Love 360 ಚಿತ್ರದ ರೀಮೇಕ್ ರೈಟ್ಸ್​​ಗೆ ಭರ್ಜರಿ ಡಿಮ್ಯಾಂಡ್​! ಮತ್ತೆ ಪ್ರೇಮ ಕಥೆ ಕೊಟ್ಟು ಗೆದ್ದ ಶಶಾಂಕ್​

ಶಶಾಂಕ್ ನಿರ್ದೇಶನದ 'ಲವ್ 360' ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಇದರ ಬೆನ್ನಲ್ಲೇ ಚಿತ್ರದ ರೀಮೆಕ್ ರೈಟ್ಸ್‌ಗೂ ಬೇಡಿಕೆ ಶುರುವಾಗಿದ್ದು, ಶೀಘ್ರದಲ್ಲೇ ಬೇರೆ ಭಾಷೆಗಳಿಗೆ ಸಿನಿಮಾ ನಿರ್ಮಾಣವಾಗಲಿದೆ.

ಲವ್ 360 ಚಿತ್ರಕ್ಕೆ ಡಿಮ್ಯಾಂಡ್​

ಲವ್ 360 ಚಿತ್ರಕ್ಕೆ ಡಿಮ್ಯಾಂಡ್​

  • Share this:
'ಮೊಗ್ಗಿನ ಮನಸ್ಸು' (Moggina Manasu) , 'ಕೃಷ್ಣನ್ ಲವ್ ಸ್ಟೋರಿ' (Krishnan Love Story) ಯಂತಹ ಅದ್ಭುತ ಲವ್ ಸ್ಟೋರಿ (Love Story) ಚಿತ್ರಗಳ ನಿರ್ದೇಶಕ ಶಶಾಂಕ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ 'ಲವ್ 360' (Love 360) , ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿದೆ. ಶಶಾಂಕ್ ನಿರ್ದೇಶನದ 'ಲವ್ 360' ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಇದರ ಬೆನ್ನಲ್ಲೇ ಚಿತ್ರದ ರೀಮೇಕ್ ರೈಟ್ಸ್‌ಗೂ ಬೇಡಿಕೆ ಶುರುವಾಗಿದ್ದು, ಶೀಘ್ರದಲ್ಲೇ ಬೇರೆ ಭಾಷೆಗಳಿಗೆ ಸಿನಿಮಾ ನಿರ್ಮಾಣವಾಗಲಿದೆ.

ರಾಮ್ ಹಾಗೂ ಜಾನಕಿ ಪ್ರೇಮಕಥೆ

ಇತ್ತೀಚೆಗೆ ಬಿಡುಗಡೆಯಾದ 'ಲವ್ 360'ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ನಿರ್ದೇಶಕ ಶಶಾಂಕ್‌ ಮನವಿ  ಮಾಡಿಕೊಂಡಿದ್ದರು ಎಮೋಷನಲ್ ಪ್ರೇಮ ಕಥೆಯ ಸಿನಿಮಾ ಇದು. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಚಿತ್ರದಲ್ಲಿನ ರಾಮ್ ಹಾಗೂ ಜಾನಕಿ ಪ್ರೇಮಕಥೆ ಸಾಕಷ್ಟು ಜನರಿಗೆ ಇಷ್ಟವಾಗಿದೆ.

ತೆಲುಗು ಹಾಗೂ ತಮಿಳು ಭಾಷೆಗಳಿಗೆ ರೀಮೇಕ್

'ಲವ್ 360' ತೆಲುಗು ಹಾಗೂ ತಮಿಳು ಭಾಷೆಗಳಿಗೆ ರೀಮೇಕ್ ಆಗುತ್ತಿರುವ ವಿಚಾರವನ್ನು ಸ್ವತಃ ನಿರ್ದೇಶಕ ಶಶಾಂಕ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ಕನ್ನಡ ಪ್ರೇಕ್ಷಕರು ಹಾಗೂ ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಹೆಸರಾಂತ ಸಂಸ್ಥೆಯೊಂದು ತೆಲುಗು ಹಾಗೂ ತಮಿಳಿಗೆ ರೀಮೆಕ್ ಮಾಡುವ ಬಗ್ಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.





ಕೈ ಮುಗಿದು ಶಶಾಂಕ್​ ಮನವಿ

ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿನಿಮಾ ಮಂದಿರಗಳಿಗೆ  ತೆರಳಿ ಚಿತ್ರವನ್ನು ವೀಕ್ಷಣೆ ಮಾಡುವಂತೆ ಪ್ರೇಕ್ಷಕರಲ್ಲಿ ಕೈ ಮುಗಿದು ಶಶಾಂಕ್​ ಮನವಿ ಮಾಡಿಕೊಂಡಿದ್ರು. ಈ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗಿತ್ತು. ಬಳಿಕ ಜನರು ಸಹ ನಿಧಾನವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್​ಗಳಿಗೆ ಬಂದು ಸಿನಿಮಾ ವೀಕ್ಷಣೆ ಮಾಡಿದ್ದಾರೆ.

Sandalwood director shashank Comebacks With new movie love 360
ಲವ್​ 360 ಸಿನಿಮಾ ತಂಡ


ಗೆದ್ದ ಶಶಾಂಕ್​ ಅಂಡ್​ ಟೀಮ್​​

2ನೇ ವಾರ 'ಲವ್ 360' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸ್ವತಃ ನಿರ್ದೇಶಕ ಶಶಾಂಕ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹೊಸ ಪ್ರತಿಭೆ ಪ್ರವೀಣ್ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರೆ, ಲವ್​ ಮಾಕ್ಟೆಲ್ ನಲ್ಲಿ ನಟಿಸಿದ್ದ ರಚನಾ ಇಂದರ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಮುಗ್ಧ ಮನಸುಗಳ ಪ್ರೇಮಕಥೆಯನ್ನು ಚಿತ್ರದಲ್ಲಿ ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಕೊನೆಗೂ ಶಶಾಂಕ್ ಅಂಡ್ ಟೀಮ್ ಗೆದ್ದಿದ್ದಾರೆ.

'ಜಗವೇ ನೀನು ಗೆಳತಿಯೇ..’

'ಜಗವೇ ನೀನು ಗೆಳತಿಯೇ..’ ಹಾಡಿನ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ ಸಿನಿಮಾ ‘ಲವ್​ 360’. ಹೊಸಬರ ಸಿನಿಮಾದ ಈ ಹಾಡು ಕೋಟಿಗಟ್ಟಲೆ ವೀಕ್ಷಣೆ ಕಂಡಿರುವುದು ವಿಶೇಷ. ಆ ಕಾರಣದಿಂದ ಹೈಪ್​ ಹೆಚ್ಚಾಯಿತು. ಈಗ ಈ ಸಿನಿಮಾ ಬಿಡುಗಡೆ ಆಗಿದೆ. ‘ಮೊಗ್ಗಿನ ಮನಸು’, ‘ಕೃಷ್ಣನ್​ ಲವ್​ ಸ್ಟೋರಿ’, ‘ಕೃಷ್ಣ ಲೀಲಾ’ ರೀತಿಯ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ನಿರ್ದೇಶಕ ಶಶಾಂಕ್​ ಅವರು ಈ ಬಾರಿ ಹೊಸ ಪ್ರತಿಭೆಗಳ ಜೊತೆ ಸೇರಿ ‘ಲವ್​ 360’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ರಾಮ್ ಹಾಗೂ ಜಾನಕಿ ಎಮೋಷನಲ್ ಲವ್ ಸ್ಟೋರಿ ನೋಡಿದವರೆಲ್ಲಾ ಮೆಚ್ಚಿಕೊಂಡಾಡುತ್ತಿದ್ದಾರೆ. ಒಂದು ಸರಳವಾದ ಪ್ರೇಮಕಥೆಗೆ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಶಶಾಂಕ್ 'ಲವ್ 360' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಒಂದಷ್ಟು ಟ್ವಿಸ್ಟ್‌ಗಳ ಜೊತೆಗೆ ಸಿನಿಮಾ ಪ್ರೇಕ್ಷರನ್ನು ರಂಜಿಸುವಲ್ಲಿ ಸಕ್ಸಸ್ ಕಂಡಿದೆ. ಈಗಾಗಲೇ ಸಾಕಷ್ಟು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿ ಗೆದ್ದಿರುವ ನಿರ್ದೇಶಕರು ಈ ಸಿನಿಮಾ ಮೂಲಕ ಪ್ರವೀಣ್ ಎನ್ನುವ ಯುವ ಪ್ರತಿಭೆಯನ್ನು ಪರಿಚಯಿಸಿದ್ದಾರೆ.
Published by:Pavana HS
First published: