Kannada Bigg Boss 8: ಮತ್ತೆ ಆರಂಭವಾಗಲಿದೆಯಂತೆ ಅರ್ಧಕ್ಕೆ ನಿಂತ ಕನ್ನಡ ಬಿಗ್ ಬಾಸ್​ ಸೀಸನ್​ 8..!

ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿದೆ. ಇದೇ ಕಾರಣದಿಂದಾಗಿ ಬಿಗ್​ ಬಾಸ್​ ಸೀಸನ್​ 8ನ್ನೂ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಹೀಗೆಂದು ಕಲರ್ಸ್​ ಕನ್ನಡದ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ಈಗ ಬಿಗ್​ ಬಾಸ್​ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಿಗ್ ಬಾಸ್​ ಕಾರ್ಯಕ್ರಮ ಈಗ ಮತ್ತೆ ಆರಂಭವಾಗಲಿದೆಯಂತೆ. 

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

  • Share this:
ಕನ್ನಡದ ಕಿರುತೆಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​​ 8 ಕೊನೆಗೊಳ್ಳಲು 29 ದಿನಗಳು ಬಾಕಿ ಇತ್ತು. ಆಗಲೇ ಕಾರ್ಯಕ್ರಮ ಅರ್ಧಕ್ಕೆ ಕೊನೆಗೊಳ್ಳಿದೆ ಅನ್ನೋ ಸುದ್ದಿ ಹೊರ ಬಿದ್ದಿತ್ತು. ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಕಾರ್ಯಕ್ರಮ ಕೊರೋನಾ ಕಾರಣದಿಂದ ರದ್ದಾಯಿತು. ಮಾತ್ರವಲ್ಲದೆ ಈ ವಿಚಾರ ವೀಕ್ಷಕರಿಗೆ ತುಂಬಾ ನಿರಾಸೆ ಮೂಡಿಸಿತ್ತು. ಕೊರೋನಾ ಆರ್ಭದ ನಡುವೆಯೂ ಬಿಗ್​ ಬಾಸ್​ ಸೀಸನ್​ 8 ಪ್ರಸಾರವಾಗುತ್ತಿತ್ತು. ಯಾವುದೇ ಅಡ್ಡಿ ಆತಂಕ ಇಲ್ಲದೆ ಕಾರ್ಯಕ್ರಮವನ್ನು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಡೆಸಿಕೊಂಡು ಹೋಗಲಾಗುತ್ತಿತ್ತು. ಆದರೆ ಕೊರೋನಾ ಎರಡನೇ ಅಲೆ ಆರಂಭವಾದಾಗಿನಿಂದ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು. ಈ ಕಾರಣದಿಂದ ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್​ಡೌನ್​ ಜಾರಿಗೆ ತರಲಾಯಿತು. ಈ ವೇಳೆ ಶೂಟಿಂಗ್​ ಮಾಡಲು ನಿಷೇಧ ಹೇರಿದ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗಿತ್ತು. 

ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿದೆ. ಇದೇ ಕಾರಣದಿಂದಾಗಿ ಬಿಗ್​ ಬಾಸ್​ ಸೀಸನ್​ 8ನ್ನೂ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಹೀಗೆಂದು ಕಲರ್ಸ್​ ಕನ್ನಡದ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ಈಗ ಬಿಗ್​ ಬಾಸ್​ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಿಗ್ ಬಾಸ್​ ಕಾರ್ಯಕ್ರಮ ಈಗ ಮತ್ತೆ ಆರಂಭವಾಗಲಿದೆಯಂತೆ.

Sudeep, Sudeep health update, Sudeep to attend bigg boss kannada show, Sudeep thanks to Fans for prayer to his health, ಸುದೀಪ್, ಸುದೀಪ್ ಆರೋಗ್ಯದ ಅಪ್ ಡೇಟ್, ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಸುದೀಪ್, ರಿಯಾಲಿಟಿ ಶೋನಲ್ಲಿ ಭಾಗಿಯಾಗುವುದಾಗಿ ಹೇಳಿದ ಸುದೀಪ್, ಅಭಿಮಾನಿಗಳಿಗೆ ಸುದೀಪ್ ಧನ್ಯವಾದ, Kichcha Sudeep, Kotigobba 3 new poster, Kichcha Sudeepa Instagram, Kotigobba 3 movie, Kotigobba 3 Movie update, ಕಿಚ್ಚ ಸುದೀಪ್​, ಕೋಟಿಗೊಬ್ಬ 3 ಅಪ್ಡೇಟ್​, ಚಿತ್ರೀಕರಣ ಮುಗಿಸಿದ ಕೋಟಿಗೊಬ್ಬ 3 ಚಿತ್ರತಂಡ, ತೆರೆಗೆ ಬರಲು ಸಿದ್ಧವಾಗುತ್ತಿದೆ ಕೋಟಿಗೊಬ್ಬ 3 ಸಿನಿಮಾ, ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​, sudeep, kotigobba 3, sandalwood, ಸುದೀಪ್, ಕೋಟಿಗೊಬ್ಬ 3, ಸ್ಯಾಂಡಲ್ ವುಡ್, ಕೋಟಿಗೊಬ್ಬ, ಕೋಟಿಗೊಬ್ಬ 3 ಅಪ್‌ಡೇಟ್, Kichcha sudeep update about kotigobba 3, kotigobba 3 post production, ಕೋಟಿಗೊಬ್ಬ3, ಕೋಟಿಗೊ್ಬ 3 ಹೊಸ ಪೋಸ್ಟರ್​, ಸುದೀಪ್​, ಕಿಚ್ಚ ಸುದೀಪ್​, ಸೂರಪ್ಪಬಾಬು , ನಿರ್ಮಾಪಕ ಸೂರಪ್ಪ ಬಾಬು ಹುಟ್ಟುಹಬ್ಬ, kichcha sudeep will not host the Bigg Boss 8 today and fans are demanding for video call with sudeep ae
ಕಿಚ್ಚ ಸುದೀಪ್​


ಹೌದು, ಯಶಸ್ವಿಯಾಗಿ ಸಾಗುತ್ತಿದ್ದ ಬಿಗ್​ ಬಾಸ್​ ಸೀಸನ್​ 8 ಮತ್ತೆ ಆರಂಭವಾಗಲಿದೆಯಂತೆ. ಒಟ್ಟು ನೂರು ದಿನಗಳ ನಡೆಯುವ ಕಾರ್ಯಕ್ರಮ 72 ದಿನಕ್ಕೆ ಅಂತ್ಯಗೊಂಡಿತ್ತು. ಈಗ ಈ ಕಾರ್ಯಕ್ರಮವನ್ನು ಹೊಸದಾಗಿ ಅರ್ಧಕ್ಕೆ ನಿಂತ ಬಿಗ್ ಬಾಸ್​ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು ಕಲರ್ಸ್​ ವಾಹಿನಿ ಸಿದ್ಧತೆ ಮಾಡಿಕೊಳ್ಳುತ್ತಿದೆಯಂತೆ.

ಜೂನ್​ 20ರಿಂದ ಮತ್ತೆ ಬಿಗ್​ ಬಾಸ್ ಸೀಸನ್​ 8 ಮತ್ತೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇಂತಹ ಸುದ್ದಿಯೊಂದು ಕಿರುತೆರೆ ವಲಯದಲ್ಲಿ ಹರಿದಾಡುತ್ತಿದೆ. ಮತ್ತೆ ಆರಂಭವಾಗಲಿರುವ ಶೋನಲ್ಲಿ ಸಾಕಷ್ಟು ಹೊಸತನ ಹಾಗೂ ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: Happy Birthday Krishna: ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾರ್ಲಿಂಗ್​ ಕೃಷ್ಣ: ರಿಲೀಸ್​ ಆಗಲಿದೆ ಶುಗರ್​ ಫ್ಯಾಕ್ಟರಿ ಟೀಸರ್​..!

ಇನ್ನೂ ಸ್ಪರ್ಧಿಗಳಾದ ನಿಧಿ ಸುಬ್ಬಯ್ಯ, ಕೆ.ಪಿ. ಅರವಿಂದ್​, ದಿವ್ಯಾ ಸುರೇಶ್​, ಶಮಂತ್​ ಗೌಡ, ರಘು ಗೌಡ, ವೈಷ್ಣವಿ ಗೌಡ, ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ, ಮಂಜು ಪಾವಗಡ, ಶುಭಾ ಪೂಂಜಾ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಮತ್ತೆ ಬಿಗ್​ ಬಾಸ್​ ಮನೆಗೆ ಮರಳಿದ್ದಾರೆ. ಇನ್ನು ಅರ್ವಿಯಾ ಅಂದರೆ ಅರವಿಂದ್​ ಹಾಗೂ ದಿವ್ಯಾ ಉರುಡುಗ ಅವರು ಮತ್ತೆ ನೋಡಲು ಒಟ್ಟಿಗೆ ಸಿಗುತ್ತಾರಾ ಅನ್ನೋ ಕಾತರ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

ದಿವ್ಯಾ ಉರುಡುಗ ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮ ಕೊನೆಗೊಳ್ಳುವ ಕೆಲ ದಿನಗಳು ಮಂಚಿತವಾಗಿಯೇ ಬಿಗ್​ ಬಾಸ್​ ಮನೆಯಿಂದ ಹೊರ ನಡೆದಿದ್ದರು. ಈಗ ಮತ್ತೆ ಕಾರ್ಯಕ್ರಮ ಆರಂಭವಾದರೆ ದಿವ್ಯಾ ಉರುಡುಗ  ಇರುತ್ತಾರೋ ಅಥವಾ ಇಲ್ಲವೋ ಎಂಬೆಲ್ಲ ಪ್ರಶ್ನೆಗಳು ವೀಕ್ಷಕರನ್ನು ಕಾಡುತ್ತಿವೆ.

ಇದನ್ನೂ ಓದಿ: Vikrant Rona: ಕಿಚ್ಚ ಸುದೀಪ್​ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ನೋಡಿ ಅನುಭವ ಹಂಚಿಕೊಂಡ ರವಿಶಂಕರ್​ ಗೌಡ

ಇನ್ನು ಜೂನ್​ 20ಕ್ಕೆ ಕಾರ್ಯಕ್ರಮ ಆರಂಭವಾಗಬೇಕಾದರೆ, ಈಗಾಗಲೇ ಸ್ಪರ್ಧಿಗಳನ್ನು ಕ್ವಾರಂಟೈನ್​ ಮಾಡಿರಬೇಕು. ಅಲ್ಲದೆ ಸ್ಪರ್ಧಿಗಳಲ್ಲಿ ಹಲವಾರು ಮಂದಿ ವ್ಯಾಕ್ಸಿನ್​ನ ಮೊದಲ ಡೋಸ್​ ತೆಗೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಕಲರ್ಸ್​ ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಬಿಗ್​ ಬಾಸ್​ ಕೊನೆಗೊಳ್ಳುವ ಮುಂಚಿನ ಸಂಚಿಕೆಗಳಿಗೆ ಸುದೀಪ್​ ಸಹ ಗೈರಾಗಿದ್ದರು. ಅನಾರೋಗ್ಯದ ಕಾರಣದಿಂದ ಅವರು ಮತ್ತೆ ಬಿಗ್ ಬಾಸ್​ ವೇದಿಕೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ.  ಸುದೀಪ್​ ಅವರನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೂ ನಿರಾಸೆಯಾಗಿತ್ತು. ನಂತರ ಒಂದು ಹೊಸ ಪ್ರೋಮೋ ಪೋಸ್ಟ್​ ಮಾಡಿದ್ದ ಬಿಗ್​ ಬಾಸ್​ ತಂಡ, ಇದರಲ್ಲಿ ಬಿಗ್  ಬಾಸ್ ಸೀಸನ್​ 8ರ ಫಿನಾಲೆ ಎಪಿಸೋಡ್​ಗಳ ಪ್ರಸಾರ ಯಾವಾಗ ಎಂದು ತಿಳಿಸಿತ್ತು. ಅದರಂತೆಯೇ ಕೊನೆಯ ಎಪಿಸೋಡ್​ಗಳು ಪ್ರಸಾರವಾಗಿತ್ತು.

Sudeep, Sudeep health update, Sudeep to attend bigg boss kannada show, Sudeep thanks to Fans for prayer to his health, ಸುದೀಪ್, ಸುದೀಪ್ ಆರೋಗ್ಯದ ಅಪ್ ಡೇಟ್, ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಸುದೀಪ್, ರಿಯಾಲಿಟಿ ಶೋನಲ್ಲಿ ಭಾಗಿಯಾಗುವುದಾಗಿ ಹೇಳಿದ ಸುದೀಪ್, ಅಭಿಮಾನಿಗಳಿಗೆ ಸುದೀಪ್ ಧನ್ಯವಾದ, Kichcha Sudeep, Kotigobba 3 new poster, Kichcha Sudeepa Instagram, Kotigobba 3 movie, Kotigobba 3 Movie update, ಕಿಚ್ಚ ಸುದೀಪ್​, ಕೋಟಿಗೊಬ್ಬ 3 ಅಪ್ಡೇಟ್​, ಚಿತ್ರೀಕರಣ ಮುಗಿಸಿದ ಕೋಟಿಗೊಬ್ಬ 3 ಚಿತ್ರತಂಡ, ತೆರೆಗೆ ಬರಲು ಸಿದ್ಧವಾಗುತ್ತಿದೆ ಕೋಟಿಗೊಬ್ಬ 3 ಸಿನಿಮಾ, ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​, sudeep, kotigobba 3, sandalwood, ಸುದೀಪ್, ಕೋಟಿಗೊಬ್ಬ 3, ಸ್ಯಾಂಡಲ್ ವುಡ್, ಕೋಟಿಗೊಬ್ಬ, ಕೋಟಿಗೊಬ್ಬ 3 ಅಪ್‌ಡೇಟ್, Kichcha sudeep update about kotigobba 3, kotigobba 3 post production, ಕೋಟಿಗೊಬ್ಬ3, ಕೋಟಿಗೊ್ಬ 3 ಹೊಸ ಪೋಸ್ಟರ್​, ಸುದೀಪ್​, ಕಿಚ್ಚ ಸುದೀಪ್​, ಸೂರಪ್ಪಬಾಬು , ನಿರ್ಮಾಪಕ ಸೂರಪ್ಪ ಬಾಬು ಹುಟ್ಟುಹಬ್ಬ, Kichcha Sudeep gave an update about his health and Bigg Boss 8 Kannada ae
ಪರಮೇಶ್ವರ ಗುಂಡ್ಕಲ್​ ಜತೆ ಕಿಚ್ಚ ಸುದೀಪ್​


ಇನ್ನು ಸೀಸನ್​ 8ರ ಬಿಗ್​ ಬಾಸ್​ ಮನೆಗೆ 16 ಸ್ಪರ್ಧಿಗಳು ಒಳಗೆ ಹೋಗಿದ್ದರು. ಅದರಲ್ಲಿ ಚಂದ್ರಕಲಾ, ಧನುಶ್ರೀ, ಗೀತಾ, ನಿರ್ಮಲಾ, ರಾಜೀವ್​, ಶಂಕರ್​ ಅಶ್ವಥ್​, ವಿಶ್ವನಾಥ್​ ಹಾವೇರಿ ಎಲಿಮಿನೇಟ್​ ಆಗಿ ಹೊರಬಂದಿದ್ದರು. ಆ ಬಳಿಕ ವೈಷ್ಣವಿ, ರಘು, ಅರವಿಂದ್​, ಮಂಜು ಪಾವಗಡ, ಶುಭಾ ಪೂಂಜಾ, ದಿವ್ಯಾ ಸುರೇಶ್​, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ, ಶಮಂತ್​ ಮನೆಯೊಳಕ್ಕಿದ್ದರು. ನಂತರ ಪ್ರಿಯಾಂಕಾ ಮತ್ತು ಚಕ್ರವರ್ತಿ ಚಂದ್ರಚೂಡ್​ ವೈಲ್ಡ್​ ಕಾರ್ಡ್​ ಮೂಲಕ ಉಳಿದ ಸ್ಪರ್ಧಿಗಳ ಜೊತೆಗೆ ಸೇರಿದ್ದರು.
Published by:Anitha E
First published: