ನಿಶ್ಚಿತಾರ್ಥ ಮಾಡಿಕೊಂಡ ಟಾಲಿವುಡ್​ ಸ್ಟಾರ್ ಪವನ್​ ಕಲ್ಯಾಣ್​ ಮಾಜಿ ಪತ್ನಿ ರೇಣು ದೇಸಾಯಿ

news18
Updated:June 25, 2018, 4:17 PM IST
ನಿಶ್ಚಿತಾರ್ಥ ಮಾಡಿಕೊಂಡ ಟಾಲಿವುಡ್​ ಸ್ಟಾರ್ ಪವನ್​ ಕಲ್ಯಾಣ್​ ಮಾಜಿ ಪತ್ನಿ ರೇಣು ದೇಸಾಯಿ
news18
Updated: June 25, 2018, 4:17 PM IST
ನ್ಯೂಸ್​ 18 ಕನ್ನಡ 

ಟಾಲಿವುಡ್‍ನಲ್ಲಿ ಈಗ ಪವನ್‍ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿಯದ್ದೇ ಸುದ್ದಿ. ದಿನಕ್ಕೊಂದು ಫೋಟೋ ಹಾಕುವ ಮೂಲಕ ತಮ್ಮ ಎರಡನೇ ಮದುವೆ ಬಗ್ಗೆ ಕೂತೂಹಲ ಮೂಡಿಸುತ್ತಿದ್ದಾರೆ. ನಿಶ್ಚಿತಾರ್ಥ ಆಯಿತು ಅಂತ ಹೇಳುತ್ತಿರುವ ರೇಣು ದೇಸಾಯಿ ತನ್ನ ಹುಡುಗ ಯಾರು ಅನ್ನೋದನ್ನ ರಹಸ್ಯವಾಗಿ ಇಟ್ಟಿದ್ದಾರೆ. ಇನ್ನು ರೇಣು ದೇಸಾಯಿ ಮದುವೆ ಆಗುವುದಾಗಿ ಹೇಳಿದ್ದೇ ತಡ ಪವನ್ ಅಭಿಮಾನಿಗಳು ಗರಂ ಆಗಿದ್ದಾರೆ.

ರೇಣು ದೇಸಾಯಿ ಪವನ್ ಕಲ್ಯಾಣ್‍ರ ಮಾಜಿ ಪತ್ನಿ. ಪವನ್‍ರಿಂದ ದೂರಾಗಿ ವರುಷಗಳೇ ಕಳೆದಿದ್ದರೂ ಸಹ ಪವನ್‍ರ ಮಾಜಿ ಪತ್ನಿ ಅನ್ನೋ ಕಾರಣಕ್ಕೇನೆ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಇವರು ತಮ್ಮ ಮದುವೆ ವಿಷಯದಲ್ಲಿ ಈಗ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಎರಡು ಕೈಗಳು ಬಂಧಿಯಾಗಿರುವ ಫೋಟೋವೊಂದನ್ನ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ನಾನು ಲವ್‍ನಲ್ಲಿದ್ದೇನೆ ಅಂತ ಹಾಕಿದ್ದರು ರೇಣುದೇಸಾಯಿ. ಆ ನಂತರ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇನೆ ಅಂತ ಮದರಂಗಿಯಲ್ಲಿ ಮಿಂದೆದ್ದ ಕೈಗಳ ಫೋಟೋ ಹಾಕಿದ್ದರು. ಆಗಲೂ ಯಾರು ಏನು ಅನ್ನೋ ವಿವರ ಹಾಕಿರಲಿಲ್ಲ.


Loading...ಈಗ ನಿನ್ನೆ ಸಂಜೆ ಮತ್ತೊಂದು ಫೋಟೋ ಹಾಕಿರುವ ರೇಣು ದೇಸಾಯಿ, ಅದರಲ್ಲಿ ರೇಣು ಮದುವಣಗಿತ್ತಿಯಂತೆ ಅಲಂಕಾರಗೊಂಡಿದ್ದಾರೆ. ಹಾಗೆ ಮದುಮಗನಂತೆ ಸಿಂಗಾರಗೊಂಡಿರೋ ಹುಡುಗನಿಗೆ ರಿಂಗ್ ತೊಡಿಸುತ್ತಿದ್ದಾರೆ. ಆದರೆ ಇಲ್ಲೂ ಸಹ, ಹುಡುಗನ ಮುಖವನ್ನ ತೋರಿಸಿಲ್ಲ. ಈ ಮೂಲಕ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ತೋರಿಸುವ ರೀತಿ ಕುತೂಹಲ ಹುಟ್ಟಿಸುತ್ತಿದ್ದಾರೆ. ರೇಣು ಮನ ಕದ್ದ ಆ ಹುಡುಗ ಯಾರು ಅನ್ನೋ ಚರ್ಚೆಯನ್ನ ಸದ್ಯ ಟಾಲಿವುಡ್​ನಲ್ಲಿ ನಡೆಯುತ್ತಿದೆ.

ಇದೆಲ್ಲದರ ನಡುವೆ ರೇಣು ದೇಸಾಯಿ ಮತ್ತೊಂದು ವಿವಾಹವಾಗುತ್ತಿರೋ ವಿಷಯಕ್ಕೆ ಪವನ್ ಫ್ಯಾನ್ಸ್ ಗರಂ ಆಗಿದ್ದಾರೆ. ರೇಣು ದೇಸಾಯಿ ಏನೋ ಯಡವಟ್ಟು ಮಾಡ್ಕೊಂಡು ನಮ್ಮ ಬಾಸ್ ಅನ್ನ ಸಂಕಷ್ಟಕ್ಕೆ ಸಿಲುಕಿಸಿದರೆ ಅನ್ನೋ ಆತಂಕ ಪವನ್ ಅಭಿಮಾನಿಗಳದ್ದು.

ಆದರೆ ರೇಣು ಪವನ್‍ರಿಂದ ಕಾನೂನಾತ್ಮಕವಾಗಿ ದೂರವಾಗಿರುವುದರಿಂದ ಅವರಿಗೆ ಮತ್ತೊಂದು ಮದುವೆಯಾಗುವ ಹಕ್ಕಿದೆ. ಹೀಗಾಗಿ ಇದಕ್ಕೆ ಯಾರೂ ವಿರೋಧ ಮಾಡುವ ಪ್ರಮೇಯವೇ ಬರೋದಿಲ್ಲ. ಆದರೆ ರೇಣು ಯಾಕೆ ತಾನು ನಿಶ್ಚಿತಾರ್ಥ ಮಾಡಿಕೊಂಡಿರುವ ವ್ಯಕ್ತಿಯಾರು ಅನ್ನೋದನ್ನ ಬಹಿರಂಗ ಪಡಿಸುತ್ತಿಲ್ಲ ಎಂಬುದು ಸದ್ಯದ ಪ್ರಶ್ನೆ? ಇದಕ್ಕೆ ರೇಣು ಅವರ ಬಳಿ ಮಾತ್ರ ಉತ್ತರ ಸಿಗಬಲ್ಲದು.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...