ರಿಯಲ್ ಸ್ಟಾರ್ ಉಪೇಂದ್ರ (Real Star Upendra Kabzaa Movie) ಅಭಿನಯದ ಕಬ್ಜ ಸಿನಿಮಾವನ್ನ ಎಲ್ಲರೂ ಕೆಜಿಎಫ್ ಚಿತ್ರಕ್ಕೆ ಹೋಲಿಸಿ ಮಾತನಾಡುತ್ತಿದ್ದಾರೆ. ಆದರೆ ಉಪ್ಪಿ ಹಂಚಿಕೊಂಡ (Kabzaa Song Making Video) ಸಾಂಗ್ ಮೇಕಿಂಗ್ನ ಒಂದು ವಿಡಿಯೋ ನೋಡುಗರಲ್ಲಿ ಹೊಸ ಭರವಸೆ ಮೂಡಿಸುವಂತೆ ಇದೆ. ರವಿ ಬಸ್ರೂರು ಸಂಗೀತದ (Music Director Ravi Basrur) ಈ ಹಾಡು ಬೇರೆ ಫೀಲ್ ಕೊಡುತ್ತಿದೆ. ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಈ ಒಂದು ಹಾಡನ್ನ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡಿನ ಮೇಕಿಂಗ್ (Kabzaa Movie) ವಿಡಿಯೋದಲ್ಲಿ ಜಾನಿ ಮಾಸ್ಟರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಸಖತ್ ಎಂಜಾಯ್ ಮಾಡಿದ್ದಾರೆ. ಆ ಒಂದು ಸತ್ಯ ಈ ಒಂದು ವಿಡಿಯೋದಲ್ಲಿ ರಿವೀಲ್ ಆಗಿದೆ.
ಕಬ್ಜ ಸಿನಿಮಾದ ಸಾಂಗ್ ಮೇಕಿಂಗ್ ವಿಡಿಯೋ ರಿವೀಲ್
ಕಬ್ಜ ಸಿನಿಮಾದ ಇಡೀ ಕಥೆ ರೆಟ್ರೋ ಕಾಲದ ಕಥೆ ಆಗಿದೆ. ಅದನ್ನ ಹೇಳಲಿಕ್ಕೆ ನಿರ್ದೇಶಕ-ನಿರ್ಮಾಪಕ ಆರ್. ಚಂದ್ರು ಕೋಟಿ ಕೋಟಿ ವೆಚ್ಚದಲ್ಲಿ ಸೆಟ್ ಕೂಡ ಹಾಕಿಸಿದ್ದರು. ಕಲಾ ನಿರ್ದೇಶಕ ಶಿವಕುಮಾರ್ ಅವರ ಕಲ್ಪನೆಯಲ್ಲಿ ಅದ್ಭುತ ಸೆಟ್ಗಳು ಬೆಂಗಳೂರಿನ ಮಿನರ್ವ ಮಿಲ್ಸ್ನಲ್ಲಿ ರೆಡಿ ಆಗಿದ್ದವು.
ಅದೆಷ್ಟೋ ಹಂತದ ಶೂಟಿಂಗ್ನ್ನ ಇದೇ ಸೆಟ್ನಲ್ಲಿಯೇ ಡೈರೆಕ್ಟರ್ ಆರ್. ಚಂದ್ರು ಚಿತ್ರೀಕರಿಸಿದ್ದರು. ತುಂಬಾ ಶ್ರಮವಹಿಸಿ ಚಿತ್ರೀಕರಿಸಿರೋ ಈ ಸಿನಿಮಾ ಟೀಸರ್ ಮೂಲಕ ಹಂಗಾಮಾ ಎಬ್ಬಿಸಿತ್ತು.
ಸಾಂಗ್ ಮೇಕಿಂಗ್ ವಿಡಿಯೋದಲ್ಲಿ ಏನಿದೆ ಗೊತ್ತೇ?
ರಿಯಲ್ ಸ್ಟಾರ್ ಉಪೇಂದ್ರ ಅವರ ಜನ್ಮ ದಿನದಂದು ಈ ಟೀಸರ್ ರಿಲೀಸ್ ಆಯಿತು. ಅದರ ಬೆನ್ನಲ್ಲಿಯೇ ಈ ಟೀಸರ್ ಕೆಜಿಎಫ್ ಚಿತ್ರದ ರೀತಿ ಇದೆ ಅನ್ನುವ ಕಾಮೆಂಟ್ಸ್ ಕೂಡ ಬಂದವು.
ಅಷ್ಟೇ ಯಾಕೆ ಮೊನ್ನೆ ಮೊನ್ನೆ ರಿಲೀಸ್ ಆದ ಟೈಟಲ್ ಟ್ರ್ಯಾಕ್ ಅನ್ನು ಕೆಜಿಎಫ್ಗೆ ಹೋಲಿಸಿದ್ದರು. ಆದರೆ ರಿಯಲ್ ಸ್ಟಾರ್ ಉಪೇಂದ್ರ ಶೇರ್ ಮಾಡಿರೋ ಸಾಂಗ್ ಮೇಕಿಂಗ್ ವಿಡಿಯೋ ಈಗ ಬೇರೆ ಫೀಲ್ ಕೊಡುತ್ತಿದೆ.
View this post on Instagram
ಮೇಕಿಂಗ್ ವಿಡಿಯೋದಲ್ಲಿ ಇನ್ನೂ ಒಂದು ವಿಶೇಷ ಕೂಡ ಗಮನಕ್ಕೆ ಬರುತ್ತದೆ. ಜಾನಿ ಮಾಸ್ಟರ್ ಕಂಪೋಸ್ ಮಾಡಿರೋ ಸ್ಟೆಪ್ಸ್ನ್ನ ಉಪ್ಪಿಗೆ ಹೇಳಿಕೊಡ್ತಾರೆ. ಆದರೆ ಉಪ್ಪಿ ಅದನ್ನ ಬಿಟ್ಟು, ತಮ್ಮದೇ ಸ್ಟೈಲ್ನ ಸ್ಟೆಪ್ಸ್ ಹಾಕುತ್ತಾರೆ.
ಜಾನಿ ಮಾಸ್ಟರ್ಗೆ ಸ್ಟೆಪ್ಸ್ ಹೇಳಿಕೊಟ್ಟ ರಿಯಲ್ ಸ್ಟಾರ್ ಉಪ್ಪಿ!
ಇಡೀ ವಿಡಿಯೋದಲ್ಲಿ ಇದು ಅತಿ ಹೆಚ್ಚು ಗಮನ ಸೆಳೆಯುತ್ತದೆ. ಇದರ ಹೊರತಾಗಿ ರವಿ ಬಸ್ರೂರ ಅವರ ಸಂಗೀತ ಇಲ್ಲಿ ವಿಭಿನ್ನವಾಗಿಯೇ ಕೇಳಿಸುತ್ತದೆ. ಅದಕ್ಕೆ ತಕ್ಕನಾಗಿಯೇ ಜಾನಿ ಮಾಸ್ಟರ್ ಕಬ್ಜ ಚಿತ್ರದ ಈ ಹಾಡಿಗೆ ಸ್ಟೆಪ್ಸ್ನ್ನ ಕಂಪೋಜ್ ಮಾಡಿದ್ದಾರೆ ಅನಿಸುತ್ತದೆ.
ಇದನ್ನೂ ಓದಿ: Hemanth Rao: ಅಪ್ಪು-ಯಶ್ ಮೆಚ್ಚಿದ ಕಥೆಗೆ ರಕ್ಷಿತ್ ಶೆಟ್ಟಿ ನಾಯಕ; ಹೊರಬಿತ್ತು ರೋಚಕ ಸ್ಟೋರಿ!
ಇದರ ಹೊರತಾಗಿ ಚಿತ್ರದ ಇನ್ನಷ್ಟು ಮಾಹಿತಿ ಕೊಡುವುದಾದ್ರೆ, ಫೆಬ್ರವರಿ-16 ರಂದು ಚಿತ್ರದ ವಿಡಿಯೋ ಸಾಂಗ್ ಕೂಡ ರಿಲೀಸ್ ಆಗುತ್ತಿದೆ. ಶಿಡ್ಲಘಟ್ಟದಲ್ಲಿ ಆಡಿಯೋ ರಿಲೀಸ್ ಪ್ಲಾನ್ ಕೂಡ ಈಗಾಗಲೇ ಆಗಿದೆ. ಪವರ್ ಸ್ಟಾರ್ ಪುನೀತ್ ಜನ್ಮದಿನದಂದು ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ