Samantha Nagachaitanya Divorce: ಮನೆ ಬಿಟ್ಟು ಹೊರಬಂದ ನಟ ನಾಗಚೈತನ್ಯ, ಮುಂಬೈಗೆ ಹಾರಲು ಸಮಂತಾ ಪ್ಲ್ಯಾನ್!

Samantha Shifting to Mumbai: ಇವರಿಬ್ಬರ ನಡುವೆ ಇರುವ ಮನಸ್ತಾಪವನ್ನು ಸರಿಪಡಿಸಲು ಎರಡು ಕುಟುಂಬಸ್ಥರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಯಾರು ಏನೇ ಹೇಳಿದರೂ ಸಮಂತ ಹಾಗೂ ನಾಗಚೈತನ್ಯ ಒಟ್ಟಿಗೆ ಇರಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ನಾಗಚೈತನ್ಯ ತಮ್ಮ ತಂದೆ ಮನೆಯನ್ನು ಸೇರಿಕೊಂಡಿದ್ದಾರೆ. ಅತ್ತ ಸಮಂತಾ ತಮ್ಮ ಕೆರಿಯರ್ ಗಾಗಿ ಮುಂಬೈ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಮಂತಾ-ನಾಗಚೈತನ್ಯ

ಸಮಂತಾ-ನಾಗಚೈತನ್ಯ

  • Share this:
    Divorce of Samantha and Nagachaitanya: ಟಾಲಿವುಡ್ ನ ಕ್ಯೂಟ್ ಕಪಲ್ಸ್, ನಟ ನಾಗಚೈತನ್ಯ ಹಾಗೂ ಬ್ಯೂಟಿ ಕ್ವೀನ್ ಸಮಂತಾ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಇಬ್ಬರು ಸ್ಪಷ್ಟನೆ ನೀಡದಿದ್ದರೂ, ಇಬ್ಬರ ನಡುವೆ ಮನಸ್ತಾಪ (Differences) ಇರೋದು ನಿಜ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಇವರಿಬ್ಬರು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆ ಸುದ್ದಿಗೆ ಈಗ ಪುಷ್ಟಿ ನೀಡುವಂತೆ ನಟ ನಾಗಚೈತನ್ಯ, ತಮ್ಮ ಮನೆ ಬಿಟ್ಟು ತಂದೆಯಾದ ಅಕ್ಕಿನೇನಿ ನಾಗರ್ಜುನ (Akkineni Nagarjuna) ಮನೆಗೆ ಹಿಂದಿರುಗಿದ್ದಾರೆ. ಅತ್ತ ನಟಿ ಸಮಂತಾ ಹೈದರಾಬಾದ್ ತೊರೆದು ಮುಂಬೈಗೆ ಶಿಫ್ಟ್ ಆಗಲು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ. ಇವರಿಬ್ಬರ ದಾಂಪತ್ಯದ (Marriage) ಬಿರುಕಿನ ಬಗ್ಗೆ ಭಾರಿ ಚರ್ಚೆ ಆಗುತ್ತಿದ್ದರು, ಅವರಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ದಂಪತಿ ಮನೆಬಿಟ್ಟು ಬೇರೆ ಬೇರೆ ಬಂದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಇವರಿಬ್ಬರ ನಡುವೆ ಇರುವ ಮನಸ್ತಾಪವನ್ನು ಸರಿಪಡಿಸಲು ಎರಡು ಕುಟುಂಬಸ್ಥರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಯಾರು ಏನೇ ಹೇಳಿದರೂ ಸಮಂತ ಹಾಗೂ ನಾಗಚೈತನ್ಯ ಒಟ್ಟಿಗೆ ಇರಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ನಾಗಚೈತನ್ಯ ತಮ್ಮ ತಂದೆ ಮನೆಯನ್ನು ಸೇರಿಕೊಂಡಿದ್ದಾರೆ. ಅತ್ತ ಸಮಂತಾ ತಮ್ಮ ಕೆರಿಯರ್ (Career Growth) ಗಾಗಿ ಮುಂಬೈ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಡಿವೋರ್ಸ್ ಪರ ಹಾಗೂ ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ಈ ರೀತಿಯ ನಿರ್ಧಾರ ಕೈಗೊಳ್ಳಲು ಕಾರಣ ಏನೆಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

    ವಿಚ್ಛೇದನ ಬಗ್ಗೆ ಕೇಳಿದ್ರೆ ಗುರ್ ಅಂತಾರೆ ಸಮಂತಾ

    ಮೊನ್ನೆ ದೇಗುಲವೂಂದಕ್ಕೆ ಭೇಟಿ ನೀಡಿದ್ದ ಸಮಂತಾರನ್ನ ಡಿವೋರ್ಸ್ ಬಗ್ಗೆ ಪ್ರಶ್ನೆ ಮಾಡಲಾಯಿತು. ಪ್ರಶ್ನೆ ಕೇಳುತ್ತಿದ್ದಂತೆ ಸಿಡಿಮಿಡಿಗೊಂಡ ಸಮಂತಾ 'ನಾನು ದೇಗುಲಕ್ಕೆ ಬಂದಿದ್ದೇನೆ, ಇಲ್ಲಿ ಈ ರೀತಿಯ ಪ್ರಶ್ನೆ ಕೇಳುತ್ತೀರಾ,? ನಿಮಗೆ ಬುದ್ಧಿ ಇಲ್ವಾ'? ಎಂದು ಪ್ರತಿಕ್ರಿಯೆ ನೀಡಿದ್ದರು. ಇದಾದ ಎರಡು ದಿನಗಳ ಬಳಿಕ ಇದೀಗ ಇಬ್ಬರು ತಮ್ಮ ಮನೆಯನ್ನು ತೊರೆದಿದ್ದಾರೆ. ಕೆಲ ದಿನಗಳಲ್ಲಿ ಸಮಂತಾ ಹಾಗೂ ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್ ಬಗ್ಗೆ ಮಾಹಿತಿ ನೀಡಲಿದ್ದಾರೆ.

    ಈ ಗಾಸಿಪ್ ಶುರುವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನಲ್ಲಿ ಸಮಂತಾ ಮಾಡಿದ ಬದಲಾವಣೆಯಿಂದ. ತಮ್ಮ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ‘ಸಮಂತಾ ಅಕ್ಕಿನೇನಿ’ ಅಂತಿದ್ದ ಹೆಸರಿಗೆ ಸಮಂತಾ ಕತ್ತರಿ ಪ್ರಯೋಗ ಮಾಡಿಬಿಟ್ಟರು. ‘ಸಮಂತಾ ಅಕ್ಕಿನೇನಿ’ ಅಂತ ಇದ್ದ ಹೆಸರನ್ನು ತೆಗೆದು ಬರೀ ‘ಎಸ್’ ಅಂತ ಹಾಕಿದ್ರು. ಏಕಾಏಕಿ ‘ಅಕ್ಕಿನೇನಿ’ ಹೆಸರನ್ನು ಕೈಬಿಟ್ಟಿದ್ದಕ್ಕೆ ನೂರೆಂಟು ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿತ್ತು.

    ನಡುವೆ ಸ್ವಲ್ಪ ಮಾತು

    ಬಳಿಕ ಸಮಂತಾ ಮತ್ತು ನಾಗಚೈತನ್ಯ ಟ್ವಿಟರ್ ನಲ್ಲಿ ಪರಸ್ಪರ ಮಾತನಾಡಿಕೊಂಡಿದ್ದರು. ಒಬ್ಬರಿಗೊಬ್ಬರು ಧನ್ಯವಾದ ಹೇಳಿಕೊಂಡಿದ್ದರು. ತಮ್ಮ ಮುಂದಿನ ಸಿನಿಮಾ ಲವ್ ಸ್ಟೋರಿ ವಿಚಾರವನ್ನು ನಾಗಚೈತನ್ಯ ಹಂಚಿಕೊಂಡಿದ್ದರು.  ಇದಾದ ಬಳಿಕ ಇಬ್ಬರ ನಡುವೆ ಎಲ್ಲವೂ ಸರಿ ಇದೆ ಎಂದು ಅಂದುಕೊಳ್ಳುವಾಗಲೇ ಈಗ ಮತ್ತೊಂದು ಸ್ಪೋಟಕ ತಿರುವು ಪಡೆದುಕೊಂಡಿದೆ.

    ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿದೆ. ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್ ನಲ್ಲಿ ಸಮಂತಾ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕವೇ ಇವರ ದಾಂಪತ್ಯದಲ್ಲಿ ಮೂಡಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

    (ವರದಿ - ವಾಸುದೇವ್. ಎಂ)
    Published by:Soumya KN
    First published: