ಸ್ಯಾಂಡಲ್ವುಡ್ ನಲ್ಲಿ ಹೊಸ (Rebel Star Ambreesh) ಕ್ರಾಂತಿ ಮಾಡಿಸಿದ ಸಿನಿಮಾ ಯಾವುದು? ಅದನ್ನ ಅಂತ ಸಿನಿಮಾ ಅಂದ್ರೆ ಎಲ್ಲರೂ ಹೌದಲ್ಲ ಅಂತಾರೆ. ಅಂತಹ ಹೊಸ ಅಲೆಯನ್ನ ಎಬ್ಬಿಸಿದ್ದ ಅಂತ (Antha Movie) ಅಷ್ಟು ಸುಲಭವಾಗಿ ರೆಡಿ ಆಗಿಲ್ಲ. ಇದನ್ನ ತೆರೆಗೆ ತರೋ ಹೊತ್ತಿಗೆ ಹತ್ತು ಹಲವು ಸಮಸ್ಯೆಗಳೂ ಆಗಿವೆ. ಸೆನ್ಸಾರ್(Censor Board) ಮಂಡಳಿ ಕೂಡ ಈ ಚಿತ್ರಕ್ಕೆ ಕಟ್ ಕೊಟ್ಟಿತ್ತು. ಸಿನಿಮಾ ಮಂದಿರದ ಹೊರಗಡೆ ಒಂದು ಆ್ಯಂಬುಲೆನ್ಸ್ ಕೂಡ ಇರುತ್ತಿತ್ತು. ಅದ್ಯಾರೋ ಈ ಸಿನಿಮಾದಲ್ಲಿ ವೈಲೆನ್ಸ್ ಜಾಸ್ತಿ ಇದೆ ಎಂದು ಸೆನ್ಸಾರ್ ಗೆ ಪತ್ರ ಬರೆದಿದ್ದರು. ಇದರಿಂದ ಕನ್ನಡದ ಅಂತ ಸಿನಿಮಾ ಕೊರ್ಟ್ ಕೇಸ್ ಗೆದ್ದು ಎರಡನೇ ಬಾರಿ (Antha Movie Release) ರಿಲೀಸ್ ಕೂಡ ಆಗಿತ್ತು.
ಇಂತಹ ಈ ಚಿತ್ರದ ಹಿಂದೆ ಇನ್ನು ಸಾಕಷ್ಟು ರೋಚಕ ಕಥೆಗಳಿವೆ. ಅವುಗಳನ್ನ ಇಲ್ಲಿ ಹೇಳಿದ್ದೇವೆ. ಓದುವ ಖುಷಿ ನಿಮ್ಮದಾಗಲಿ.
ಅಂತ ಚಿತ್ರ ಕಥೆಯನ್ನ ಅಂಬಿ ಮೊದಲು ವಿಷ್ಣು ಕೇಳಿದ್ದರು!
ಕನ್ನಡದ ಅಂತ ಸಿನಿಮಾ ವಿಶೇಷ ಕಥೆಯನ್ನ ಹೊಂದಿತ್ತು. ಸುಧಾ ಪತ್ರಿಕೆಯಲ್ಲಿ ಸರಣಿ ರೂಪದಲ್ಲಿ ಬರುತ್ತಿತ್ತು. ಎಚ್.ಕೆ.ಅನಂತ್ ರಾವ್ ಇದನ್ನ ಆಗ ಬರೆಯುತ್ತಿದ್ದರು. ಅದೇ ಕಥೆಯನ್ನ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಸಿನಿಮಾ ರೂಪಕ್ಕೆ ತಂದರು.
ಅದೇ ಕಥೆಯನ್ನ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಹೇಳಿದ್ದರು. ಆದರೆ ಈ ಕಥೆ ಕೇಳಿದ ವಿಷ್ಣುವರ್ಧನ್ ಅವರು ಇದರಲ್ಲಿ ವೈಲೆನ್ಸ್ ಇದೆ. ನನ್ನ ಇಮೇಜಿಗೆ ಸೂಟ್ ಆಗೋದಿಲ್ಲ ಅಂತಲೇ ಹೇಳಿದ್ದರು.
ಅಂತ ಚಿತ್ರದಿಂದಲೇ ಅಂಬರೀಶ್ ರೆಬೆಲ್ ಸ್ಟಾರ್ ಆದ್ರು!
ಅಂಬರೀಶ್ ಅವರನ್ನ ಅಂತ ಕಥೆ ಹುಡುಕಿಕೊಂಡೇ ಬಂತು. ಆದರೆ ಅಂಬರೀಶ್ ಆಗಿನ್ನು ಗುರುತಿಸಿಕೊಂಡಿದ್ದರು. ಒಂದೆರಡು ಚಿತ್ರದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನೆ ಮಾಡುತ್ತಿದ್ದರು. ಈ ಒಂದು ಕಾರಣಕ್ಕೆ ನಿರ್ಮಾಪಕರು ದುಡ್ಡು ಹಾಕೋಕೆ ಹಿಂಜರಿದರು.
ಆದರೆ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ತಮ್ಮ ಪ್ರಯತ್ನ ಮುಂದುವರೆಸಿದರು. ಹಂಗು-ಹಿಂಗೂ ಮಾಡಿ ಎಚ್.ಎನ್.ಮಾರುತಿ ಮತ್ತು ವೇಣುಗೋಪಾಲ್ ಈ ಚಿತ್ರಕ್ಕೆ ದುಡ್ಡು ಹಾಕಲು ಮುಂದೆ ಬಂದ್ರು. ನಟಿ ಲಕ್ಷ್ಮೀ ಅವರಿಗೆ ಕಥೆಯನ್ನೂ ರಾಜೇಂದ್ರ ಸಿಂಗ್ ಬಾಬು ಹೇಳಿದರು.
ಕನ್ನಡದ "ಅಂತ" ಕಥೆ ಕೇಳಿ ನಟಿ ಲಕ್ಷ್ಮೀ ಹೇಳಿದ್ದೇನು?
ಇದನ್ನ ಕೇಳಿದ ನಟಿ ಲಕ್ಷ್ಮೀ ಒಂದು ಮಾತು ಹೇಳಿದರು. ಅದನ್ನ ಕೇಳಿದ್ರೆ ನಿಜಕ್ಕೂ ಒಂದು ಕ್ಷಣ ಶಾಕ್ ಆಗಿತ್ತು. ನಾನು ಮತ್ತು ರಾಜ್ಕುಮಾರ್ ಅಭಿನಯದ ರವಿಚಂದ್ರ ಚಿತ್ರದ ಕಥೆ ಕೂಡ ಇದೇ ರೀತಿ ಇದೆ ಅಂದ್ರು. ಅಲ್ಲಿಗೆ ಎಲ್ಲವೂ ಮೇಲು ಕೆಳಗೆ ಆಯಿತು.
ರವಿಚಂದ್ರ ಸಿನಿಮಾ ರಿಲೀಸ್ ಆಗೋವರೆಗೂ ಕಾಯೋ ಸ್ಥಿತಿ ಬಂತು. ಸಿನಿಮಾ ಕೂಡ ರಿಲೀಸ್ ಆಯಿತು. ಈ ಕಥೆಗೂ ರಾಜೇಂದ್ರ ಸಿಂಗ್ ಬಾಬು ಅವರು ಹೇಳಿದ ಕಥೆಗೂ ಎಲ್ಲೂ ಸಾಮ್ಯತೆ ಇರಲಿಲ್ಲ. ಹಾಗಾಗಿಯೇ ರಾಜೇಂದ್ರ ಸಿಂಗ್ ಬಾಬು ಈ ವಿಷಯವನ್ನ ಲಕ್ಷ್ಮೀ ಅವರಿಗೆ ಹೇಳಿದರು. ಅಲ್ಲಿಗೆ ಎಲ್ಲವೂ ಸರಿ ಹೋಯಿತು ನೋಡಿ.
ಅಂತ ಚಿತ್ರಕ್ಕೆ ಸೆನ್ಸಾರ್ ಎಷ್ಟು ಕಟ್ ಕೊಟ್ಟಿತ್ತು ಗೊತ್ತೇ?
ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಲ್ಲಿ ಭಾರೀ ಚರ್ಚೆ ಕೂಡ ಆಯಿತು. ಚಿತ್ರದಲ್ಲಿ ವೈಲೆನ್ಸ್ ಜಾಸ್ತಿ ಇದೆ ಅಂತಲೂ ಚರ್ಚೆಗೆ ಬಂದಿತ್ತು. ಕೊನೆಗೆ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮೂರು ಕಟ್ ಕೊಟ್ಟಿತ್ತು. ಕಟ್ ನೊಂದಿಗೆ ಸೆನ್ಸಾರ್ ಪಡೆದ ಅಂತ ಸಿನಿಮಾ 1981 ರಲ್ಲಿ ರಿಲೀಸ್ ಆಗಿತ್ತು.
ಅಂತ ಚಿತ್ರ ರಿಲೀಸ್ ಆದ ಥಿಯೇಟರ್ ಹೊರಗೆ ಆ್ಯಂಬುಲೆನ್ಸ್!
ಹೌದು, ಅಂತ ಸಿನಿಮಾ ರಿಲೀಸ್ ಏನೋ ಆಯಿತು. ಆದರೆ ಸಿನಿಮಾದಲ್ಲಿರೊ ವೈಲೆನ್ಸ್ನಿಂದ ಏನಾದರೂ ತೊಂದರೆ ಆಗಬಹುದು ಅನ್ನೋ ಕಾರಣಕ್ಕೇನೆ ಥಿಯೇಟರ್ ಹೊರಗಡೆ ಆ್ಯಂಬುಲೆನ್ಸ್ ಕೂಡ ಇರುತ್ತಿತ್ತು.
ಕಾರಣ, ಸಿನಿಮಾ ನೋಡಲು ಬರುವ ಹೆಣ್ಣುಮಕ್ಕಳಿಗೆ ತೊಂದರೆ ಆದ್ರೆ ಹೆಲ್ಪ್ ಆಗಲಿ ಅನ್ನೋದೇ ಈ ಒಂದು ಆ್ಯಂಬುಲೆನ್ಸ್ ಉದ್ದೇಶವೂ ಆಗಿತ್ತು. ಆದರೂ ಈ ಸಿನಿಮಾ ರಿಲೀಸ್ ಆದ್ಮೇಲೆ ಒಂದಷ್ಟು ವಿರೋಧಗಳೂ ಬಂದವು. ಅದೇನೂ ಇಲ್ಲಿದೆ ನೋಡಿ.
ಚಿತ್ರ ಬ್ಯಾನ್ ಮಾಡಲು ಸೆನ್ಸಾರ್ ಮಂಡಳಿಗೆ ದೂರು!
ಅಂತ ಚಿತ್ರದಲ್ಲಿ ವೈಲೆನ್ಸ್ ಜಾಸ್ತಿ ಇದೆ. ಇದನ್ನ ಸೆನ್ಸಾರ್ ಹೇಗೆ ಮಾಡಿದ್ರಿ ಅಂತಲೂ ಕೆಲವರು ಸೆನ್ಸಾರ್ ಮಂಡಳಿಗೆ ದೂರು ಕೊಟ್ಟರು. ಚಿತ್ರವನ್ನ ಬ್ಯಾನ್ ಮಾಡಲು ಒತ್ತಾಯ ಕೂಡ ಬಂತು. ಹಾಗಾಗಿಯೇ ಅಂತ ಸಿನಿಮಾ ಬ್ಯಾನ್ ಕೂಡ ಆಯಿತು.
ಇದನ್ನೂ ಓದಿ: Nishvika Naidu: ಪ್ಯಾಂಟ್ ಧರಿಸದೆ ನಿಶ್ವಿಕಾ ಫೋಟೋಶೂಟ್! ಏನಕ್ಕಾ ಇದು ಅವತಾರ ಎಂದ ನೆಟ್ಟಿಗರು
ನಿಜ, ಅಂತ ಸಿನಿಮಾ ಪ್ರದರ್ಶನ ಸ್ಟಾಪ್ ಆಗಿತ್ತು. ಬ್ಯಾನ್ ಅಂತೀವಲ್ಲ ಆ ಸಮಸ್ಯೆಯನ್ನ ಈ ಚಿತ್ರವೂ ಎದುರಿಸಿತ್ತು. ಆದರೆ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ತಮ್ಮ ಹೋರಾಟ ಮುಂದುವರೆಸಿದರು. ಕೋರ್ಟ್ ಮೆಟ್ಟಿಲೇರಿದರು. ಅಲ್ಲಿ ಜಯ ಸಾಧಿಸಿದರು. ತಮ್ಮ ಅಂತ ಚಿತ್ರವನ್ನ ಮರು ಬಿಡುಗಡೆ ಮಾಡಿದರು.
ಯಶಸ್ವಿ 100 ದಿನ ಪೂರೈಸಿದ ಅಂತ ಸಿನಿಮಾ
ಅಂತ ಸಿನಿಮಾ ಮೂಲಕವೇ ಅಂಬರೀಶ್ ರೆಬೆಲ್ ಸ್ಟಾರ್ ಆದರು. ಸಿನಿಮಾದಲ್ಲಿಯ ಇವರ ಪಾತ್ರ ಮೆಚ್ಚುಗೆ ಪಡೆಯಿತು. ನಟಿ ಲಕ್ಷ್ಮೀ ಅವರು ಹೆಣ್ಣು ಮಕ್ಕಳ ಮನ ಕಲುಕಿದರು. ರಾಜೇಂದ್ರ ಸಿಂಗ್ ಬಾಬು ಅವರ ಈ ಚಿತ್ರದ ಮೂಲಕ ಕನ್ನಡದಲ್ಲಿ ಹೊಸ ಅಲೆ ಎಬ್ಬಿಸಿದರು. ಈಗಲೂ ಕನ್ನಡದ ಅಂತ ಸಿನಿಮಾ ವಿಶೇಷವಾಗಿಯೇ ನಿಲ್ಲುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ