HOME » NEWS » Entertainment » REKHA REFUSES TO GET COVID 19 TEST DONE AFTER SECURITY GUARD TESTS POSITIVE RMD

Actress Rekha: ಕೊರೋನಾ ವಿಚಾರದಲ್ಲಿ ನಿಯಮ ಉಲ್ಲಂಘಿಸಿದರಾ ಬಾಲಿವುಡ್​ ನಟಿ ರೇಖಾ?

ಮೂಲಗಳ ಪ್ರಕಾರ ರೇಖಾ ಅವರಿಗೆ ಕಳೆದ ಕೆಲ ದಿನಗಳಿಂದ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿಲ್ಲ. ಈ ಹಿನ್ನೆಲೆಯಲ್ಲಿ ಅವರು ಟೆಸ್ಟ್​​ ಮಾಡಿಸಿಕೊಳ್ಳಲು ಮುಂದಾಗಿಲ್ಲ.

news18-kannada
Updated:July 16, 2020, 8:05 AM IST
Actress Rekha: ಕೊರೋನಾ ವಿಚಾರದಲ್ಲಿ ನಿಯಮ ಉಲ್ಲಂಘಿಸಿದರಾ ಬಾಲಿವುಡ್​ ನಟಿ ರೇಖಾ?
ರೇಖಾ
  • Share this:
ಬಾಲಿವುಡ್​ಗೆ ಕೊರೋನಾ ವೈರಸ್​ ಹೆಮ್ಮಾರಿ ಬೆಂಬಿಡದೆ ಕಾಡುತ್ತಿದೆ. ಬಿಗ್​ ಬಿ ಅಮಿತಾಭ್​ ಬಚ್ಚನ್​, ಅವರ ಮಗ ಅಭಿಷೇಕ್​ ಬಚ್ಚನ್​, ಅಭಿಷೇಕ್​ ಹೆಂಡತಿ ಐಶ್ವರ್ಯಾ ರೈ, ಮಗಳು ಆರಾಧ್ಯ ಬಚ್ಚನ್​ಗೆ ಕೊರೋನಾ ವೈರಸ್​ ಅಂಟಿತ್ತು. ಹೀಗಾಗಿ, ಅನೇಕರು ಕೊರೋನಾ ಟೆಸ್ಟ್​ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ನಟಿ ರೇಖಾ ಮಾತ್ರ ತಾವು ಪರೀಕ್ಷೆಗೆ ಒಳಗಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ರೇಖಾ ಮನೆಯ ಭದ್ರತಾ ಸಿಬ್ಬಂದಿಗೆ ಕೊರೋನಾ ವೈರಸ್​ ಅಂಟಿದೆ. ಮುಂಬೈ ಬೃಹತ್​ ಮಹಾನಗರ ಪಾಲಿಕೆಯ ನಿಯಮದ ಅನುಸಾರದಂತೆ ಅವರ ಮನೆಯನ್ನು ಕಂಟೇನ್ಮೆಂಟ್​ ಜೋನ್​ ಎಂದು ಘೋಷಣೆ ಮಾಡಲಾಗಿದೆ. ಅಲ್ಲದೆ, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಬೇಕು ಎನ್ನುವುದು ನಿಯಮದಲ್ಲಿದೆ. ಆದರೆ, ನಟಿ ರೇಖಾ ಈ ನಿಯಮಕ್ಕೆ ಕ್ಯಾರೇ ಎನ್ನುತ್ತಿಲ್ಲ. ತಾವು ಏನೆ ಆದರೂ ಕೊರೋನಾ ಟೆಸ್ಟ್​ ಮಾಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಮೂಲಗಳ ಪ್ರಕಾರ ರೇಖಾ ಅವರಿಗೆ ಕಳೆದ ಕೆಲ ದಿನಗಳಿಂದ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿಲ್ಲ. ಈ ಹಿನ್ನೆಲೆಯಲ್ಲಿ ಅವರು ಟೆಸ್ಟ್​​ ಮಾಡಿಸಿಕೊಳ್ಳಲು ಮುಂದಾಗಿಲ್ಲ. ಒಂದೊಮ್ಮೆ ಕೊರೋನಾ ಲಕ್ಷಣ ಕಂಡು ಬಂದರೆ ಟೆಸ್ಟ್​ ಮಾಡಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಧ್ರುವ ಸರ್ಜಾ, ಹೆಂಡತಿ ಪ್ರೇರಣಾಗೆ ಕೊರೋನಾ ಪಾಸಿಟಿವ್​

ಇನ್ನು, ತಾವು ಭದ್ರತಾ ಸಿಬ್ಬಂದಿ ಜೊತೆಯಲ್ಲಿ ಸಂಪರ್ಕಕ್ಕೇ ಬಂದಿಲ್ಲ ಎಂದು ರೇಖಾ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. “ನಾನು ಭದ್ರತಾ ಸಿಬ್ಬಂದಿಯನ್ನು ಮುಖಾಮುಖಿ ಭೇಟಿ ಆಗಿಲ್ಲ. ಹೀಗಾಗಿ, ಅವರಿಂದ ನನಗೆ ಕೊರೋನಾ ಹರಡಲು ಸಾಧ್ಯವಿಲ್ಲ. ಹೀಗಾಗಿ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ರೇಖಾ ಹೇಳಿರುವುದಾಗಿ ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚೆಗೆ ಸಾರಾ ಅಲಿ ಖಾನ್​, ಕರಣ್​ ಜೋಹರ್​, ಆಮಿರ್​ ಖಾನ್​, ಜಾನ್ವಿ ಕಪೂರ್​ ಸೇರಿ ಅನೇಕರ ಸ್ಟಾರ್​ ಕಲಾವಿದರ ಮನೆಯಲ್ಲಿ ಕೆಲಸ ಮಾಡುವವರಿಗೆ ಕೊರೋನಾ ಬಂದಿತ್ತು. ರೇಖಾ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು, 2018ರಲ್ಲಿ ತೆರೆಕಂಡ ಯಮಲಾ ಪಗಲಾ ದಿವಾನ: ಫಿರ್​ಸೆ ಸಿನಿಮಾದಲ್ಲಿ. ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.
Published by: Rajesh Duggumane
First published: July 16, 2020, 8:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading