ಕೊರೋನಾ ಎರಡನೇ ಅಲೆ ತುಂಬಾ ಜೋರಾಗಿಯೇ ಇದೆ. ಆರಂಭದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಯಾಗಿತ್ತು. ಕೊರೋನಾವನ್ನು ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ರಾಜ್ಯದಲ್ಲಿ ಲಾಕ್ಡೌನ್ ಘೋಷಿಸಿತ್ತು. ಲಾಕ್ಡೌನ್ ಆರಂಭವಾದಾಗಿನಿಂದ ಕೆಲಸವಿಲ್ಲದೆ ತುಂಬಾ ಜನರ ಜೀವನ ದುಸ್ಥರವಾಗಿದೆ. ಇಂತಹ ಕಷ್ಟದ ಸಮಯದಲ್ಲಿ ಸಾಕಷ್ಟು ಜನರು ಸಹಾಯ ಹಸ್ತ ಚಾಚುತ್ತಿದ್ದಾರೆ. ಕೆಲವರು ಆಹಾರ ನೀಡಿದರೆ, ಮತ್ತೆ ಕೆಲವರು ಹಣದ ಜೊತೆಗೆ ದಿನಸಿ ಕಿಟ್ ನೀಡುವ ಮೂಲಕ ನೆರವಾಗುತ್ತಿದ್ದಾರೆ. ಹೀಗೆ ಸಹಾಯ ಮಾಡುವ ಕೆಲಸದಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Upendra)ಸಹ ಹಿಂದೆ ಬಿದ್ದಿಲ್ಲ. ಲಾಕ್ಡೌನ್ ಆರಂಭವಾದಾಗಿನಿಂದ ಸಿನಿರಂಗದ ಕಾರ್ಮಿಕ ವರ್ಗ ಸೇರಿದಂತೆ ಹಿರಿಯ ಕಲಾವಿದರು ಹಾಗೂ ಇತರೆ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ರೈತರಿಂದ ನೇರವಾಗಿ ಹಣ್ಣು -ತರಕಾರಿ ಖರೀದಿಸುವ ಮೂಲಕ ಅವರ ಕಷ್ಟಕ್ಕೂ ಸ್ಪಂದಿಸುತ್ತಿದ್ದಾರೆ. ಇವುಗಳ ಜೊತೆಗೆ ಪ್ರಜಾಕೀಯದ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅವರ ಮೇಲೆ ನೆಟ್ಟಿಗರೊಬ್ಬರು ಗಂಭೀರವಾದ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಉಪ್ಪಿ ಅವರ ರೆಸಾರ್ಟ್ ಹಾಗೂ ಜಮೀನಿಗೆ ಸಂಬಂಧಿಸಿದಂತೆ ಒಬ್ಬರು ಆರೋಪ ಮಾಡಿದ್ದಾರೆ.
View this post on Instagram
ಇದನ್ನೂ ಓದಿ: ಖಳನಾಯಕ್ಗೆ ಸಿಕ್ತು ಯುಎಇ ಸರ್ಕಾರದಿಂದ ಗೋಲ್ಡನ್ ವೀಸಾ: ಸಂಜಯ್ ದತ್ಗೆ ಸಿಗಲಿವೆ ಈ ವಿಶೇಷ ಸೌಲಭ್ಯಗಳು
ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ರೆಸಾರ್ಟ್ ಹಾಗೂ ಜಮೀನನ್ನು ಖರೀದಿಸಿದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸರ್ಕಾರದ ಹರಾಜು ಪ್ರಕ್ರಿಯೆಯಲ್ಲಿ ವಿಲೇಜ್ ಎಂಬ ಹೆಸರಿನ ರೆಸಾರ್ಟ್ ಅನ್ನು 13-14 ವರ್ಷಗಳ ಹಿಂದೆ ಖರೀದಿಸಿದ್ದು, ಅದನ್ನೇ ರುಪ್ಪೀಸ್ ಎಂದು ಹೆಸರು ಬದಲಾಯಿಸಿದ್ದೇವೆ. ನಾನು ಖರೀದಿಸುವ ಮುನ್ನವೂ ಅದು ರೆಸಾರ್ಟ್ ಆಗಿತ್ತು ಎಂದಿದ್ದಾರೆ.
View this post on Instagram
ಇದನ್ನೂ ಓದಿ: Kavitha Gowda: ನೆಟ್ಟಿಗರೊಂದಿಗೆ ಅರಿಶಿಣ ಶಾಸ್ತ್ರದ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡ ಕವಿತಾ ಗೌಡ..!
ಇನ್ನು ಯಾರೇ ಮತ್ತೊಬ್ಬರ ಮೇಲೆ ಆರೋಪ ಮಾಡುವಾಗ ದಾಖಲೆ ಸಮೇತ ಮಾಡುವುದು ಒಳ್ಳೆಯದು. ಸುಮ್ಮನೆ ಏನೂ ಇಲ್ಲದೆ ಬಾಯಿ ಮಾತಿನಲ್ಲಿ ಮಾಡುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ ಉಪೇಂದ್ರ.
ಕೆಲವು ದಿನಗಳ ಹಿಂದೆ ಉಪೇಂದ್ರ ಅವರು ವಿವಾದವೊಂದಕ್ಕೀಡಾಗಿದ್ದರು. ಹೌದು, ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಯದೆ ತಪ್ಪಾಗಿ ಹೇಳಿಕೆ ಕೊಟ್ಟಿದ್ದು, ಅದಕ್ಕೆ ಈಗ ಕ್ಷಮೆ ಯಾಚಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ