Upendra: ರಿಯಲ್​ ಸ್ಟಾರ್​ ಉಪ್ಪಿಗೆ ಇದೇನಾಯ್ತು? ಎಲ್ಲಾ ಓಕೆ.. ಹಿಜಾಬ್​ ಹಾಕಿ ಬಂದಿದ್ಯಾಕೆ?

ಇದೆಲ್ಲರ ನಡುವೆ ಉಪೇಂದ್ರ ಅವರ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ ಪ್ರತಿಯೊಬ್ಬರು ಅರೇ ಇದ್ದಕಿದ್ದ ಹಾಗೇ ರಿಯಲ್​ ಸ್ಟಾರ್​ ಉಪೇಂದ್ರ ಅವರಿಗೆ ಏನಾಯ್ತು? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ನೀವು ಕೂಡ ಒಮ್ಮೆ ಈ ಫೋಟೋ ನೋಡಿ ನಿಮಗೂ ಶಾಕ್​ ಆಗುತ್ತೆ.

ನಟ ಉಪೇಂದ್ರ

ನಟ ಉಪೇಂದ್ರ

  • Share this:
ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಚಿತ್ರ ಪ್ರೇಮಿಗಳ ತಲೆಗೆ ಹುಳ ಬಿಟ್ಟಿದ್ದರು. ಅಭಿಮಾನಿಗಳ ಆಸೆಯಂತೆ ಉಪೇಂದ್ರ (Real Star Upendra) ನಿರ್ದೇಶನದ ಹೊಸ ಚಿತ್ರ ಅನೌನ್ಸ್ ಆಗಿತ್ತು. ಯಾರು ಊಹೆ ಮಾಡದ ರೀತಿಯ ಸಿನಿಮಾ ಪೋಸ್ಟರ್ ಬಿಡುಗಡೆಗೊಳಿಸಿರುವ ನಟ, ನಿರ್ದೆಶಕ ಉಪೇಂದ್ರ ಅಭಿಮಾನಿಗಳಿಗೆ ಥ್ರಿಲ್ (Kannada New Film) ನೀಡಿದ್ದರು.  ಕುದುರೆ ಏರಿ ಕಂಬಳಿ ಹೊದ್ದಿರುವ ಲಿಕ್​ನಲ್ಲಿ ಪೋಸ್ಟರ್​ನಲ್ಲಿ (Upendra New Movie Poster) ಉಪೇಂದ್ರ ಕಾಣಿಸಿಕೊಂಡಿದ್ದು ಸಖತ್ತಾಗಿದೆ ಅನಿಸುವಂತಿದೆ. ಇದೆಲ್ಲರ ನಡುವೆ ಉಪೇಂದ್ರ ಅವರ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ ಪ್ರತಿಯೊಬ್ಬರು ಅರೇ ಇದ್ದಕಿದ್ದ ಹಾಗೇ ರಿಯಲ್​ ಸ್ಟಾರ್​ ಉಪೇಂದ್ರ ಅವರಿಗೆ ಏನಾಯ್ತು? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ನೀವು ಕೂಡ ಒಮ್ಮೆ ಈ ಫೋಟೋ ನೋಡಿ ನಿಮಗೂ ಶಾಕ್​ ಆಗುತ್ತೆ.

ಹಿಜಾಬ್​ ಧರಿಸಿ ಬಂದಿದ್ದೇಕೆ ರಿಯಲ್​ ಸ್ಟಾರ್​!

ಉಪೇಂದ್ರ ಯಾವುದೇ ಸಿನಿಮಾ ಪೋಸ್ಟರ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿಲ್ಲ. ಬದಲಿಗೆ ತಮ್ಮ ಸಾಮಾಜಿಕ ಜಾಲತಾಣದ ಡಿಪಿಯಲ್ಲಿ ಹಿಜಾಬ್ ತೊಟ್ಟು ಪ್ರತ್ಯಕ್ಷ ಆಗಿದ್ದಾರೆ. ಉಪೇಂದ್ರ ಟ್ವಿಟ್ಟರ್‌ನಲ್ಲಿ ಒಂದು ಫೋಟೊ ಹಾಕಿಕೊಂಡಿದ್ದಾರೆ. ಈ ಫೊಟೋದಲ್ಲಿ ಉಪೇಂದ್ರ ಮುಖ ಮುಚ್ಚಿಕೊಂಡು ಹಿಜಾಬ್​ ಧರಿಸಿದ್ದಾರೆ. ತಲೆಗೆ ಮತ್ತು ಮುಖಕ್ಕೆ ಉಪ್ಪಿ ಬಟ್ಟೆ ಕಟ್ಟಿಕೊಂಡುವ ಕಾರಣ ಇದು ಹಿಜಾಬ್ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಉಪೇಂದ್ರ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡ ಕಾರಣ ಈ ಫೋಟೊ ವೈರಲ್ ಆಗುತ್ತಿದೆ.

ಇದ್ದಕಿದ್ದ ಹಾಗೇ ಏನಾಯ್ತು ಎಂದ ಫ್ಯಾನ್ಸ್​!

ಹಲವು ಮಂದಿ ಉಪ್ಪಿಗೆ ಏನಾಗಿದೆ? ಅವರ ಅಕೌಂಟ್ ಹ್ಯಾಕ್ ಆಗಿದೆಯಾ? ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ. ಜೊತೆಗೆ ಅಲ್ಲು ಅರ್ಜುನ್, ಮಹೇಶ್ ಬಾಬು ಫೋಟೊಗಳನ್ನೂ ಮಹಿಳೆಯರ ರೂಪಕ್ಕೆ ಎಡಿಟ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಹಿಜಾಬ್ ವಿವಾದದ ನಡುವೆ ಹೀಗ್ಯಾಕೆ ಕಾಣಿಸಿಕೊಂಡಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಇದರ ಅಸಲಿಯತ್ತೇ ಬೇರೆ ಇದೆ. ಅದೇನು ಅಂತೀರಾ? ಮುಂದೆ ನೋಡಿ.

ಇದನ್ನೂ ಓದಿ: ಉಪ್ಪಿ ಕಂಠಸಿರಿಯಲ್ಲಿ `ಹುಷಾರ್’ ಹಾಡು.. ಸಾಂಗ್​ ಕೇಳೋಕೆ ಸಖತ್ ಕ್ಯಾಚಿಯಾಗಿದೆ ಗುರೂ!

ಹೋಮ್​ ಮಿನಿಸ್ಟರ್​ ಸಿನಿಮಾದ ಗೆಟಪ್​ ಇದು!

ಕೊನೆಯದಾಗಿ ತೆರೆ ಮೇಲೆ ಉಪೇಂದ್ರ ‘ಐ ಲವ್​ ಯೂ’(I love You) ಹೇಳಿದ್ದರು. ಇದಾದ ಬಳಿಕ ಉಪೇಂದ್ರ ಅವರ ಯಾವ ಸಿನಿಮಾ ತೆರೆಗೆ ಬಂದಿಲ್ಲರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ ‘ಹೋಮ್ ಮಿನಿಸ್ಟರ್’(Home Minister) ಚಿತ್ರ ಏಪ್ರಿಲ್‌‌ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾಮದ ಟ್ರೈಲರ್​ ಕೂಡ ರಿಲೀಸ್ ಆಗಿದ್ದು, ಸಖತ್​ ಸೌಂಡ್​ ಮಾಡುತ್ತಿದೆ. ಇದೇ ಟ್ರೈಲರ್​ನಲ್ಲಿ ಉಪ್ಪಿ ಹಿಜಾಬ್​ ಧರಿಸಿರುವ ಸೀನ್​ ಒಂದು ಅವರ ಅಭಿಮಾನಿಗಳಲ್ಲಿ ಕೂತುಹಲ ಹೆಚ್ಚುವಂತೆ ಮಾಡಿದೆ.

ಇದನ್ನೂ ಓದಿ: `ರಾಜರತ್ನ’ನ ನೆನೆದು ಭಾವುಕರಾದ ಯಶ್​-ಉಪೇಂದ್ರ, ಬಿಕ್ಕಿ ಬಿಕ್ಕಿ ಅತ್ತ ನಟಿ ಪ್ರಿಯಾ ಆನಂದ್​!

‘ಹೋಂ  ಮಿನಿಸ್ಟರ್’​ ಬಗ್ಗೆ ಉಪ್ಪಿ ಹೇಳಿದ್ದೇನು?

‘ಇದು ನಾನು ಈವರೆಗೂ ಮಾಡಿರದ ಪಾತ್ರ. ಇಲ್ಲಿನ ನಿರ್ಮಾಪಕರು ‌ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣ ಮಾಡುತ್ತಾರೆ. ಆದರೆ ತೆಲುಗಿನ ನಿರ್ಮಾಪಕರು ಕನ್ನಡದ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.‌ ಇನ್ನೂ ನೂರು ಜನ ತೆಲುಗಿನ ನಿರ್ಮಾಪಕರು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಬೇಕು. ಆ ರೀತಿಯಲ್ಲಿ ‘ಹೋಂ  ಮಿನಿಸ್ಟರ್’ ಚಿತ್ರವನ್ನು ಯಶಸ್ವಿ ಮಡೋಣ ಎಂದು ತಿಳಿಸಿದ ನಾಯಕ ಉಪೇಂದ್ರ ನಾಯಕಿ ವೇದಿಕ ಅವರ ಅಭಿನಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
Published by:Vasudeva M
First published: