Rebel Star Ambareesh: ಅಂಬಿ ಫೋಟೋ ಹಂಚಿಕೊಂಡ ಸುಮಲತಾ! ವಿಷ್ಣು ಫ್ಯಾನ್ಸ್ ಏನಂದ್ರು?

ಅಂಬರೀಶ್ ಸ್ಪೆಷಲ್ ಫೋಟೋ ಹಂಚಿಕೊಂಡ ಸುಮಲತಾ

ಅಂಬರೀಶ್ ಸ್ಪೆಷಲ್ ಫೋಟೋ ಹಂಚಿಕೊಂಡ ಸುಮಲತಾ

ಅಂಬರೀಶ್ ಮತ್ತು ಕಮಲ್ ಫೋಟೋ ನೋಡುತ್ತಿದ್ದಂತೆ, ವಿಷ್ಣು ಅಭಿಮಾನಿ ಒಬ್ಬರು "ವಿಷ್ಣು ಅಪ್ಪಾಜಿ ಸ್ಮಾರಕ ಒಪನಿಂಗ್​ಗೆ ಗಣ್ಯರು ಯಾರು ಬರಲ್ವಾ ಮೇಡಂ " ಅಂತ ಕಮೆಂಟ್ ಬಾಕ್ಸ್ ಅಲ್ಲಿ ಕೇಳಿದ್ದಾರೆ. ಆದರೆ ಸುಮಲತಾ ಅಂಬರೀಶ್ ಅವರು ಈ ಒಂದು ಪ್ರಶ್ನೆಗೆ ಇನ್ನು ಉತ್ತರ ಕೊಟ್ಟಿಲ್ಲ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​ವುಡ್​ನ ರೆಬಲ್ ಸ್ಟಾರ್ ಅಂಬರೀಶ್ (Rebel Star Ambareesh) ಎಲ್ಲರ ಫೇವರಿಟ್ ನಾಯಕ ನಟ. ಅವರು ಭೌತಿಕವಾಗಿ ಇಲ್ಲ ಅನ್ನೋದು ಬಿಟ್ರೆ, ಎಲ್ಲೂ ಹೋಗಿಲ್ಲ. ಎಲ್ಲರ ಮನದಲ್ಲಿ ಈಗಲೂ ಇದ್ದಾರೆ. ಅಂಬರೀಶ್ (Ambareesh) ಅಂದ್ರೆ ಸ್ನೇಹ, ಅಂಬರೀಶ್ ಅಂದ್ರೆ ಪ್ರೀತಿ, ಅಂಬರೀಶ್ ಅಂದ್ರೆ ಸೂಪರ್ ಸ್ಟಾರ್, ಹೀಗೆ ಹತ್ತು ಹಲವು ವಿಶೇಷಗಳನ್ನು (Sandalwood Star Ambaressh) ನಾವು ಹೇಳುತ್ತಾ ಹೋಗಬಹುದು. ಅಂಬರೀಶ್ ಅವರಿಗೆ ದುಷ್ಮನ್​ಗಳೇ ಇರಲಿಲ್ಲ. ಅಂಬರೀಶ್ ಕೇವಲ ಕನ್ನಡ ಇಂಡಸ್ಟ್ರಿಗೆ ಮಾತ್ರ ಪರಿಚಯವಲ್ಲ. ಅವರ ಸ್ನೇಹ ಪಕ್ಕದ ಟಾಲಿವುಡ್​ಗೂ ಪಸರಿಸಿತ್ತು. ಕಾಲಿವುಡ್​ನಲ್ಲೂ (Kamal Haasan) ಅಂಬರೀಶ್ ಅವರಿಗೆ ಸ್ನೇಹಿತರಿದ್ದರು. ಹಾಗೆ ಅನೇಕ ಸ್ನೇಹಿತರು ಬೆಂಗಳೂರಿಗೆ ಬಂ, ಅಂಬರೀಶ್ ಅವರ ಮನೆಗೆ ಬಂದು ಹೋಗುತ್ತಿದ್ದರು.


ಅಂತಹ ಒಂದು ವಿಶೇಷ ಕ್ಷಣದ ಒಂದು ಅಪರೂಪದ ಫೋಟೋವನ್ನ ಸುಮಲತಾ ಅಂಬರೀಶ್ ಅವರು ಈಗ ಶೇರ್ ಮಾಡಿಕೊಂಡಿದ್ದಾರೆ.


Rebel Star Ambareesh-Kamal Haasan Special Photos Shared
ರೆಬಲ್ ಸ್ಟಾರ್ ಅಂಬರೀಶ್ ಅಪರೂಪದ ಫೋಟೋ ಶೇರ್


ರೆಬಲ್ ಸ್ಟಾರ್ ಅಂಬರೀಶ್ ಅಪರೂಪದ ಫೋಟೋ ಶೇರ್
ರೆಬಲ್ ಸ್ಟಾರ್ ಅಂಬರೀಶ್ ಸಿನಿಮಾ ಜೀವನದಲ್ಲಿ ಎಲ್ಲರಿಗೂ ಬೇಕಾಗಿದ್ದವರು. ರಿಯಲ್ ಲೈಫ್​ಲ್ಲೂ ಅಂಬರೀಶ್ ಎಲ್ಲರ ಫೇವರಿಟ್ ವ್ಯಕ್ತಿ ಆಗಿದ್ದರು. ಅಂಬರೀಶ್ ಎಲ್ಲಿ ಇರುತ್ತಿದ್ದರೋ ಅಲ್ಲಿ ನಗುವಿಗೆ ಬರ ಇರುತ್ತಿರಲಿಲ್ಲ. ಅಂಬಿ ಇದ್ದಲ್ಲಿ ಎಲ್ಲರೂ ಹ್ಯಾಪಿ ಹ್ಯಾಪಿನೇ ಆಗಿರುತ್ತಿದ್ದರು.




ಅಂಬರೀಶ್ ಅವರ ಸ್ನೇಹ ಕನ್ನಡ ಇಂಡಸ್ಟ್ರಿಗೆ ಮಾತ್ರ ಸೀಮಿತ ಆಗಿರಲಿಲ್ಲ. ದೂರದ ಬಾಲಿವುಡ್​ನಲ್ಲೂ ಅಂಬರೀಶ್ ಅವರ ಸ್ನೇಹಿತರಿದ್ದರು. ಪಕ್ಕದ ತಮಿಳು ಮತ್ತು ತೆಲುಗು ಇಂಡಸ್ಟ್ರಿಯಲ್ಲೂ ಅಂಬರೀಶ್ ಅವರ ಸ್ನೇಹಿತರ ದಂಡೇ ಇತ್ತು.


ಅಂಬಿ ಮನೆಗೆ ಬರ್ತಿದ್ದರು ಎಲ್ಲ ಭಾಷೆಯ ಸ್ನೇಹಿತರು


ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ನೇಹ ತುಂಬಾ ಗಟ್ಟಿಯಾಗಿಯೇ ಇರುತ್ತಿತ್ತು. ಸಣ್ಣ-ಪುಟ್ಟ ವಿಷಯಕ್ಕೆ ಜಗಳವಾಡಿ ದೂರ ಆಗಿದ್ದೇ ಇಲ್ಲ. ಯಾರ ಜೊತೆಗೆ ಅಂಬಿ ಸ್ನೇಹ ಕಳೆದುಕೊಂಡವರಲ್ಲ. ಸ್ನೇಹಕ್ಕೆ ರೆಬಲ್ ಸ್ಟಾರ್ ಅಂಬರೀಶ್ ಅಷ್ಟೊಂದು ಗೌರವ ಕೊಡ್ತಿದ್ದರು.




ಅಂಬರೀಶ್ ಅವರ ಸ್ನೇಹಿತರು ಬೆಂಗಳೂರಿಗೆ ಬಂದ್ರೆ ಸಾಕು, ಅವರು ಎಂದೂ ಅಂಬಿ ಮನೆಗೆ ಬರದೇ ಹೋಗುತ್ತಿರಲಿಲ್ಲ. ರೆಬಲ್ ಸ್ಟಾರ್ ಅಂಬಿ ಮನೆಗೆ ಬಂದು ಒಂದಷ್ಟು ಹೊತ್ತು ಕಳೆದು ಹೋಗುತ್ತಿದ್ದರು. ಅಂಬರೀಶ್ ಮೇಲೆ ಅಷ್ಟೊಂದು ಗೌರವವನ್ನ ಎಲ್ಲ ಸ್ಟಾರ್​ ನಟರು ಇಟ್ಟುಕೊಂಡಿದ್ದರು.


ರೆಬಲ್ ಸ್ಟಾರ್ ಅಂಬಿ ಮನೆಗೆ ಕಾಲಿವುಡ್​ ಸೂಪರ್ ಸ್ಟಾರ್ ಭೇಟಿ
ಅಂಬರೀಶ್ ಅವರ ಮನೆಗೆ ವಿಶೇಷ ವ್ಯಕ್ತಿಗಳು ಬಂದು ಹೋಗುತ್ತಿದ್ದರು. ಹಾಗೆ ಸ್ನೇಹಿತ ಮತ್ತು ಕಾಲಿವುಡ್​ನ ಸೂಪರ್ ಡೈರೆಕ್ಟರ್-ಆ್ಯಕ್ಟರ್ ಕಮಲ್ ಹಾಸನ್ ಕೂಡ ಬಂದು ಹೋಗಿದ್ದರು. ಅಂಬರೀಶ್ ಅವರ ಜೊತೆಗೆ ಸುಮಾರು ಹೊತ್ತು ಟೈಮ್​ ಸ್ಪೆಂಡ್​ ಕೂಡ ಮಾಡಿ ಹೋಗಿದ್ದರು. ಆ ಕ್ಷಣ ನಿಜಕ್ಕೂ ಸ್ಪೆಷಲ್ ಆಗಿದೆ ನೋಡಿ.


ಸೋಷಿಯಲ್ ಮೀಡಿಯಾದಲ್ಲಿ ಅಂಬಿ-ಕಮಲ್ ಫೋಟೋ ಶೇರ್
ರೆಬಲ್ ಸ್ಟಾರ್ ಅಂಬರೀಶ್ ಮತ್ತು ಕಮಲ್ ಹಾಸನ್ ಅವರ ಅಪರೂಪದ ಫೋಟೋವೊಂದನ್ನ ಸುಮಲತಾ ಅಂಬರೀಶ್ ಅವರು ಶೇರ್ ಮಾಡಿದ್ದಾರೆ. ಜನವರಿ-28 ರಂದು ತಮ್ಮ ಸೋಷಿಯಲ್ ಮೀಡಿಯಾದ ಅಧಿಕೃತ ಪೇಜ್​ ನಲ್ಲಿ ಈ ಒಂದು ಫೋಟೋ ಹಂಚಿಕೊಂಡಿದ್ದಾರೆ.


ಅಂಬರೀಶ್ ಅವರ ಮನೆಗೆ ಕಮಲ್ ಹಾಸನ್ ಬಂದಿದ್ದರು. ಸುಮಾರು ಹೊತ್ತು ಮಾತನಾಡಿದ್ದರು. ಹಾಗೆ ಬಾಲ್ಕನಿಯಲ್ಲಿ ನಿಂತುಕೊಂಡು ನಗ್ತಾ ನಗ್ತಾನೇ ಅದ್ಯಾರನ್ನೋ ಮತನಾಡಿಸುತ್ತಿದ್ದರು. ಆ ಒಂದು ವಿಶೇಷ ಸಮಯದಲ್ಲಿಯೇ ಕ್ಲಿಕ್ಕಿಸಿದ ಫೋಟೋವನ್ನ ಸುಮಲತಾ ಅಂಬರೀಶ್ ಎಲ್ಲರೊಟ್ಟಿಗೆ ಈಗ ಶೇರ್ ಮಾಡಿದ್ದಾರೆ.


ಅಂಬಿ-ಕಮಲ್ ಫೋಟೋ ಶೇರ್-ಫ್ಯಾನ್ಸ್ ಏನಂದ್ರು?
ಸುಮಲತಾ ಅಂಬರೀಶ್ ಅವರು ಅಂಬಿ ಮತ್ತು ಕಮಲ್ ಹಾಸನ್ ಫೋಟೋ ಶೇರ್ ಮಾಡಿದ್ದೇ ತಡ, ಅಂಬಿ ಫ್ಯಾನ್ಸ್ ತುಂಬಾ ಖುಷಿಪಟ್ಟಿದ್ದಾರೆ. ಹಾರ್ಟ್ ಸಿಂಬಲ್ ಹಾಕಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ತಮ್ಮದೇ ರೀತಿಯಲ್ಲಿ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಅಂಬಿ-ಕಮಲ್ ಫೋಟೋಗೆ ವಿಷ್ಣು ಫ್ಯಾನ್ಸ್ ಕಾಮೆಂಟ್
ಅಂಬರೀಶ್ ಮತ್ತು ಕಮಲ್ ಹಾಸನ್ ಫೋಟೋವನ್ನ ಸುಮಲತಾ ಶೇರ್ ಮಾಡಿದ್ದಾರೆ. ಹಳೆ ದಿನಗಳನ್ನ ಈ ಫೋಟೋ ಮೂಲಕ ಮೆಲುಕು ಹಾಕಿದ್ದಾರೆ. ಹಾಗೇನೆ ನಾಳೆ ನಡೆಯೋ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮಕ್ಕೂ ಹೋಗುತ್ತಿದ್ದಾರೆ.


Rebel Star Ambareesh-Kamal Haasan Special Photos Shared
ಅಂಬಿ ಮನೆಗೆ ಬರ್ತಿದ್ದರು ಎಲ್ಲ ಭಾಷೆಯ ಸ್ನೇಹಿತರು


ಆದರೆ ಅಂಬರೀಶ್ ಮತ್ತು ಕಮಲ್ ಫೋಟೋ ನೋಡುತ್ತಿದ್ದಂತೇನೆ, ವಿಷ್ಣು ಫ್ಯಾನ್ಸ್ ಒಬ್ಬರು "ವಿಷ್ಣು ಅಪ್ಪಾಜಿ ಸ್ಮಾರಕ ಒಪನಿಂಗ್​ಗೆ ಗಣ್ಯರು ಯಾರು ಬರಲ್ವಾ ಮೇಡಂ " ಅಂತಲೂ ಕಾಮೆಂಟ್ ಬಾಕ್ಸ್ ಅಲ್ಲಿ ಕೇಳಿದ್ದಾರೆ. ಆದರೆ ಸುಮಲತಾ ಅಂಬರೀಶ್ ಅವರು ಈ ಒಂದು ಪ್ರಶ್ನೆಗೆ ಇನ್ನು ಉತ್ತರವೇನೂ ಕೊಟ್ಟಿಲ್ಲ.


ಇದನ್ನೂ ಓದಿ:  Sanjay Dutt Movie: ಕೈದಿಯಾಗಿ ಕಂಬಿ ಹಿಂದೆ ಸಂಜೂ ಭಾಯ್! ಯಾವ್ ಸಿನಿಮಾ ಇದು?


ಆದರೆ ಈ ಒಂದು ಹಳೆ ಪೋಟೋ ಅಂಬಿ ಅಭಿಮಾನಿಗಳಲ್ಲಿ ಖುಷಿನೂ ತಂದಿದೆ. ಹಾಗೇನೆ ಅಂಬಿಯ ಆ ಸ್ಪೆಷಲ್ ನಗುವನ್ನ ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿದೆ.

First published: