Real Star Upendra: ಕಬ್ಜಾ ಚಿತ್ರದ ಶೂಟಿಂಗ್ ವೇಳೆ ರಿಯಲ್ ಸ್ಟಾರ್ ಉಪೇಂದ್ರ ತಲೆಗೆ ಪೆಟ್ಟು

ಮಿನರ್ವ ಮಿಲ್‍ನಲ್ಲಿ ಒಟ್ಟು 40 ಸೆಟ್‍ಗಳಲ್ಲಿ ಸಾಹಸದ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗುತ್ತಿದೆ. ಈಗಾಗಲೇ 15 ಸೆಟ್‍ಗಳಲ್ಲಿ ಚಿತ್ರೀಕರಣ ಮುಗಿದಿದ್ದು, ಇನ್ನೂ 25 ಸೆಟ್‍ಗಳಲ್ಲಿ ಶೂಟಿಂಗ್ ಬಾಕಿಯಿದೆ. ಈ ಶೆಡ್ಯುಲ್ ಮುಗಿದರೆ ಕಬ್ಜಾ ಚಿತ್ರದ ಶೇಕಡಾ 80ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ.

ಕಬ್ಜಾ

ಕಬ್ಜಾ

  • Share this:
ಐ ಲವ್ ಯೂ ಸಕ್ಸಸ್ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಆರ್ ಚಂದ್ರು ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಸಿನಿಮಾ, ಕಬ್ಜಾ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯ ಕೆಲ ದಿನಗಳಿಂದ ಚಿತ್ರತಂಡ ಮಿನರ್ವಾ ಮಿಲ್‍ನಲ್ಲಿ ಸೆಟ್ ಹಾಕಿ, ಆಕ್ಷನ್ ಡೈರೆಕ್ಟರ್ ರವಿವರ್ಮ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದೆ. ನಿನ್ನೆ ತಡರಾತ್ರಿ ಶೂಟಿಂಗ್ ವೇಳೆ ರಿಯಲ್ ಸ್ಟಾರ್ ಉಪೇಂದ್ರ ಅವರ ತಲೆಗೆ ಪೆಟ್ಟು ಬಿದ್ದಿದೆ.

ಹೌದು, ಸಾಹಸ ಸನ್ನಿವೇಶನವೊಂದರ ಚಿತ್ರೀಕರಣದ ವೇಳೆ ಸಾಹಸ ಕಲಾವಿದನೊಬ್ಬ ಉಪೇಂದ್ರ ಅವರ ಮೇಲೆ ರಾಡ್‍ನಿಂದ ಹಲ್ಲೆ ಮಾಡಬೇಕಿತ್ತು. ತಕ್ಷಣ ಬೆಂಡ್ ಆಗುವ ಮೂಲಕ ಉಪ್ಪಿ ಆ ಏಟಿನಿಂದ ತಪ್ಪಿಸಿಕೊಳ್ಳಬೇಕಿತ್ತು. ಅದಾಗಲೇ ಮೂರ್ನಾಲ್ಕು ಟೇಕ್ಸ್ ಕೂಡ ಆಗಿದ್ದವು. ಆದರೆ ಒಮ್ಮೆ ಆ ಸಾಹಸ ಕಲಾವಿದ ರಾಡ್ ಬೀಸುವುದಕ್ಕೂ, ಉಪೇಂದ್ರ ಅವರು ಬಚಾವಾಗುವುದಕ್ಕೂ ಟೈಮಿಂಗ್ ಹೊಂದಾಣಿಕೆಯಾಗದೇ ಉಪ್ಪಿ ಹಿಂದಲೆಗೆ ಪೆಟ್ಟು ಬಿತ್ತು.

ಏಪ್ರಿಲ್​ 6 ರವರೆಗೆ ಥಿಯೇಟರ್​​ಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅನುಮತಿ​; ಸರ್ಕಾರಕ್ಕೆ ಧನ್ಯವಾದ ಹೇಳಿದ ಪುನೀತ್ ರಾಜ್​ಕುಮಾರ್

ತಕ್ಷಣ ತಲೆ ಉಜ್ಜಿಕೊಂಡ ರಿಯಲ್ ಸ್ಟಾರ್ ಕೆಲ ಕಾಲ ರೆಸ್ಟ್ ಪಡೆದು ಆ ಪೆಟ್ಟಿನಿಂದ ಸುಧಾರಿಸಿಕೊಂಡು ಮತ್ತೆ ಶೂಟಿಂಗ್‍ನಲ್ಲಿ ತೊಡಗಿಸಿಕೊಂಡರು. ಕಬ್ಬಿಣದ ರಾಡ್ ಬಳಸದೇ, ಮರದ ಟೊಳ್ಳಿನಿಂದ ಮಾಡಿರುವ ಫೇಕ್ ರಾಡ್ ಬಳಸಿದ್ದ ಕಾರಣ ಉಪ್ಪಿ ಬಚಾವ್ ಆಗಿದ್ದಾರೆ. ಇನ್ನು ಘಟನೆ ಕುರಿತು ಮಾಹಿತಿ ನೀಡಿರುವ ನಿರ್ದೇಶಕ ಆರ್. ಚಂದ್ರು, `ಕಳೆದ ಒಂದು ತಿಂಗಳಿನಿಂದ ನಾವಿಲ್ಲಿ ಕಬ್ಜಾ ಚಿತ್ರದ ಫೈಟ್ಸ್ ಶೂಟಿಂಗ್ ಮಾಡುತ್ತಿದ್ದೇವೆ. ಇನ್ನೂ ಮೂವತ್ತು ದಿನಗಳಷ್ಟು ಚಿತ್ರೀಕರಣ ಬಾಕಿಯಿದೆ. ಇದು ತುಂಬ ದೊಡ್ಡ ಶೆಡ್ಯೂಲ್. ಬರೋಬ್ಬರಿ 60 ದಿನಗಳ ಕಾಲ ಇಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಕಬ್ಜಾ ಚಿತ್ರದಲ್ಲಿ ಸಾಕಷ್ಟು ಫೈಟ್ಸ್ ಸೀಕ್ವೆನ್ಸ್‍ಗಳಿವೆ. ಅಷ್ಟು ದೊಡ್ಡ ಸೂಪರ್‍ಸ್ಟಾರ್ ಆಗಿದ್ದರೂ ಉಪ್ಪಿ ಸರ್ ಚಿತ್ರತಂಡಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ, ಏಟು ಬಿದ್ದ ತಕ್ಷಣ ಕೆಲ ಸಮಯ ರಿಲ್ಯಾಕ್ಸ್ ಆಗಿ ಮತ್ತೆ ಶೂಟಿಂಗ್‍ಗೆ ಮರಳಿದರು' ಎಂದು ತಿಳಿಸಿದ್ದಾರೆ.

ಕಬ್ಜಾ ಬರೋಬ್ಬರಿ 8 ಭಾಷೆಗಳಲ್ಲಿ ಮೂಡಿಬರುತ್ತಿರುವ ಸಿನಿಮಾ. ಈ ಚಿತ್ರದಲ್ಲಿ 1947ರಿಂದ 1984ರ ತನಕ 37 ವರ್ಷಗಳ ಕಾಲ ನಡೆಯುವ ಘಟನಾವಳಿಗಳ ಸುತ್ತ ಸಿನಿಮಾದ ಕಥೆ ಸುತ್ತುತ್ತದೆ. ಆ ಮೂರೂವರೆ ದಶಕಗಳ ಅಂಡರ್‍ವಲ್ರ್ಡ್ ಮೇಲೆ ನಿರ್ದೇಶಕ ಆರ್. ಚಂದ್ರು ಬೆಳಕು ಚೆಲ್ಲುವ ಯತ್ನ ಮಾಡಿದ್ದಾರೆ. ನಟ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಜಾಕಿ ಶ್ರಾಫ್, ಪ್ರಕಾಶ್ ರಾಜ್, ಶ್ರೀನಿವಾಸ್ ರಾವ್ ಕೋಟಾ, ಕಬೀರ್ ದುಹಾನ್ ಸಿಂಗ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಮಿನರ್ವ ಮಿಲ್‍ನಲ್ಲಿ ಒಟ್ಟು 40 ಸೆಟ್‍ಗಳಲ್ಲಿ ಸಾಹಸದ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗುತ್ತಿದೆ. ಈಗಾಗಲೇ 15 ಸೆಟ್‍ಗಳಲ್ಲಿ ಚಿತ್ರೀಕರಣ ಮುಗಿದಿದ್ದು, ಇನ್ನೂ 25 ಸೆಟ್‍ಗಳಲ್ಲಿ ಶೂಟಿಂಗ್ ಬಾಕಿಯಿದೆ. ಈ ಶೆಡ್ಯುಲ್ ಮುಗಿದರೆ ಕಬ್ಜಾ ಚಿತ್ರದ ಶೇಕಡಾ 80ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ.
Published by:Latha CG
First published: