ಭಾರತ (India) ದಲ್ಲಿ ಸಿನಿಮಾಗಳನ್ನು ಕೇವಲ ಮನರಂಜನೆ (Entertainment) ಗಷ್ಟೇ ನೋಡುವುದಿಲ್ಲ. ಸಿನಿಮಾದಿಂದ ಸ್ಫೂರ್ತಿ (Inspiration) ಸಹ ಪಡೆದುಕೊಳ್ಳುತ್ತಾರೆ. ಹೀಗಾಗಿ ಅಂದಿನ ಕಾಲದ ನಟ-ನಟಿಯರು ಒಂದು ಸಿನಿಮಾ ಮಾಡಬೇಕು ಅಂದಾಗ ಸಾಕಷ್ಟು ಯೋಚಿಸಿ ತಮ್ಮ ಮಾತು, ನಟನೆ ಹೇಗಿರಬೇಕೆಂದು ತಿಳಿದುಕೊಂಡು ಸಿನಿಮಾ ಮಾಡುತ್ತಿದ್ದರು. ಜೊತೆಗೆ ಸಿನಿಮಾದಾಚೆಗೂ ಅವರು ಎಂದೂ ಸುಖಾಸುಮ್ಮನೆ ಸ್ಟೇಟ್ಮೆಂಟ್ (Statment) ನೀಡುತ್ತಿರಲಿಲ್ಲ. ಯಾಕೆಂದರೆ ಆಗಿನ ಹೀರೋ (Hero) ಗಳನ್ನು ಜನರು ಫಾಲೋ ಮಾಡುತ್ತಿದ್ದರು. ಈಗಲೂ ಮಾಡುತ್ತಾರೆ ಆದರೆ ಒಳ್ಳೆಯ ವಿಚಾರಗಳನ್ನು ಅಲ್ಲ. ಬರೀ ಕೆಟ್ಟ ವಿಚಾರಗಳನ್ನು ಫಾಲೋ ಮಾಡುತ್ತಾರೆ. ಈಗಿನ ಕಾಲದ ನಟ-ನಟಿಯರು ಕೂಡ ಕೆಲವೊಂದು ಬಾರಿ ಎಲ್ಲೇ ಮೀರಿ ಮಾತನಾಡುತ್ತಾರೆ.
ಎಲ್ಲರೂ ಡಬಲ್ ಮೀನಿಂಗ್ ಡೈಲಾಗ್ (Double Meaning Dialogue) ಹೇಳುವುದು ಕಾಮನ್. ಆದರೆ ಅದಕ್ಕೆ ಒಂದು ಬಾರ್ಡರ್ ಇರುತ್ತೆ. ಅದನ್ನು ಮಾತ್ರ ಕ್ರಾಸ್ ಮಾಡಬಾರದು. ಇಲ್ಲೊಬ್ಬರು ನಟಿ ಆ ಬಾರ್ಡರ್ ಕ್ರಾಸ್ ಮಾಡಿ ಅಶ್ಲೀಲ ಜೋಕ್ ಹೇಳಿದ್ದಾರೆ.
ರೆಜಿನಾ ಕಸ್ಸಂದ್ರ ಡಬಲ್ ಮೀನಿಂಗ್ ಜೋಕ್ ವೈರಲ್!
ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಡಬಲ್ ಮೀನಿಂಗ್ ಜೋಕ್‌ಗಳನ್ನು ಬಳಸುವುದಿಲ್ಲ. ಆದರೆ ನಟಿ ರೆಜಿನಾ ಕಸ್ಸಂದ್ರ ಅಶ್ಲೀಲ ಜೋಕ್ ಹೇಳಿ ಪೇಚಿಗೆ ಸಿಲುಕಿದ್ದಾರೆ. ಅವರು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಡಬಲ್ ಮೀನಿಂಗ್ ಜೋಕ್‌ಗಳನ್ನು ಸಿಡಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ, ರೆಜಿನಾ ಡಬಲ್ ಮೀನಿಂಗ್ ಜೋಕ್ ಮಾಡಿದ್ದಾರೆ. ಇತ್ತೀಚೆಗೆ ರಜಿನಾ ಹಾಗೂ ನಿವೇತಾ ಥಾಮಸ್ ಅವರು ‘ಸಾಕಿನಿ ಧಾಕಿನಿ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸುಧೀರ್ ವರ್ಮಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಇಬ್ಬರೂ ನಟಿಯರು ಶಾಕಿನಿ ಡಾಕಿನಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಮ್ಯಾಗಿ, ಗಂಡಸರು ಎರಡು ಒಂದೇ!
ಮಾಧ್ಯಮಕ್ಕೆ ಸಂದರ್ಶನ ನೀಡುವಾಗ ರೆಜಿನಾ ಡಬಲ್ ಮೀನಿಂಗ್ ಜೋಕ್ ಹೇಳಿದ್ದಾರೆ. ಗಂಡಸರ ಲೈಂಗಿಕ ಸಾಮರ್ಥ್ಯವನ್ನು ಅವರು ಮ್ಯಾಗಿಗೆ ಹೋಲಿಸಿದ್ದಾರೆ. ‘ಗಂಡಸರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಆದರೆ, ಅದನ್ನು ಹೇಳಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ. ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ’ (Men and Maggi are for 2 minutes) ಎಂದು ನಕ್ಕರು. ಈ ಮಾತನ್ನು ಕೇಳಿ ಅಲ್ಲಿದ್ದವರೂ ನಕ್ಕರು. ಸದ್ಯ ಈ ಜೋಕ್ಗೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.
Mass🔥 attitude with cute looks👰🏻🧛♀️@ReginaCassandra @i_nivethathomas ❤️❤️ pic.twitter.com/frYqmRkvop
— Gwri (@prettyGowri) September 9, 2022
ಇದನ್ನೂ ಓದಿ: ಕೀರ್ತಿ ಸುರೇಶ್ ಫೋಟೋಗೆ 1 ಮಿಲಿಯನ್ ಲೈಕ್ಸ್! ಸಖತ್ ಕ್ಯೂಟ್
ರೆಜಿನಾ ವಿಡಿಯೋ ಸಿಕ್ಕಾಪಟ್ಟೆ ವೈರಲ್!
ಇನ್ನೂ ಈ ರೀತಿಯ ಹೇಳಿಕೆ ನೀಡಿರುವ ರೆಜಿನಾ ಅವರನ್ನು ಕೆಲವರು ಟ್ರೋಲ್ ಮಾಡುತ್ತಿದ್ದರೆ, ಇನ್ನೂ ಕೆಲವರು ಈಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಟಿಯಾಗಿ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ನಿಮಗೆ ಹೇಗೆ ಗೊತ್ತು, ನೀವು ಇನ್ನೂ ಮದುವೆನೇ ಆಗಿಲ್ವಲ್ಲಾ? ಎಂದು ಕಾಲೆಳೆಯುತ್ತಿದ್ದಾರೆ.
ಇದನ್ನೂ ಓದಿ: ಹನಿಮೂನ್ ಮೂಡ್ನಲ್ಲಿ ಮಹಾಲಕ್ಷ್ಮಿ, ರವೀಂದರ್; ಈ ಜೋಡಿಯ ರೋಮ್ಯಾಂಟಿಕ್ ಫೋಟೋಗಳು
ರೆಜಿನಾ ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನೂ ಅಲ್ಲ. ಚೇತನ್ ನಟನೆಯ ‘ಸೂರ್ಯಕಾಂತಿ’ ಚಿತ್ರದಲ್ಲಿ ನಟಿಸಿದ್ದಾರೆ. ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಚೇತನ್ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ