Upendra: ಏಪ್ರಿಲ್​ 1ಕ್ಕೆ ಬರ್ತಿದ್ದಾರೆ `ಹೋಮ್​ ಮಿನಿಸ್ಟರ್​’, ರಿಯಲ್​ ಸ್ಟಾರ್​ ಇನ್ಮುಂದೆ ಅಭಿಮಾನಿಗಳ ಚಕ್ರವರ್ತಿ!

ಕೊನೆಯದಾಗಿ ತೆರೆ ಮೇಲೆ ಉಪೇಂದ್ರ ‘ಐ ಲವ್​ ಯೂ’(I love You) ಹೇಳಿದ್ದರು. ಇದಾದ ಬಳಿಕ ಉಪೇಂದ್ರ ಅವರ ಯಾವ ಸಿನಿಮಾ ತೆರೆಗೆ ಬಂದಿಲ್ಲರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ ‘ಹೋಮ್ ಮಿನಿಸ್ಟರ್’(Home Minister) ಚಿತ್ರ ಏಪ್ರಿಲ್‌‌ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಹೋಮ್​ ಮಿನಿಸ್ಟಿರ್​ ಚಿತ್ರತಂಡ

ಹೋಮ್​ ಮಿನಿಸ್ಟಿರ್​ ಚಿತ್ರತಂಡ

  • Share this:
ರಿಯಲ್​ ಸ್ಟಾರ್ ಉಪೇಂದ್ರ(Real Star Upendra) ಸಿನಿಮಾಗಳಲ್ಲಿ ಲಾಜಿಕ್(Logic), ಮ್ಯಾಜಿಕ್(Magic) ಎರಡು ಇರುತ್ತೆ. ಇದಕ್ಕಾಗಿಯೇ ಜನ ಉಪ್ಪಿ ಸಿನಿಮಾಗಳು ಅಂದರೆ ಇಷ್ಟ ಪಡುತ್ತಾರೆ. ಉಪ್ಪಿ ಸಿನಿಮಾದಲ್ಲಿ ಜೀವನದ ಬಗ್ಗೆ ಒಂದು ಪಾಠ ಇದ್ದೇ ಇರುತ್ತೆ. ಅದು ಅವರ ನಿರ್ದೇಶನದ ಸಿನಿಮಾ ಆದರೂ ಸರಿ, ಇಲ್ಲ ಅದು ಕೇವಲ ಅವರು ನಟಿಸುವ ಸಿನಿಮಾಗಳು ಆದರು ಸರಿ. ಕೊನೆಯದಾಗಿ ತೆರೆ ಮೇಲೆ ಉಪೇಂದ್ರ ‘ಐ ಲವ್​ ಯೂ’(I love You) ಹೇಳಿದ್ದರು. ಇದಾದ ಬಳಿಕ ಉಪೇಂದ್ರ ಅವರ ಯಾವ ಸಿನಿಮಾ ತೆರೆಗೆ ಬಂದಿಲ್ಲರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ ‘ಹೋಮ್ ಮಿನಿಸ್ಟರ್’(Home Minister) ಚಿತ್ರ ಏಪ್ರಿಲ್‌‌ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆ ದಿನಾಂಕ ಘೋಷಣೆ ಮಾಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಸೂಪರ್ ಸ್ಟಾರ್(Super Star) ಉಪೇಂದ್ರ ಬಿಡುಗಡೆ ದಿನಾಂಕವುಳ್ಳ ಪೋಸ್ಟರನ್ನು ಅನಾವರಣಗೊಳಿಸಿದರು.

‘ಹೋಂ  ಮಿನಿಸ್ಟರ್’​ ಬಗ್ಗೆ ಉಪ್ಪಿ ಹೇಳಿದ್ದೇನು?

‘ಇದು ನಾನು ಈವರೆಗೂ ಮಾಡಿರದ ಪಾತ್ರ. ಇಲ್ಲಿನ ನಿರ್ಮಾಪಕರು ‌ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣ ಮಾಡುತ್ತಾರೆ. ಆದರೆ ತೆಲುಗಿನ ನಿರ್ಮಾಪಕರು ಕನ್ನಡದ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.‌ ಇನ್ನೂ ನೂರು ಜನ ತೆಲುಗಿನ ನಿರ್ಮಾಪಕರು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಬೇಕು. ಆ ರೀತಿಯಲ್ಲಿ ‘ಹೋಂ  ಮಿನಿಸ್ಟರ್’ ಚಿತ್ರವನ್ನು ಯಶಸ್ವಿ ಮಡೋಣ ಎಂದು ತಿಳಿಸಿದ ನಾಯಕ ಉಪೇಂದ್ರ ನಾಯಕಿ ವೇದಿಕ ಅವರ ಅಭಿನಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಉಪ್ಪಿ ಜೊತೆ ನಟಿಸಿದ್ದು ಖುಷಿ ತಂದಿದೆ ಎಂದ ವೇದಿಕ!

ನನಗೆ ಬಹಳ ದಿನಗಳ ನಂತರ ನಿಮ್ಮ ಮುಂದೆ ಮಾತನಾಡಲು ಖುಷಿಯಾಗುತ್ತಿದೆ. ಸೂಪರ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸಿದ್ದು, ಹೆಚ್ಚಿನ ಖುಷಿ ತಂದಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನಾನು ಜರ್ನಲಿಸ್ಟ್ ಪಾತ್ರ ನಿರ್ವಹಣೆ ಮಾಡಿದ್ದೀನಿ ಎಂದರು ವೇದಿಕ. ನಿರ್ಮಾಪಕರಾದ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ವೀರಮಾಚನೆನಿ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ಗುರು ರಾಯರ ದರ್ಶನ ಪಡೆದ ಸುದೀಪ್​, ನೆಲದ ಮೇಲೆ ಕೂತು ಧ್ಯಾನ ಮಾಡಿದ ಕಿಚ್ಚ!

350 ಚಿತ್ರಮಂದಿರಗಳಲ್ಲಿ ‘ಹೋಮ್​ ಮಿನಿಸ್ಟರ್​’ ಎಂಟ್ರಿ!

ಕರ್ನಾಟಕದಾದ್ಯಂತ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಹೋಮ್ ಮಿನಿಸ್ಟರ್’ ಚಿತ್ರವನ್ನು ಶ್ರೇಯಾ ಚಿತ್ರ ಮೂಲಕ ಬೆಂಗಳೂರು ಕುಮಾರ್ ಫಿಲಂಸ್ ಸಂಸ್ಥೆ ಬಿಡುಗಡೆ ಮಾಡುತ್ತಿರುವುದಾಗಿ ಬೆಂಗಳೂರು ಕುಮಾರ್ ತಿಳಿಸಿದರು. ಸುಜಯ್ ಕೆ ಶ್ರೀಹರಿ ನಿರ್ದೇಶನದ ಈ ಚಿತ್ರಕ್ಕೆ ಜಿಬ್ರಾನ್ ಸಂಗೀತ ನೀಡಿದ್ದಾರೆ. ಕುಂಟುನಿ ಎಸ್ ಕುಮಾರ್ ಛಾಯಾಗ್ರಹಣ ಹಾಗೂ ಅಂಟೋನಿ ಅವರ ಸಂಕಲನ ಈ ಚಿತ್ರಕ್ಕಿದೆ.

ಉಪ್ಪಿ ಇನ್ಮುಂದೆ ಅಭಿಮಾನಿಗಳ ಚಕ್ರವರ್ತಿ !

ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಈ ಚಿತ್ರದ ಮೂಲಕ ಅಭಿಮಾನಿಗಳ ಚಕ್ರವರ್ತಿ ಎಂದು ಬಿರುದು ನೀಡಲಾಗಿದೆ. ವೇದಿಕ, ಸುಮನ್ ರಂಗನಾಥ್, ತಾನ್ಯ ಹೋಪ್, ಸಾಧುಕೋಕಿಲ, ಅವಿನಾಶ್, ಮಾಳವಿಕ ಅವಿನಾಶ್, ತಿಲಕರು, ಲಾಸ್ಯ, ಸುಧಾ ಬೆಳವಾಡಿ, ಶ್ರೀನಿವಾಸ ಮೂರ್ತಿ, ವಿಜಯ್ ಚಂಡೂರ್, ಬೇಬಿ ಆದ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: ಬಜೆಟ್​ನಲ್ಲಿ ಅಪ್ಪು, ಸಂಚಾರಿ ವಿಜಯ್​ ಹೆಸರು ಪ್ರಸ್ತಾಪ, ಈ ಬಾರಿ ಚಿತ್ರರಂಗಕ್ಕೆ ಸಿಕ್ಕಿದೇನು?

‘ಕಬ್ಜ’ ಸಿನಿಮಾಗಾಗಿ ಕಾಯ್ತಿದ್ದಾರೆ ಅಭಿಮಾನಿಗಳು!

ಸ್ಯಾಂಡಲ್​ವುಡ್​ನಲ್ಲಿ ಪ್ರಸ್ತುತ ಪ್ಯಾನ್ ಇಂಡಿಯಾ ಚಿತ್ರಗಳ ಸದ್ದು ಜೋರಾಗಿದೆ. ಖ್ಯಾತ ತಾರೆಯರ ಹಲವು ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದೆ. ಅವುಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟಿಸುತ್ತಿರುವ ‘ಕಬ್ಜ’ ಚಿತ್ರವು ಈಗಾಗಲೇ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ.
Published by:Vasudeva M
First published: