• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Ambareesh Movie: ಕನ್ನಡ ಕ್ಲಾಸಿಕ್ ಸಿನಿಮಾ ರೀ ರಿಲೀಸ್, ಅಂಬಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್!

Ambareesh Movie: ಕನ್ನಡ ಕ್ಲಾಸಿಕ್ ಸಿನಿಮಾ ರೀ ರಿಲೀಸ್, ಅಂಬಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್!

ಹೊಸ ತಂತ್ರಜ್ಞಾನದೊಂದಿಗೆ ಅಂತ ಚಿತ್ರ ಮತ್ತೊಮ್ಮೆ ರಿಲೀಸ್

ಹೊಸ ತಂತ್ರಜ್ಞಾನದೊಂದಿಗೆ ಅಂತ ಚಿತ್ರ ಮತ್ತೊಮ್ಮೆ ರಿಲೀಸ್

ರೆಬಲ್ ಸ್ಟಾರ್ ಅಂಬರೀಶ್ ಅವರ ಅಂತ ಸಿನಿಮಾ ರೆಡಿ ಏನೋ ಆಯಿತು. ಆದರೆ ಕೇಂದ್ರ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಅಷ್ಟು ಸುಲಭವಾಗಿ ಸೆನ್ಸಾರ್ ಪ್ರಮಾಣ ಪತ್ರ ಕೊಡಲಿಲ್ಲ. ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಅವರೂ ತಮ್ಮ ಈ ಚಿತ್ರವನ್ನ ಬಿಟ್ಟುಕೊಡಲಿಲ್ಲ. ಮುಂದೇನಾಯಿತು? ಇಲ್ಲಿದೆ ಓದಿ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ರೆಬಲ್ (Ambareesh Antha Movie) ಸ್ಟಾರ್ ಅನ್ನುವ ಬಿರುದು ತಂದುಕೊಟ್ಟ ಸಿನಿಮಾ ಯಾವುದು? ಅಂಬಿ ಅಭಿಮಾನಿಗಳು ತಟ್ ಅಂತ ಹೇಳಿ ಬಿಡ್ತಾರೆ. ಹೌದು, ಅಂತ ಸಿನಿಮಾ ಮೂಲಕವೇ (Antha Movie Re-Release) ಅಂಬರೀಶ್ ಅವರಿಗೆ ರೆಬಲ್ ಸ್ಟಾರ್ ಅನ್ನುವ ಬಿರುದು ಬಂದಿತ್ತು. ಈ ಸಿನಿಮಾ ರಿಲೀಸ್ ಆಗಿ 42 ವರ್ಷಗಳೇ ಕಳೆದಿವೆ. ಆದರೂ ಈ ಸಿನಿಮಾದ ಕ್ರೇಜ್ ಇನ್ನೂ ಇದೆ. ಅಂಬರೀಶ್ ಅಂದ ಕೂಡಲೇ ಅಂತ ಸಿನಿಮಾ ಕಣ್ಮುಂದೆ ಬರುತ್ತದೆ. 80 ರ ದಶಕದಲ್ಲಿ ಅಷ್ಟೊಂದು ಪ್ರಭಾವ ಬೀರಿರೋ ಈ ಚಿತ್ರದಲ್ಲಿ ಅಂಬರೀಶ್ ಡಬಲ್ ರೋಲ್ ಮಾಡಿದ್ದರು. ಅದನ್ನ ಕಂಡು  ಜನ ತುಂಬಾ ಇಷ್ಟಪಟ್ಟಿದ್ದರು. ಅದರಲ್ಲೂ ವಿಲನ್ ಪಾತ್ರದ ಅಂಬಿ ರೋಲ್‌ನ ಕನ್ವರ್‌ ಲಾಲ್ ಡೈಲಾಗ್ ಈಗಲೂ ವಿಶೇಷವಾಗಿಯೇ ಸೆಳೆಯುತ್ತದೆ.


ಅಂಬರೀಶ್ ಚಿತ್ರ ಜೀವನದಲ್ಲಿ ಈ ಸಿನಿಮಾ ತುಂಬಾ ವಿಶೇಷವಾಗಿಯೇ ಇದೆ. ಅಂಬರೀಶ್ ಈ ಸಿನಿಮಾ ಬಗ್ಗೆ ಆಗಾಗ ಹೇಳಿಕೊಂಡಿದ್ದರು. ಅಂಬಿ ಚಿತ್ರ ಜೀವನದಲ್ಲಿ ಅಂತ ಸಿನಿಮಾ ಬರಲು ಗೆಳೆಯ ರಾಜೇಂದ್ರಸಿಂಗ್ ಬಾಬು ಅವರೇ ಕಾರಣ ಅಂತ ಹೇಳಬಹುದು.


Rebel Star Ambareesh Antha Movie Re-Release on the Occasion of Ambi Birthday
ಅಂಬಿ ಅಭಿನಯದ ಅಂತ ಸಿನಿಮಾ ರೀ-ರಿಲೀಸ್‌ಗೆ ಈಗ ರೆಡಿ


ಅಂತ ಸಿನಿಮಾ ಸರಣಿ ಕಥೆಯ ಆಧರಿಸಿದ ಸಿನಿಮಾ


ಅಂತ ಸಿನಿಮಾದ ಕಥೆಯನ್ನ ಎಚ್.ಕೆ. ಅನಂತ್‌ ರಾವ್ ಸರಣಿ ರೂಪದಲ್ಲಿ ಸುಧಾ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅದೇ ಕಥೆಯನ್ನ ಓದುತ್ತಿದ್ದ ಡೈರೆಕ್ಟರ್ ಬಾಬು ಅವರು ಸಿನಿಮಾ ಮಾಡಬೇಕು ಅಂತ ಪ್ಲಾನ್ ಮಾಡಿದ್ದರು.




ಆದರೆ ಆರಂಭದಲ್ಲಿ ಯಾರೂ ಈ ಚಿತ್ರ ಮಾಡಲು ಮುಂದೆ ಬರಲೇ ಇಲ್ಲ. ಕೊನೆಗೆ ಎಚ್.ಎನ್. ಮಾರುತಿ ಮತ್ತು ವೇಣುಗೋಪಾಲ್ ಮನಸ್ಸು ಮಾಡಿದರು. ಆಗಲೇ ಕನ್ನಡದಲ್ಲಿ ಅಂತ ಸಿನಿಮಾ ರೆಡಿ ಆಗಲು ಸಾಧ್ಯವಾಯಿತು.




ಸೆನ್ಸಾರ್ ಪ್ರಮಾಣ ಪತ್ರ ಅಂತ ಚಿತ್ರಕ್ಕೆ ಯಾಕೆ ಬೇಗ ಸಿಗಲಿಲ್ಲ


ಅಂತ ಸಿನಿಮಾ ರೆಡಿ ಏನೋ ಆಯಿತು. ಆದರೆ ಕೇಂದ್ರ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಅಷ್ಟು ಸುಲಭವಾಗಿ ಸೆನ್ಸಾರ್ ಪ್ರಮಾಣ ಪತ್ರ ಕೊಡಲಿಲ್ಲ. ಚಿತ್ರದಲ್ಲಿ ಹಿಂಸೆಯನ್ನ ವಿಜೃಂಭಿಸಲಾಗಿದೆ ಅಂತಲೇ ವಾದಿಸಿತ್ತು. ಡೈರೆಕ್ಟರ್ ರಾಜೇಂದ್ರಸಿಂಗ್ ಬಾಬು ಅಷ್ಟು ಅವರೂ ಸುಲಭವಾಗಿ ತಮ್ಮ ಈ ಚಿತ್ರವನ್ನ ಬಿಟ್ಟುಕೊಡಲಿಲ್ಲ.


ಬದಲಾಗಿ ಕಾನೂನು ಹೋರಾಟ ಮಾಡಿ ಗೆದ್ದು ಸಿನಿಮಾ ರಿಲೀಸ್ ಮಾಡಿದ್ದರು. ಆದರೂ ಒಂದು ಜಾಗೃತಿಯನ್ನವಹಿಸಿದ್ದರು. ಗರ್ಭಿಣಿ ಮಹಿಳೆಯರು ಈ ಚಿತ್ರ ನೋಡಿಡ್ರೆ ತೊಂದರೆ ಆದೀತು ಅಂತ ಥಿಯೇಟರ್‌ ಹೊರಗೆ ಆ್ಯಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗಿತ್ತು.


ಹೊಸ ಸ್ಪರ್ಶದೊಂದಿಗೆ ಅಂತ ಸಿನಿಮಾ ಮರು ಬಿಡುಗಡೆ


ಹೀಗೆ ಸಾಕಷ್ಟು ಸಮಸ್ಯೆಗಳನ್ನ ಎದುರಿಸಿಕೊಂಡೇ ರಿಲೀಸ್ ಆಗಿದ್ದ ಅಂತ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಪರ ಭಾಷೆಯಲ್ಲೂ ರಿಲೀಸ್ ಆಯಿತು. 1981 ರಲ್ಲಿ ರಿಲೀಸ್ ಆಗಿದ್ದ ಅಂತ ಸಿನಿಮಾ ಈಗ ಮತ್ತೊಮ್ಮೆ ರಿಲೀಸ್ ಆಗುತ್ತಿದೆ.


ಆದರೆ ಅಂತ ಸಿನಿಮಾ ಈ ಸಲ ಹೊಸ ಸ್ಪರ್ಶದೊಂದಿಗೆ ಬರ್ತಿದೆ. ಇಲ್ಲಿಯವರೆಗೆ ಕಲರ್ ಆಗಿದ್ದ ಈ ಚಿತ್ರಕ್ಕೆ ಸಿನಿಮಾ ಸ್ಕೋಪ್ ಬಂದಿದೆ. 5.1 ಸೌಂಡ್ ವ್ಯವಸ್ಥೆಯನ್ನ ಈ ಚಿತ್ರಕ್ಕೆ ಅಳವಡಿಸಲಾಗಿದೆ. ಸಿನಿಮಾದ ಈ ಒಂದು ಮಾಹಿತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಸಮೇತ ಹರಿದಾಡುತ್ತಿದೆ.


ಅಂಬಿ ಅಭಿನಯದ ಅಂತ ಸಿನಿಮಾ ರೀ-ರಿಲೀಸ್‌ಗೆ ಈಗ ರೆಡಿ


ಈ ಬಗ್ಗೆ ಅಧಿಕೃತವಾಗಿ ಇನ್ನೂ ಯಾರೂ ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಇದೇ 26 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ತಿಂಗಳ 29 ರಂದು ಅಂಬರೀಶ್ ಅವರ 71ನೇ ಜನ್ಮ ದಿನ ಇದೆ. ಈ ಹಿನ್ನೆಲೆಯಲ್ಲಿ ಅಂತ ಸಿನಿಮಾ ರೀ-ರಿಲೀಸ್ ಅಗುತ್ತಿದೆ.


Rebel Star Ambareesh Antha Movie Re-Release on the Occasion of Ambi Birthday
ಸೆನ್ಸಾರ್ ಪ್ರಮಾಣ ಪತ್ರ ಅಂತ ಚಿತ್ರಕ್ಕೆ ಯಾಕೆ ಬೇಗ ಸಿಗಲಿಲ್ಲ


ಹೊಸ ತಂತ್ರಜ್ಞಾನದೊಂದಿಗೆ ಅಂತ ಚಿತ್ರ ಮತ್ತೊಮ್ಮೆ ರಿಲೀಸ್


ಪರಿಮಳಾ ಆರ್ಟ್ಸ್ ನಿಂದಲೇ ಅಂತ ಸಿನಿಮಾ ಈಗ ಮತ್ತೆ ಬಿಡುಗಡೆ ಆಗುತ್ತಿದೆ. ಹೊಸ ತಂತ್ರಜ್ಞಾನದೊಂದಿಗೆ ಅಂತ ಸಿನಿಮಾ ಮತ್ತೆ ರಿಲೀಸ್ ಅನ್ನುವ ಪೋಸ್ಟರ್ ಕೂಡ ಈಗ ರೆಡಿ ಆಗಿದೆ.


ಇದನ್ನೂ ಓದಿ: Pawan Kalyan: ಒಂದೇ ಒಂದು ನಿಮಿಷದ ಪೆಪ್ಸಿ ಜಾಹೀರಾತಿಗೆ ಪವನ್ ಕಲ್ಯಾಣ್ ಪಡೆದ ಸಂಭಾವನೆ ಎಷ್ಟು ಕೋಟಿ?

top videos


    ಇನ್ನುಳಿದಂತೆ ಅಂಬರೀಶ್ ಅವರ ಜನ್ಮ ದಿನಕ್ಕೆ ರೆಬಲ್ ಸ್ಟಾರ್ ಅಂಬರೀಶ್ ಅವರ ಅಂತ ಸಿನಿಮಾ ಮತ್ತೊಮ್ಮೆ ಬೆಳ್ಳಿ ತೆರೆಗೆ ಬರ್ತಿದೆ. ಅಂಬಿ ಅಭಿಮಾನಿಗಳು ಈಗಲೇ ಕುತೂಹಲದಿಂದಲೇ ಈ ಚಿತ್ರದ ರಿಲೀಸ್ ಎದುರು ನೋಡುತ್ತಿದ್ದಾರೆ.

    First published: