Big Budget Movie: ಬಿಡುಗಡೆಗೆ ಸಜ್ಜಾಗಿವೆ ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳು, ಇಲ್ಲಿದೆ ಫುಲ್‌ ಡೀಟೆಲ್ಸ್​!

ಮಾರ್ಚ್ ತಿಂಗಳಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವ ಬಗ್ಗೆ ಮಾತನಾಡುವಾಗ ಪ್ಯಾನ್ ಇಂಡಿಯಾ ಚಿತ್ರವಾದ ‘ಆರ್ ಆರ್ ಆರ್’ ಎರಡು ಬಿಡುಗಡೆ ದಿನಾಂಕಗಳನ್ನು ಯೋಚಿಸುತ್ತಿದೆ ಕನ್ನಡದ ನಟ ಯಶ್ ಅಭಿನಯದ ಕೆಜಿಎಫ್ 2 ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ

ಹೊಸ ಚಿತ್ರದ ಪೋಸ್ಟರ್

ಹೊಸ ಚಿತ್ರದ ಪೋಸ್ಟರ್

  • Share this:
ಕೋವಿಡ್-19 ಸಾಂಕ್ರಾಮಿಕ (Pandemic) ರೋಗದ ಹಾವಳಿಯಿಂದಾಗಿ ಒಂದೂವರೆ ವರ್ಷದಿಂದ ಬೀಗ ಹಾಕಿದ್ದ ಚಿತ್ರ ಮಂದಿರಗಳು ಕಳೆದ ಆಗಸ್ಟ್‌ನಲ್ಲಿ ಕೆಲವು ನಿರ್ಬಂಧನೆಗಳೊಂದಿಗೆ (Restrictions) ಬಾಗಿಲು ತೆರೆದಿದ್ದು ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಕಳೆದ ಆಗಸ್ಟ್‌ನಲ್ಲಿ ಬೆಲ್ ಬಾಟಮ್ ಮತ್ತು ನವೆಂಬರ್‌ನಲ್ಲಿ ಸೂರ್ಯವಂಶಿ (Suryavanshi)ಚಿತ್ರಗಳೊಂದಿಗೆ ಸಿನಿಮಾ ಹಾಲ್‌ಗಳ ಶಟರ್‌ಗಳನ್ನು ತೆರೆಯಲಾಗಿತ್ತು. ಈಗ ಮತ್ತೆ ದೊಡ್ಡ ದೊಡ್ಡ ಬಜೆಟ್‌ನ (Big Budget) ಚಿತ್ರಗಳು ಬಿಡುಗಡೆಗಾಗಿ ಕಾಯುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಬಿಡುಗಡೆಯ ದಿನಾಂಕ ಯಾವಾಗ
ಈಗ ನಟ ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರವಾದ ‘ಬಚ್ಚನ್ ಪಾಂಡೆ’ ಮಾರ್ಚ್ ತಿಂಗಳಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಅಂದರೆ ಮಾರ್ಚ್ 18 ರಂದು ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ಮಾಪಕರು ಘೋಷಿಸಿದರು. ಇದರ ಬಿಡುಗಡೆ ಸುದ್ದಿಯ ಬೆನ್ನಲ್ಲೇ ಇನ್ನಿತರೆ ಚಿತ್ರಗಳ ಬಿಡುಗಡೆಯ ದಿನಾಂಕವನ್ನು ನಿಗದಿ ಪಡಿಸುವ ಕೆಲಸಗಳು ಭರದಲ್ಲಿ ಸಾಗುತ್ತಿವೆ ಎಂದು ಹೇಳಲಾಗುತ್ತಿದೆ.

ಬಹು ನಿರೀಕ್ಷಿತ ಚಿತ್ರ ‘ರಾಧೆ ಶ್ಯಾಮ್’ ವಿಶ್ವದಾದ್ಯಂತ ಸಿನಿಮಾ ಹಾಲ್‌ಗಳಲ್ಲಿ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ತಯಾರಕರು ಕೋವಿಡ್-19 ಸಾಂಕ್ರಾಮಿಕ ರೋಗದ ಅಟ್ಟಹಾಸವನ್ನು ನಿಕಟವಾಗಿ ಗಮನಿಸುತ್ತಿದ್ದಾರೆ ಮತ್ತು ತಯಾರಕರು ಪ್ರಸ್ತುತ ಸ್ಥಿತಿ ದೇಶದಲ್ಲಿ ಮುಂದುವರೆದರೂ ಸಹ ಫೆಬ್ರುವರಿ 11 ರಂದು ಬಿಡುಗಡೆಗೆ ಸಿದ್ಧವಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Radhe Shyam Postponed: ಹೇಳಿದ್​ ಟೈಮ್​ಗೆ ರಿಲೀಸ್​ ಮಾಡ್ತೀವಿ ಅಂದವ್ರು ಗಪ್​ಚುಪ್​: ರಾಧೆ ಶ್ಯಾಮ್​ ಬಿಡುಗಡೆ ದಿನಾಂಕ ಮುಂದೂಡಿಕೆ!

ಪ್ಯಾನ್ ಇಂಡಿಯಾ ಯೋಜನೆ
ಪ್ಯಾನ್ ಇಂಡಿಯಾ ಯೋಜನೆಯಾಗಿರುವುದರಿಂದ, ಕೋವಿಡ್-19 ಸಾಂಕ್ರಾಮಿಕ ರೋಗದ ಸನ್ನಿವೇಶ ಮತ್ತು ಸಂಭಾವ್ಯ ನಿರ್ಬಂಧಗಳ ಬಗ್ಗೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ಸರ್ಕಾರ ಮತ್ತು ಪ್ರದರ್ಶಕರೊಂದಿಗೆ ಮಾತುಕತೆ ನಡೆಯುತ್ತಿದೆ. ಪ್ರೇಮಿಗಳ ದಿನದಂದು ಅಲ್ಲದಿದ್ದರೆ, ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡುವುದು ಖಚಿತವಾಗಿದೆ ಎಂದು ಸಹ ಹೇಳಿದ್ದಾರೆ.

ಮಾರ್ಚ್ 1 ರಂದು ಇರುವ ಮಹಾಶಿವರಾತ್ರಿ ರಜಾದಿನದ ಲಾಭ ಪಡೆಯಲು ಹಿಂದಿ ಚಲನಚಿತ್ರೋದ್ಯಮದ ಅನೇಕ ಚಲನಚಿತ್ರಗಳು ಫೆಬ್ರುವರಿ 25 ರಂದು ಬಿಡುಗಡೆ ಮಾಡಲು ಕಾಯುತ್ತಿವೆ. ಬಹುನಿರೀಕ್ಷಿತ ನಟ ಅಜಿತ್ ಅಭಿನಯದ ‘ವಲಿಮಾಯ್’ ಕೂಡ ಫೆಬ್ರುವರಿ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ನಿಖರವಾದ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ.

ಈದ್ ಹಬ್ಬಕ್ಕೆ ಭಾರಿ ನಿರೀಕ್ಷೆ
ಮಾರ್ಚ್ ತಿಂಗಳಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವ ಬಗ್ಗೆ ಮಾತನಾಡುವಾಗ, ಪ್ಯಾನ್ ಇಂಡಿಯಾ ಚಿತ್ರವಾದ ‘ಆರ್ ಆರ್ ಆರ್’ ಎರಡು ಬಿಡುಗಡೆ ದಿನಾಂಕಗಳನ್ನು ಯೋಚಿಸುತ್ತಿದೆ. ಅದರಲ್ಲಿ ಒಂದು ಮಾರ್ಚ್ ದ್ವಿತೀಯಾರ್ಧದಲ್ಲಿ ಮತ್ತು ಇನ್ನೊಂದು ಈದ್ ಹಬ್ಬದ ಸಂದರ್ಭದ ದಿನಾಂಕದಲ್ಲಿ ರಿಲೀಸ್‌ ಆಗುವ ಸಾಧ್ಯತೆ ಇದ್ದು, ಇನ್ನೂ ಯಾವುದನ್ನೂ ಆಯ್ಕೆ ಮಾಡಿಲ್ಲ. ಕನ್ನಡದ ನಟ ಯಶ್ ಅಭಿನಯದ ಕೆ.ಜಿ.ಎಫ್ 2 ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.

ಆದರೆ ಲಾಲ್ ಸಿಂಗ್ ಚಡ್ಡಾ ಈದ್ ದಿನದಂದು ಬಿಡುಗಡೆ ಮಾಡಲು 2 ವಾರಗಳ ಕಾಲ ಬಿಡುಗಡೆಯ ದಿನಾಂಕ ಮುಂದಕ್ಕೆ ತಳ್ಳಲ್ಪಡಬಹುದು. ಇನ್ನು ಬಾಲಿವುಡ್ ನಟ ಅಜಯ್ ದೇವ್‌ಗನ್ ನಿರ್ದೇಶನದ ‘ರನ್ ವೇ 34’ ಮತ್ತು ನಟ ಟೈಗರ್ ಶ್ರಾಫ್ ಅವರ ಹಿರೋಪಂತಿ 2 ಚಿತ್ರವನ್ನು ಈದ್ ಹಬ್ಬದ ವಾರಾಂತ್ಯಕ್ಕೆ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಿಸಲಾಗಿದೆ.

ಇದನ್ನೂ ಓದಿ: RRR Movie: ಅಬ್ಬಾ.. ಆ ಒಂದೇ ಒಂದು ಸೀನ್​ಗೆ 75 ಲಕ್ಷ ರೂ. ಖರ್ಚು: ರಾಜಮೌಳಿ ಬಿಚ್ಚಿಟ್ಟ ಸತ್ಯ ಕೇಳಿ ಶಾಕ್​ ಆದ ಫ್ಯಾನ್ಸ್​!

‘ಪೃಥ್ವಿರಾಜ್’ ಚಿತ್ರ ಬಿಡುಗಡೆಯ ಸುತ್ತಲೂ ಇನ್ನೂ ಅನಿಶ್ಚಿತತೆಯ ಅಂಶ ಮುಂದುವರೆದಿದೆ. ಏಕೆಂದರೆ ಅಕ್ಷಯ್ ಕುಮಾರ್ ಅವರ ಎರಡು ಚಲನಚಿತ್ರಗಳು 30 ದಿನಗಳ ಅವಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇಲ್ಲ. ಹಾಗಾಗಿ ಪೃಥ್ವಿರಾಜ್ ಈದ್ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಯೋಚನೆ ಮಾಡಬಹುದು. ಇನ್ನೊಂದು ಕಡೆ ಜಯೇಶ್ ಭಾಯ್ ಜೋರ್ದಾರ್ ಮತ್ತು ಶಂಶೇರಾ ಚಿತ್ರಗಳ ಬಿಡುಗಡೆಯ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆಯಿಲ್ಲ.

ಚಿತ್ರ ತಯಾರಕರಿಗೆ ಸಹಾಯ
ಮತ್ತೊಂದೆಡೆ ಜೆರ್ಸಿ ಕೂಡ ಬಿಡುಗಡೆಯ ದಿನಾಂಕವನ್ನು ನಿರ್ಧರಿಸುವ ಮೊದಲು ಕೋವಿಡ್‌ನ ಕೆಲವು ನಿರ್ಬಂಧಗಳನ್ನು ಸಡಿಲಿಸುತ್ತಾರೆಯೇ ಎಂದು ಕಾಯುತ್ತಿದೆ. ಬಹುತೇಕ ಮಹಾ ನಗರಗಳಲ್ಲಿ ಈ ರಾತ್ರಿ ಕರ್ಫ್ಯೂವನ್ನು ಜನವರಿ ಅಂತ್ಯದ ವೇಳೆಗೆ ತೆಗೆದು ಹಾಕಲಾಗುವುದು ಎಂದು ಉದ್ಯಮವು ಭರವಸೆ ಹೊಂದಿದೆ. ರಾಷ್ಟ್ರೀಯ ರಾಜಧಾನಿಯಲ್ಲಿ ಸಿನಿಮಾ ಹಾಲ್‌ನಲ್ಲಿ ಶೇಕಡಾ 50 ರಷ್ಟು ಸೀಟು ಭರ್ತಿ ಮಾಡುವ ಅವಕಾಶವನ್ನು ಅನುಮತಿಸಲಾಗಿದೆ. ದೆಹಲಿ ಮತ್ತು ಮುಂಬೈ ಈ ಎರಡು ಮಾರುಕಟ್ಟೆಗಳಲ್ಲಿ ಚಲನಚಿತ್ರ ಮಂದಿರಗಳ ಸುಗಮ ಕಾರ್ಯಾಚರಣೆಯು ಮುಂಬರುವ ಕೆಲವು ವಾರಗಳಲ್ಲಿ ಚಿತ್ರಗಳ ಬಿಡುಗಡೆಯ ದಿನಾಂಕವನ್ನು ಆಯ್ಕೆ ಮಾಡಲು ಚಿತ್ರ ತಯಾರಕರಿಗೆ ಸಹಾಯವಾಗಬಹುದು.
Published by:vanithasanjevani vanithasanjevani
First published: