ಸ್ವಾಭಿಮಾನಿಗಳ ವಿಜಯೋತ್ಸವದ ಹೆಸರಲ್ಲಿ ರೆಬೆಲ್​ ಸ್ಟಾರ್ ಅಂಬಿ​ ಹುಟ್ಟುಹಬ್ಬ

ಚುನಾವಣೆಯಲ್ಲಿ ಗೆದ್ದ ಸಂಭ್ರಮವನ್ನು ಆಚರಿಸೋಕೆ ಸುಮಲತಾ ಒಂದು ವಿಶೇಷ ದಿನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲೂ ಅಂಬಿ ಹುಟ್ಟುಹಬ್ಬಕ್ಕೆ ಒಂದು ವಿಶೇಷವಾದ ಹೆಸರನ್ನೂ ಇಟ್ಟಿದ್ದಾರೆ ಸುಮಲತಾ.

Anitha E | news18
Updated:May 24, 2019, 7:35 PM IST
ಸ್ವಾಭಿಮಾನಿಗಳ ವಿಜಯೋತ್ಸವದ ಹೆಸರಲ್ಲಿ ರೆಬೆಲ್​ ಸ್ಟಾರ್ ಅಂಬಿ​ ಹುಟ್ಟುಹಬ್ಬ
ನಟಿ ಸುಮಲತಾ
Anitha E | news18
Updated: May 24, 2019, 7:35 PM IST
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನ ಸಂಭ್ರಮಾಚರಣೆ ಯಾವಾಗ ಅನ್ನೋ ಕುತೂಹಲ ಎಲ್ಲರಿಗೂ ಇತ್ತು.

ಇಂದು ಅಂಬರೀಷ್​ ಅವರ 6ನೇ ತಿಂಗಳ ಪುಣ್ಯ ತಿಥಿ. ಇದರ ಅಂಗವಾಗಿ ಪೂಜೆ ಸಲ್ಲಿಸಲು ಸುಮಲತಾ ಹಾಗೂ ಮಗ ಅಭಿಷೇಕ್​ ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ, ಗೆಲುವಿನ ಸಂಭ್ರಮಾಚರಣೆ ಬಗ್ಗೆ ಮಾತನಾಡಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಸಂಭ್ರಮವನ್ನು ಆಚರಿಸೋಕೆ ಒಂದು ದಿನ ಇದೆ. ಅದು ಅಂಬಿ ಹುಟ್ಟುಹಬ್ಬದ ದಿನ ಅಂತ ಹೇಳಿದ್ದಾರೆ. ಮಂಡ್ಯದಲ್ಲಿ ಸ್ವಾಭಿಮಾನಿಗಳ ವಿಜಯೋತ್ಸವ ಹೆಸರಲ್ಲಿ ಭರ್ಜರಿ ಸಮಾವೇಶ ನಡೆಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: 26 ವರ್ಷಗಳ ಹಿಂದೆಯೇ ಸ್ಯಾಂಡಲ್​ವುಡ್​ನಲ್ಲಿ ರ‍್ಯಾಪ್​ ಹಾಡಿನ ಪ್ರಯೋಗ ಮಾಡಿದ್ದ ಜಗ್ಗೇಶ್​..!

ಈ ಸಮಾವೇಶದಲ್ಲಿ ಜೋಡೆತ್ತುಗಳಾದ ದರ್ಶನ್​ ಹಾಗೂ ಯಶ್​ ಭಾಗವಹಿಸಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಹೌದು, ಅವರಿಬ್ಬರೂ ಕೂಡ ಅಂದು ನಡೆಯುವ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿರಲಿದ್ದಾರೆ ಎಂದಿದ್ದಾರೆ.

ಅಂಬಿ ಸಮಾಧಿಗೆ ಆರನೇ ತಿಂಗಳ ಪುಣ್ಯನಮನ ಸಲ್ಲಿಸಿದ ಸುಮಲತಾ ಇದು ಮಂಡ್ಯ ಸ್ವಾಭಿಮಾನ ಮತ್ತು ಅಂಬರೀಷ್ ಅಭಿಮಾನಕ್ಕೆ ಸಿಕ್ಕ ಈ ಗೆಲುವು ಅನ್ನೋ ಖುಷಿಯಲ್ಲಿದ್ದರು. ಅದಕ್ಕಾಗಿ ಅಂಬಿ ಹುಟ್ಟುಹಬ್ಬದ ದಿನವನ್ನೇ ಸಂಭ್ರಮಾಚರಣೆಗೆ ಆಯ್ಕೆ ಮಾಡಿಕೊಂಡಿದ್ದಾರಂತೆ ಸುಮಲತಾ.
Loading...

First published:May 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...