'ಕಬ್ಜ'... ರಿಯಲ್ ಸ್ಟಾರ್ ಉಪ್ಪಿ ಹಾಗೂ ಆರ್.ಚಂದ್ರು ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಚಿತ್ರ ಪ್ರಕಟವಾದಾಗಿನಿಂದಲೂ ಸ್ಯಾಂಡಲ್ವುಡ್ನಲ್ಲಿ ಬಿರುಗಾಳಿ ಎದ್ದಿದೆ. ಏಳು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಈ ಅಪ್ಪಟ ಕನ್ನಡ ಮಣ್ಣಿ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ಉಪೇಂದ್ರ ಅವರು ಮತ್ತೆ ಕಮರ್ಷಿಯಲ್ ಸಿನಿಮಾದತ್ತ ಮುಖ ಮಾಡಿದ್ದಾರೆ. ಈಗಾಗಲೇ ಚಿತ್ರತಂಡ ರಿಲೀಸ್ ಮಾಡಿರುವ ಥೀಮ್ ಪೋಸ್ಟರ್, ಪೋಸ್ಟರ್ ಹಾಗೂ ವಿಭಿನ್ನವಾದ ಫೋಟೋಶೂಟ್ ಸಿನಿ ದುನಿಯಾದಲ್ಲಿ ಸಖತ್ ಸಂಚಲನ ಸೃಷ್ಟಿಸಿದೆ.'ಕಬ್ಜ' ಚಿತ್ರದ ಫೋಟೋಶೂಟ್ ಮೇಕಿಂಗ್ನಲ್ಲಿ ಅಂಡರ್ ವರ್ಲ್ಡ್ನ ಹೊಸ ದೃಷ್ಟಿಕೋನವನ್ನು ಬಿಚ್ಚಿಡಲಾಗಿತ್ತು. ಇದರಲ್ಲಿ ಉಪ್ಪಿಯ ವಿಭಿನ್ನ ಗೆಟಪ್ಪು... ಲುಕ್ಕು... ಕಂಡು ಚಿತ್ರಪ್ರೇಮಿಗಳು ಥ್ರಿಲ್ಲಾಗಿದ್ದರು. ಕೆಜಿಎಫ್ ನಂತರ ಕನ್ನಡದಲ್ಲಿ ಭಾರೀ ಮಟ್ಟದಲ್ಲಿ ಸದ್ದು ಮಾಡಲಿರುವ ಸಿನಿಮಾ ಎಂದೇ ಹೇಳಲಾಗುತ್ತಿದೆ. ಇದರಿಂದಾಗಿ ಕಬ್ಜ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲವಿದೆ.
ಈ ಸಿನಿಮಾದಲ್ಲಿ ಟಾಲಿವುಡ್ ಸುಂದರಿ ಕಾಜಲ್ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಕಾಜಲ್ ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲವಂತೆ. 'ಕಬ್ಜ' ಸಿನಿಮಾ 80ರ ದಶಕದ ಡಾನ್ ಒಬ್ಬರ ಕತೆಯಾಗಿದ್ದು, ಇದರಲ್ಲಿ ಬೇರೆ ಭಾಷೆಗಳ ಖಳ ನಟರೂ ಕಾಣಿಸಿಕೊಳ್ಳಲಿದ್ದಾರಂತೆ.
ಸಂಕ್ರಾಂತಿ ಹಬ್ಬಕ್ಕೆ ದೊಡ್ಡ ಸರ್ಪ್ರೈಸ್ ಒಂದನ್ನು ಪ್ಲಾನ್ ಮಾಡಿದ್ದು, ಹಬ್ಬದಂದು ಬೆಳಿಗ್ಗೆ 10ಕ್ಕೆ ತಿಳಿಯದಿದೆ. ಹೌದು, ಚಿತ್ರತಂಡ ಸರ್ಪ್ರೈಸ್ ಏನೋ ಪ್ಲಾನ್ ಮಾಡಿದೆ. ಆದರೆ ಅದು ಏನು ಅನ್ನೋದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.
A huge surprise from the most expected Indian movie kabzaa on Sankranti
ಉಪೇಂದ್ರ ಅವರ ಹುಟ್ಟುಹಬ್ಬದಂದು ರಾಮ್ಗೋಪಾಲ್ ವರ್ಮ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆಗೊಳಿಸಿದ್ದರು. ಇನ್ನು ಥೀಮ್ ಪೋಸ್ಟರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾಗೆ ಉಪೇಂದ್ರ ಧನ್ಯವಾದ ಸಹ ತಿಳಿಸಿದ್ದರು. ಸಿನಿಮಾ 80ರ ದಶಕದ ಅಂಡರ್ವರ್ಲ್ಡ್ ಆಧಾರಿತ ಚಿತ್ರ ಕಥೆ ಹೊಂದಿದ್ದು, ಈ ಚಿತ್ರದಲ್ಲಿ ರೆಟ್ರೋ ಸ್ಟೈಲಿನಲ್ಲಿ ಉಪ್ಪಿ ಮಿಂಚಲಿದ್ದಾರೆ.
ಈ ಹಿಂದೆ “ಐ ಲವ್ ಯು’ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಷ್ಟೇ ಬಿಡುಗಡೆ ಮಾಡಿದ್ದ ಚಂದ್ರು, ಈ ಬಾರಿ ಬರೋಬ್ಬರಿ ಏಳು ಭಾಷೆಗಳಲ್ಲಿ ತಮ್ಮ ಹೊಸ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಭಾಷೆಗಳಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ಚಂದ್ರು ಪ್ಯಾನ್ ಇಂಡಿಯಾದತ್ತ ಮುಖ ಮಾಡಿದ್ದಾರೆ.

ಉಪೇಂದ್ರ
ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಹೊಸ ದಾಖಲೆ ಮಾಡಿದ KGF Chapter 2 Teaser: 10 ಕೋಟಿ ವೀಕ್ಷಣೆ ಕಂಡ ಪವರ್ ಫುಲ್ ಟೀಸರ್..!
ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್ಗಳಲ್ಲಿ ಕಬ್ಜ ಚಿತ್ರೀಕರಣ ನಡೆಸಲಾಗಿದೆ. ಲಾಕ್ಡೌನ್ ಸಡಿಲಗೊಂಡ ನಂತರ ಮಿನರ್ವ ಮಿಲ್ಬಳಿ ಕೂಡ ದೊಡ್ಡ ಸೆಟ್ ಆಗಿ ಚಿತ್ರೀಕರಣ ನಡೆಸಲಾಗಿತ್ತು.

ಉಪೇಂದ್ರ
ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್,ವಿಜಯ್ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಾಮರಾಜನ್(ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ