• Home
  • »
  • News
  • »
  • entertainment
  • »
  • Red carpet: ಸ್ಟಾರ್‌ ಮಕ್ಕಳಿಗೆ ರೆಡ್‌ ಕಾರ್ಪೆಟ್‌ ಹಾಕಿರೋದಿಲ್ಲ: ತುಷಾರ್‌ ಕಪೂರ್

Red carpet: ಸ್ಟಾರ್‌ ಮಕ್ಕಳಿಗೆ ರೆಡ್‌ ಕಾರ್ಪೆಟ್‌ ಹಾಕಿರೋದಿಲ್ಲ: ತುಷಾರ್‌ ಕಪೂರ್

ತುಷಾರ್​ ಕಪೂರ್​

ತುಷಾರ್​ ಕಪೂರ್​

Star: ಜನಸಾಮಾನ್ಯರಿಗೆ ಗೊತ್ತಿಲ್ಲದ ಒಳಗಿನ ಅದೆಷ್ಟೋ ಸತ್ಯಗಳಿವೆ. ಇತ್ತೀಚಿಗೆ ಬಾಲಿವುಡ್‌ ನಟ ತುಷಾರ್‌ ಕಪೂರ್ ಸಹ ಅಂಥದ್ದೇ ಶಾಕಿಂಗ್‌ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

  • Share this:

ಬಣ್ಣದ ಲೋಕ, ಸಿನಿಮಾ ಇಂಡಸ್ಟ್ರಿ (Film industry) ಯಲ್ಲಿ ಹೊರಗಿನಿಂದ ಬರುವವರು ಕಷ್ಟಪಡಬೇಕಾಗುತ್ತೆ. ಹಾಗೆಯೇ ಅಲ್ಲಿಯೇ ಒಳಗಿರುವವರು ಅಂದರೆ ನಟರ, ನಿರ್ಮಾಪಕರ ಅಥವಾ ನಿರ್ದೇಶಕರ ಮಕ್ಕಳು ಅವರ ನೆಂಟರಿಷ್ಟರು ಆರಾಮಾಗಿ ಸಿನಿಮಾ ಮಾಡಬಹುದು ಎಂಬುದು ಜನಸಾಮಾನ್ಯರ ಕಲ್ಪನೆ. ಆದ್ರೆ ಜನಸಾಮಾನ್ಯರಿಗೆ ಗೊತ್ತಿಲ್ಲದ ಒಳಗಿನ ಅದೆಷ್ಟೋ ಸತ್ಯಗಳಿವೆ. ಇತ್ತೀಚಿಗೆ ಬಾಲಿವುಡ್‌ ನಟ ತುಷಾರ್‌ ಕಪೂರ್ (Tusshar Kapoor)‌ ಸಹ ಅಂಥದ್ದೇ ಶಾಕಿಂಗ್‌ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಟ ತುಷಾರ್‌ ಕಪೂರ್‌ ಬಾಲಿವುಡ್‌ ನ ಆ ಕಾಲದ ಫೇಮಸ್‌ ನಟ ಜಿತೇಂದ್ರ ಅವರ ಪುತ್ರ. ಕ್ಯಾ ದಿಲ್ ನೆ ಕಹಾ, ಜೀನಾ ಸಿರ್ಫ್ ತೇರೆ ಲಿಯೇ, ಕುಚ್ ತೋ ಹೈ, ಗಾಯಬ್, ಖಾಕಿ, ಯೇ ದಿಲ್‌, ಇನ್ಸಾನ್, ಗೋಲ್ಮಾಲ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಸಿನಿಮಾ ರಂಗದಿಂದ ಸ್ವಲ್ಪ ದೂರವೇ ಉಳಿದಿರುವ ತುಷಾರ್‌ ಕಪೂರ್‌ ಸ್ಟಾರ್‌ ಕಿಡ್‌ ಗಳಿಗೆ ಯಾವುದೇ ರೆಡ್‌ ಕಾರ್ಪೆಟ್ (Red Carpet )‌ ಹಾಕಲಾಗೋದಿಲ್ಲ ಎಂದಿದ್ದಾರೆ.


ಕಸೌಲಿಯಲ್ಲಿ ನಡೆದ ಖುಷ್ವಂತ್ ಸಿಂಗ್ ಸಾಹಿತ್ಯೋತ್ಸವದ ಎರಡನೇ ದಿನದಂದು ನಟಿ ದಿವ್ಯಾ ದತ್ತಾ ಅವರೊಂದಿಗೆ ಸಂಭಾಷಣೆಯಲ್ಲಿ, ನಟ, ನಿರ್ಮಾಪಕ ತುಷಾರ್‌ ಕಪೂರ್‌ ಮನದಾಳವನ್ನು ಬಿಚ್ಚಿಟ್ಟರು. ಸದ್ಯ ಸಾಮಾನ್ಯ ಜೀವನದಿಂದ ದೂರವೇ ಉಳಿದಿರುವ ತುಷಾರ್‌ ಕಪೂರ್‌ ಸಿಂಗಲ್‌ ಫಾದರ್‌ ಕೂಡ ಆಗಿದ್ದಾರೆ.


“ಶೂಟಿಂಗ್‌ ನಲ್ಲಿ ಕರೀನಾಗಾಗಿ 12-14 ಗಂಟೆ ಕಾಯಬೇಕಾಗ್ತಿತ್ತು”!


ಈ ವೇಳೆ, ಚಿತ್ರರಂಗದಲ್ಲಿ ಒಳಗಿನವರು ಹಾಗೂ ಹೊರಗಿನವರು ಎಂಬ ದ್ವಂದ್ವದಲ್ಲಿ ಇವರು ಸ್ವತಃ ತಮ್ಮನ್ನು ಹೊರಗಿನವರು ಎಂದು ಪರಿಗಣಿಸುತ್ತಾರಂತೆ.


ಇದನ್ನೂ ಓದಿ: ಕಾಂತಾರ ಧರ್ಮದ ವಿವಾದ! ನಟ ಕಿಶೋರ್ ಹೇಳಿದ್ದಿಷ್ಟು


“ಪ್ರತಿ ಸ್ಟಾರ್ ಮಗುವಿಗೆ ರೆಡ್ ಕಾರ್ಪೆಟ್ ಹಾಕಲಾಗುವುದಿಲ್ಲ. ನನ್ನ ಚೊಚ್ಚಲ ಚಿತ್ರ, ಮುಜೆ ಕುಚ್ ಕೆಹನಾ ಹೈ ಚಿತ್ರೀಕರಣದ ಸಮಯದಲ್ಲಿ, ನನ್ನ ಸಹನಟಿ ಮತ್ತು ಇನ್ನೊಬ್ಬ ಸ್ಟಾರ್ ಕಿಡ್ ಕರೀನಾ ಕಪೂರ್ ಖಾನ್ ಅವರು ಏಕಕಾಲದಲ್ಲಿ ನಾಲ್ಕು ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದ 12-14 ಗಂಟೆಗಳ ಕಾಲ ನಾನು ಕಾಯಬೇಕಾಗುತ್ತಿತ್ತು. ಅವರ ಮೊದಲ ಚಿತ್ರ ಇನ್ನೂ ಬಿಡುಗಡೆಯಾಗಲಿಲ್ಲ. ಆದರೆ ಆಕೆಗೆ ಬೇಡಿಕೆಯಿತ್ತು" ಎನ್ನುತ್ತಾರೆ ನಟ ತುಷಾರ್.


“ಸ್ಟಾರ್ ಮಕ್ಕಳು ಮೂಕ ಡ್ರಾಪ್ ಔಟ್ ಅಲ್ಲ”!


ಸಾಮಾನ್ಯವಾಗಿ ಎಲ್ಲರೂ ಅಂದುಕೊಳ್ಳುವ ಹಾಗೆ ಸ್ಟಾರ್‌ ಮಕ್ಕಳು ಮೂಕ ಡ್ರಾಪ್‌ ಔಟ್‌ ಗಳು ಎಂಬುದು. ಆದರೆ ಅವರು ಕೂಡ ಕಷ್ಟಪಟ್ಟೇ ಮೇಲೆ ಬಂದಿರುತ್ತಾರೆ. ಹಾಗಾಗಿ ಆ ಎರಡು ಪದಗಳನ್ನು ಒಟ್ಟಿಗೆ ಜೋಡಿಸಲು ಸಾಧ್ಯವಿಲ್ಲ. ಅದು ನಿಜವೂ ಅಲ್ಲ ಎಂದು ಸಾಬೀತು ಮಾಡಲು ಬಯಸುತ್ತೇನೆ ಎಂದರು.


ಇನ್ನು, ಬ್ಯಾಚುಲರ್‌ ಡ್ಯಾಡ್‌ ಪುಸ್ತಕ ಬರೆಯಲು ಕಾರಣವೇನು ಎಂಬುದರ ಬಗ್ಗೆ ಹೇಳಿದ ತುಷಾರ್‌ ಕಪೂರ್‌, ಬ್ಯಾಚುಲರ್‌ ಆಗಿರುವುದು ಹೆಚ್ಚು ವಿಶೇಷವಾಗಿದೆ. ನನ್ನ ಜೀವನದಲ್ಲಿ ಮಗ ಬಂದ ಮೇಲೆ ಪರಿಚಯದವರು, ಸ್ನೇಹಿತರು, ಸಂಬಂಧಿಗಳು, ಮಾಧ್ಯಮದವರು, ಸಹೋದ್ಯೋಗಿಗಳು ಸೇರಿದಂತೆ ಎಲ್ಲರೂ ಕೇಳುವ ಒಂದೇ ಪ್ರಶ್ನೆ, ನೀವು ಹೇಗೆ ಇದನ್ನೆಲ್ಲ ನಿರ್ವಹಿಸುತ್ತೀರಿ ಎಂಬುದು. ಹಾಗಾಗಿ ನಾನು ಈ ಪುಸ್ತಕವನ್ನು ಪ್ರಕಟಿಸಲು ನಿರ್ಧರಿಸಿದೆ ಎನ್ನುತ್ತಾರೆ.


ಇದನ್ನೂ ಓದಿ: ಫೀಲ್ಡ್​ನಲ್ಲಿ ವಿರಾಟ್ ಅಬ್ಬರಕ್ಕೆ ಅನುಷ್ಕಾ ಫಿದಾ; ಕೊಹ್ಲಿಯನ್ನು ಕೊಂಡಾಡಿದ ಪತ್ನಿ


ಬಾಡಿಗೆ ತಾಯ್ತನದ ಮಾರ್ಗದಲ್ಲಿ ಹೋಗುವುದಕ್ಕಾಗಿ ಅವರು ಎದುರಿಸಿದ ತೀರ್ಪಿನ ಕುರಿತು ಹೇಳಿದ ತುಷಾರ್‌ ಕಪೂರ್‌ , “ಸಾಂಪ್ರದಾಯಿಕ ದಂಪತಿ ಯಾರಾದರೂ ದತ್ತು ಪಡೆಯಬಹುದು. ನನ್ನ ಸ್ವಂತ ಮಗುವನ್ನು ನಾನು ಯಾಕೆ ಪಡೆಯಬಾರದು ಎಂದೆನಿಸಿತು. ಅಲ್ದೆ, ನಾನೊಬ್ಬ ನಟ, ಹಾಗೂ ಸಿಂಗಲ್‌ ಡ್ಯಾಡ್‌ ಅನ್ನೋ ಕಾರಣಕ್ಕೆ ನನ್ನ ಮಗುವನ್ನು ದಾದಿಯರು ಬೆಳೆಸುತ್ತಾರೆ ಎಂದು ಜನ ಭಾವಿಸಿದ್ದರೆ ಅದು ಸತ್ಯಕ್ಕೆ ದೂರವಾದ ಮಾತು ಎಂದು ಅವರು ಹೇಳಿದರು.

First published: