eನೀವು ಬಾಲಿವುಡ್ನ (Bollywood) ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಮತ್ತು ಬಾಲಿವುಡ್ ನಟಿ ಟಬು ಅಭಿನಯದ ‘ಚೀನಿ ಕಮ್’ ಚಿತ್ರ ನೋಡಿದ್ದರೆ, ನಿಮಗೆ ಅದರಲ್ಲಿ ಬರುವ ಒಂದು ಪುಟ್ಟ ಹುಡುಗಿಯ ಪಾತ್ರ ಖಂಡಿತ ನೆನಪಿರುತ್ತದೆ ಅಂತ ಹೇಳಬಹುದು. ಏಕೆಂದರೆ ಆ ಪಾತ್ರ ತುಂಬಾನೇ ಚಿಕ್ಕದಾಗಿದ್ದರೂ ಸಹ ಚಿತ್ರದ ಅರ್ಧ ಭಾಗದವರೆಗೆ ಆಗಾಗ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಜೊತೆ ಕಾಣಿಸಿಕೊಂಡಿದೆ ಅಂತ ಹೇಳಬಹುದು.
ಆ ಪುಟ್ಟ ಹುಡುಗಿಯ ಪಾತ್ರದಲ್ಲಿ ಆಗ ನಟಿಸಿದ್ದ ಬಾಲನಟಿಯ ಹೆಸರು ಸ್ವಿನಿ ಖಾರಾ. ಈ ಚಿತ್ರ ಬಿಡುಗಡೆಯಾಗಿದ್ದು 2007ರಲ್ಲಿ ಅಂತ ಹೇಳಬಹುದು. ಈಗ ಆ ಪುಟ್ಟ ಹುಡುಗಿ ಬೆಳೆದು ದೊಡ್ಡವಳಾಗಿದ್ದಾಳೆ, ಎಷ್ಟು ದೊಡ್ಡವಳು ಅಂತ ಹೇಳಿದರೆ ಈಗ ಆಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ ನೋಡಿ.
ಈ ಚೀನಿ ಕಮ್ ಚಿತ್ರ ಆಗ ಬಿಡುಗಡೆಯಾದಾಗ ವಿಮರ್ಶಕರು ಈ ಚಿತ್ರವು ಎಲ್ಲರಿಗೂ ಅಲ್ಲ ಎಂದು ವಾದಿಸಿದ್ದರು. ಚಿತ್ರದ ಕೆಲವು ಅಂಶಗಳು ಮತ್ತು ಪಾತ್ರಗಳು ಇವತ್ತಿಗೂ ಜನರ ಮನಸ್ಸಿನಲ್ಲಿ ಅಳಿಸದಂತೆ ಹಾಗೆ ಉಳಿದಿವೆ ಅಂತ ಹೇಳಬಹುದು.
ಈ ಚಿತ್ರದಲ್ಲಿ ಬಿಗ್ ಬಿ ಅವರ ಜೊತೆ ನಟಿಸಿದ್ದಂತಹ 9 ವರ್ಷದ ಪಕ್ಕದಮನೆಯ ಬಾಲಕಿಯ ಪಾತ್ರವನ್ನು ನಿರ್ವಹಿಸಿದ ಸ್ವಿನಿ ಖಾರಾ ಈಗ ಟಿವಿ ನಟಿ ಆಗಿ ಕೆಲಸ ಮಾಡುತ್ತಿದ್ದಾರೆ.
ಈಗ ನಟಿ ಸ್ವಿನಿ ಖಾರಾ ಅವರ ಬಗ್ಗೆ ಒಂದು ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಹರಿದಾಡುತ್ತಿದೆ. ಹೌದು.. ಈ ನಟಿ ತನ್ನ ಗೆಳೆಯ ಊರ್ವಿಶ್ ದೇಸಾಯಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಸಮಾರಂಭದಲ್ಲಿ ತೆಗೆಸಿಕೊಂಡ ಕೆಲವು ಸುಂದರವಾದ ಫೋಟೋಗಳನ್ನು ಇವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಈಗಾಗಲೇ 3,000ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.
‘ಚೀನಿ ಕಮ್’ ಚಿತ್ರದಲ್ಲಿ ಅಭಿನಯಿಸಿದ್ದ ಸ್ವಿನಿ ನಿಶ್ಚಿತಾರ್ಥ
‘ಚೀನಿ ಕಮ್’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಆಪ್ತ ಸ್ನೇಹಿತೆಯಾಗಿ ನಟಿಸುವ ಮೂಲಕ ಖ್ಯಾತಿ ಗಳಿಸಿದ ಸ್ವಿನಿ ಖಾರಾ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಭವ್ಯ ಸಮಾರಂಭದಲ್ಲಿ ನಟಿ ತೆಗೆಸಿಕೊಂಡ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ 24 ವರ್ಷದ ನಟಿ ಲ್ಯಾವೆಂಡರ್ ಲೆಹೆಂಗಾ ಚೋಲಿ ಧರಿಸಿ ಪೋಸ್ ನೀಡಿದ್ದಾರೆ.
View this post on Instagram
ಇದನ್ನೂ ಓದಿ: Manvita Kamath: ಶಿಕ್ಷಕಿಯಾದ ಸ್ಯಾಂಡಲ್ವುಡ್ ನಟಿ! ಮಾನ್ವಿತಾ ರಿಯಲ್ ಟೀಚರ್ ಕಮೆಂಟ್ ಏನ್ ಗೊತ್ತಾ?
ಸ್ವಿನಿ ಮತ್ತು ಅವರ ವೃತ್ತಿಜೀವನದ
ಸ್ವಿನಿ ಖಾರಾ, ಬಾ, ಬಹೂ ಔರ್ ಬೇಬಿ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೂ 2007 ರಲ್ಲಿ ತೆರೆ ಕಂಡಂತಹ ಚಲನಚಿತ್ರ ‘ಚೀನಿ ಕಮ್’ ನಲ್ಲಿ ಅವರು ಮಾಡಿದ ಪಾತ್ರದಿಂದ ತುಂಬಾನೇ ಮನೆಮಾತಾದರು ಅಂತ ಹೇಳಬಹುದು.
ಇನ್ನೂ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ ‘ಚೀನಿ ಕಮ್’ ನಲ್ಲಿ ಅಮಿತಾಭ್ ಬಚ್ಚನ್ ಅವರ ಆಪ್ತ ಸ್ನೇಹಿತೆಯಾಗಿದ್ದ ಈಕೆ ಕ್ಯಾನ್ಸರ್ ರೋಗಿಯ ಪಾತ್ರವನ್ನು ಮಾಡಿದ್ದರು. ಅವರು ಪರಿಣೀತಾ, ಪಾಠಶಾಲಾ ಮತ್ತು ದಿಲ್ ಮಿಲ್ ಗಯೇ, ಸಿಐಡಿ ಮುಂತಾದ ಟಿವಿ ಸೀರಿಯಲ್ ಗಳಲ್ಲಿ ಸಹ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ