RRR vs James: ‘ಆರ್‌ಆರ್‌ಆರ್’ಗೆ ಡಿಚ್ಚಿ ಕೊಡುತ್ತಾ ‘ಪವರ್‘ ಫುಲ್ ‘ಜೇಮ್ಸ್’? ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ಡೇಟ್ ಕ್ಲಾಶ್

ಈ ತರದ ಮಾತು ಗಾಂಧಿನಗರದ ಗಲ್ಲಿಯೊಳಗಿಂದ ಕೇಳಿ ಬರ್ತಿದೆ. ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ‘ಜೇಮ್ಸ್’ ಕೂಡ ಮಾರ್ಚ್ ನಲ್ಲೇ ರಿಲೀಸ್ ಆಗುತ್ತೆ ಎನ್ನಲಾಗುತ್ತಿದೆ.

RRR-ಪುನೀತ್ ರಾಜ್ಕುಮಾರ್

RRR-ಪುನೀತ್ ರಾಜ್ಕುಮಾರ್

 • Share this:
  ಪ್ರಾರಂಭದಿಂದಲೂ ಭಾರೀ ಸುದ್ದಿ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ‘ಆರ್‌ಆರ್‌ಆರ್’ (RRR). ತೆಲುಗಿನ ಖ್ಯಾತ ನಿರ್ದೇಶಕ, ‘ಬಾಹುಬಲಿ’ ಖ್ಯಾತಿಯ ರಾಜಮೌಳಿ (Rajamouli) ನಿರ್ದೇಶನದಲ್ಲಿ ಆರ್‌ಆರ್‌ಆರ್ ಸಿನಿಮಾ ರೆಡಿಯಾಗಿದೆ. ಜ್ಯೂ. ಎನ್‌ಟಿಆರ್ (Jr.NTR) ಹಾಗೂ ರಾಮ್ ಚರಣ್ (Ram Charan) ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. ಇಬ್ಬರು ಸ್ಟಾರ್ ನಟರ ಜೊತೆಗೆ ಸ್ಟಾರ್ ನಿರ್ದೇಶಕನ ಕಾಂಬಿನೇಷನ್ ನ ಸಿನಿಮಾ ಆಗಿರೋದ್ರಿಂದ ಸಾಕಷ್ಟು ನಿರೀಕ್ಷೆಗಳಿವೆ. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಜನರ ಕುತೂಹಲ ಹೆಚ್ಚಿಸುತ್ತಿವೆ. ಎಂ ಎಂ ಕೀರವಾಣಿ (Keeravani) ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದ್ದು, “ನಾಟು ನಾಟು” ಹಾಡು ಹುಚ್ಚೆಬ್ಬಿಸಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಇದೀಗ ಮತ್ತೊಂದು ಮುಹೂರ್ತ ಫಿಕ್ಸ್ ಆಗಿದೆ. ಆದರೆ ಕರ್ನಾಟಕದಲ್ಲಿ ‘ಆರ್‌ಆರ್‌ಆರ್’ ರಿಲೀಸ್ ಆಗೋದು ಅಷ್ಟು ಸುಲಭವಲ್ಲ ಎನ್ನಲಾಗ್ತಿದೆ. ಅದು ಯಾಕೆ ಅನ್ನೋ ಕುತೂಹಲಕ್ಕೆ ಮುಂದೆ ಓದಿ...

  ‘ಆರ್‌ಆರ್‌ಆರ್’ ರಿಲೀಸ್: ಮಾರ್ಚ್ ಅಥವಾ ಏಪ್ರಿಲ್?

  ಆರ್‌ಆರ್‌ಆರ್ ಕುರಿತಂತೆ ಈಗಾಗಲೇ ವಿಶ್ವದಾದ್ಯಂತ ಸಾಕಷ್ಟು ಹೈಪ್ ಕ್ರಿಯೇಟ್ ಆಗಿದೆ. ಹೊಸ ವರ್ಷದ ವೇಳೆಗೆ ಸಿನಿಮಾ ರಿಲೀಸ್ ಗೆ ಚಿತ್ರತಂಡ ಸಾಕಷ್ಟು ಪ್ಲಾನ್ ಮಾಡಿತ್ತು. ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದ ಆರಂಭದಲ್ಲಿ ಅಂದರೆ, ಜನವರಿ 7ರಂದೇ ತೆರೆಗೆ ಬರಬೇಕಿತ್ತು.

  ಆದರೆ ಕೋವಿಡ್ ಹೆಚ್ಚಾದ ಕಾರಣದಿಂದ ಸಿನಿಮಾ ರಿಲೀಸ್ ಪೋಸ್ಟ್ ಪೋನ್ಡ್ ಆಯಿತು. ಇದೀಗ ಮಾರ್ಜ್ 18ರಂದು ಸಿನಿಮಾ ರಿಲೀಸ್ ಮಾಡುವುದಕ್ಕೆ ಎಲ್ಲಾ ತಯಾರಿ ನಡೆಸಲಾಗಿದೆ. ಏಪ್ರಿಲ್ ನಲ್ಲೂ ಮತ್ತೊಂದು ಡೇಟ್ ಫಿಕ್ಸ್ ಮಾಡಲಾಗಿದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸೋ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಆರ್‌ಆರ್‌ಆರ್ ದಾರಿ ಅಷ್ಟೊಂದು ಸುಗಮವಲ್ಲ ಅಂತ ಸಿನಿ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.

  ‘ಆರ್‌ಆರ್‌ಆರ್’ಗೆ ಠಕ್ಕರ್ ಕೊಡಲು ಸಜ್ಜಾಗಿದೆ ‘ಜೇಮ್ಸ್’

  ಹೌದು, ಈ ತರದ ಮಾತು ಗಾಂಧಿನಗರದ ಗಲ್ಲಿಯೊಳಗಿಂದ ಕೇಳಿ ಬರ್ತಿದೆ. ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ‘ಜೇಮ್ಸ್’ ಕೂಡ ಮಾರ್ಚ್ ನಲ್ಲೇ ರಿಲೀಸ್ ಆಗುತ್ತೆ ಎನ್ನಲಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಆಗಿರೋದ್ರಿಂದ ಅಭಿಮಾನಿಗಳಷ್ಟೇ ಅಲ್ಲದೇ, ರಾಜ್ಯದ ಜನರ ಪಾಲಿಗೂ ಈ ಸಿನಿಮಾ ವಿಶೇಷ ಅನಿಸಿದೆ. ಅಲ್ಲದೇ ಮಾರ್ಚ್ 17ರಂದು ಅಪ್ಪು ಹುಟ್ಟು ಹಬ್ಬ ಇದೆ. ಹೀಗಾಗಿ ಅಂದೇ ‘ಜೇಮ್ಸ್’ ಸಿನಿಮಾ ರಿಲೀಸ್ ಮಾಡಿ, ಅಭಿಮಾನಿಗಳಿಗೆ ಗಿಫ್ಟ್ ಕೊಡಬೇಕು ಅನ್ನೋದು ಚಿತ್ರತಂಡದ ಯೋಜನೆಯಾಗಿದೆ.

  ಇದನ್ನೂ ಓದಿ: RRR ಬಿಡುಗಡೆಗೆ ಎರಡು ದಿನಾಂಕ ಘೋಷಿಸಿದ ಚಿತ್ರತಂಡ

  ನಿನ್ನೆಯಷ್ಟೇ ಜೇಮ್ಸ್ ಸಿನಿಮಾದ ಶೂಟಿಂಗ್ ಮುಗಿದ್ದಿದ್ದು, ಪುನೀತ್ ನಟಿಸಿದ್ದ ದೃಶ್ಯಗಳ ಡಬ್ಬಿಂಗ್ ಗೆ ತಯಾರಿ ನಡೆಸಲಾಗಿದೆ. ಈ ಸಿನಿಮಾಕ್ಕೆ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸಾಥ್ ನೀಡುತ್ತಾರೆ ಎನ್ನಲಾಗಿದೆ. ಇವೆಲ್ಲ ನಿಜವಾದರೆ ಅಪ್ಪು ಬರ್ತ್ ಡೇ ದಿನದಂದೇ ಜೇಮ್ಸ್ ರಿಲೀಸ್ ಆಗೋದ್ರಲ್ಲಿ ಡೌಟೇ ಇಲ್ಲ. ಹೀಗಾದರೆ ಆರ್‌ಆರ್‌ಆರ್ ಸಿನಿಮಾಕ್ಕೆ ಜೇಮ್ಸ್ ಸಿನಿಮಾ ಠಕ್ಕರ್ ಕೊಡೋದು ಪಕ್ಕಾ ಎನ್ನಲಾಗಿದೆ. ಆರ್‌ಆರ್‌ಆರ್ ಸಿನಿಮಾಕ್ಕೆ ಬೆಂಗಳೂರು ಸಹ ಬಹುದೊಡ್ಡ ಮಾರ್ಕೆಟ್ ಆಗಿರೋದ್ರಿಂದ ರಾಜಮೌಳಿ ಆಂಡ್ ಟೀಂಗೆ ಇದೀಗ ಟೆನ್ಶನ್ ಶುರುವಾಗಿದೆ.

  ಮುಂಬೈನಲ್ಲೂ ಸಲೀಸಲ್ಲ ಆರ್‌ಆರ್‌ಆರ್ ದಾರಿ

  ಬೆಂಗಳೂರಿನ ಕಥೆ ಹೀಗಾದ್ರೆ, ಅತ್ತ ಮುಂಬೈನಲ್ಲೂ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ. ಯಾಕೆಂದ್ರೆ ಮಾರ್ಚ್ 18ರಂದೇ ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ ರಿಲೀಸ್ ಆಗಲಿದೆ. ಹೀಗಾದ್ರೆ ಮುಂಬೈ ಪ್ರೇಕ್ಷಕರು ಬಾಲಿವುಡ್ ಕಿಲಾಡಿ ಸಿನಿಮಾದ ಬಗ್ಗೆ ಒಲವು ತೋರೋ ಸಾಧ್ಯತೆಗಳಿವೆ.

  ಇದನ್ನೂ ಓದಿ: RRR Film: ಅರೆರೇ ಹಾಲಿವುಡ್​​ನಿಂದ ಕಾಪಿ ಮಾಡಿದ್ದಾ RRR..!? ಸಿನಿ ಅಂಗಳದಲ್ಲಿ ಶುರುವಾಗಿದೆ ಗುಸು-ಗುಸು

  ಈ ಎಲ್ಲಾ ಕಾರಣಗಳಿಂದ ಮಾರ್ಚ್ ನಲ್ಲಿ ಆರ್‌ಆರ್‌ಆರ್ ರಿಲೀಸ್ ಅಷ್ಟು ಸುಲಭವಲ್ಲ ಅನ್ನೋದು ಚಿತ್ರತಂಡಕ್ಕೆ ಮನವರಿಕೆ ಆಗಿದೆ. ಒಂದು ವೇಳೆ ರಿಲೀಸ್ ಡೇಟ್ ಕ್ಲಾಶ್ ಆದರೆ ಏಪ್ರಿಲ್ ನಲ್ಲಿ ಆರ್‌ಆರ್‌ಆರ್ ರಿಲೀಸ್ ಮಾಡಲು ಚಿತ್ರದ ನಿರ್ಮಾಪಕರು ಚಿಂತನೆ ನಡೆಸಿದ್ದಾರೆ ಅನ್ನೋ ಮಾತುಗಳೂ ಸಹ ಕೇಳಿ ಬರುತ್ತಿವೆ.

  (ಬರಹ: ಅಣ್ಣಪ್ಪ ಆಚಾರ್ಯ)
  Published by:Soumya KN
  First published: