• Home
  • »
  • News
  • »
  • entertainment
  • »
  • Real Star Upendra: ಅಭಿಮಾನಿಗಳ ತಲೆಗೆ ಮತ್ತೆ ಹುಳ ಬಿಟ್ಟ ಉಪ್ಪಿ, 'UI' ಚಿತ್ರದ ಪೋಸ್ಟರ್ ಬಿಡುಗಡೆ

Real Star Upendra: ಅಭಿಮಾನಿಗಳ ತಲೆಗೆ ಮತ್ತೆ ಹುಳ ಬಿಟ್ಟ ಉಪ್ಪಿ, 'UI' ಚಿತ್ರದ ಪೋಸ್ಟರ್ ಬಿಡುಗಡೆ

ನಟ ಉಪೇಂದ್ರ

ನಟ ಉಪೇಂದ್ರ

ನಿರ್ದೇಶಕರ ನಿರ್ದೇಶಕ (Director) ಎಂದೇ ಖ್ಯಾತರಾಗಿರುವ ಸ್ಯಾಂಡಲ್​ ವುಡ್​ನ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಹೊಸ ಸಿನಿಮಾ (Film) ನಿರ್ದೇಶನ ಮಾಡುವುದಾಗಿ ಮೊದಲೇ ಘೊಷಿಸಿದ್ದರು. ಅದರಂತೆ ಇಂದು ಚಿತ್ರದ ಮೂಹೂರ್ತ ನೆರವೇರಿಸಿದ್ದಾರೆ.

  • Share this:

ನಿರ್ದೇಶಕರ ನಿರ್ದೇಶಕ (Director) ಎಂದೇ ಖ್ಯಾತರಾಗಿರುವ ಸ್ಯಾಂಡಲ್​ ವುಡ್​ನ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಹೊಸ ಸಿನಿಮಾ (Film) ನಿರ್ದೇಶನ ಮಾಡುವುದಾಗಿ ಮೊದಲೇ ಘೊಷಿಸಿದ್ದರು. ಅದರಂತೆ ಇಂದು ಚಿತ್ರದ ಮೂಹೂರ್ತ ನೆರವೇರಿಸಿದ್ದಾರೆ. ಉಪ್ಪಿ ಸಿನಿಮಾ ಮಾಡುತ್ತಿದ್ದಾರೆ ಎಂದರೆ ಅಲ್ಲೊಂದು ವಿಭಿನ್ನ ಪ್ರಯತ್ನ ಇರುತ್ತದೆ. ಅಭಿಮಾನಿಗಳ ತಲೆಗೆ ನೀನು, ನಾನು ಎಂದೆಲ್ಲಾ ಬಣ್ಣ ಬಣ್ಣದ ಹುಳವನ್ನು ಬಿಡುತ್ತಾರೆ. ಅಷ್ಟೇ ಅಲ್ಲದೇ ಚಿತ್ರದಲ್ಲಿ ಯಾರಿಗೂ ತಿಳಿಯದ ಹಿಡನ್ ಮೆಸೇಜ್​ ಅನ್ನೂ ಸಹ ನೀಡಿರುತ್ತಾರೆ. ಹಾಗಾಗಿ ಅವರ ನಿರ್ದೇಶನದ ಚಿತ್ರಗಳು ಎಂದರೆ ಭಾರತೀಯ ಚಿತ್ರರಂಗವೇ ಕಾದುಕೂತಿರುತ್ತದೆ ಎಂದರೂ ತಪ್ಪಾಗಲಾರದು. ಅನೇಖ ವರ್ಷಗಳ ನಂತರ ಇದೀಗ ಡೈರೆಕಟ್ರ್ ಕ್ಯಾಪ್ ತೊಟ್ಟಿರುವ ಅವರು, ಈ ಬಾರಿ 'UI' ಎಂಬ ವಿಭಿನ್ನ ಹೆಸರಿನ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಹೇಳಿಕೊಡಡಿಂದ್ದು, ಇಂದು ಮೂಹೂರ್ತ ನೆರವೇರಿಸಿ, ಚಿತ್ರದ ಪೋಸ್ಟರ್​ ಅನ್ನು ಸಹ ಬಿಡುಗಡೆ ಮಾಡಿದ್ದಾರೆ.


UI ಚಿತ್ರ ಮುಹೂರ್ತ ಕಾರ್ಯಕ್ರಮಕ್ಕೆ ಸ್ಟಾರ್​ಗಳ ದಂಡು:


ಇನ್ನು, ಉಪೇಂದ್ರ ಮೊದಲೇ ತಿಳಿಸಿದಂತೆ ಜೂನ್ 3ರಂದು ಅಂದರೆ ಇಂದು ಚಿತ್ರದ ಮುಹೂರ್ತ ಕಾರ್ಯ ನೆರವೇರಿದೆ. ಬೆಂಗಳೂರಿನ ಗವಿಪುರದಲ್ಲಿರುವ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ಈ ವೇಳೆ ಸ್ಯಾಂಡಲ್​ವುಡ್​ ನ ಸ್ಟಾರ್​ಗಳ ದಂಡೇ ಆಗಮಿಸಿತ್ತು. ಕಿಚ್ಚ ಸುದೀಪ್, ಶಿವರಾಜ್​ ಕುಮಾರ್, ಡಾಲಿ ಧನಂಜಯ್ ಮತ್ತು ದುನಿಯಾ ವಿಜಯ್​ ಸೇರಿದಂತೆ ಅನೇಕ ಕಲಾವಿದರುಗಳು ಭಾಗವಹಿಸಿದ್ದರು.


‘ಬುದ್ಧಿಯ ಬಿರುಗಾಳಿ‘ ಎಂದ ಉಪ್ಪಿ:


ಇನ್ನು, ಚಿತ್ರದ ಮುಹೂರ್ತದ ನಂತರ UI ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ವಿಭಿನ್ನವಾಗಿ ಮೂಡಿಬಂದಿರುವ ಈ ಪೋಸ್ಟರ್ ನಲ್ಲಿ ಇನ್ನೊಂದು ಪೋಸ್ಟರ್ ಅಡಗಿರುವಂತೆ ಮಾಡಲಾಗಿದೆ. ಕುದುರೆಯ ಮುಖಕ್ಕೆ UI ಎಂಬ ಚಿಹ್ನೆ ನೀಡಿ, ಅರ್ಧ ಮುಖದಲ್ಲಿ ಉಪೇಂದ್ರ ಅವರ ಮುಖವನ್ನು ಸೇರಿಸಲಾಗಿದೆ.


ಇದನ್ನೂ ಓದಿ: Real Star Upendra: ಉಪ್ಪಿ ಹೊಸಾ ಸಿನಿಮಾ ಜೂನ್ 3 ಕ್ಕೆ ಶುರು, ರಿಯಲ್ ಸ್ಟಾರ್‌ ನಿರ್ದೇಶನಕ್ಕೆ ರೆಡಿಯಾಗಿ!


ಅಲ್ಲದೇ ಕುದುರೆಯಾಕಾರದ ಫೋಸ್ಟರ್​ ನಲ್ಲಿ ಮೂರು ಕಣ್ಣುಗಳಿದ್ದು, ಸಖತ್ ಕ್ರೇಜಿಯಾಗಿದೆ.ಇದರ ನಡುವೆ ಮಂಡಿಯೂರಿ ಕುಳಿಇರುವ ವ್ಯಕ್ತಿ, ಕುದುರೆಯ ಮುಖದ ಮದ್ಯೆ ರೈಲು ಹೀಗೆ ಸಾಕಷ್ಟು ವಿಷಯಗಳನ್ನು ಪೋಸ್ಟರ್ ನಲ್ಲಿ ಉಪ್ಪಿ ನೀಡಿದ್ದು, ಅಭಿಮಾನಿಗಳ ತಲೆಗೆ ಈ ಬಾರಿ ವಿಚಿತ್ರವಾದ ಹುಳವನ್ನೇ ಬಿಟ್ಟಿದ್ದಾರೆ. ಅಲ್ಲದೇ ಬಡಿದೆಬ್ಬಿಸುವಿರಾ….. ಎಂದು ಕೇಳುವ ಮೂಲಕ ಸಿನಿಪ್ರೇಮಿಗಳನ್ನು ಬಡಿದೆಬ್ಬಿಸಿದ್ದಾರೆ.



ಅಭಿಮಾನಿಗಳ ಮೆದುಳಿಗೇ ಕೈ ಹಾಕಿದ ರಿಯಲ್ ಸ್ಟಾರ್:


ಹೌದು, ಇನ್ನೊಂದು ಪೋಸ್ಟರ್ ನಲ್ಲಿ ಉಪ್ಪಿ ಮೆದುಳಿನಲ್ಲಿ ಗಡಿಯಾರದ ಚಿಹ್ನೆಯನ್ನು ನೀಡಿದ್ದಾರೆ. ಗಡಿಯಾರದ ಮುಳ್ಳುಗಳಾಗಿ ಕತ್ತಿಯನ್ನು ನೀಡಿದ್ದು, ಬುದ್ದಿಯ ಬಿರುಗಾಳಿ ಎಂದು ಹೇಳುವ ಮೂಲಕ ಅಭಿಮಾನಿಗಳ ಮೆದುಳಿಗೆ ಕೆಲಸ ನೀಡಿದ್ದಾರೆ. ಅಲ್ಲದೇ ಎಲ್ಲಾ ಪೋಸ್ಟರ್ ಗಳಲ್ಲಿಯೂ ಹ್ಯಾಷ್​ಟ್ಯಾಗ್​ ನಲ್ಲಿ #ಸಿನಾಮಾ ಎಂದು ನೀಡಿರುವುದು ಮತ್ತಷ್ಟು ಕುತೂಹಲ ಹೆಚ್ಚಲು ಕಾರಣವಾಗಿದೆ. ಇದರ ನಡುವೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ಈ ಪಿಚ್ಚರ್ ಕನ್ನಡಿ ಬಂದು ನೋಡಿ ಎಲ್ಲರಿಗೂ ನಾಮ ಹಾಕಲಾಗಿದೆ ಎನ್ನುವ ಮೂಲಕ ಸಮಾಜದಲ್ಲಿನ ರಾಜಕೀಯದ ಬಗ್ಗೆ ಮಾಡಿರಬಹುದಾ ಎಂಬ ಸಂದೇಹ ಮೂಡಿಸಿದ್ದಾರೆ.



ಆಡಿಯೋ ರೈಟ್ಸ್​ ಲಹರಿ ತೆಕ್ಕೆಗೆ!:


ವಿಶೇಷ ಅಂದ್ರೆ ಉಪೇಂದ್ರ ಅವರ ಸಿನಿಮಾ ಶುರುವಾಗುವ ಮೊದಲೆ ಚಿತ್ರದ ಆಡಿಯೋ ರೈಟ್ಸ್ ಲಹರಿ ತೆಕ್ಕೆಗೆ ಜಾರಿದೆ. ಆದರೆ ಈ ಸೂಪರ್ ಕಾಂಬೋ ಚಿತ್ರಕ್ಕೆ ಸಂಗೀತ ನಿರ್ದೆಶನ ಯಾರು ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ. ಜೊತೆಗೆ ಕೆಪಿ ಶ್ರೀಕಾಂತ್ ನಿರ್ಮಾಣದ ಹಿಂದಿನ ಎರಡು ಚಿತ್ರಕ್ಕೆ ಚರಣ್ ರಾಜ್ ಸಂಗೀತ ಇತ್ತು. ಈಗ ಮೂರನೇ ಚಿತ್ರದಲ್ಲೂ ಚರಣ್ ರಾಜ್ ಕೆ.ಪಿ ಶ್ರೀಕಾಂತ್ ಜೊತೆ ಟ್ರಾವೆಲ್ ಮಾಡ್ತಾರ ಕಾದು ನೋಡಬೇಕು.

Published by:shrikrishna bhat
First published: