆ ಸ್ಪರ್ಧೆ ನೀಡುವಂತ ನಟಿಮಣಿಯರು ಬಂದಿದ್ದರು. ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿ ಸುಟ್ಟುಕೊಂಡಿದ್ದರು. ಇದೇ ವೇಳೆ ಸೂಪರ್​ ಸ್ಟಾರ್​ ನಟನ ಜೊತೆ ಲವ್​ನಲ್ಲಿ ಬಿದ್ದಿದ್ದರು. ಅದೂ ಕೂಡ ಹೆಚ್ಚು ದಿನ ಇರಲಿಲ್ಲ.

ಸಿಲ್ಕ್​ ಸ್ಮಿತಾ


ಸಿಲ್ಕ್ ಸ್ಮಿತಾಳ ಸಾ’ವು ಇಂದಿಗೂ ನಿಗೂಢ!




1995 ರಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸ್ಮಿತಾ ಮದ್ಯವ್ಯಸನಕ್ಕೆ ತಮ್ಮನ ಆಹ್ವಾನಿಸಿಕೊಂಡು ಬಿಟ್ಟಿದ್ದರು. ಸ್ಮಿತಾಳ ಗೆಳತಿ ಅನುರಾಧ ಹಾಗೂ ರವಿಚಂದ್ರನ್ ಜೊತೆ ಇವರ ಮಾತು ಕೊನೆಯದಾಗಿತ್ತು. ಅನುರಾಧ ಸ್ಮಿತಾಳನ್ನು ಭೇಟಿಯಾಗುವ ಮೊದಲೇ ಸ್ಮಿತಾ ಅದಾಗಲೇ ಈ ಲೋಕಕ್ಕೆ ಗುಡ್ ಬೈ ಹೇಳಿದ್ರು.

ಸಿಲ್ಕ್​ ಸ್ಮಿತಾ ಡೆತ್​ ನೋಟ್​


ಚೆನ್ನೈನ ಅವ್ರ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿರುವ ಇವರ ಶವ ಅನೇಕ ನಿಗೂಢತೆಗಳಿಗೆ ಕಾರಣವಾಗಿತ್ತು. ಇನ್ನೂ ಈಕೆಯ ಸಾವಿನ ರಹಸ್ಯ ಏನು ಎಂದು ಯಾರಿಗೂ ಗೊತ್ತಿಲ್ಲ. ಈಕೆಗೆ ಮೋಸ ಮಾಡಿದ ಆ ಸೂಪರ್​ ಸ್ಟಾರ್​​ ಯಾರು ಅಂತ ಇಂದಿನವರೆಗೂ ಗೊತ್ತಿಲ್ಲ.ಹಲವು ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಸಿ ಮಿಂಚಿ ಮರೆಯಾದ ಸಿಲ್ಕ್ ಸ್ಮಿತಾಳ ಸಾವು ಇಂದಿಗೂ ನಿಗೂಢ.


Published by:Vasudeva M
First published: