• Home
  • »
  • News
  • »
  • entertainment
  • »
  • Abhishek Ambareesh: ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಜನ್ಮದಿನಕ್ಕೆ ಏನೆಲ್ಲ ಪ್ಲಾನ್ ಆಗಿದೇ ಗೊತ್ತೇ?

Abhishek Ambareesh: ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಜನ್ಮದಿನಕ್ಕೆ ಏನೆಲ್ಲ ಪ್ಲಾನ್ ಆಗಿದೇ ಗೊತ್ತೇ?

ಅಭಿಷೇಕ್ ಅಂಬರೀಶ್ ಜನ್ಮ ದಿನದ ವಿಶೇಷ ಏನು ಗೊತ್ತೇ?

ಅಭಿಷೇಕ್ ಅಂಬರೀಶ್ ಜನ್ಮ ದಿನದ ವಿಶೇಷ ಏನು ಗೊತ್ತೇ?

ಅಕ್ಟೋಬರ್-03 ರಂದು ಅಭಿಷೇಕ್ (Birthday Celebration) ಜನ್ಮ ದಿನ ಇರುತ್ತದೆ. ಈ ಜನ್ಮ ದಿನದ ವಿಶೇಷತೆಗಳನ್ನ ಬಗ್ಗೆ ಇಲ್ಲೊಂದು ಸ್ಟೋರಿ ಇದೆ. ಓದಿ

  • Share this:

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh) ಸಿನಿಮಾ ಪಯಣ (Film Journey) ಈಗಷ್ಟೇ ಶುರು ಆಗಿದೆ. ಸಿನಿಮಾಗೆ ಬರೋ ಮುಂಚೇನೂ ಅಭಿಷೇಕ್ ಅಂಬರೀಶ್, ಮನೆ ಬಳಿಗೆ ಬಂದ ಅಪ್ಪನ ಅಭಿಮಾನಿಗಳ ಜೊತೆಗೆ ಟೈಮ್ ಸ್ಪೆಂಡ್ ಮಾಡುತ್ತಿದ್ದರು. ಅದೇ ಅಭಿಷೇಕ್ ಅಂಬರೀಶ್ ಈಗ ಹೀರೋ ಕೂಡ ಆಗಿದ್ದಾರೆ. ತಮ್ಮ ಮೊದಲ ಸಿನಿಮಾ ಅಮರ್ (Amar Film) ಚಿತ್ರದ ಮೂಲಕ ಭರವಸೆಯ ನಟರೇ ಆಗಿದ್ದಾರೆ. ಅಕ್ಟೋಬರ್-03 ರಂದು ಅಭಿಷೇಕ್ (Abhishek Ambareesh Birthday Celebration) ಜನ್ಮ ದಿನ ಇರುತ್ತದೆ. ಈ ಜನ್ಮ ದಿನದ ವಿಶೇಷತೆಗಳನ್ನ ಬಗ್ಗೆ ಇಲ್ಲೊಂದು ಸ್ಟೋರಿ ಇದೆ. ಓದಿ


ಜೂನಿಯರ್ ರೆಬಲ್ ಸ್ಟಾರ್ ಅಂಬಿ ಸಿನಿಮಾ ಜರ್ನಿ
ಅಭಿಷೇಕ್ ಅಂಬರೀಶ್ ಚಿತ್ರದ ಜೀವನದಲ್ಲಿ ಅಮರ್ ಸಿನಿಮಾ ವಿಶೇಷವಾಗಿಯೇ ನಿಲ್ಲುತ್ತದೆ. ಒಂದು ಒಳ್ಳೆ ಕಥೆಯ ಈ ಚಿತ್ರ ತುಂಬಾ ವಿಶೇಷವಾಗಿಯೇ ಇತ್ತು. ರೆಬಲ್ ಸ್ಟಾರ್ ಅಂಬರೀಶ್ ನಿರ್ವಹಿಸಿದ್ದ ಚಿತ್ರಗಳ ಕ್ಯಾರೆಕ್ಟರ್​ ನಲ್ಲೂ ಅಮರ್ ಹೆಸರು ಇರುತ್ತಿತ್ತು.


Rebel Star Ambarish Son Abhishek Ambareesh Celebrating His birthday on October-03
ಅಕ್ಟೋಬರ್-03 ಕ್ಕೆ ಬ್ಯಾಡ್​ ಮ್ಯಾನರ್ಸ್ ಟೀಸರ್ ರಿಲೀಸ್


ಅದೇ ಹೆಸರಿನ ಸಿನಿಮಾದ ಮೂಲಕವೇ ಅಭಿಷೇಕ್ ಅಂಬರೀಶ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಅಂಬಿ ಪುತ್ರ ಅಮರ್ ಬಂದೇ ಬಿಟ್ಟರು ಅನ್ನೋಮಟ್ಟಿಗೆ ಅಭಿಷೇಕ್ ಅಂಬರೀಶ್ ತಮ್ಮ ಮೊದಲ ಸಿನಿಮಾದಲ್ಲಿ ಅಭಿನಯಿಸಿದ್ದರು.


ಅಮರ್ ಚಿತ್ರದ ಬಳಿಕ ಅಭಿ ಬ್ಯಾಡ್ ಮ್ಯಾನರ್ಸ್ ಸಿನಿಮಾ
ಅಮರ್ ಸಿನಿಮಾವನ್ನ ನಾಗಶೇಖರ್ ಡೈರೆಕ್ಟ್ ಮಾಡಿದ್ದರು. ಈ ಚಿತ್ರದ ಹಾಡುಗಳೂ ಸೂಪರ್ ಆಗಿಯೇ ಹಿಟ್ ಆದವು. ಮೊದಲ ಸಿನಿಮಾದಲ್ಲಿಯೇ ಅಭಿಷೇಕ್ ಅಂಬರೀಶ್ ಒಳ್ಳೆ ಹಾಡು ಮತ್ತು ಒಳ್ಳೆ ಕಥೆಯನ್ನ ಇಟ್ಟುಕೊಂಡೇ ಸಿನಿಮಾರಂಗಕ್ಕೆ ಕಾಲಿಟ್ಟರು.


ಇದನ್ನೂ ಓದಿ: Ponniyin Selvan Collections: ಪೊನ್ನಿಯಿನ್ ಸೆಲ್ವನ್ ಮೊದಲ ದಿನ ಕಲೆಕ್ಷನ್ ಎಷ್ಟು? ಮಣಿರತ್ನಂ ಸಿನಿಮಾ ಹಿಟ್


ಅಮರ್ ಬಳಿಕ ಅಭಿಷೇಕ್ ಅಂಬರೀಶ್ ಯಾವ ಸಿನಿಮಾ ಮಾಡುತ್ತಾರೆ ಅನ್ನೋ ಕ್ವಶ್ಚನ್ ಇತ್ತು. ಅದಕ್ಕೂ ಅತಿ ಶೀಘ್ರದಲ್ಲಿಯೇ ಉತ್ತರ ಸಿಕ್ಕಿತು. ಅದುವೇ ಬ್ಯಾಡ್ ಮ್ಯಾನರ್ಸ್.


ಹೌದು, ಈ ಚಿತ್ರದ ಮೂಲಕವೇ ಅಭಿಷೇಕ್ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸುತ್ತಿದ್ದಾರೆ.


ಡೈರೆಕ್ಟರ್ ದುನಿಯಾ ಸೂರಿ ನಿರ್ದೇಶನದಲ್ಲಿ ಬರ್ತಿರೋ ಈ ಚಿತ್ರದ ಬಗ್ಗೆ ಇಂಡಸ್ಟ್ರೀಯಲ್ಲಿ ಒಂದು ಒಳ್ಳೆ ಟಾಕ್ ಬರ್ತಿದ್ದು, ಚಿತ್ರದ ಟೀಸರ್ ಕೂಡ ಅಭಿಷೇಕ್ ಜನ್ಮ ದಿನಂದೇ ಹೊರ ಬೀಳುತ್ತಿದೆ.


ಟೀಸರ್​ಗೊಂದು ಟೀಸರ್-ಇದು ಅಭಿ ಸಿನಿಮಾ ಖದರ್
ಕನ್ನಡದಲ್ಲಿ ಈ ಒಂದು ಟ್ರೆಂಡ್ ಶುರು ಆಗಿದೆ. ಟೀಸರ್ ರಿಲೀಸ್​ಗೊಂದು ಟೀಸರ್ ಅನ್ನೋ ಹಾಗೆ ಅಭಿಷೇಕ್ ಜನ್ಮದಿನದ ಮೊದಲೇ, ಟೀಸರ್ ಬಿಡ್ತಿವಿ ಅಂತಲೇ ಹೇಳೋ ಒಂದು ಟೀಸರ್ ರಿಲೀಸ್ ಆಗಿದೆ.


ಬ್ಯಾಡ್ ಮ್ಯಾನರ್ಸ್ ಚಿತ್ರದ ಅಭಿಷೇಕ್ ಪಾತ್ರದ ಖದರ್​ನನ್ನೆ ಈ ಒಂದು ವೀಡಿಯೋ ಟೀಸರ್ ಹೇಳುತ್ತಿದೆ. ಇದಕ್ಕಾಗಿಯೇ ಹಿನ್ನೆಲೆಯಲ್ಲಿ ಬಳಸಿರೋ ಮ್ಯೂಸಿಕ್ ಕೂಡ ವಿಶೇಷವಾಗಿಯೇ ಇದೆ. ಬ್ಯಾಡ್ ಮ್ಯಾನರ್ಸ್ ಅನ್ನೋ ಪದವೂ ಈ ಹಾಡಲ್ಲಿ ಬರುತ್ತದೆ.


ಅಕ್ಟೋಬರ್​-03 ರಂದು ಬೆಳಗ್ಗೆ 10.35 ಕ್ಕೆ ಬ್ಯಾಡ್​ ಮ್ಯಾನರ್ಸ್ ಟೀಸರ್
ಅಭಿಷೇಕ್ ಅಂಬರೀಶ್ ಪಾತ್ರದ ಜೊತೆ ಜೊತೆಗೆ ಬಂದ ಜೂನಿಯರ್ ರೆಬಲ್ ಸ್ಟಾರ್ ಅನ್ನೋ ಲೈನ್ ಕೂಡ ಈ ಒಂದು ಹಿನ್ನೆಲೆಯ ಹಾಡಿನಲ್ಲಿ ಬರುತ್ತದೆ. ಹೀಗೆ ಅಭಿಷೇಕ್ ಅಂಬರೀಶ್ ಜನ್ಮ ದಿನದಂದು ಬೆಳಗ್ಗೆ 10.35 ಕ್ಕೆ ಬ್ಯಾಡ್ ಮ್ಯಾನರ್ಸ್ ಸಿನಿಮಾ ಟೀಸರ್ ರಿಲೀಸ್ ಆಗಿ ಧಮಾಕಾ ಮಾಡಲಿದೆ.


Rebel Star Ambarish Son Abhishek Ambareesh Celebrating His birthday on October-03
ಜೂನಿಯರ್ ರೆಬಲ್ ಸ್ಟಾರ್ ಅಂಬರೀಶ್


ಅಭಿ ಬರ್ತ್​ಡೇಗೆ ಕಾಳಿ ಸಿನಿಮಾ ಪೋಸ್ಟರ್ ರಿಲೀಸ್
ಅಭಿಷೇಕ್ ಅಂಬರೀಶ್ ಮೂರನೇ ಸಿನಿಮಾದ ಪೋಸ್ಟರ್ ರಿಲೀಸ್. ಹೌದು, ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರ ನಿರ್ದೇಶನದಲ್ಲಿ ಕಾಳಿ ಸಿನಿಮಾ ರೆಡಿ ಆಗುತ್ತಿದೆ. ಅಭಿಷೇಕ್ ಅಂಬರೀಶ್ ಈ ಚಿತ್ರದಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ.


ಅಭಿಷೇಕ್ ಜನ್ಮದಿನದಂದು ಕಾಳಿ ಚಿತ್ರದ ಒಂದು ಪೋಸ್ಟರ್ ಕೂಡ ರಿಲೀಸ್ ಆಗುತ್ತಿದೆ. ಪೋಸ್ಟರ್ ರಿಲೀಸ್ ಮಾಡೋ ಮೂಲಕ ಅಭಿಷೇಕ್​ಗೆ ಚಿತ್ರದ ತಂಡ ಶುಭಾಶಯ ಕೋರಲಿದೆ.


ಇದನ್ನೂ ಓದಿ: Sharmiela Mandre: ಮರ್ಡರ್ ಲೈವ್ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ! ಹಾಲಿವುಡ್ ಟಚ್​​ನಲ್ಲಿ ಬರ್ತಿದೆ ಕನ್ನಡ ಸಿನಿಮಾ


ಅಭಿಷೇಕ್ ನಾಲ್ಕನೆ ಸಿನಿಮಾ ಕೂಡ ತನ್ನದೇ ಆದ ವಿಶೇಷ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಮೂಲಕ ಗಮನ ಸೆಳೆದಿದೆ. ಡೈರೆಕ್ಟರ್ ಮಹೇಶ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಭಿಷೇಕ್ ಲುಕ್ ತುಂಬಾ ಗಮನ ಸೆಳೆದಿದೆ.


ವಾರಿಯರ್ ಲುಕ್ ನಲ್ಲಿಯೇ ಅಭಿಷೇಕ್ ಅಂಬರೀಶ್ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರತಂಡದಿಂದಲೂ ಅಭಿಷೇಕ್ ಅಂಬರೀಶ್ ಜನ್ಮ ದಿನಕ್ಕೆ ತನ್ನದೇ ರೀತಿಯಲ್ಲಿ ಶುಭ ಹಾರೈಕೆ ತಿಳಿಸಿದೆ. ಎಂದಿನಂತೆ ಈ ವರ್ಷವು ಅಭಿಷೇಕ್ ಅಂಬರೀಶ್ ಮನೆ ಬಳಿ ಬರೋ ಅಭಿಮಾನಿಗಳ ಜೊತೆಗೆ ತಮ್ಮ ಜನ್ಮ ದಿನದ ಸೆಲೆಬ್ರೇಷನ್ ಮಾಡಿಕೊಳ್ಳಲಿದ್ದಾರೆ.

First published: