ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ 'ರಿಲ್ಯಾಕ್ಸ್ ಸತ್ಯ': ಇದು ಅಕಿರಾ ನಿರ್ದೇಶಕನ ಮತ್ತೊಂದು ಪಠ್ಯ..!

news18
Updated:August 1, 2018, 3:22 PM IST
ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ 'ರಿಲ್ಯಾಕ್ಸ್ ಸತ್ಯ': ಇದು ಅಕಿರಾ ನಿರ್ದೇಶಕನ ಮತ್ತೊಂದು ಪಠ್ಯ..!
news18
Updated: August 1, 2018, 3:22 PM IST
ರಕ್ಷಾ ಜಾಸ್ಮೀನ್​, ನ್ಯೂಸ್ 18 ಕನ್ನಡ

ಮಾಡೊ ಚೊಚ್ಚಲ ಸಿನಿಮಾ ಗಾಂಧಿನಗರದಲ್ಲಿ ಹೆಸರು ಮಾಡಿತು ಅಂದರೆ ಆ ಸಿನಿ ತಂಡದ ಮೇಲಿನ ನಿರೀಕ್ಷೆ ಹೆಚ್ಚಾಗುತ್ತೆ. ಸಿನಿ ಮಂದಿ ಕೂಡ ಈ ತಂಡ, ಮುಂದೆ ಯಾವ ಸಿನಿಮಾ ಮಾಡುತ್ತೆ ಅಂತ ಯೋಚಿಸೋದು ಸಾಮಾನ್ಯ. ಇದೀಗ ಅಂತದ್ದೆ ತಂಡವೊಂದು ಸಂಪೂರ್ಣ ಮನರಂಜನೆಯ ಸಜೆಕ್ಟ್​ ಅನ್ನು ಹೊತ್ತು ಬರೋಕೆ ಸಜ್ಜಾಗಿದೆ. ಅಷ್ಟಕ್ಕು ಯಾವುದು ಆ ತಂಡ, ಯಾವ ಸಿನಿಮಾ ಮಾಡುತ್ತಿದೆ ಅಂತ ತಿಳಿಯೋಕೆ ಈ ವರದಿ ಓದಿ.

ಕಳೆದ ವರ್ಷ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದ 'ಅಕಿರಾ' ಚಿತ್ರ ನೋಡಿದ್ದರೆ ನಿಮಗೆ ಗೊತ್ತಿರಬಹುದು. ಒಂದೊಳ್ಳೆ ಲವ್ ಸ್ಟೋರಿಯನ್ನ ಹೊತ್ತು ತಂದಿದ್ದ ಈ ಚಿತ್ರ ಅದೆಷ್ಟೋ ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿತ್ತು. ನಟ ಅನೀಶ್ ಮತ್ತು ಕಿೃಷಿ ತಾಪಂಡ ಜೋಡಿಕೂಡ ಫುಲ್ ಮೋಡಿ ಮಾಡಿತ್ತು. ಇದಕ್ಕೆಲ್ಲ ಕಾರಣವಾಗಿದ್ದು 'ಅಕಿರಾ' ಚಿತ್ರದ ನವ ನಿರ್ದೇಶಕ ನವೀನ್ ರೆಡ್ಡಿ ಎಂದರೆ ತಪ್ಪಾಗಲಾರದು.

ಇದೀಗ ಇದೇ ನಿರ್ದೇಶಕ ಮತ್ತೊಂದು ಸಿನಿಮಾ ಹೊತ್ತು ಗಾಂಧಿನಗರಕ್ಕೆ ಎಂಟ್ರಿಯಾಗುತ್ತಿದ್ದಾರೆ. ಅದೇ 'ರಿಲ್ಯಾಕ್ಸ್ ಸತ್ಯ'. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದು ಮಟ್ಟಿಗೆ ಸದ್ದು ಮಾಡುತ್ತಿರೋ ಈ ಸಿನಿಮಾ, ಕುತೂಹಲ ಕಾಯ್ದುಕೊಂಡು ಬಂದಿತ್ತು. ಆದರೆ ಇತ್ತೀಚೆಗೆ ರಿಲೀಸ್ ಆಗಿರೋ ಸಿನಿಮಾದ ಟ್ರೇಲರ್ ಅದಕ್ಕೆಲ್ಲ ಉತ್ತರ ನೀಡಿದೆ. ಕ್ರೈಂ ಥ್ರಿಲ್ಲರ್ ಕಥೆಯ ಜೊತೆಗೆ ನಿರ್ದೇಶಕರು ಕಾಮಿಡಿ ಎಲಿಮೆಂಟ್ ಕೂಡ ಅಲ್ಲಲ್ಲಿ ನೀಡಿರೋದು, ಟ್ರೇಲರ್​ನ ವೀಕ್ಷಣೆ ಹೆಚ್ಚಾಗಲು ಕಾರಣವಾಗಿದೆ.ಹಾಗೇ ಈ ಸಿನಿಮಾದ ತಂಡ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಮಾನ್ವಿತಾ ಹರೀಶ್ ಸಂಭಾವಿತ ಮನೆಯ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ 'ಉಗ್ರಂ' ಮಂಜು ಮತ್ತು ಪ್ರಭು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಆನಂದ್ ರಾಜ ವಿಕ್ರಂ ಬ್ಯೂಟಿಫುಲ್ ಹಾಡುಗಳನ್ನ ನೀಡಿದ್ದಾರೆ. ಹೀಗೆ ಇಷ್ಟೆಲ್ಲ ವಿಶೇಷತೆಗಳನ್ನು ಒಳಗೊಂಡು ತಯಾರಾಗುತ್ತಿರೋ ಈ ಸಿನಿಮಾ,
ರಿಲೀಸ್ ಆಗಿ ಎಷ್ಟರ ಮಟ್ಟಿಗೆ  ಪ್ರತಿಕ್ರಿಯೆ ಪಡೆದುಕೊಳ್ಳುತ್ತೋ ಕಾದುನೋಡಬೇಕು.
Loading...

 
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ